Prema
ಚಂದನವನದ ಚಂದದ ಗೊಂಬೆ, ಸ್ಯಾಂಡಲ್ ವುಡ್ ಮೆಹಬೂಬ 20ನೇ ದಶಕದಲ್ಲಿ ಟಾಪ್ ಹಿರೋಯಿನ್ ಪಟ್ಟಿಯಲ್ಲಿ ಮಿಂಚುತ್ತಿದ್ದ ಬಹುಭಾಷಾ ನಟಿ ಪ್ರೇಮ ರವರು ಕನ್ನಡದ ಬಹುತೇಕ ಎಲ್ಲಾ ಮೇರುನಟರೊಡನೆ ನಟಿಸಿ ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗಳನ್ನು ಕೊಟ್ಟಿದ್ದಾರೆ. ಸಿನಿಮಾದವರು ಅಂದಮೇಲೆ ಅದರಲ್ಲೂ ನಟಿ ಎಂಬ ಮೇಲೆ ವಿ’ವಾ’ದಗಳು ಇದ್ದದ್ದೇ! ಆದರೆ ಸಿನಿಮಾ ಸಂಬಂಧಿತವಾಗಿ ಯಾವುದೇ ಎಳ್ಳಷ್ಟೂ ಕಳಂಕ ಕಲ್ಮಶಗಳಿಲ್ಲದೆ ಕೆರಿಯರ್ ಕಟ್ಟಿಕೊಂಡಿದ್ದ ಸಂಭಾವಿತೆ.
ಅದ್ಯಾವ ವಿಷಮ ಘಳಿಗೆಯಲ್ಲಿ ಮೂರು ಗಂಟಿಗೆ ಕಟ್ಟು ಬಿದ್ದರೋ ಮಾಧ್ಯಮಗಳಲ್ಲಿ ನಟಿ ದಾಂಪತ್ಯ ಮುರಿದು ಬಿದ್ದಿದೆ, ನಟಿ ಡಿಪ್ರೆಶನ್ ಇಂದ ಆಶ್ರಮ ಸೇರಿದ್ದಾರೆ, ಪ್ರೇಮಾಗೆ ಮಾ’ರಾ’ಣಾಂ’ತಿ’ಕ ಖಾಯಿಲೆ ಕಾಡುತ್ತಿದೆ, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿ ನಾನಾ ಗಾಸಿಪ್ ಗಳು ಹರಡಿದ್ದವು. ಇದುವರೆಗೂ ಈ ಬಗ್ಗೆ ಸ್ಪಂದಿಸದ ನಟಿ ಈಗ ತಾವೇ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ, ಅಷ್ಟಕ್ಕೂ ಅವರಿಗಾದ ಸಮಸ್ಯೆ ಏನು? ಎಂಬುದೆಲ್ಲದರ ಬಗ್ಗೆ ಮನ ಬಿಚ್ಚಿ ನೋ’ವು ಹಂಚಿಕೊಂಡಿದ್ದಾರೆ.
ನಟಿ ಪ್ರೇಮ ಅವರು ತಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ 28ನೇ ವಯಸ್ಸಿಗೆ ಮದುವೆಯಾದರು. ಅಷ್ಟು ಬೇಗ ಮದುವೆಯಾಗಲು ಕಾರಣ ಕೇಳಿದ್ದಕ್ಕೆ ನನ್ನ ಹಿಂದೆ ನನ್ನ ತಂಗಿ ಇದ್ದಳು, ಅವಳಿಗೆ ಮದುವೆ ಫಿಕ್ಸ್ ಆಗಿತ್ತು ನನ್ನಿಂದ ಅವಳ ಮದುವೆ ನಿಧಾನ ಆಗುತ್ತಿತ್ತು, ಆ ಸಮಯದಲ್ಲಿ ನನಗೆ ಬರುತ್ತಿದ್ದ ಕಥೆಗಳು ಅಷ್ಟಾಗಿ ಇಷ್ಟ ಆಗುತ್ತಿರಲಿಲ್ಲ ಹಾಗಾಗಿ ಮದುವೆ ಆಗೋಣ ಎಂದು ಒಪ್ಪಿದೆ.
ನಮ್ಮ ಮನೆಗೆ ಪರಿಚಿತರಾಗಿದ್ದವರನ್ನೇ ಮನೆ ಕೂಡ ಹತ್ತಿರವಿದೆ ಆಗಾಗ ಬಂದು ತಂದೆ-ತಾಯಿ ನೋಡಿಕೊಳ್ಳಬಹುದು ಎಂದು ಮನೆಯವರ ಒಪ್ಪಿಗೆ ಮೇರೆಗೆ ಅರೆಂಜ್ ಮ್ಯಾರೇಜ್ ಮಾಡಿಕೊಂಡೆ. ನನಗೂ ಕೂಡ ನನ್ನ ದಾಂಪತ್ಯದ ಬಗ್ಗೆ ಸಾಕಷ್ಟು ಕನಸಿತ್ತು ನನ್ನ ಹುಡುಗ ಹಾಗಿರಬೇಕು ಹೀಗಿರಬೇಕು ಇದು ಮಾಡಬೇಕು ಅದು ಮಾಡಬೇಕು ಎಂದೆಲ್ಲಾ ಸಾಮಾನ್ಯ ಹೆಣ್ಣು ಮಗಳಂತೆ ನಾನೂ ಕನಸು ಕಂಡಿದ್ದೆ. ಯಾಕೆಂದರೆ ನನ್ನ ಬಿಸಿ ಶೆಡ್ಯೂಲ್ ನಲ್ಲಿ ನಾನು ಪಬ್, ಟ್ರಾವೆಲ್ ಎಲ್ಲವನ್ನು ಮದುವೆ ಆದ ನಂತರ ಮಾಡೋಣ ಎಂದು ಮುಂದೂಡುತ್ತಾ ಬಂದಿದ್ದೆ.
ಆದರೆ ಆ ಎಲ್ಲಾ ಎಕ್ಸ್ಪೆಕ್ಟೇಶನ್ ನನ್ನನ್ನು ಭಾರೀ ನಿರಾಸೆಗೊಳಿಸಿತು ನಾನು ಬಹಳ ಆತುರದಿಂದ ಮದುವೆ ನಿರ್ಧಾರ ತೆಗೆದುಕೊಂಡೆ, ನನ್ನ ಆಯ್ಕೆ ತಪ್ಪು ಎಂದು ಗೊತ್ತಾಯಿತು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಮದುವೆ ಜೀವನಕ್ಕೆ ಅವಶ್ಯಕ ಆದರೆ ಈ ರೀತಿ ಅಂಡರ್ಸ್ಟ್ಯಾಂಡಿಂಗ್ ಇಲ್ಲದೆ ಬದುಕುವುದು ಕ’ಷ್ಟ. ನನ್ನ ತಂದೆ ತಾಯಿಗೆ ನನ್ನ ಬಗ್ಗೆ ಗೊತ್ತಿತ್ತು ಹಾಗಾಗಿ ನಂಬಿಕೆ ಇತ್ತು ಆದರೆ ಹೋದ ಮನೆಗೆ ನಾನು ವಾತಾವರಣ ಹಾಳು ಮಾಡುವುದು ಬೇಡ ಎಂದು ನನ್ನನ್ನು ನಾನು ರಿಸ್ಪಿಟ್ ಮಾಡಿಕೊಳ್ಳುತ್ತಿದ್ದೆ.
ಈ ಎಲ್ಲಾ ವಿಚಾರಗಳು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದವು, ನನ್ನನು ನಾನೇ ಕಟ್ಟಿ ಹಾಕುತ್ತಿದ್ದ ರೀತಿ ಆಗುತ್ತಿತ್ತು. ಕೊನೆಗೆ ನಾನು ಡಿ’ವೋ’ರ್ಸ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆ. ಆ ಸಮಯದಲ್ಲಿ ನನ್ನ ತಂಗಿ, ತಮ್ಮ, ತಂದೆ-ತಾಯಿಗೆ ತಿಳಿಸಿದೆ. ಅವರೂ ನನ್ನ ಬದುಕಿನಲ್ಲಿ ಆಗಿದ್ದ ವ್ಯತ್ಯಾಸ ಗಮನಿಸಿ ನಾನು ಮೊದಲಿನಂತೆ ಆಗಬೇಕು ಎಂದರೆ ಇದರಿಂದ ಆಚೆ ಬರಬೇಕು ಎಂದು ಅವರು ಸಮ್ಮತಿಸಿದರು.
ಇಬ್ಬರಲ್ಲಿ ಒಬ್ಬರಿಗೆ ಅಂಡರ್ಸ್ಟ್ಯಾಂಡಿಂಗ್ ನೇಚರ್ ಇದ್ದರು ಮದುವೆ ಯಶಸ್ವಿ ಆಗುತ್ತದೆ ಆದರೆ ಅದು ಆಗದೇ ಇದ್ದಾಗ ಇಕ್ಕಟ್ಟಿನಲ್ಲಿ ಬದುಕುವುದಕ್ಕಿಂತ ಸಂಬಂಧದಿಂದ ಹೊರಬಂದು ಸ್ವತಂತ್ರವಾಗಿ ಬದುಕುವುದೇ ಮನಸ್ಸಿಗೆ ನೆಮ್ಮದಿ. ಆ ಸಮಯದಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಸಾರವಾಯಿತು ಆದರೆ ಯಾವುದಕ್ಕೂ ಉತ್ತರಿಸುವ ಮನಸ್ಥಿತಿಯಲ್ಲಿ ನಾನು ಇರಲಿಲ್ಲ.
ಇದೆಲ್ಲದರಿಂದ ನೋವಾಯಿತು ಆಚೆ ಬರಲು ಬಹಳ ಸಮಯವಾಯಿತು ಆದರೆ ಈಗ ಇದೆ ವಿಚಾರಗಳು ನನ್ನನ್ನು ಗಟ್ಟಿ ಮಾಡಿದ್ದು ಅನಿಸುತ್ತಿದೆ, ಅಂತಿಮವಾಗಿ ನನ್ನ ಬದುಕಿನ ಆಯ್ಕೆಗಳು ನನ್ನದೇ ನನ್ನ ತಪ್ಪುಗಳನ್ನು ನಾಳೆ ಸರಿ ಮಾಡಿಕೊಂಡು ಬದುಕಬೇಕು ಎಂದು ಹೇಳಿಕೊಂಡಿದ್ದಾರೆ.