Deepika Padukone: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ದೀಪಿಕಾ ಪಡುಕೋಣೆ.!

Deepika Padukone

ನಟಿ ದೀಪಿಕಾ ಪಡುಕೋಣೆ (Deepika Padukone) ಈಕೆ ಕನ್ನಡಿಗರಿಗೆ ಹೆಮ್ಮೆಯ ಹೆಸರು ಎಂದೇ ಹೇಳಬಹುದು. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ನಂತರ ಕರ್ನಾಟಕ ಮೂಲದಿಂದ ಹೋಗಿ ಈಗ ಬಾಲಿವುಡ್ (Bollywood Actress) ಆಳುತ್ತಿರುವ ಬೆಡಗಿ ಇವರು ಹೀಗಾಗಿ ದೀಪಿಕಾ ಹೆಸರಿನೊಂದಿಗೆ ಕನ್ನಡಿಗರಿಗೆ ಒಂದು ವಿಶೇಷತೆಯ ನಂಟು.

ಈ ರೀತಿಯಾಗಿ ದೀಪಿಕಾ ಪಡುಕೋಣೆ ಅವರನ್ನು ಬೆಂಬಲಿಸುತ್ತಿರುವ ಹಾಗೂ ಅವರ ನಟನೆಯನ್ನು ಮೆಚ್ಚಿ ಅಭಿಮಾನಿಗಳಾಗಿರುವ ಎಲ್ಲರಿಗೂ ಈ ಲೇಖನ ಮೂಲಕ ಒಂದು ಸಿಹಿ ವಿಚಾರ ಹಂಚಿಕೊಳ್ಳುತ್ತಿದ್ದೇವೆ. ಅದೇನೆಂದರೆ, ಗೌರಿ ಗಣೇಶ ಹಬ್ಬದ ವಿಶೇಷ ಸಂದರ್ಭದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಮನೆಗೆ ಗೌರಿಯ ಆಗಮನವಾಗಿದೆ.

WhatsApp Group Join Now
Telegram Group Join Now

https://www.instagram.com/p/C_ptijpMWfl/?igsh=cnhxZmo1bDJyeTE2

ಅರ್ಥಾತ್ ಇಂದು ಸೆಪ್ಟೆಂಬರ್ 8, 2024ರ ಭಾನುವಾರದಂದು ನಟಿ ದೀಪಿಕಾ ಪಡುಕೋಣೆ ಮುಂಬೈನಲ್ಲಿರುವ ಅಂಬಾನಿ ಮಾಲಿಕತ್ವದ H.N ರಿಲಯನ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ (Give birth to girl child) ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿ:- Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

ಅಧಿಕೃತವಾಗಿ ನಟಿ ದೀಪಿಕಾ ಪಡುಕೋಣೆಯಾಗಲಿ ಅಥವಾ ರಣವೀರ್ ಸಿಂಗ್ ಆಗಲಿ ಈ ವಿಷಯವನ್ನು ಮೀಡಿಯಾ ಮುಂದೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಧೃಡಪಡಿಸದೇ ಇದ್ದರೂ ಈ ಬಗೆಗಿನ ಸುದ್ದಿ ಅಕ್ಷರಶಹ ನಿಜವೆಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದಾಗುತ್ತಿದೆ.

ಇದರಲ್ಲಿ ಆಶ್ಚರ್ಯಕರ ಸಂಗತಿ ಏನೆಂದರೆ ನೆನ್ನೆಯಷ್ಟೇ ನಟಿ ದೀಪಿಕಾ ಮುಂಬೈನ ವಿಶ್ವವಿಖ್ಯಾತ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನಕ್ಕೆ ಕುಟುಂಬಸ್ಥರೊಂದಿಗೆ ಕಾಲ್ನಡಿಗೆಯಲ್ಲಿಯೇ ತೆರಳಿದ್ದರು. ಈ ಸಮಯದಲ್ಲೂ ಕೂಡ ಅವರ ಬೆನ್ನು ಬಿಡಿದ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದರು.

ತುಂಬು ಗರ್ಭಿಣಿ ಈ ರೀತಿ ನಡೆಯಲು ಸಾಧ್ಯವೇ, ಈಕೆ ಗರ್ಭಿಣಿಯಂತೆ ಆಕ್ಟಿಂಗ್ ಮಾಡುತ್ತಿರುವುದೇ ನಿಜ ಎಂದು ಮತ್ತೊಮ್ಮೆ ನಟಿ ಟೀಕೆ-ಟಿಪ್ಪಣಿಗಳನ್ನು ಎದುರಿಸಬೇಕಾಗಿ ಬಂತು. ಅದ್ಯಾಕೋ ಏನೋ ನಟಿ ಗರ್ಭಿಣಿಯಾದಾಗಲಿಂದಲೂ ಕೂಡ ಕ್ಯಾಮೆರಾ ಕಣ್ಣು ನಟಿ ಕಾಡುತ್ತಿವೆ. ಸಾಲದಕ್ಕೆ ಇವರು ಹಂಚಿಕೊಳ್ಳುವ ಈ ಫೋಟೋಗಳಿಗೆ ಕೆಲ ನೆಟ್ಟಿಗರ ಕೆಟ್ಟ ಸಾಲುಗಳು ಸೇರಿ ಆಕೆಯ ತಾಯ್ತನವನ್ನು ಅನುಮಾನಿಸುವಂತೆ ಆಗಿದೆ.

ನಟಿ ಒಂದೊಂದು ಫೋಟೋದಲ್ಲಿ ಒಂದೊಂದು ರೀತಿ ಕಾಣುತ್ತಿದ್ದಾರೆ ಹೀಗಾಗಿ ಬಹುಶ‌: ಆಕೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿರಬಹುದು‌, ಆದರೆ ಜನರ ಕಣ್ಣಿನಿಂದ ಇದನ್ನು ಮುಚ್ಚಿಡಲು ಪ್ರಗ್ನೆಂಟ್ ನಾಟಕ ಆಡುತ್ತಿದ್ದಾರೆ ಎನ್ನುವಷ್ಟರ ಮಟ್ಟಿಗೆ ಕಮೆಂಟ್ ಗಳು ಹರಿದಾಡಿವೆ.

ಕೊನೆಗೆ ಇತ್ತೀಚೆಗಷ್ಟೇ ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಇದಕ್ಕೆಲ್ಲ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದರು. ಆಲಿಯ ಭಟ್ ಸೇರಿದಂತೆ ಅನೇಕರು ಈ ವಿಚಾರವಾಗಿ ನಟಿ ಪರವಾಗಿ ಬ್ಯಾಟಿಂಗ್ ಕೂಡ ಬೀಸಿದ್ದರು. ಇಷ್ಟೇ ಅಲ್ಲದೆ ನಟಿಯ DOD ಡೇಟ್ ಬಗ್ಗೆ ಕೂಡ ವಿವಾದವಿತ್ತು. ಮೂಲಗಳ ಪ್ರಕಾರವಾಗಿ ಸೆಪ್ಟೆಂಬರ್ 28ರಂದು ಅಂದರೆ ನಟಿಯ ಮಾಜಿ ಗೆಳೆಯ ರಣಬೀರ್ ಕಪೂರ್ ಅವರ ಹುಟ್ಟು ಹಬ್ಬದ ದಿನದಂದು ನಟಿಯ ಡೆಲಿವರಿ ಡೇಟ್ ಫಿಕ್ಸ್ ಆಗಿತ್ತಂತೆ.

ಇದನ್ನು ಕೆಲವರು ಡೆಸ್ಟಿನಿ ಎಂದರೆ ಇನ್ನೂ ಕೆಲವರು ಪ್ಲಾನಿಂಗ್ ಎಂದು ಕೂಡ ಕರೆದಿದ್ದರು. ಆದರೆ ನಿಗದಿತ ದಿನಾಂಕದ 20 ದಿನಗಳ ಮುಂಚೆಯೇ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ನಟಿ ಎಲ್ಲಾ ಊಹಾಪೋಹ ಇತ್ಯಾದಿಗಳಿಗೆ ತೆರೆ ಎಳೆದಿದ್ದಾರೆ. ಅಂತಿಮವಾಗಿ ಈ ವರ್ಷ ದೀಪಿಕಾ ಮನೆಯಲ್ಲಿ ಪುಟ್ಟಗೌರಿ ಆಗಮನ ಸಂಭ್ರಮವನ್ನು ದುಪ್ಪಟ್ಟು ಗೊಳಿಸಿರುವುದಂತೂ ಸುಳ್ಳಲ್ಲ.

Leave a Comment