Ramya
ಸ್ಯಾಂಡಲ್ ವುಡ್ ನ (Sandalwood) ಮೋಹಕ ನಟಿ ರಮ್ಯಾ (Ramya) ಈಗ ಸಿನಿಮಾ ಮಾತ್ರವಲ್ಲದೇ ಸಿನಿಮೇತರವಾಗಿ ರಾಜಕೀಯ ಹಾಗೂ ಇನ್ನಿತರ ವಿಚಾರಗಳಿಂದ ಕೂಡ ಹೆಚ್ಚು ಸುದ್ದಿಯಲ್ಲಿರುವ ಹಾಗೂ ಸುದ್ದಿಯಷ್ಟೇ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ನಟಿ. 2003 ರಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿ ಚಿತ್ರದಲ್ಲಿ ನಟಿಸುವ ಮೂಲಕ ದಿವ್ಯಸ್ಪಂದರಾಗಿದ್ದ ಈಕೆ ರಮ್ಯಾಳಾಗಿ ಪಾರ್ವತಮ್ಮ ಅವರಿಂದಲೇ ಮರುನಾಮಕರಣ ಮಾಡಿಸಿಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟರು.
ನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ನಂಬರ್ ಒನ್ ಪಟ್ಟಕ್ಕೂ ಕೂಡ ಏರಿದ್ದರು. ಸಿನಿಮಾ ಕೆರಿಯರ್ ನಲ್ಲಿ ಉತ್ತಮದಲ್ಲಿದ್ದಾಗಲೇ ಕೈಲಿದ್ದ ಸಿನಿಮಾಗಳ ಪ್ರಾಜೆಕ್ಟ್ ಗಳನ್ನು ಅರ್ಧಕ್ಕೆ ಕೈ ಬಿಟ್ಟು ರಾಜಕೀಯ ಪ್ರವೇಶ ಮಾಡಿ ನಿರ್ಮಾಪಕರ ಕೆಂಗಣ್ಣಿಗೂ ಗುರಿಯಾಗಿದ್ದರು.
ರಾಜಕೀಯದಲ್ಲಿ ಕೂಡ ಸಾಕಷ್ಟು ಶ್ರದ್ದೆ ತೋರಿ ಕೆಲಸ ಮಾಡುತ್ತಾ ಗುರುತಿಸಿಕೊಂಡಿದ್ದ ಈಕೆ ಸಂಸದೆಯೂ ಆಗಿ ತಮ್ಮ ಜವಾಬ್ದಾರಿ ಮೆರೆದರು. ಆದರೆ ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಅನಿರೀಕ್ಷಿತ ಸೋಲು ಆಕೆಯನ್ನು ರಾಜಕೀಯ ಬಗ್ಗೆ ಕೂಡ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದ್ದು, ಈ ಮಧ್ಯೆ ಆಗಾಗ ನಟಿ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಆಗುತ್ತಾರೆ.
ನಟಿ ಭಾರತದ ರಾಜಕೀಯದಲ್ಲಿ ಹೆಸರುವಾಸಿಯಾಗಿರುವ ದೇಶದ ಪ್ರಭಾವಿ ರಾಜಕಾರಣಿ ಕುಟುಂಬವೊಂದನ್ನು ಸೇರಲಿದ್ದಾರೆ, ಯುವರಾಜಕಾರಣಿ ವಿವಾಹವಾಗಲಿದ್ದಾರೆ, ಮಾಜಿ ಕ್ರಿಕೆಟರ್ ರೊಂದಿಗೆ ರಮ್ಯ ಮದುವೆ, ರಮ್ಯಾ ತಮ್ಮ ಬಹುಕಾಲದ ಗೆಳೆಯನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ, ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಇತ್ಯಾದಿ ಇತ್ಯಾದಿ ಸುದ್ದಿಗಳು ಹಬ್ಬಿವೆ.
ಒಟ್ಟಾರೆಯಾಗಿ ಸದ್ಯಕ್ಕೀಗ ನಟಿ ರಮ್ಯಾ ಎಂದ ಕೂಡಲೇ 41ರ ಹರೆಯದಲ್ಲಿರುವ ಆಕೆಯ ಮದುವೆ ವಿಚಾರ ಕೂಡ ನೆನಪಿಗೆ ಬರುವಂತಾಗಿದೆ. ದಶಕಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ ಇನ್ನು ಸಹ ಕೋಟ್ಯಾಂತರ ಸಂಖ್ಯೆಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಈ ಮುದ್ದಾದ ನಟಿ ಮದುವೆ ವಿಚಾರ ಕನ್ನಡಿಗರ ಕುತೂಹಲವೂ ಆಗಿದೆ ಹಾಗಾಗಿ ಅಂತಿಮವಾಗಿ ಇದಕ್ಕೊಂದು ಉತ್ತರ ದೊರೆತಿದೆ.
ಬಲವಾದ ಮೂಲಗಳ ಮೂಲಕ ದೊರೆತ ಮಾಹಿತಿ ಪ್ರಕಾರವಾಗಿ ನವೆಂಬರ್ 29 ಅಂದರೆ, ರಮ್ಯಾ ಅವರ ಹುಟ್ಟು ಹಬ್ಬದ ದಿನದಂದೇ ಈ ವರ್ಷ ಅವರು ಖ್ಯಾತ ಉದ್ಯಮಿಯೊಂದಿಗೆ ಹಸೆಮಣೆ ಏರಲಿದ್ದಾರೆ, ಇದಕ್ಕಾಗಿ ಈಗಾಗಲೇ ಸರ್ವಸಿದ್ಧತೆಯು ತಯಾರಾಗಿದೆ ಎನ್ನುವ ವಿಚಾರವೊಂದು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ.
ಎಂದಿನಂತೆ ಈ ಬಾರಿಯೂ ಕೂಡ ತಮ್ಮ ಮದುವೆ ವಿಚಾರ ಕೇವಲ ಗಾಳಿ ಸುದ್ದಿ ಎಂದು ನಟಿ ಅಲ್ಲಗಳೆದಿದ್ದರೂ ಚೌದರಿ ಗಾರ್ಮೆಂಟ್ಸ್ ಮಾಲಿಕ ಪ್ರಭವ್ ಚೌಧರಿಯವನ್ನು ನಟಿ ರಮ್ಯ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಗಟ್ಟಿಯಾಗಿ ಕೇಳಿ ಬರುತ್ತಿದೆ.
ಇದರ ನಡುವೆ ನಟಿ ಆಪಲ್ ಬಾಕ್ಸ್ ಸಂಸ್ಥೆ ಮೂಲಕ ನಿರ್ಮಾಪಕಿಯಾಗಿ ಕೂಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಸ್ವಾತಿ ಮುತ್ತಿನ ಮಳೆಹನಿ ಸಿನಿಮಾದ ಸಹ ನಿರ್ಮಾಪಕವಾಗಿದ್ದರು ಮತ್ತು ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ಚಿತ್ರ ಉತ್ತರಖಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಂಬ್ಯಾಕ್ ಕೂಡ ಆಗುತ್ತಿದ್ದಾರೆ.
ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗದಲ್ಲೂ ಕೂಡ ಹೆಸರು ಮಾಡಿರುವ ನಟಿಗೆ ಕನ್ನಡದಲ್ಲಿ ಈಗಲೂ ಸಾಕಷ್ಟು ಬೇಡಿಕೆ ಇದೆ. ತೆರೆ ಮೇಲೆ ಇನ್ನಷ್ಟು ವರ್ಷಗಳ ಕಾಲ ನಟಿಯನ್ನು ಕಾಣುವ ಅವರ ಅಭಿಮಾನಿಗಳ ಕನಸು ನನಸಾಗಲಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿ ತೊಡಗಿಕೊಳ್ಳಲಿ ಅಂತೇ ಅವರ ವೈಯಕ್ತಿಕ ಬದುಕಿನಲ್ಲಿ ಕೂಡ ಬದಲಾವಣೆಗಳಾಗಲಿ ಎಂದು ನಾವು ಸಹ ಬಯಸೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.