Jaggesh
ಈ ಬದುಕೇ ಹೀಗೆ, ಇದು ಯಾವಾಗ ಎಲ್ಲಿ? ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಕೆಲ ಸಂಗತಿಗಳನ್ನು ಪ್ರಬಲ ಇಚ್ಛಾಶಕ್ತಿಯಿಂದ ಬದಲಾಯಿಸಿಕೊಳ್ಳಲು ಪ್ರಯತ್ನಿಸಬಹುದು ಆದರೆ ಅದೃಷ್ಟ ಸಾಥ್ ಕೊಡದೆ ಇದ್ದರೆ ಶ್ರಮ, ಹಣ, ಸಮಯ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುವುದು. ಹಾಗಾಗಿ ನಾವಿಂದು 2024ರಲ್ಲಿ ಇದ್ದರೂ ಕೂಡ ಭಗವಂತನ ಬಗ್ಗೆ ಭಯ ಭಕ್ತಿ ಕಡಿಮೆಯಾಗಿಲ್ಲ.
ಸದ್ಯಕ್ಕೆ ಈಗ ನಾಡಿನ ಎಲ್ಲಾ ಕಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ನಾವು ಕನ್ನಡದ ಖ್ಯಾತ ನಟನೊಬ್ಬ ತನ್ನ ಕ’ಷ್ಟ ಕಾಲದಲ್ಲಿ ತಂದು ಪೂಜಿಸಿ ವಿಜ್ಞ ವಿನಾಶಕನ ದಯೆಯಿಂದ ಇಂದು ಬದುಕಿನಲ್ಲಿ ಎಲ್ಲವನ್ನು ಪಡೆದುಕೊಂಡಿರುವಂತಹ ವಿಚಾರವನ್ನು ತಿಳಿಸುತ್ತಿದ್ದೇವೆ.
ವಿಶೇಷವೇನೆಂದರೆ, ಗಣೇಶ ಹಬ್ಬದ ಪ್ರಯುಕ್ತ ಈ ಸೆಲೆಬ್ರಿಟಿ ಸ್ವತಹ ತಾವೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಕೂಡ ಇವರ ಕುರಿತಾಗಿ ಸಹಜವಾಗಿ ಈಗ ಎಲ್ಲರಿಗೂ ಕುತೂಹಲ ಮೂಡಿರುತ್ತದೆ. ಇವರು ಬೇರಾರು ಅಲ್ಲ ಕನ್ನಡದ ನೆಲದಲ್ಲಿ ಹಾಸ್ಯಕ್ಕೆ ಬೆಂಚ್ಮಾರ್ಕ್ ಸೃಷ್ಟಿಸಿರುವ ನವರಸ ನಾಯಕ ಜಗ್ಗೇಶ್.
ಇಂದು ಕಿರುತೆರೆಯ ಮೂಲಕ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿ, ನಟನಾಗಿ ಚಿತ್ರರಂಗದಲ್ಲಿಯೂ ಸಕ್ರಿಯರಾಗಿ, ರಾಜಕೀಯದಲ್ಲೂ ಕೂಡ ತಮ್ಮದೇ ಚಾಪು ಮೂಡಿಸಿರುವ ರಾಜ್ಯಸಭಾ ಸದಸ್ಯನವರೆಗೆ ಸಾಧನೆ ಮಾಡಿರುವ ಜಗ್ಗೇಶ್ ರವರು. ತಮ್ಮ ಮನೆಯಲ್ಲಿ ಗಣೇಶ ವ್ರತ ಆರಂಭಿಸಿದ ಬಗ್ಗೆ ಹಳೆ ಗಣೇಶ ವಿಗ್ರಹವೊಂದರ ಫೋಟೋ ಹಂಚಿಕೊಳ್ಳುವ ಮೂಲಕ ಹಳೆ ನೆನಪಿಗೆ ಜಾರಿದ್ದಾರೆ.
37 ವರ್ಷಗಳ ಹಿಂದೆ 1987ರಲ್ಲಿ ನಮ್ಮ ಮಗ ಗುರುರಾಜ್ ಹುಟ್ಟಿದ ಸಮಯದಲ್ಲಿ ಮೊದಲ ಬಾರಿಗೆ ನಮ್ಮ ಮನೆಯಲ್ಲಿ 40 ರೂಪಾಯಿ ಕಷ್ಟಪಟ್ಟು ಕೂಡಿಟ್ಟು ಗಣೇಶನನ್ನು ತಂದೆ, ಹಬ್ಬ ಮುಗಿದ ಮೇಲೆ ವಿಸರ್ಜಿಸುವ ಮನಸಾಗಲಿಲ್ಲ, ಇಂದಿಗೂ ಕೂಡ ಪ್ರತಿ ವರ್ಷ ಅದೇ ಗಣಪನಿಗೆ ನಮ್ಮ ಮನೆಯಲ್ಲಿ ಪೂಜೆ ನಡೆಯುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ವ್ರತ ಆರಂಭಿಸಿದ ಮೇಲೆ ನಮ್ಮ ಬದುಕು ಸಾಕಷ್ಟು ಸುಧಾರಿಸಿತು. ಸನಾತನ ಧರ್ಮಕ್ಕಿರುವ ಶಕ್ತಿ ಇದು, ನಾವು ಈ ಸ್ಮೃತಿ ಹಾಗೂ ಶೃತಿಗಳನ್ನು ಪರಂಪರೆಯಿಂದ ಬಳುವಳಿಯಾಗಿ ಪಡೆದಿದ್ದೇವೆ ನಾವು ಇದನ್ನು ಮುಂದಿನ ತಲೆಮಾರಿಗೂ ದಾಟಿಸಬೇಕು.
https://www.instagram.com/reel/C_nkqNxJw8W/?igsh=MnY5bWs0eGg0bW9j
ಹಿರಿಯರ ತತ್ವ ಸಿದ್ಧಾಂತಗಳು ಆಸ್ತಿಯಾಗಿ ಕಿರಿಯರಿಗೆ ದೇಣಿಗೆಯಾಗಿ ಹೋಗಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಈ ಹಾದಿಯಲ್ಲಿ ನನ್ನ ಆಧ್ಯಾತ್ಮಿಕ ಚಿಂತನೆಗೆ ತಾಯಿಯೇ ಗುರು. ಈಗ ನಾನು ಮತ್ತು ನನ್ನ ಹೆಂಡತಿ ನನ್ನ ಮೊಮ್ಮಗ ಅರ್ಜುನನಿಗೆ ಅದನ್ನೇ ಕಲಿಸುತ್ತಿದ್ದೇವೆ.
ಆಧ್ಯಾತ್ಮದ ಬಗ್ಗೆ ಅರಿವಿದ್ದಾಗ ಮಾತ್ರ ಮಕ್ಕಳಲ್ಲಿ ಹಿರಿಯರ-ಗುರುಗಳ ಬಗ್ಗೆ ಗೌರವ, ದೇವರ ಮೇಲೆ ನಂಬಿಕೆ ಬದುಕಿನಲ್ಲಿ ಗುರಿ ಎಲ್ಲವೂ ಸ್ಪಷ್ಟವಾಗುತ್ತದೆ. ಆಗ ಬದುಕು ಯಶಸ್ವಿಯಾಗುತ್ತದೆ ಎಂದು ತಮ್ಮ instagram ಖಾತೆಯಲ್ಲಿ ಮೊಮ್ಮಗನೊಂದಿಗೆ ಗಣಪತಿ ಹಬ್ಬ ಆಚರಿಸುತ್ತಿರುವ ಸಂಭ್ರಮದ ಫೋಟೋ ಜೊತೆ ಬರೆದು ಹಂಚಿಕೊಂಡು ಮತ್ತು ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ. ನಟ ಜಗ್ಗೇಶ್ ರವರು ಶ್ರೀ ಗುರು ರಾಘವೇಂದ್ರರ ಪರಮ ಭಕ್ತರು ಕೂಡ ಹೌದು.