Soundarya: ನಟಿ ಸೌಂದರ್ಯ ಅಕಾಲಿಕ ಮರ’ಣದ ಬಗ್ಗೆ ಇವರೊಬ್ಬರಿಗೆ ಮಾತ್ರ ಮೊದಲೇ ತಿಳಿದಿತ್ತಂತೆ.!

Soundarya

ನಟಿ ಸೌಂದರ್ಯ (Actress Soundarya) ಕನ್ನಡಿಗರಾಗಿ ಹುಟ್ಟಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಟಾಪ್ ನಟಿಯಾಗಿ ಮೆರೆದವರು. ಕನ್ನಡದ ಕಂಪನ್ನು ಬಾಲಿವುಡ್ ವರೆಗೂ ಪಸರಿಸಿ ಅಮಿತಾ ಬಚ್ಚನ್ ನಂತಹ ಮೇರು ನಟನೊಂದಿಗೆ ಚಿಕ್ಕವಯಸ್ಸಿಗೆ ತೆರೆ ಹಂಚಿಕೊಂಡು ಖ್ಯಾತಿ ಪಡೆದವರು.

ಬರೋಬ್ಬರಿ ಎರಡು ದಶಕಗಳ ಕಾಲ ಕನ್ನಡ, ತಮಿಳು, ತೆಲುಗು, ಮಲಯಾಳಂ ನ ಎಲ್ಲಾ ಟಾಪ್ ಹೀರೋಗಳಿಗೆ ನಾಯಕ ನಟಿಯಾಗಿ ಮಾತ್ರವಲ್ಲದೆ ಇದರ ಸಹಜನಟನೆ, ಮೋಹಕ ನಗು, ಎಲ್ಲೇ ಮೀರದ ಡ್ರೆಸ್ ಸೆನ್ಸ್ನ ನಿಂದಲೇ ಜನಮಾನಸದಲ್ಲಿ ಶಾಶ್ವತವಾದವರು ಎಂದರೂ ಅತಿಶಯೋಕ್ತಿಯಾಗದು.

WhatsApp Group Join Now
Telegram Group Join Now

ಯಾಕೆಂದರೆ ಇದುವರೆಗೂ ನಟಿ ಯಾವುದೇ ಸಿನಿಮಾಗಾ ತೀರಾ ಅತಿ ಎನಿಸುವ ರೀತಿ ಕಾಣಿಸಿಕೊಂಡವರಲ್ಲ. ಅನಾವಶ್ಯಕವಾದ ಸೀನ್ಶಗಳಿಗೆಲ್ಲಾ ಓಕೆ ಅಂದವರಲ್ಲ. ಅಪ್ಸರೆಯಂತಹ ಸೌಂದರ್ಯ ದ ಜೊತೆಗೆ ಅಷ್ಟೇ ಸಂಭಾವಿತೆಯಾಗಿ ಬದುಕಿ, ಸೀರೆಯುಟ್ಟೇ ನಟಿಸಿ ಸೈ ಎನಿಸಿಕೊಂಡವರು.

ದೇವತೆಯಾಗಿ, ಗ್ಲಾಮರ್ ಗೊಂಬೆಯಾಗಿ, ಮನೆ ಮಗಳಾಗಿ ಈಕೆ ಅಭಿನಯಿಸಿದ ಪಾತ್ರಗಳೂ ಸಿನಿಮಾ ಜಗತ್ತು ಇರುವವರೆಗೂ ನೆನೆಯುವಂತದ್ದೂ. ಬಹುಶ: ಇಂದು ಆಕೆ ನಮ್ಮೊಂದಿಗಿದಿದ್ದರೆ ಈ ಮಾತು ಮುಂದುವರೆಸಲು ಇನ್ನಷ್ಟು ವಿಷಯಗಳು, ಆಕೆಯ‌ ಸಾಧನೆಗಳೂ ಸಿಗುತ್ತಿತ್ತೋ ಏನೋ ಆದರೆ ನಾವು ಇವರನ್ನು ಕಳೆದುಕೊಂಡು 20 ವರ್ಷಗಳಾಗುತ್ತಿದೆ.

ಆದರೂ ಈಕೆಯ ಸಾ’ವು ಮಾತ್ರ ಅಷ್ಟು ಸುಲಭಕ್ಕೆ ಜೀರ್ಣಿಸಿಕೊಳ್ಳುವಂಥದ್ದಲ್ಲ. ಯಾಕೆಂದರೆ ಸಿನಿಮಾ ರಂಗದಲ್ಲಿ ಉತ್ತುಂಗದ ಮಟ್ಟದಲ್ಲಿದ್ದು ಆಗಷ್ಟೇ ರಾಜಕೀಯ ಪಾದಾರ್ಪಣೆ ಕೂಡ ಮಾಡಿ ಬದುಕಿನ ಬಗ್ಗೆ ಸಾವಿರಾರು ಕನಸು ಕಟ್ಟಿದ್ದ ಈಕೆ ಇಲ್ಲವಾದಾಗ ಕೇವಲ 30ರ ಆಸು ಪಾಸು.

2004 ಏಪ್ರಿಲ್ 18ರ ಅದೊಂದು ಕಹಿ ಘಟನೆ ಇಂದಿಗೂ ಕೂಡ ಚಿತ್ರವೊಂದಕ್ಕೆ ತುಂಬಲಾಗದ ನಷ್ಟ. ಚುನಾವಣೆ ಪ್ರಚಾರಕ್ಕೆಂದು ಆಪ್ತ ಮಿತ್ರ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ತರಾತುರಿಯಲ್ಲಿ ಪ್ರೈವೇಟ್ ಹೆಲಿಕಾಪ್ಟರ್ ಹತ್ತಿ ಸಹೋದರನೊಂದಿಗೆ ಆಕಾಶಕ್ಕೆ ಏರಿದ ನಟಿ ಭೂಮಿಗೆ ತಲುಪಿದ್ದು ಬೆಂಕಿಯ ಕೆನ್ನಾಲಿಗಿಗೆ ಸಿಕ್ಕಿ ಕಡು ಕಪ್ಪಾಗಿ ಬೆಂದು.

ಆಗ ಆಕೆಯ ಕರುಳಲ್ಲೊಂದು ಚಿಗುರು ಕೂಡ ಇತ್ತು ಎನ್ನುವುದು ಹೃದಯವನ್ನು ಇನ್ನಷ್ಟು ಹಿಂಡುತ್ತದೆ ಇಂತಹ ಪ್ರತಿಭಾವಂತ ನಟಿ ತನ್ನ ಅಂದಕ್ಕೆ ತಕ್ಕಹಾಗೆ ಬುದ್ಧಿಶಕ್ತಿಯನ್ನು ಹೊಂದಿದ್ದ ಆಕೆಯ ಎಲ್ಲಾ ಕನಸುಗಳು ಅಂದು ವಿಮಾನ ದು’ರಂ’ತದಲ್ಲಿ ನಟಿಯೊಂದಿಗೆ ಬೆಂದು ಹೋಯಿತು.

ಆ ಸಮಯದಲ್ಲಿ ಈ ದು’ರ್ಘ’ಟ’ನೆಗೆ ಆಪ್ತಮಿತ್ರ ಸಿನಿಮಾದಲ್ಲಿನ ನಾಗವಲ್ಲಿ ಪಾತ್ರದ ಪ್ರಭಾವವೇ ಕಾರಣವಾಯಿತು. ಮತ್ತೊಂದೆಡೆ ನಟಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕಾರಣದಿಂದ ಕಾಣದ ಕೈಗಳ ಆಟವೇ ಎನ್ನುವುದೂ ಕೂಡ ಗಾಳಿ ಮಾತಾಗಿ ಹಬ್ಬಿತ್ತು.‌ ಆದರೆ ಸೌಂದರ್ಯ ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸೌಂದರ್ಯ ಅವರು ಈ ರೀತಿ ಮರಣ ಕಂಟಕ ಹೊಂದಿದ್ದಾರೆ ಎನ್ನುವುದು ಮೊದಲೇ ತಿಳಿದಿತ್ತಂತೆ.

ಹೌದು ನಟಿ ಸೌಂದರ್ಯ ಅವರ ತಂದೆಗೆ ಮಾತ್ರ ಸೌಂದರ್ಯವರು ಈ ರೀತಿ ಬಹಳ ಚಿಕ್ಕ ವಯಸ್ಸಿಗೆ ಅಕಾಲಿಕ ಮ’ರ’ಣ ಹೊಂದುತ್ತಾರೆ ಎಂದು ತಿಳಿದಿತ್ತಂತೆ. ಒಮ್ಮೆ ಅವರು ಸೌಂದರ್ಯ ಅವರ ಜಾತಕವನ್ನು ಜ್ಯೋತಿಷಿ ಬಳಿ ತೋರಿಸಿದ್ದಾಗ ಹೀಗೆ ಅವರಿಗೆ ಒಂದು ಅ’ಪ’ಮೃ’ತ್ಯು ಸನ್ನಿವೇಶ ಚಿಕ್ಕ ವಯಸ್ಸಿಗೆ ಎದುರಾಗುತ್ತದೆ ಎಂದು ಅವರು ತಿಳಿಸಿದ್ದರಂತೆ.

ಹಾಗಾಗಿ ಕುಟುಂಬದವರು ಸದಾ ಇವರ ವಿಷಯದಲ್ಲಿ ಎಚ್ಚರಿಕೆಯಿಂದ ಇರುತ್ತಿದ್ದರಂತೆ. ಅದರಲ್ಲೂ ಸೌಂದರ್ಯ ಅವರ ಸಹೋದರನಂತೂ ಪ್ರತಿ ಹೆಜ್ಜೆಯಲ್ಲೂ ಸೋದರಿ ಹಿಂದೆಯೇ ಇರುತ್ತಿದ್ದರು, ಕೊನೆಗೆ ಸಾ’ವಿನಲ್ಲೂ ಕೂಡ. ಆದರೂ ಎಲ್ಲರ ಎಚ್ಚರಿಕೆ ಮೀರಿ ವಿಧಿಯ ಆಟವೇ ಗೆದ್ದಿದೆ.

 

Leave a Comment