Darshan
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ’ಲೆ ಪ್ರಕರಣದಲ್ಲಿ (Renukaswamy Murder Case) ಭಾಗಿಯಾಗಿದ್ದರು ಎನ್ನುವ ಹಿನ್ನೆಲೆಯಿಂದ ವಿಚಾರಣಾಧೀನ ಖೈ’ದಿಯಾಗಿ ನಟಿ ದರ್ಶನ್ ರವರು (Darshan) ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿದೆ. ಈ ನಡುವೆ ಆದ ಬೆಳವಣಿಗೆಗಳ ಕಾರಣ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಕೂಡ ಶಿಫ್ಟ್ ಮಾಡಲಾಗಿದೆ.
ಈಗಷ್ಟೇ ದರ್ಶನ್ ಹಾಗೂ ಇವರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ 17 ಜನರ ಮೇಲೆ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ದರ್ಶನ್ ಅವರು A2 ಆರೋಪಿಯಾಗಿದ್ದಾರೆ ಮತ್ತು ಚಾರ್ಜ್ ಶೀಟ್ ನಲ್ಲಿ ದರ್ಶನ್ ಅವರ ಆದೇಶ ಮೇಲೆ ಸಹಚರರು ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಪ್ಲಾನ್ ಮಾಡಿ ಬೆಂಗಳೂರಿಗೆ ಕರೆಸಿಕೊಂಡು ನಂತರ ಕಿ’ಡ್ನಾ’ಪ್ ಮಾಡಿ ಪಟ್ಟಣಗೆರೆ ಶೆಡ್ ನಲ್ಲಿ ಚಿ’ತ್ರ’ಹಿಂ’ಸೆ ನೀಡಿ ಕೊಲ್ಲಲಾಗಿದೆ.
ದರ್ಶನ್ ಅವರು ಕೂಡ ಆತನ ಮೇಲೆ ಹ’ಲ್ಲೆ ಮಾಡಿದ್ದಾರೆ ಎನ್ನುವುದು ದಾಖಲಾಗಿದೆ ಇತ್ತ ತಮ್ಮ ಡಿ ಬಾಸ್ ಗೆ ಎದುರಾಗಿರುವ ಈ ಸಂ’ಕ’ಷ್ಟ ದಿಂದ ಕಂಗೆಟ್ಟ ಅಭಿಮಾನಿಗಳು ದಿಕ್ಕು ತೋಚದಂತಾಗಿದ್ದಾರೆ ಹಾಗೂ ಪರಿಹಾರಕ್ಕಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಕುಟುಂಬದವರು ನಟನ ಬಿಡುಗಡೆಗಾಗಿ ನಾನಾ ಪ್ರಯತ್ನ ಮಾಡುತ್ತಾ ಕಾನೂನು ಹೋರಾಟ ಮುಂದುವರೆಸಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೂ ದರ್ಶನ್ ರವರು ನಂತರ ಜಾಮೀನಿನ ಮೇಲೆ ಹೊರಬರಬಹುದು ಎನ್ನುವ ನಂಬಿಕೆ ಇತ್ತು. ಆದರೆ ಈಗ ಕೇಳಿ ಬರುತ್ತಿರುವ ಮಾಹಿತಿಗಳ ಪ್ರಕಾರ ಈಗಲೂ ಅವರಿಗೆ ಜಾಮೀನು ಸಿಗುವುದು ಕ’ಷ್ಟ ಸಾಧ್ಯವಾಗಿದೆ ಎಂದು ಕೇಳಿ ಬರುತ್ತಿದೆ. ಇದರ ನಡುವೆ ಹೇಗಾದರೂ ಮಾಡಿ ದರ್ಶನ್ ರವರನ್ನು ಬಿಡುಗಡೆ ಮಾಡಬೇಕು ಎನ್ನುವ ಶತಪಯತ್ನ ಅವರ ಆಪ್ತರಿಂದ ಹಾಗೂ ಕುಟುಂಬದವರಿಂದ ನಡೆಯುತ್ತಿದ್ದು.
ಇದರ ಸಂಬಂಧ ಉಪ್ಪಿ ಸಿನಿಮಾ ಕಾರ್ಯಕ್ರಮಕ್ಕಾಗಿ ದರ್ಶನ್ ಅವರನ್ನು ಪೆರೋಲ್ (Perol) ಮೇಲೆ ಹೊರತರರುವುದಕ್ಕೆ ಕೂಡ ಪ್ರಯತ್ನಿಸಲಾಗುತ್ತಿದೆಯಂತೆ. ಈ ಬಗ್ಗೆ ಮಾಧ್ಯಮಗಳಿಗೆ ನಿರ್ಮಾಪಕಿ ಶಿಲ್ಪ ಶ್ರೀನಿವಾಸ್ (Producer Shilpa Shrinivas) ರವರು ಮಾಹಿತಿ. ಕೊಟ್ಟಿದ್ದಾರೆ. ಆ ಪ್ರಕಾರವಾಗಿ ಅಕ್ಟೋಬರ್ 22 ಕ್ಕೆ ಉಪೇಂದ್ರ ಅವರ ನಟನೆ ಹಾಗೂ ಅಭಿನಯದ ಉಪೇಂದ್ರ ಸಿನಿಮಾ (Upendra Movie) ರಿಲೀಸ್ ಆಗಿ 25 ವರ್ಷ ಪೂರೈಸುತ್ತಿದೆ.
ಕನ್ನಡ ಚಿತ್ರರಂಗದ ದಿಕ್ಕು ಬದಲಾಯಿಸಿದ ಈ ಸಿನಿಮಾ ಉಂಟು ಮಾಡಿದ್ದ ಆ ದಿನಗಳ ಕ್ರೇಜ್ ಎಲ್ಲರಿಗೂ ಗೊತ್ತೇ ಇದೆ, ಈಗಲೂ ಉಪೇಂದ್ರ ಸಿನಿಮಾಗೆ ಅದರದ್ದೇ ಫ್ಯಾನ್ ಬೇಸ್ ಕೂಡ ಇದೆ. ಇದೆಲ್ಲ ಕಾರಣದಿಂದ ಇಂತಹ ಸಿನಿಮಾಗೆ 25 ವರ್ಷ ಪೂರೈಸಿದ ಸಂಭ್ರಮವನ್ನು ಬಹಳ ಗ್ರಾಂಡ್ ಆಗಿ ಆಚರಿಸಲು ಈ ಸಿನಿಮಾದ ನಿರ್ಮಾಪಕಿಯಾಗಿದ್ದ ಶಿಲ್ಪ ಶ್ರೀನಿವಾಸ್ ನಿರ್ಧರಿಸಿದ್ದಾರೆ ಮತ್ತು ಅಂದು ಉಪೇಂದ್ರ ಚಿತ್ರ ರಿ ರಿಲೀಸ್ ಕೂಡ ಆಗಲಿದೆಯಂತೆ.
ದರ್ಶನ್ ಗೆ ಬಹಳ ಆತ್ಮೀಯರು ಆಗಿರುವ ಇವರು ಈ ಕಾರ್ಯಕ್ರಮಕ್ಕೆ ಡಿಪೋಸಿಟ್ ಇಟ್ಟು ಪೆರೋಲ್ ಮೇಲೆ 2 ಗಂಟೆಗಳ ಕಾಲ ಹೊರ ತರಲು ನಿರ್ಧರಿಸಿದ್ದಾರಂತೆ. ಇದು ಚಿತ್ರರಂಗದ ಕಾರ್ಯಕ್ರಮ ಇದರಲ್ಲಿ ಸಿನಿಮಾ ರಂಗದ ಎಲ್ಲರೂ ಭಾಗಿಯಾಗಿರುತ್ತಾರೆ. ದರ್ಶನ್ ಅವರು ಕನ್ನಡದ ಸ್ಟಾರ್ ಹೀರೋ, ಅವರು ಕೂಡ ಕಾರ್ಯಕ್ರಮದಲ್ಲಿರಬೇಕು.
ಹಾಗಾಗಿ ಅವರನ್ನು ಕರೆತರುತ್ತೇವೆ ಎಂದು ಹೇಳಿರುವ ಅವರು ದರ್ಶನ್ ಮಾತ್ರವಲ್ಲ ದರ್ಶನ್ ಅವರ ತಂದೆಯವರು ಕೂಡ ನಮ್ಮ ಸಿನಿಮಾದಲ್ಲಿ ನಟಿಸಿದ್ದರು. ನನಗೆ ಅವರೆಲ್ಲರೂ ಹತ್ತಿರದಿಂದ ಗೊತ್ತು, ಅವರ ಕುಟುಂಬದಲ್ಲಿ ಅವರ ರಕ್ತದಲ್ಲಿ ಹಿಂ’ಸೆ ಪ್ರವೃತ್ತಿ ಇಲ್ಲ ಆದಷ್ಟು ಬೇಗ ದರ್ಶನ್ ಅವರ ಕಂಟಕ ಕಳೆದು ಆಚೆ ಬರಲಿ ಎಂದು ನಾನು ಕೂಡ ಕಾಯುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.