Jayam Ravi: 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಆಡಿದ ನಟ ಜಯಂ ರವಿ.!

Jayam Ravi

ಸಿನಿಮಾ ರಂಗದವರ ಬದುಕೆ ಹಾಗಿದೆಯೋ ಅಥವಾ ಆ ಕ್ಷೇತ್ರದ ಒತ್ತಡ ಅಥವಾ ಇನ್ನಿತರ ಸಂಗತಿಗಳು ಈ ಪರಿಸ್ಥಿತಿಗೆ ಕಾರಣವೋ ಅಥವಾ ನಿಜವಾಗಿಯೂ ಇಂತಹ ಘಟನೆಗಳಾಗಲು ಮತ್ತೀನೇನು ಕಾರಣವಿದೆಯೋ ಗೊತ್ತಿಲ್ಲ. ಆದರೆ ಸಾಮಾನ್ಯವಾಗಿ ಉಳಿದ ಎಲ್ಲಾ ಕ್ಷೇತ್ರಕ್ಕಿಂತ ಸಿನಿಮಾರಂಗದಲ್ಲಿ ಬಹಳ ಹೆಚ್ಚು ವಿ’ಚ್ಛೇ’ದ’ನವಾಗುತ್ತದೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಸ್ಟಾರ್ ಪಟ್ಟಕ್ಕೇರಿ ಎಲ್ಲರಿಗೂ ಚಿರಪರಿಚಿತರಾದವರೇ ತಮ್ಮ ಬಹು ವರ್ಷಗಳ ದಾಂಪತ್ಯ ಮುರಿದುಕೊಂಡು ಸುದ್ದಿಯಾಗುತ್ತಾರೆ ಎಂದರು ತಪ್ಪಲ್ಲ. ಈಗ ಈ ಸಾಲಿಗೆ ಮತ್ತೊಬ್ಬ ಜನಪ್ರಿಯ ನಟನ ಹೆಸರು ಕೂಡ ಸೇರ್ಪಡೆಯಾಗುತ್ತಿದೆ. 15 ವರ್ಷಗಳ ಸುಧೀರ್ಘ ಸಂಬಂಧಕ್ಕೆ ವಿ’ಚ್ಛೇ’ದ’ನ ಮೂಲಕ ಇತಿಶ್ರೀ ಹಾಡಿದ್ದಾರೆ ಈ ನಟ. ಅಷ್ಟಕ್ಕೂ ಯಾರು ಈ ಹೀರೋ? ಕಾರಣವೇನು ಗೊತ್ತಾ? ಈ ಕುತೂಹಲವಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಕಾಲಿವುಡ್ ಸ್ಟಾರ್ ಹೀರೋ ಜಯಂ ರವಿ (Actor Jayam Ravi) ದಕ್ಷಿಣ ಭಾರತದಾತ್ಯಂತ ಹೆಸರು ಮಾಡಿದ ಕಲಾವಿದ. ಅದರಲ್ಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹಿಟ್ ಕೊಟ್ಟಿರುವ ಈ ನಾಯಕ ನಟ ಎರಡು ದಶಕಗಳಿಂದ ಸಿನೆಮಾ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಬಹಳ ಶ್ರಮಪಟ್ಟು ಸ್ವಂತ ಬಲದಿಂದ ಮೇಲೆ ಬಂದು ನಾಯಕನಟನ ಪಟ್ಟ ಉಳಿಸಿಕೊಂಡಿದ್ದಾರೆ. ಅದೇ ರೀತಿ ಅಭಿಮಾನಿಗಳಿಗೆ ನಿರಾಸೆ ಮಾಡದೆ ಒಂದಲ್ಲ ಒಂದು ಪ್ರಯತ್ನಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಮನರಂಜಿಸುತ್ತಿರುವಂತಹ ನಟ ಜಯಂ ರವಿ, ಈವರೆಗೂ ಸಿನಿಮಾ ಸಂಬಂಧಿತವಾಗಿ ಸುದ್ದಿಯಲ್ಲಿರುತ್ತಿದ್ದರು ಆದರೆ ಈ ಬಾರಿ ವೈಯುಕ್ತಿಕ ಜೀವನದ ವಿ’ಷಾ’ದ ವಿಷಯ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಬೇಸರ ಮೂಡಿಸಿದ್ದಾರೆ.

ಈ ಸ್ಟಾರ್ ನಟನ ಜೀವನದಲ್ಲಿ ಒಂದು ಅಹಿತಕರ ಘಟನೆ ನಡೆದು ಹೋಗಿದೆ, ಮತ್ತು ತಮ್ಮದೇ ರೀತಿಯಲ್ಲಿ ಇದನ್ನು ನಟ ಹೇಳಿಕೊಂಡು ಸಮರ್ಥಿಸಿಕೊಂಡಿದ್ದಾರೆ. ನಟ ಜಯಂ ರವಿ ಅವರು 15 ವರ್ಷಗಳ ಹಿಂದೆ ಆರತಿ ಎನ್ನುವವರೊಂದಿಗೆ ವಿವಾಹವಾಗಿದ್ದರು. ಆದರೆ ಸೆಪ್ಟೆಂಬರ್ 9, 2024 ರಂದು ಜಯಂ ರವಿ ಹಾಗೂ ಆರತಿ ಅವರ ದಾಂಪತ್ಯ ಜೀವನ ಮುರಿದು (Divorce) ಬಿದ್ದಿದೆ.

ಹಲವಾರು ಕಾರಣಗಳಿಂದ ತಮ್ಮ ಸಂಬಂಧ ಮುರಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಈ ದಂಪತಿಗಳು. ಕೆಲ ಸೆಲೆಬ್ರಿಟಿಗಳ ಬಗ್ಗೆ ಕೇಳಿ ಬರುವಂತೆ ಇದನ್ನು ಗಾಳಿ ಸುದ್ದಿ ಎನ್ನಲಾಗುತ್ತಿತ್ತು ಆದರೆ ಅಧಿಕೃತವಾಗಿ ಜಯಂ ರವಿ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

ಬಹಳ ದಿನಗಳಿಂದ ವಿಚಾರ ಮಾಡಿ ಆರತಿ ಮತ್ತು ನಾನು ವಿ’ಚ್ಛೇ’ದ’ನ ಮಾಡಿಕೊಂಡು ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದೇವೆ ಮತ್ತು ಈ ನಿರ್ಧಾರವನ್ನು ನಾವು ಆತುರದಿಂದ ಮಾಡಿಲ್ಲ ಎಂದು ಬರೆದುಕೊಳ್ಳುವ ಮೂಲಕ ತಮಗೆ ವಿ’ಚ್ಛೇ’ದ’ನವಾಗಿದೆ ಹಾಗೂ ತಮ್ಮ ನಡುವೆ ಎಲ್ಲವೂ ಸರಿ ಇಲ್ಲದ ಕಾರಣ ಮತ್ತು ಒಟ್ಟಿಗೆ ಬದುಕಲಾಗದಷ್ಟು ಸಂದರ್ಭ ಎದುರಾಗಿರುವುದರಿಂದ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ವಿಚಾರ ಏನೇ ಇದ್ದರೂ ಜಯಂ ರವಿ ಅವರ ಮದುವೆ ಜೀವನ ಮುರಿದು ಬಿದ್ದಿರುವ ಬಗ್ಗೆ ಅವರ ಅಭಿಮಾನಿಗಳಿಗೆ ಬಹಳ ನೋವಾಗಿದೆ. ಆದರೂ ನಟನ ಮುಂದಿನ ಜೀವನ ಉಜ್ವವಾಗಲಿ, ವೈಯಕ್ತಿಕ ಬದುಕಿನಲ್ಲೂ ಕೂಡ ಭರಪೂರ್ತಿ ಯಶಸ್ಸು ಸಿಗಲಿ ಮತ್ತು ಇನ್ನಷ್ಟು ಸಿನಿಮಾ ಅವಕಾಶಗಳು ದೊರೆತು ಇನ್ನಷ್ಟು ವರ್ಷಗಳ ಕಾಲ ಕಲಾ ರಸಿಕರನ್ನು ಮನೋರಜಿಸುವಂತಾಗಲಿ ಎಂದು ಆಶಿಸೋಣ.

Leave a Comment