Dwarakish
ಚಂದನವನದಲ್ಲಿ ಪ್ರಚಂಡ ಕುಳ್ಳ ಎಂಬ ಬಿರುದು ಪಡೆದ ದ್ವಾರಕೀಶ್ ರವರು ( Dwarakish) ಕಪ್ಪು-ಬಿಳುಪು ಸಿನಿಮಾ ಕಾಲದಿಂದಲೂ ಕನ್ನಡ ಚಿತ್ರರಂಗದ ಜೊತೆಗಿದ್ದು, ತಮ್ಮ ಕೊನೆ ಕಾಲದವರೆಗೂ ಚಿತ್ರರಂಗದೊಂದಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಹಾಸ್ಯ ಕಲಾವಿದನಾಗಿ ಕನ್ನಡ ಕಲಾ ದೇವಿಯ ಸೇವೆ ಮಾಡಿದ ಇವರು ತಮ್ಮ ಕಾಲಮಾನದಲ್ಲಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಗಳನ್ನು ಕೊಟ್ಟಿದ್ದಾರೆ.
ಸಿನಿಮಾ ರಂಗದಲ್ಲಿ ಏಳು-ಬೀಳುಗಳ ಬಗ್ಗೆ ಗೊತ್ತೇ ಇದೆ, ಕಾಲಕ್ರಮೇಣ ಅನೇಕ ವಿವಾದಗಳಾಗಿಗೂ ಸಿಲುಕಿ ಮತ್ತು ಕೆಲವು ಸಿನಿಮಾಗಳ ಸೋಲಿನಿಂದ ಕೈ ಸುಟ್ಟುಕೊಂಡು ಸೋತಿದ್ದ ದ್ವಾರಕೀಶ್ ರವರನ್ನು ಇಂತಹ ಸಮಯಗಳಲ್ಲೇಲ್ಲಾ ಕಾಪಾಡಿದ್ದು ಇವರ ಆಪ್ತಮಿತ್ರ ಡಾ.ವಿಷ್ಣುವರ್ಧನ್ (Dr.Vishnuvardhan).
ಕೊನೆಯ ಬಾರಿಯೂ ಕೂಡ ಅಂದರೆ ಆಪ್ತಮಿತ್ರ ಸಿನಿಮಾ (Apthamithra Movie) ನಿರ್ಮಾಣವಾಗುವ ಮುನ್ನ ಇಂತಹದೇ ಒಂದು ಪರಿಸ್ಥಿತಿಗೆ ದ್ವಾರಕೀಶ್ ಸಿಲುಕಿಕೊಂಡಿದ್ದರು. ಮೈತುಂಬ ಸಾಲ ಮಾಡಿಕೊಂಡು ಮನೆ ಮಾರಿಕೊಂಡು ಮತ್ತೆ ಫೈನಾನ್ಸ್ ಪಡೆದು ಆಪ್ತಮಿತ್ರ ಸಿನಿಮಾ ವನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದರು.
ಮಲಯಾಳಂ ತೆರೆಕಂಡಿದ್ದ ಮಣಿ ಚಿತ್ರತ್ತಾಳ್ ಸಿನಿಮಾದ ರಿಮೇಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕ ಹಾಕಿ ಕೊಂಚ ಬದಲಾವಣೆ ಮಾಡಿ ಅದ್ಭುತವಾಗಿ ಆಪ್ತಮಿತ್ರ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ತಮಿಳಿನ ನಿರ್ದೇಶಕ ಕೆ ವಾಸುರವರು ಆಕ್ಷನ್ ಕಟ್ ಹೇಳಿದ್ದರೆ ಮ್ಯೂಸಿಕ್ ಮಾಂತ್ರಿಕ ಗುರು ಕಿರಣ್ ಅವರ ಸಂಗೀತ ನಿರ್ದೇಶನ ಕನ್ನಡಕ್ಕೆ ಒಂದು ಅಮೂಲ್ಯ ಆಲ್ಬಮ್ ಕಟ್ಟಿಕೊಟ್ಟಿತು.
ಇನ್ನು ಸಿನಿಮಾದಲ್ಲಿ ಸೌಂದರ್ಯ, ರಮೇಶ್ ಅರವಿಂದ್, ವಿಷ್ಣುವರ್ಧನ, ಪ್ರೇಮ ಅವಿನಾಶ್, ಸತ್ಯಜಿತ್, ಶಿವರಾಂ ಇನ್ನು ಮುಂತಾದವರ ದೊಡ್ಡ ತಾರಾ ಬಳಗವೇ ತುಂಬಿತ್ತು. ಕಾಮಿಡಿ ಕಮ್ ಹಾರಾರ್ ಚಿತ್ರವಾಗಿದ್ದ ಈ ಸಿನಿಮಾ 2004ರ ಆಗಸ್ಟ್ 27ರಂದು ಬಿಡುಗಡೆಯಾಗಿ ಸುಮಾರು ಒಂದು ವರ್ಷಗಳಿಗಿಂತ ಹೆಚ್ಚಿಗೆ ಕಾಲ ಪ್ರದರ್ಶನ ಕಂಡಿತ್ತು. ಈ ಸಿನಿಮಾದ ಯಶಸ್ಸನ್ನು ಕಣ್ತುಂಬಿಕೊಳ್ಳಲು ಸಿನಿಮಾದ ಮುಖ್ಯಪಾತ್ರದಲ್ಲಿ ಆಗಿದ್ದ ಸೌಂದರ್ಯ ರವರು ಇಲ್ಲವಾಗಿದ್ದರೂ ಎನ್ನುವುದೇ ತುಂಬಾ ನೋ’ವಿನ ಸಂಗತಿ.
ಸಿನಿಮಾಗೆ ದ್ವಿ ಪಾತ್ರದಲ್ಲಿ ನಟಿಸಿದ ವಿಷ್ಣುವರ್ಧನ್ ಹಾಗೂ ನಾಗವಲ್ಲಿ ಪಾತ್ರ ಪರಕಾಯ ಪ್ರವೇಶದಂತೆ ಆರ್ಭಟಿಸಿದ್ದ ಸೌಂದರ್ಯ ರವರ ನಟನೆ ಹೆಚ್ಚಿನ ಮೆರುಗಾಗಿತ್ತು. ಇದಾದ ಮೇಲೆ ಆಪ್ತರಕ್ಷಕ ಹೆಸರಿನಲ್ಲಿ ಇತರ ಸೀರಿಸ್ ಮುಂದುವರಿತು. ಸಿನಿಮಾ ತೆರೆಕಂಡು 20 ವರ್ಷಗಳಾಗಿದ್ದರು ಇನ್ನು ಸಹ ಪ್ರತಿ ಬಾರಿ ನೋಡಿದಾಗಲೂ ಕೂಡ ಇದು ಫ್ರೆಶ್ ಅನುಭವ ನೀಡುತ್ತದೆ.
ಹಾಗಾದರೆ ಆ ಕಾಲಕ್ಕೆ ಸಿನಿಮಾ ಗಳಿಸಿದ್ದ ಕಲೆಕ್ಷನ್ ಇಷ್ಟು ಎಂಬ ಬಗ್ಗೆ ದ್ವಾರಕೀಶ್ ಪುತ್ರ ಯೋಗೀಶ್ ದ್ವಾರಕೀಶ್ ಇತ್ತೀಚಿನ ಯುಟ್ಯೂಬ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಸಂಪೂರ್ಣವಾಗಿ ಎಲ್ಲವನ್ನು ಕಳೆದುಕೊಂಡಿದ್ದೆವು. ಆದರೆ ತಂದೆ ಧೈರ್ಯ ಮಾಡಿ ಮತ್ತೆ ಸಾಲ ಪಡೆದು ಆಪ್ತಮಿತ್ರ ಸಿನಿಮಾ ನಿರ್ಮಾಣ ಮಾಡಿದರು. ನಮ್ಮ ನಿರೀಕ್ಷೆ ಮೀರಿ ಸಿನಿಮಾ ಗೆದ್ದಿತ್ತು ಆಗ ಟಿಕೆಟ್ ರೇಟ್ ಬಹಳ ಕಡಿಮೆ ಇತ್ತು ಆದರೂ ಸಿನಿಮಾ ನೂರು ಕೋಟಿ ತಲುಪಿತ್ತು.
ನಮ್ಮ ಎಲ್ಲಾ ಸಾಲಗಳು ಕಳೆದು ನಮ್ಮ ಕೈಯಲ್ಲಿ ಬರಿ 2-3 ಕೋಟಿ ಉಳಿಯಿತು ಅಷ್ಟೇ. ಆದರೆ ನಮ್ಮನ್ನು ಕ’ಷ್ಟದಿಂದ ಪರಿಹಾರ ಮಾಡಿದ್ದು ಸುಳ್ಳಲ್ಲ ಮತ್ತು ಈ ಸಿನಿಮಾ ಲಾಭದ ಅನೇಕ ಪಾಲು ನಮ್ಮ ಕೈ ಸೇರದೆ ಹೋಯಿತು ಆ ವಿಚಾರ ಈಗ ಬೇಡ ಎಂದು ಮತ್ತು ತಾವೆಷ್ಟು ಆಪ್ತಮಿತ್ರ ಸಿನಿಮಾಗೆ ಚಿರಋಣಿ ಎಂದು ಈ ಇಂಟರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ.