Shivanna
1986ರಲ್ಲಿ ತೆರೆ ಕಂಡ ಕನ್ನಡದ ಆನಂದ್ ಚಿತ್ರವು (Anand Movie) ಕನ್ನಡಕ್ಕೆ ಸಿಕ್ಕ ಒಂದು ಅತ್ಯುತ್ತಮ ಚಿತ್ರ. ಈ ಸಿನಿಮಾ ತೆರೆ ಕಂಡು ಇಂದಿಗೆ 38 ವರ್ಷಗಳು ಕಳೆದಿದ್ದರೂ ಕೂಡ ಇನ್ನೂ ಜನ ಆನಂದ್ ಸಿನಿಮಾದ ಬಗ್ಗೆ ಮಾತನಾಡುತ್ತಾರೆ ಎಂದರೆ ಈ ಸಿನಿಮಾದ ಕಥೆ, ಹಾಡುಗಳು, ಮತ್ತು ಆ ಪಾತ್ರಗಳಿಗೆ ಜೀವ ತುಂಬಿ ಜೀವಿಸಿದ ಕಲಾವಿದರು ಇದಕ್ಕೆ ಕಾರಣವೆಂದರೆ ತಪ್ಪಾಗುವುದಿಲ್ಲ.
ಇಂತಹ ಎವರ್ ಗ್ರೀನ್ ಹಿಟ್ ಸಿನಿಮಾಗಳನ್ನು ಮತ್ತೆ ಮತ್ತೆ ನೆನೆಸಿಕೊಂಡು ಸಂಭ್ರಮಿಸುವುದು ಆ ಸಿನೆಮಾಗೆ ತಲುಪಿಬೇಕಾದ ಗೌರವವೂ ಹೌದು. ಈಗಂತೂ ಸೋಶಿಯಲ್ ಮೀಡಿಯಾ ಯುಗ ಆಗಿರುವುದರಿಂದ ಯಾವಾಗ ಯಾವ ಸಿನಿಮಾದ ಡೈಲಾಗ್ ಅಥವಾ ಸಾಂಗ್ ವೈರಲ್ ಆಗಿ ಮತ್ತೆ ಟ್ರೆಂಡ್ ಸೃಷ್ಟಿಸುತ್ತದೆ ಎಂದು ಊಹಿಸಲಾಗುವುದಿಲ್ಲ, ಈ ಸರದಿ ಈಗ ಆನಂದ್ ಸಿನಿಮಾದ ಟುವ್ವಿ ಟುವ್ವಿ ಹಾಡಿನದ್ದು.
ಬರೋಬ್ಬರಿ 38 ವರ್ಷಗಳ ಬಳಿಕ ಈ ಸಿನಿಮಾದ ನಾಯಕ ನಟ ಶಿವರಾಜಕುಮಾರ್ ಹಾಗೂ ನಾಯಕ ನಟಿ ಸುಧಾರಾಣಿಯವರು ಮತ್ತೆ ಈ ಹಾಡಿಗೆ ಜೀ ಕನ್ನಡ ಡಿಕೆಡಿ (Zee Kannada DKD show) ವೇದಿಕೆ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಮೊದಲ ಸಿನಿಮಾದ ಅನುಭವಗಳ ಬುತ್ತಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಬಹಳ ವಿಶೇಷ ಸಂಗತಿಗಳಿವೆ.
ಅದರಲ್ಲೂ ಶಿವಣ್ಣ ಹಾಗೂ ಸುಧಾರಾಣಿಯವರ (Shivanna & Sudharani) ಬಗ್ಗೆ ಹೇಳಲೇಬೇಕು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರು ತಮ್ಮ 26ನೇ ವಯಸ್ಸಿನಲ್ಲಿ ನಾಯಕ ನಟರಾಗಿ ಆನಂದ್ ಸಿನಿಮಾದ ಮೂಲಕ ಲಾಂಚ್ ಆದರು. ಆ ವರೆಗೂ ಬಾಲ ನಟಿಯಾಗಿ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ಸುಧಾರಾಣಿಯವರು ಪೂರ್ಣ ಪ್ರಮಾಣದಲ್ಲಿ ನಟಿಯಾಗಿ ಕಾಣಿಸಿಕೊಂಡಿತ್ತು ಇದೇ ಸಿನಿಮಾದಿಂದ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹಲವು ಚಿತ್ರಗಳು ಮೂಡಿಬಂದು ಸೂಪರ್ ಹಿಟ್ ಆದವು.
ಆ ಕಾಲದಲ್ಲಿ ಶಿವಣ್ಣ ಹಾಗೂ ಸುಧಾರಾಣಿಯವರ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕ್ ಆಗುತ್ತಿತ್ತು, ಇಬ್ಬರು ಆನ್ ಸ್ಕ್ರೀನ್ ಟ್ರೆಂಡಿಂಗ್ ಜೋಡಿಯಾಗಿ ಫೇಮಸ್ ಕೂಡ ಆಗಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ಅವರ ಮೂಲಕ ಪರಿಚಯವಾದ ನಟಿಯರ ಸಾಲಿಗೆ ಸುಧಾರಾಣಿ ಕೂಡ ಸೇರಿದರು. ವಾಡಿಕೆಯಂತೆ ಜಯಶ್ರೀ ಎಂದು ಇದ್ದ ಅವರ ಹೆಸರನ್ನು ಬದಲಾಯಿಸಿ ಪರಿಚಯಿಸಲಾಗಿತ್ತು.
ಆದರೆ ಅದಕ್ಕೂ ಮೊದಲು ಶಿವಣ್ಣನ ಜೊತೆ ನಟಿ ಅಪರ್ಣ ಅವರ ಫೋಟೋ ಹರಿದಾಡಿದ್ದವಂತೆ, ರಾಜಕುಮಾರ್ ಹಿರಿಯ ಮಗನ ಚಿತ್ರಕ್ಕೆ ಅಪರ್ಣ ನಾಯಕಿ ಎಂದು ಸುದ್ದಿ ಪತ್ರಿಕೆಗಳು ಬರೆದಿದ್ದವಂತೆ ಕೂಡ. ಆದರೆ ಕೊನೆ ಹಂತದಲ್ಲಿ ಈಗಾಗಲೇ ಮಸಣದ ಹೂವು ಸಿನಿಮಾದ ಮೂಲಕ ಅಪರ್ಣ ಅವರು ಪರಿಚಯವಾಗಿದ್ದರಿಂದ ಮತ್ತು ಆಗಲೇ ಅವರು ಫೇಮಸ್ ಕೂಡ ಆಗಿದ್ದರಿಂದ ಹೊಸ ನಟಿ ಬೇಕು ಎಂದು ಸುಧಾರಾಣಿಯವರನ್ನು ಆರಿಸಿಕೊಳ್ಳಲಾಯಿತಂತೆ, ನಂತರ ನಡೆದ ಇತಿಹಾಸ ಎಲ್ಲರಿಗೂ ಗೊತ್ತೇ ಇದೆ.
ಸದ್ಯಕ್ಕೆ ಈ ಸಿನಿಮಾದ ಸುದ್ದಿ ಮತ್ತೆ ಪ್ರಚಾರಕ್ಕೆ ಬರಲು ಕಾರಣ ಜೀ ಕನ್ನಡ ವಾಹಿಯ ಡಿಕೆಡಿ ವೇದಿಕೆಯಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದ ಸುಧಾರಿಣಿಯವರ ಜೊತೆ ಡಿಕೆಡಿ ಮುಖ್ಯ ತೀರ್ಪುಗಾರರಾಗಿದ್ದ ಶಿವಣ್ಣ ತಮ್ಮ ಮೊದಲ ಸಿನಿಮಾದ ಹಾಡಿಗೆ ಅದೇ ಬಗೆಯ ಸ್ಟೆಪ್ ಗಳನ್ನು ಹಾಕಿ ಸೀನ್ ಮತ್ತೆ ಕ್ರಿಯೇಟ್ ಮಾಡಿದ್ದು. ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಗಳಾದ ಗನನ ಹಾಗೂ ಉಜ್ವಲ್ ಈ ಹಾಡಿಗೆ ಪರ್ಫಾರ್ಮೆನ್ಸ್ ಕೊಟ್ಟಿದ್ದರು ಇದಾದ ಬಳಿಕ ಚಾರ್ಮಿಂಗ್ ಜೋಡಿ ಸ್ಟೆಪ್ಸ್ ಹಾಕಿ ನೆರೆದಿದ್ದವರನ್ನು ಬೆರಗುಗೊಳಿಸಿದರು. ಈ ವಾರದ ಎಪಿಸೋಡ್ ಗಳಲ್ಲಿ ನೀವು ಇದನ್ನು ನೋಡಿ ಆನಂದಿಸಬಹುದು.
https://www.instagram.com/reel/DAfewHkJHXs/?igsh=MXVidTNlMngyM2xlZQ==