Tammanna: ಎರಡು ಬಾರಿ ನಾನು ಪ್ರೀತಿಯಲ್ಲಿ ನೊಂದು-ಬೆಂದು ಕಣ್ಣೀರು ಹಾಕಿದ್ದೇನೆ ಶಾ-ಕಿಂಗ್ ಹೇಳಿಕೆ ಕೊಟ್ಟ ಮಿಲ್ಕಿ ಬ್ಯೂಟಿ ತಮ್ಮನ್ನಾ.!

Tammanna

ದಕ್ಷಿಣ ಭಾರತದ ಹೆಸರಾಂತ ನಟಿ ತಮನ್ನಾ ಭಾಟಿಯ (Actress Tamanna Bhatia) ತಮ್ಮ ಮನಮೋಹಕ ಮೈ ಬಣ್ಣದಿಂದ ಮಿಲ್ಕಿ ಬ್ಯೂಟಿ (Milky beauty) ಎಂದೇ ಖ್ಯಾತಿ ಪಡೆದಿರುವ ನಟಿ ಬಾಲಿವುಡ್ ನಲ್ಲೂ ಕೂಡ ಸದ್ದು ಮಾಡುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಒಂದರಲ್ಲಿ ಸಹನಟರಾಗಿದ್ದ ನಾಯಕ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ರವರೊಂದಿಗೆ ತಮ್ಮ ಪ್ರೀತಿಯನ್ನು ಘೋಷಿಸಿಕೊಂಡಿರುವ ತಮನ್ನಾ ಸಾಮಾನ್ಯವಾಗಿ ಪ್ರೀತಿ ಮದುವೆ ಬಗ್ಗೆ ಎಲ್ಲಾ ವೇದಿಕೆಗಳಲ್ಲಿ ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಈಗ ಫುಲ್ ಸ್ಟಾಪ್ ಇಟ್ಟಿದ್ದಾರೆ.‌

ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಅನುಮಾನ ಹುಟ್ಟಿಸಿದ್ದ ಜೋಡಿ ಹಕ್ಕಿಗಳು ಇದೀಗ ತಮ್ಮ ಪ್ರೀತಿಯನ್ನು ಧೃಡೀಕರಿಸಿವೆ. ಆದರೆ ತಮನ್ನಾ ಅವರಿಗೆ ಇದು ಮೊದಲ ಪ್ರೀತಿಯಲ್ಲ, ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೆ ಕೊಡುವ ಮೂಲಕ ನಟಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

WhatsApp Group Join Now
Telegram Group Join Now

ಕಳೆದೆರಡು ದಶಕದಿಂದ ತಮಿಳು, ತೆಲುಗು ಚಿತ್ರರಂಗವನ್ನು ಅಳುತ್ತಿರುವ ಹಾಗೆ ಬಾಲಿವುಡ್ ಅಂಗಳದಲ್ಲೂ ತನ್ನ ಟ್ಯಾಲೆಂಟ್ ಪ್ರದರ್ಶಿಸಿರುವ ಆಗಾಗ ಕನ್ನಡದಲ್ಲೂ ಹೈ ಬಜೆಟ್ ನ ಐಟಂ ಸಾಂಗ್ ಗೆ ಮಿಂಚಿನಂತೆ ಸೊಂಟ ಬಳುಕಿಸಿ ಹೈಪ್ ಕ್ರಿಯೇಟ್ ಮಾಡಿ ಹೋಗುವ ನಟಿ ತಮನ್ನಾ ಸೌಂದರ್ಯಕ್ಕೆ ತಕ್ಕಂತೆ ಹಾಗೆ ಟ್ಯಾಲೆಂಟ್ ಕೂಡ ಹೊಂದಿರುವ ನಟಿ ಎಂದೆನುವುದಲ್ಲಿ ಎರಡು ಮಾತಿಲ್ಲ.

ಆದರೆ ಪ್ರೀತಿ ಪ್ರೇಮದ ವಿಚಾರವಾಗಿ ತಾವು ಸೋ’ತಿರುವುದಾಗಿ ಸ್ಟೇಟ್ಮೆಂಟ್ ಕೊಟ್ಟಿರೋದು ಮಾತ್ರ ತಮನ್ನಾ ಅಭಿಮಾನಿಗಳನ್ನು ಶಾ’ಕ್ ಗೆ ಒಳಪಡಿಸಿದೆ. ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿರುವವರು ಅಥವಾ ಸೆಲೆಬ್ರಿಟಿಗಳ ಬಗ್ಗೆ ಇಲ್ಲಸಲ್ಲದ ಪುಕಾರುಗಳು ಹಬ್ಬುವುದು ಸರ್ವೇಸಾಮಾನ್ಯ. ಇದಕ್ಕೆ ತಮನ್ನಾ ಹೆಸರು ಕೂಡ ಹೊರತೇನಲ್ಲ ಹಲವು ಬಾರಿ ಒಟ್ಟಿಗೆ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡ ಪೇರ್ ಗಳ ಜೊತೆ, ಕ್ರಿಕೆಟರ್ ಜೊತೆ ಈಕೆ ಹೆಸರು ತಳಕು ಹಾಕಿಕೊಂಡಿತ್ತು.

ಹಾಗೆ ಕೆಲವೇ ದಿನಗಳಲ್ಲಿ ಅದು ಗಾಳಿ ಸುದ್ದಿ ಎನ್ನುವುದು ಕೂಡ ನಿಖರವಾಗುತ್ತಿತ್ತು ಆದರೆ ಈಗ ಸ್ವತ: ನಟಿಯೇ ಈ ಬಗ್ಗೆ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿರುವುದು ಆ ವ್ಯಕ್ತಿಗಳ ಬಗ್ಗೆ ಹುಡುಕಾಡುವಂತಹ ಕ್ಯೂರಿಯಾಸಿಟಿ ಹುಟ್ಟು ಹಾಕುತ್ತಿದ್ದೆ. ಅಷ್ಟಕ್ಕೂ ತಮನ್ನಾ ಹೇಳಿಕೊಂಡಿದ್ದು ಏನು ಎಂದರೆ ನಾನು ಈ ಹಿಂದೆ ಎರಡು ಬಾರಿ ಪ್ರೀತಿಯಲ್ಲಿ ಬಿದ್ದಿದೆ, ಎರಡು ಬಾರಿ ಕೂಡ ವಿಪರೀತವಾಗಿ ನೋ’ವು ಅನುಭವಿಸಿದ್ದೇನೆ.

ನೊಂ’ದು ಬೆಂದು ಕ’ಣ್ಣೀ’ರು ಹಾಕಿದ್ದೇನೆ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಮೊದಲಬಾರಿ ಪ್ರೀತಿಗೆ ಬಿದ್ದಾಗ ನಾನಿನ್ನು ಚಿಕ್ಕವಳು ಆ ಪ್ರೀತಿಯಲ್ಲಿ ನನಗೆ ಕಾಂಪ್ರಮೈಸ್ ಆಗುವುದು ಕಳೆದುಕೊಳ್ಳುವುದು ಬಿಟ್ಟು ಬೇರೇನು ಇರಲಿಲ್ಲ. ಆ ವ್ಯಕ್ತಿಗಾಗಿ ಏನನ್ನು ಬೇಕಾದರೂ ಮಾಡುವುದು ಇಷ್ಟೆ ಗೊತ್ತಿತ್ತು. ಆದರೆ ಕ್ರಮೇಣ ಅದು ವ್ಯಕ್ತಿಯನ್ನು ಕಳೆದುಕೊಳ್ಳುವುದೇ ಉತ್ತಮ ಎನಿಸುವ ಹಂತಕ್ಕೆ ತಲುಪಿಸಿತು.

ಎರಡನೇ ಬಾರಿ ಕೂಡ ಇದೇ ರೀತಿ ಎಡವಿದೆ, ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದಾಗ ಆ ವ್ಯಕ್ತಿ ವಿಪರೀತವಾಗಿ ಸು’ಳ್ಳು ಹೇಳುತ್ತಾನೆ ಇಂತಹ ವ್ಯಕ್ತಿತ್ವ ಹೊಂದಿರುವವರ ಜೊತೆ ಬಹಳ ದಿನ ಸಂಬಂಧ ಉಳಿಯಲಾರದು ಎಂದೆನಿಸಿ ನಾನು ಆ ಸಂಬಂಧವನ್ನು ಮುರಿದುಕೊಳ್ಳಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ನಟಿ ಈ ರೀತಿ ತಮ್ಮ ಪಾಸ್ಟ್ ಲೈಫ್ ಸ್ಟೋರಿ ಹೇಳಿಕೊಂಡ ಮೇಲೆ ಎಲ್ಲರ ಮನಸಿನಲ್ಲಿ ಯಾರವರು ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ಆಗಿದ್ದು ಆಗಿ ಹೋಗಿದೆ ನಟಿ ಮುಂದಿನ ಭವಿಷ್ಯ ಉಜ್ವಲವಾಗಿಲಿ ಎಂದು ಹಾರೈಸೋಣ ಅಷ್ಟೇ.

 

Leave a Comment