Darshan
ದರ್ಶನ್ (Darshan) ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋ. ಕಳೆದೆರಡು ದಶಕಗಳಿಂದ ಕನ್ನಡ ಚಿತ್ರರಂಗವನ್ನು ಆಳುತ್ತಿರುವ ಟಾಪ್ ಹೀರೋ. ಅಂತೆಯೇ ಧ್ರುವ ಸರ್ಜಾ (DruvaSarja) ಕೂಡ ಕಲಾವಿದ ಕುಟುಂಬದಿಂದ ಬಂದಿರುವ ಚಂದನವನದ ಭರವಸೆಯ ತಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಕೊಟ್ಟು ಹ್ಯಾಟ್ರಿಕ್ ಹೊಡದು ಈಗ ಬಹಳ ಗ್ಯಾಪ್ ಪಡೆದು ಸಿನಿಮಾ ಮಾಡಿದರು ಈತ ಮುಟ್ಟಿದ್ದೆಲ್ಲ ಚಿನ್ನವೇ ಸರಿ.
ಸದ್ಯಕ್ಕೆ ಪಾನ್ ವರ್ಲ್ಡ್ (Pan-World) ಮಟ್ಟದಲ್ಲಿ ಇವರ ಮುಂದಿನ ಚಿತ್ರ ಮಾರ್ಟಿನ್ (Martin Movie) ಅಕ್ಟೋಬರ್ 11ರಂದು ಇಡೀ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಪೋಸ್ಟರ್, ಟ್ರೈಲರ್, ಸಾಂಗ್ ಹಾಗೂ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಂದ ಭರ್ಜರಿ ಪ್ರಚಾರವು ಕೂಡ ಸಿಕ್ಕಿದೆ. ಸಿನಿಮಾ ಸಂಬಂಧ ಸಂದರ್ಶನಗಳಲ್ಲಿ ನಟ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇದೇ ರೀತಿ ಇಂಟರ್ವ್ಯೂ ಒಂದರಲ್ಲಿ ಅವರಿಗೆ ನೇರವಾಗಿ ದರ್ಶನ್ ಕುರಿತ ಪ್ರಶ್ನೆಗಳು ಎದುರಾಗಿವೆ.
ದರ್ಶನ್ ಹಾಗೂ ದ್ರುವ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಈಗ ಜಗಜಾಹಿರಾಗಿದೆ. ಕಾವೇರಿ ಹೋರಾಟದ ಸಮಯದಲ್ಲಿ ಒಂದೇ ವೇದಿಕೆ ಮೇಲಿದ್ದರೂ ಪರಸ್ಪರ ಕೈ ಕುಲಕದೆ ಹೋದದ್ದು ಮತ್ತು ಇಬ್ಬರು ಒಟ್ಟಿಗೆ ಫೊಟೋಗೆ ನಿಂತುಕೊಳ್ಳದೇ ಹೋದದ್ದು ಇದೆಲ್ಲ ಅಂದು ನಡೆದ ಬಳಿಕ ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ದಿನ ಅವರೇ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಈ ಬಗ್ಗೆ ಇರುವ ಸತ್ಯ ಹೇಳಿಕೊಂಡಿದ್ದು ಇವರ ನಡುವೆ ಕೋಲ್ಡ್ ವಾರ್ ಇದೆ ಎನ್ನುವುದನ್ನು ದೃಢಪಡಿಸಿದೆ.
ಆದರೆ ಸದಾ ಡಿ ಬಾಸ್ ಡಿ ಬಾಸ್ ಎಂದು ದರ್ಶನ್ ಅವರ ಗುಣಗಾನ ಮಾಡುತ್ತಿದ್ದ ಧ್ರುವ ಹೀಗೆ ತಿರುಗಿ ಬೀಳಲು ಹಾಗೂ ಧ್ರುವ ಸರ್ಜಾ ಅಲ್ಲದೆ ಸರ್ಜಾ ಕುಟುಂಬದ ಪ್ರತಿ ಕಾರ್ಯಕ್ರಮ ಹಾಗೂ ಸಿನಿಮಾಗಳಲ್ಲೂ ತಮ್ಮ ಹೆಗಲು ಕೊಟ್ಟು ನಿಲ್ಲುತ್ತಿದ್ದ ದರ್ಶನ್ ರವರು ಕೂಡ ಈ ಬಗ್ಗೆ ಮಾತನಾಡದೆ ಇರುವುದು ಅಭಿಮಾನಿಗಳಲ್ಲಿ ಏನಾಗಿರಬಹುದು ಎನ್ನುವ ಕುತೂಹಲವನ್ನು ಹೆಚ್ಚಿಸಿದೆ.
ಸದ್ಯಕ್ಕೆ ಸಂದರ್ಶನದಲ್ಲೂ ಕೂಡ ನಿರೂಪಕರಿಂದ ಧ್ರುವ ಸರ್ಜಾ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ ನಿಮ್ಮ ಬಗ್ಗೆ ನಡೆದದ್ದು ಏನು? ನೀವು ನಿಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ನೀವು ದರ್ಶನ್ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಬೇಕು ಆ ಪ್ರಶ್ನೆಗಳಿಗೆ ಉತ್ತರ ನೀಡಿ ಅದು ನನಗೆ ಸಮಂಜಸ ಎನಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದ್ದಿರಿ, ಹಾಗಿದ್ದರೆ ನಿಮ್ಮ ನಡುವೆ ಉಂಟಾಗಿರುವ ವೈ’ಮನಸಿಗೆ ಕಾರಣ ಏನು? ಆ ಪ್ರಶ್ನೆಗಳು ಯಾವುವು? ಹಾಗೂ ಯಾವ ವಿಷಯಕ್ಕೆ ಸಂಬಂಧಿಸಿದವು ಎಂದು ಕೇಳಲಾಗಿದೆ ಇದಕ್ಕೆ ಧ್ರುವ ಸರ್ಜಾ ಅವರು ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸೆಲ್ಫ್ ರೆಸ್ಪೆಕ್ಟ್ ಎನ್ನುವುದು ಇರುತ್ತದೆ ಹಾಗೆ ನನಗೂ ಕೂಡ. ನಾನು ಯಾರನ್ನು ಮೆಚ್ಚಿಸುವ ಸಲುವಾಗಿ ಎಲ್ಲರೂ ನೋಡುತ್ತಿದ್ದಾರೆ ಎನ್ನುವ ಸಲುವಾಗಿ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳಿದ್ದರೂ ಎದುರು ನಗುಮುಖ ಹಾಕಿಕೊಂಡು ಕೈಕುಲುಕುವ ನಾಟಕ ಮಾಡಲಾರೆ.
ಖಂಡಿತವಾಗಿಯೂ ನನ್ನ ಬಳಿ ಅವರಿಗೆ ಕೇಳಲು ಪ್ರಶ್ನೆಗಳಿವೆ ಅದಕ್ಕೆ ಉತ್ತರ ಸಿಕ್ಕಿ ಕ್ಲಿಯರ್ ಆದರೆ ನಂತರ ಸರಿ ಹೋಗಬಹುದು. ನಾನು ಯಾರಿಗಾದರೂ ಮಾತನಾಡಿಸಿದರೆ ರೆಸ್ಪೆಕ್ಟ್ ಕೊಟ್ಟರೆ ಅದು ಮನ ಪೂರ್ತಿಯಾಗಿ ಗೌರವ ಪೂರ್ವಕವಾಗಿ ಇರುತ್ತದೆ ಇಲ್ಲವಾದರೆ ಇಲ್ಲ. ಆದರೆ ಮನಸೊಳಗೆ ಒಂದು ಹೊರಗೆ ಒಂದು ಮಾಡುವುದಕ್ಕಂತೂ ನನಗೆ ಬರುವುದಿಲ್ಲ.ಇನ್ನು ಆ ಪ್ರಶ್ನೆಗಳು ದರ್ಶನ್ ಅವರಿಗೆ ಕೇಳಬೇಕಾದದ್ದು ನಾನು ಅವರಿಗೆ ಕೇಳಿಕೊಳ್ಳುತ್ತೇನೆ ಎನ್ನುವ ಉತ್ತರ ನೀಡಿದ್ದಾರೆ.