Darshan:
ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳಲ್ಲಿ ನಟ ದರ್ಶನ್ (Actor Darshan) ರವರ ಬೇಲ್ ಕುರಿತ ವಿಚಾರ ಕೂಡ ಒಂದು ಚಿತ್ರದ ರೇಣುಕಾ ಸ್ವಾಮಿ ಹ’ತ್ಯೆ ಪ್ರಕರಣದಲ್ಲಿ A2 ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಅವರ ಜೈಲುವಾಸಕ್ಕೆ 110 ದಿನಗಳು ತುಂಬಿವೆ ದಿನ ದೂರವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಹಾಗೂ ಕಾತುರತೆ ಕೂಡ ಹೆಚ್ಚಾಗುತ್ತಿದೆ.
ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿರುವ ಕಾರಣ ಕೆಲವೇ ದಿನಗಳಲ್ಲಿ ಬೇಲ್ ಮೂಲಕ ಹೊರ ತರುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ. ಈ ಬಗ್ಗೆ ಬಲವಾದ ಮೂಲಗಳಿಂದ ಬಂದ ಮಾಹಿತಿ ಏನೆಂದರೆ ಅಕ್ಟೋಬರ್ ಮೊದಲ ವಾರದಲ್ಲಿ ಅಂದರೆ ವಿಜಯದಶಮಿ ಮುನ್ನವೇ ದರ್ಶನ್ ಬಿಡುಗಡೆಯಾಗಲಿದೆಯಂತೆ, ಹಾಗೂ ದರ್ಶನ್ ರವರ ರಿಲೀಸ್ ಅನ್ನು ಕೂಡ ದೊಡ್ಡ ಮಟ್ಟದ ಆಚರಿಸಲು ಕೂಡ ತಯಾರಿ ಆಗುತ್ತಿದೆಯಂತೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವಿಷಯಗಳು ಚರ್ಚೆ ಆಗುತ್ತಿವೆ. ಅದರಲ್ಲಿ ಬೆಂಗಳೂರಿನ ದರ್ಶನ್ ಅವರ ಆಪ್ತ ವಲಯದ ವ್ಯಕ್ತಿಯೊಬ್ಬರು ಕೊಟ್ಟ ಹೇಳಿಕೆಯ ಪ್ರಕಾರವಾಗಿ ಅಕ್ಟೋಬರ್ 3 ಅಥವಾ 4 ತಾರೀಕಿನಂದು ದರ್ಶನ್ ಬಿಡುಗಡೆ ಆಗಲಿದ್ದಾರೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿನಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಕರೆತರುವ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ಧರ್ಮಪತ್ನಿ ಆಗಿರುವ ವಿಜಯಲಕ್ಷ್ಮಿ ಅವರು ಇದಕ್ಕೆ ಅಡ್ವಾನ್ಸ್ ಕೂಡ ಮಾಡಿದ್ದಾರೆ ಆದಷ್ಟು ಬೇಗ ದರ್ಶನ್ ಅವರು ರಿಲೀಸ್ ಆಗಬೇಕೆಂದು ಪೂಜೆ ಪುನಸ್ಕಾರ ವ್ರತ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೆ ಕಾನೂನು ಹೋರಾಟ ಕೂಡ ಮಾಡುತ್ತಿದ್ದಾರೆ.
ಹಾಗೆ ಬಿಡುಗಡೆಯ ದಿನ ಎಲ್ಲಾ ಅಭಿಮಾನಿಗಳ ಆಸೆಯಂತೆ ಅದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಈ ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಅವರು ಕನ್ನಡ ಚಿತ್ರರಂಗದ ಆಸ್ತಿ ಈಗಾಗಲೇ ನಾವು ಸಾಕಷ್ಟು ಸ್ಟಾರ್ ಗಳನ್ನು ಕಳೆದುಕೊಂಡಿದ್ದೇವೆ ಈಗ ನಮ್ಮಲ್ಲಿ ಉಳಿದಿರುವುದು ಕೇವಲ ಬೆರಳೆಣಿಕೆಯಷ್ಟು ತಾರೆಗಳು ಮಾತ್ರ.
ಅಲ್ಲದೆ ದರ್ಶನ್ ಕನ್ನಡ, ಕನ್ನಡ ಸಿನಿಮ, ಕನ್ನಡ ಚಿತ್ರರಂಗ ಎಂದು ನಿಂತಿರುವವರು ಅವರಿಲ್ಲದೇ ಇಡಿ ಚಿತ್ರರಂಗಕ್ಕೆ ಮಂಕು ಕವಿದಿದೆ, ಪರಿಣಾಮ ಎಲ್ಲರು ಕೂಡ ನೋಡುತ್ತಿದ್ದೇವೆ. ಹೀಗಾಗಿ ದರ್ಶನ್ ಅವರು ಆದಷ್ಟು ಬೇಗ ಆಚೆ ಬರಬೇಕು ಎನ್ನುವ ಅಭಿಪ್ರಾಯವನ್ನು ಕೂಡ ಆ ವ್ಯಕ್ತಿ ಹಂಚಿಕೊಂಡಿದ್ದಾರೆ.
ದರ್ಶನ್ ಅವರು ಮೂಲತಃ ಮೈಸೂರಿನವರು ಮೈಸೂರು ಹಾಗೂ ದರ್ಶನವರಿಗೆ ಅವಿನಾಭಿವ ಸಂಬಂಧವಿದೆ. ಶೂಟಿಂಗ್ ಇಲ್ಲದೆ ಬಿಡುವಾಗಿದ್ದಾಗೆಲ್ಲ ಮೈಸೂರಿನ ಸಮೀಪ ಇರುವ ತಮ್ಮ ಫಾರಂ ಹೌಸ್ ಗೆ ಹೋಗಿ ಸಮಯ ಕಳೆಯುವ ನಟಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು.
ಎಷ್ಟೇ ಬ್ಯುಸಿ ಇದ್ದರು ತನ್ನ ಆರಾಧ್ಯ ದೈವ ಚಾಮುಂಡಿ ತಾಯಿಯ ದರ್ಶನಕ್ಕೆ ಸಮಯ ಮೀಸಲು ಮಾಡಿಕೊಂಡು ಭಾಗಿಯಾಗುತ್ತಿದ್ದ ದರ್ಶನ್ ಅವರ ಈ ಸಂಕಷ್ಟದ ಸಮಯವನ್ನು ನವರಾತ್ರಿ ಸಮಯದಲ್ಲಿಯೇ ತಾಯಿ ದೂರ ಮಾಡಲಿದ್ದಾರೆ ಎನ್ನುವುದು ಅನೇಕರ ನಂಬಿಕೆ.
ಆದರೆ ದರ್ಶನ್ ಅವರು ನೇರವಾಗಿ ಬಳ್ಳಾರಿ ಜೈಲಿನಿಂದ ಚಾಮುಂಡಿ ಬೆಟ್ಟಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೋಗುತ್ತಾರೆ ಎನ್ನುವುದು ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಅಭಿಮಾನಿಗಳು ತಮ್ಮ ನಾಯಕನ ಮೇಲಿರುವ ಅಪಾರವಾದ ಪ್ರೀತಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಚರ್ಚೆ ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ದರೂ ಕಾನೂನು ಎಲ್ಲರಿಗಿಂತ ದೊಡ್ಡದು ದರ್ಶನ್ ವರು ನಿರಪರಾದಿ ಆಗಿದ್ದರೆ ಆದಷ್ಟು ಬೇಗ ಅವರಿಗೆ ಅಂಟಿರುವ ಕಳಂಕದಿಂದ ಹೊರಬರಲಿ ಎಂದು ನಾವು ಹರಸೋಣ.