Bigboss
ಅಂತಿಮವಾಗಿ ಎಲ್ಲರೂ ಕಾಯುತ್ತಿದ್ದ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಲ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ (Bigboss S11) ಆರಂಭವಾಗಿದೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಒಂದೂವರೆ ಗಂಟೆ ಮಂತ್ರಮುಗ್ದರಂತೆ ಒಟ್ಟಿಗೆ ಕೂತು ನೋಡುವ ಕಾರ್ಯಕ್ರಮ ಬಿಗ್ ಬಾಸ್ ಆಗಿದೆ.
ಈ ಬಾರಿ ನಿರೀಕ್ಷಿತ ಕೆಲಸದ ಸೆಲೆಬ್ರಿಟಿಗಳು ಹಾಗೂ ಊಹೆಯೂ ಮಾಡಿರದ ಕೆಲವು ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ ಅದರಲ್ಲೂ ಸ್ವರ್ಗ ನರಕ ಎನ್ನುವ ಕಾನ್ಸೆಪ್ಟ್ ನೊಂದಿಗೆ ಸೀಸನ್ ಆರಂಭವಾಗಿದ್ದು ಮೊದಲ ದಿನದಿಂದಲೇ ಮನೆ ಬಹಳ ಬಿಸಿಯಾಗಿದೆ. ಇದರ ನಡುವೆ ಜನರಿಗೆ ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವು ಹೆಚ್ಚಾಗಿದೆ. ಸೀಸನ್ 11ರ ಸ್ಪರ್ಧಿಗಳ ನಿಜವಾದ ವಯಸ್ಸು ಮತ್ತು ವಿದ್ಯಾಭ್ಯಾಸ ವಿವರ ಹೀಗಿದೆ ನೋಡಿ.
1. ಭವ್ಯಾ ಗೌಡ:-
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ ಗೀತಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ನಟಿ ಭವ್ಯ ಗೌಡ ಅವರು ಬಿಗ್ ಮನೆ ಸೇರಿದ್ದಾರೆ. ಈ ಮೊದಲು ಒಂದು ವಾರದ ಓ ಟಿ ಟಿ ಕಾರ್ಯಕ್ರಮದಲ್ಲೂ ಇವರು ಮನೆ ಒಳಗಿದ್ದರು, ಇವರ ವಯಸ್ಸು 26 ವರ್ಷ, B.com ವಿದ್ಯಾಭ್ಯಾಸ ಹೊಂದಿದ್ದಾರೆ.
2. ಯಮುನಾ ಶ್ರೀನಿಧಿ:-
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಧಾರಿಯಾಗಿ ಹೆಸರು ಮಾಡಿರುವ ಯಮುನಾ ಶ್ರೀನಿಧಿ ಅವರ ವಯಸ್ಸು 50 ವರ್ಷ, BA ಪದವೀಧರೆಯಾಗಿದ್ದಾರೆ.
3. ಧನರಾಜ್ ಆಚಾರ್ಯ:- B.E ವಿದ್ಯಾಭ್ಯಾಸ ಮುಗಿಸಿರುವ ಇವರು ಖ್ಯಾತ ಯೌಟ್ಯೂಬ್ ಇವರ ವಯಸ್ಸು 32 ವರ್ಷ
4. ಗೌತಮಿ ಜಾಧವ್:-
ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ BCA ಡಿಗ್ರಿ ಮಾಡಿದ್ದಾರೆ, ಇವರ ವಯಸ್ಸು 31 ವರ್ಷ.
5. ಧರ್ಮ ಕೀರ್ತಿರಾಜ್:- ಖ್ಯಾತ ಖಳನಾಟ ಕೀರ್ತಿರಾಜ್ ಪುತ್ರ ನವಗ್ರಹ ಕ್ಯಾಡ್ಬರಿ ಖ್ಯಾತಿಯ ಧರ್ಮ ಕೀರ್ತಿರಾಜ್ ರವರಿಗೆ 39 ವರ್ಷ, MA ಪದವೀಧರರಾಗಿದ್ದಾರೆ.
6. ಲಾಯರ್ ಜಗದೀಶ್:- ಸೋಶಿಯಲ್ ಮೀಡಿಯಾ ಸಕತ್ ಪಾಪುಲರ್ ಆಗಿರುವ ಇವರ ವಯಸ್ಸು 46 ವರ್ಷ, LLB & LLM ವಿದ್ಯಾಭ್ಯಾಸ ಮಾಡಿದ್ದಾರೆ.
7. ತ್ರಿವಿಕ್ರಮ್:- ಸೀರಿಯಲ್ ನಟ ತ್ರಿವಿಕ್ರಮ್ ಕಲರ್ಸ್ ಕನ್ನಡದ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿದ್ದರು. ಇವರಿಗೆ 29 ವರ್ಷ, B.com ಪದವಿ ಹೊಂದಿದ್ದಾರೆ.
8. ಹಂಸಾ:- ಕಿರುತೆರೆಯ ಪಾಪುಲರ್ ಧಾರಾವಾಹಿಗಳ ನೆಗೆಟಿವ್ ರೋಲ್ ಗಳಲ್ಲಿ ಹಾಗೂ ಕೆಲ ಸಿನಿಮಾಗಳಲ್ಲಿ ಪಾತ್ರ ಮಾಡಿರುವ ಹಂಸ ರವರು ಬಿಕಾಂ ಪದವಿ ಪಡೆದಿದ್ದಾರೆ, ಇವರಿಗೆ ಈಗ 46 ವರ್ಷ ವಯಸ್ಸು
9. ಐಶ್ವರ್ಯ ಸಿಂಧಗಿ:- ಜನಪ್ರಿಯ ಧಾರಾವಾಹಿಗಳಲ್ಲಿ ಮುಖ್ಯಪಾತ್ರಾರಿಯಾಗಿ ಹೆಸರು ಮಾಡಿರುವ ಐಶ್ವರ್ಯ ಸಿಂಧಗಿಯವರು BBM ಪದವೀಧರೆಯಾಗಿದ್ದಾರೆ. ಇವರಿಗೀಗ 31 ವರ್ಷ ವಯಸ್ಸು.
10. ಮಂಜು :-ಮಂಜು ಅವರಿಗೆ 41 ವರ್ಷ ವಯಸ್ಸು ಬಿಕಾಂ ಓದಿದ್ದಾರೆ.
11. ಅನುಷಾ ರೇ:- ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಇವರು ಕನ್ನಡ ಇಂಡಸ್ಟ್ರಿಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ, ಇವರಿಗೆ 28 ವರ್ಷ ವಯಸ್ಸು.
12. ಮಾನಸ ಸಂತೋಷ:- ತುಕಾಲಿ ಸಂತು ಪತ್ನಿ ಮಾನಸ ಅವರಿಗೆ ಈಗ 32 ವರ್ಷ ವಯಸ್ಸು, 8ನೇ ತರಗತಿವರೆಗೆ ಮಾತ್ರ ಓದಿದ್ದಾರೆ.
13. ಗೋಲ್ಡ್ ಸುರೇಶ್:- 10ನೇ ತರಗತಿವರೆಗೆ ಮಾತ್ರ ಓದಿರುವ ಗೌಲ್ಡ್ ಸುರೇಶ್ ರವರು ಮೈ ಮೇಲೆ ಕೋಟಿ ಬೆಲೆಬಾಳುವ ಬಂಗಾರ ಹಾಕಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು ಇವರಿಗೀಗ 35 ವರ್ಷ ವಯಸ್ಸು
14. ಚೈತ್ರ ಕುಂದಾಪುರ:- ಚೈತ್ರ ಕುಂದಾಪುರ ಬಿಕಾಂ ಪದವಿ ಪಡೆದಿದ್ದಾರೆ, ಇವರಿಗೆ 27 ವರ್ಷ ವಯಸ್ಸು.
15. ಮೋಕ್ಷಿತ ಪೇ:- MBA ವಿದ್ಯಾಭ್ಯಾಸ ಮುಗಿಸಿರುವ ಇಬ್ಬರು ಪಾರು ಧಾರವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ ಇವರಿಗೆ ಈಗ 31 ವರ್ಷ ವಯಸ್ಸು.
16. ರಂಜಿತ್:- ಶನಿ ಹಾಗೂ ಇನ್ನಿತರ ಪೌರಾಣಿಕ ಧಾರಾವಾಹಿಗಳ ಪಾತ್ರಗಳಿಂದ ಗಮನ ಸೆಳೆದಿದ್ದ ಇವರಿಗೆ 31 ವರ್ಷ ವಯಸ್ಸು, B.com ಪದವಿ ಪಡೆದಿದ್ದಾರೆ.
17. ಶಿಶಿರ್:- ಶಿಶಿರ್ ಶಾಸ್ತ್ರಿ ಅವರು ಕಿರುತೆರೆ ಅನೇಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಅವರಿಗೆ ಈಗ 34 ವರ್ಷ ವಯಸ್ಸು, ಡಿಗ್ರಿ ಓದಿದ್ದಾರೆ.