Bigboss
ಬಿಗ್ ಬಾಸ್ (Bigboss S11) ಈ ಕಾರ್ಯಕ್ರಮ ಎಂಟರ್ಟೈನ್ಮೆಂಟ್, ಫೈಟಿಂಗ್, ಲವ್, ಫ್ರೆಂಡ್ಶಿಪ್, ಬ್ರೇಕ್ ಅಪ್, ಎಮೋಷನಲ್ ಇದೆಲ್ಲದರ ಮಿಕ್ಸ್ಚರ್ ಎಂದೇ ಹೇಳಬಹುದು. ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುತ್ತಿದೆ ಅಂದರೆ ಇನ್ನು ಕೆಲವೇ ಗಂಟೆಯಲ್ಲಿ ದೊಡ್ಮನೆ ಒಳಗೆ ಬಾಂಬ್ ಒಂದು ಸ್ಪೋಟವಾಗುತ್ತದೆ ಎಂದೇ ಅರ್ಥ.
ಯಾಕೆಂದರೆ ಇಲ್ಲಿ ಪ್ರತಿಯೊಬ್ಬರ ಪ್ರತಿ ನಿಮಿಷವು ಕೂಡ 100ನೇ ದಿನದ ಅಂತಿಮ ಕ್ಷಣ ತಲುಪುವ ಗುರಿಯನ್ನು ಹೊಂದಿದೆ, ಹೀಗಾಗಿ ಕೊಡುವ ಪ್ರತಿಯೊಂದು ಟಾಸ್ಕ್ ಕೂಡ ಸ್ಪರ್ಧೆಯಾಗಿ ಏರ್ಪಡುತ್ತದೆ ಎದುರಿಸುವ ಪ್ರತಿಯೊಂದು ಕ್ಷಣವು ನಿರ್ಣಾಯಕವಾಗಿರುತ್ತದೆ.
ಹೀಗಾಗಿ ಉಳಿದ 16 ಕಂಟೆಸ್ಟೆಂಟ್ ಗಳಿಗಿಂತ ತಾನು ಹೇಗೆ ವಿಭಿನ್ನ ಮತ್ತು ಸ್ಟ್ರಾಂಗ್ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಲೇಬೇಕು. ಅಂತೇಯೇ ವಾಡಿಕೆಯಂತೆ ಸೀಸನ್ 11ರ ಮೊದಲನೇ ಟಾಸ್ಕ್ ವೇಳೆ ಸಣ್ಣದಾಗಿ ಹತ್ತಿಕೊಂಡ ಕಿಡಿ ದೊಡ್ಡದಾಗಿ ಸ್ಪೋಟಗೊಂಡು ಅಂತಿಮವಾಗಿ ಕಾಮಿಡಿಯಲ್ಲಿ ಮುಕ್ತಾಯ ಕೊಂಡಿದೆ ಎನ್ನುವ ಸಮಾಧಾನ ನೀಡಿದೆ.
ಈ ವಾರದ ಮನೆಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸದಸ್ಯರಾದ ಚೈತ್ರಾ ಕುಂದಾಪುರ, ಜಗದೀಶ್, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಮಾನಸ, ಮೋಕ್ಷಿತಾ ಇವರುಗಳು ನಾಮಿನೇಟ್ ಆಗಿದ್ದಾರೆ. ಈ ನಾಮಿನೇಷನ್‌ನಿಂದ ಪಾರಾಗುವುದಕ್ಕೂ ಬಿಗ್ ಬಾಸ್ ಒಂದು ಟಾಸ್ಕ್ ಕೂಡ ನೀಡಿದ್ದಾರೆ.
ನೇತಾಡುವ ಬುಟ್ಟಿಗಳಿಗೆ ಕೈನಲ್ಲಿ ತೆಗೆದುಕೊಂಡು ಹೋಗಿ ಮಣ್ಣು ತುಂಬಿಸುವುದು ಯಾರು ವಿನ್ ಆಗುತ್ತಾರೆ ಅವರು ತೂಗುಗತ್ತಿಯಿಂದ ಪಾರಾಗುತ್ತಾರೆ ಮತ್ತು ಇದರ ಉಸ್ತುವಾರಿಕೆಯನ್ನು ನೋಡಿಕೊಳ್ಳಲು ಧನರಾಜ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ಅವರು ಈ ಟಾಸ್ಕ್ ನಡೆಯುವ ವೇಳೆ ರೂಲ್ಸ್ ಬ್ರೇಕ್ ಮಾಡಿದವರಿಗೆ ವಾರ್ನಿಂಗ್ ಕೊಡುತ್ತಿದ್ದರು.
ಟಾಸ್ಕ್ ಮಾಡುವಾಗ ಯಾರಿಗೂ ಹಾನಿ ಮಾಡಬಾರದು ಎಂಬ ನಿಯಮ ಇದ್ದರೂ ಜಗದೀಶ್ ರವರು ಮಣ್ಣು ತುಂಬಿಸುವಾಗ ಆ ತವಕದಲ್ಲಿ ಯಮುನಾ ಅವರನ್ನು ತಳ್ಳಿ ಬೀಳಿಸಿದ್ದಾರೆ. ಈ ಬಗ್ಗೆ ರೆಫ್ರಿ ಆಗಿರುವ ಧನರಾಜ್ ಜಗದೀಶ್ ರನ್ನು ಎಚ್ಚರಿಸಿದಾಗ ಧನರಾಜ್ ಮೇಲೆ ಒಮ್ಮೆಲೇ ಜಗಳಕ್ಕೆ ಬಿದ್ದ ಲಾಯರ್ ಜಗದೀಶ್ ನಾನು ಯಾವ ರೂಲ್ಸ್ ಕೂಡ ಬ್ರೇಕ್ ಮಾಡಿಲ್ಲ, ನೀನು ರೆಫ್ರಿ ಆಗುವುದಕ್ಕೆ ನಾಲಾಯಕ್ಕು, ಒಳ್ಳೆ ಕಾಮಿಡಿ ಪ್ಲೀಸ್ ನೀನು ಎಂದೆಲ್ಲ ಮಾತನಾಡಿ ಕೆಣಕಿದ್ದಾರೆ.
ಇದರಿಂದ ಕೋ’ಪಗೊಂಡ ಧನರಾಜ್ ಕೂಡ ಲಾಯರ್ ಮೇಲೆ ಚೀರಾಡಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಒಬ್ಬರ ಮಾತನ್ನು ಇನ್ನೊಬ್ಬರು ಅಣಿಕೆಸಿಕೊಳ್ಳುವ ಮಟ್ಟಕ್ಕೆ ಹೋಗಿದೆ ಜಗದೀಶ್ ತಮ್ಮ ಮಾಸ್ ಡೈಲಾಗ್ ಗಳನ್ನು ಹೊಡೆದಿದ್ದರೆ ಇದಕ್ಕೆ ತಕ್ಕ ಉತ್ತರ ಕೊಡಲು ಧನರಾಜ್ ಅವರು ತಮ್ಮ ಹಾಸ್ಯ ಪ್ರವೃತ್ತಿಯನ್ನು ಬಳಸಿಕೊಂಡಿದ್ದಾರೆ.
ಇವರಿಬ್ಬರ ಜಗಳ ನೋಡಿ ಗಾಬರಿಗಿಂತ ಮನೆ ಜನಗಳಿಗೆ ತಡೆಯಲಾಗದಷ್ಟು ನಗುವೆ ಬಂದಿದೆ.
https://www.instagram.com/reel/DAmuWtYp3-q/?igsh=dDA1ZWg4ZTNpaWpi
ವಿಚಿತ್ರವಾದ ಇಮೋಜಿ ಎಕ್ಸ್ಪ್ರೆಶನ್ ಮಾಡಿದ ಧನರಾಜ್ ಕಂಡು ಜಗದೀಶ್ ಅವರ ಮುಖದಲ್ಲಿಯೇ ನಗು ಮೂಡಿದೆ ಹಾಗೆ ಇಡೀ ಮನೆ ಕೂಡ ನಗೆಗಡಲಿನಲ್ಲಿ ತೇಲಿದೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ಪ್ರೊಮೋ ಬಹಳ ವೈರಲ್ ಆಗುತ್ತಿದ್ದು ಈ ಇಬ್ಬರ ಜುಗಲ್ ಬಂದಿ ನೋಡಿದ ಮಂದಿ ಬಹಳ ಮಜಾ ಕೊಡುತ್ತಿದ್ದೆ ಆರಂಭದಲ್ಲಿ ಹೀಗೆ ಇನ್ನು ಮುಂದೆ ಹೇಗೋ ಎನ್ನುತ್ತಿದ್ದಾರೆ.
ಇಲ್ಲಿ ಲಾಯರ್ ಜಗದೀಶ್ ರವರ ಮಾತಿನ ಪಂಚ್ ಕೆಲವರಿಗೆ ಲೈಕ್ ಆದರೆ ಧನರಾಜ್ ಎಕ್ಸ್ಪ್ರೆಶನ್ ನೋಡಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ಹಾಸ್ಯ ನಟ ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದಾರೆ. ಆದರೆ ಟಾಸ್ಕ್ ಮುಗಿದ ಮೇಲೆ ನೀವು ಕೊಟ್ಟ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಿಸಲಿಲ್ಲ ಎನ್ನುವ ಬೇಸರ ಮೂಡುತ್ತಿದೆ ಎಂದು ಧನರಾಜ್ ಬಿಗ್ ಬಾಸ್ ಬಳಿ ಹೇಳಿಕೊಂಡು ಕನ್ಫೆಷನ್ ರೂಮ್ ನಲ್ಲಿ ಕ’ಣ್ಣೀ’ರು ಹಾಕಿದ್ದಾರೆ.
https://www.instagram.com/reel/DAnNnvYpo3b/?igsh=MTV0dWZjeGg3dGRqOQ==