Rakshak
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ಅವರ ಪುತ್ರ ರಕ್ಷಕ್ ಬುಲೆಟ್ (Son Rakshak Bullet) ಕನ್ನಡಿಗರಿಗೆ ಚಿರಪರಿಚಿತರು. ಕಳೆದ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 10 ಕಂಟೆಸ್ಟೆಂಟ್ ಕೂಡ ಆಗಿದ್ದ ಇವರು ಬಿಗ್ ಬಾಸ್ ಮನೆಗೂ ಹೋಗುವ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.
ರಕ್ಷಕ್ ಬುಲೆಟ್ ರವರು ಗುರು ಶಿಷ್ಯರು ಸಿನಿಮಾ (Gurushishyaru) ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು, ಇದಲ್ಲದೆ ಸೋಲೋ ಹೀರೋ ಆಗಿ ಕೂಡ ಅವರ ಕೈಯಲ್ಲಿ ಕೆಲ ಪ್ರಾಜೆಕ್ಟ್ಗಳಿವೆ. ಈ ವಿಚಾರದ ಬಗ್ಗೆ ಒಂದು ಬೇಸರದ ಸಂಗತಿ ಏನೆಂದರೆ, ಬುಲೆಟ್ ಪ್ರಕಾಶ್ ಅವರು ತಮ್ಮ ಮಗ ಚಿಕ್ಕವನಿದ್ದಾಗಲಿಂದಲೂ ಆತನನ್ನು ಹೀರೋ ಆಗಿ ತೆರೆ ಮೇಲೆ ಕಾಣಬೇಕು ಎನ್ನುವ ಬಹಳ ದೊಡ್ಡ ಆಸೆ ಇಟ್ಟುಕೊಂಡಿದ್ದರು.
ಆದರೆ ಅಪ್ಪನ ಆಸೆ ಈಡೇರಿಸೋ ಮುನ್ನ ಅವರೇ ಇಲ್ಲವಾಗಿದ್ದಾರೆ. ಸದ್ಯಕ್ಕೀಗ ರಕ್ಷಕ್ ಬುಲೆಟ್ ಅವರನ್ನು ಸ್ಯಾಂಡಲ್ವುಡ್ನ ಆರ್ ಬಾಸ್ ಎಂದು ಕರೆಯಲಾಗುತ್ತಿದೆ. ಬಿಗ್ ಬಾಸ್ ಗೆ ಹೋದಮೇಲೆ ಇವರ ಖ್ಯಾತಿ ಇನ್ನೂ ಹೆಚ್ಚಾಗಿದ್ದು, ಇದರ ಬೆನ್ನೆಲ್ಲೇ ಮತ್ತೊಂದು ಕಿರುತೆರೆಯ ಬಿಗ್ ರಿಯಾಲಿಟಿ ಶೋ ಗೂ ಆಯ್ಕೆ ಆಗಿದ್ದಾರೆ.
ಇದೆಲ್ಲದರ ಜೊತೆಗೆ ಮತ್ತೊಂದು ಹೊಸ ವಿಚಾರವೇನೆಂದರೆ, ಇನ್ನು ಕೂಡ ಹೈಸ್ಕೂಲ್ ಹುಡುಗನಂತೆ ಕಾಣುವ ರಕ್ಷಕ್ ಬುಲೆಟ್ ಅವರ ಲವ್ ಸ್ಟೋರಿ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಎಲ್ಲರಿಗೂ ಆ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ತೀವ್ರವಾಗಿದ್ದು, ಈ ನಡುವೆ ರಕ್ಷಕ್ ಬುಲೆಟ್ ರವರು ಪಾಲ್ಗೊಂಡಿದ್ದ ಒಂದು ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಅವರು ಒಪ್ಪಿಕೊಂಡಿದ್ದೇನು ಗೊತ್ತಾ? ರಕ್ಷಕ್ ಬುಲೆಟ್ ಅವರಿಗೆ ಸಿನಿಮಾ ಹಾಗೂ ಕಿರುತರೆ ಶೋಗಳ ಹೊರತಾಗಿ ವೈಯಕ್ತಿಕ ಬದುಕಿನ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ನಿರೂಪಕಿ ನಿಮ್ಮ ಪರ್ಸನಲ್ ಲೈಫ್ ಬಗ್ಗೆ ಕೇಳುವುದಾದರೆ ನಿಮಗೆ ಯಾರು ಗರ್ಲ್ ಫ್ರೆಂಡ್ ಇದ್ದಾರೆ ಎಂದು ಮಾತನಾಡುತ್ತಾರೆ ಹಾಗಾದರೆ ಅವರು ಯಾರು? ಎಂದು ಕೇಳಿದ್ದಾರೆ.
ಅದಕ್ಕವರು ನನಗೆ ಇನ್ನೂ 23 ವರ್ಷ ನಾನು 28 ವರ್ಷಕ್ಕೆ ಮದುವೆ ಆಗಬೇಕು ಎಂದುಕೊಂಡಿದ್ದೇನೆ, ಹೀಗಾಗಿ 27ನೇ ವಯಸ್ಸಿಗೆ ಹುಡುಗಿ ಹುಡುಕಿ ಯಾರಾದರೂ ಇಷ್ಟ ಆದರೆ ಮನೆಯಲ್ಲಿ ಹೇಳಿ ಮದುವೆ ಆಗುತ್ತೇನೆ. ಒಂದು ವೇಳೆ ಇಷ್ಟ ಆಗಲೇ ಇಲ್ಲ ಎಂದರೆ ಆ ಜವಾಬ್ದಾರಿಯನ್ನು ನಮ್ಮ ಅಮ್ಮನಿಗೆ ಬಿಡುತ್ತೇನೆ ಅವರೇ 28ನೇ ವರ್ಷಕ್ಕೆ ನನಗೆ ಹುಡುಗಿ ನೋಡಿ ಮದುವೆ ಮಾಡುತ್ತಾರೆ.
ಅಲ್ಲಿವರೆಗೂ ನಾನು ಈ ವಿಷಯಕ್ಕೆ ತಲೆ ಹಾಕುವುದಿಲ್ಲ ನನ್ನ ಕಾನ್ಸಂಟ್ರೇಶನ್ ಏನಿದ್ದರೂ ಸಿನಿಮಾ ಬಗ್ಗೆ ನಾನು ಬೆಳೆಯುವ ಬಗ್ಗೆ ಎನ್ನುವ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೆ ನಿಮಗೆ ಯಾವ ರೀತಿ ಹುಡುಗಿ ಸಿಗಬೇಕು ಎನ್ನುವ ಎಕ್ಸ್ಪೆಕ್ಟೇಶನ್ ಇದೆ ಎಂದು ಮತ್ತೆ ಪ್ರಶ್ನೆ ಕೇಳಿದಕ್ಕೆ ಬರುವ ಹುಡುಗಿ ನಮ್ಮ ಮನೆಗೆ ಹೊಂದಿಕೊಂಡು ಸಂತೋಷವಾಗಿದ್ದರೆ ಸಾಕು, ಅವರ ಪಾಸ್ಟ್ ಹೇಗಾದರೂ ಇರಲಿ.
ಆ ಎಲ್ಲಾ ಕಹಿ ನೆನಪುಗಳನ್ನು ಮರೆಸಿ ನಾವು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇನೆ. ಹಾಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವವರ ಸಿಕ್ಕರೆ ಸಾಕು ಎಂದಿದ್ದಾರೆ. ಹೀಗಾಗಿ ರಕ್ಷಕ್ ಸದ್ಯಕ್ಕೆ ಸಿಂಗಲ್ ಎಂದು ಒಪ್ಪಬಹುದಾಗಿದೆ.