bigboss
ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಮೂರ್ನಾಲ್ಕು ದಿನಗಳಷ್ಟೇ ಆಗಿದ್ದರೂ ನೋಡುಗರು ಮಾತ್ರ ಈಗಲೇ ಕೆಲ ಕಂಟೆಸ್ಟೆಂಟ್ ಗಳಿಗೆ ಫ್ಯಾನ್ ಆಗಿ ಬಿಟ್ಟಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ಕಿರುತೆರೆ ಸೀರಿಯಲ್ ಹಾಗೂ ಸಿನಿಮಾ ಕಲಾವಿದರೇ ಹೆಚ್ಚಾಗಿದ್ದರೂ ಒಬ್ಬರಿಗಿಂತ ಮತ್ತೊಬ್ಬರು ಬಹಳ ವಿಭಿನ್ನ ಎನ್ನಿಸಿ ಕ್ಯೂರಿಯಾಸಿಟಿ ಕ್ರಿಯೆಟ್ ಮಾಡಿದ್ದಾರೆ.
ಈ ಪೈಕಿ ಉಗ್ರಂ ಸಿನಿಮಾ ಖ್ಯಾತಿಯ ಉಗ್ರಂ ಮಂಜುರವರು ಕೂಡ ಒಬ್ಬರು. ಇವರು ಸರಳತೆ ಹಾಗೂ ರೀತಿ-ನೀತಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಉಗ್ರಂ ಮಂಜು ಕನ್ನಡಿಗರಿಗೆಲ್ಲ ಚಿರಪರಿಚಿತರೇ, ಮಂಜುನಾಥ್ ಗೌಡ ಆಗಿದ್ದ ಇವರು ಉಗ್ರಂ ಸಿನಿಮಾ ಸಕ್ಸಸ್ ಬಳಿಕ ಉಗ್ರು ಮಂಜು ಆಗಿ ಫೇಮಸ್ ಆಗಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದರಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡು ಹೆಸರು ಮಾಡುತ್ತಿದ್ದಾರೆ. ಉಗ್ರಂ ಖ್ಯಾತಿಯಿಂದ ಹಲವಾರು ಬಿಗ್ ಪ್ರಾಜೆಕ್ಟ್ ಗಳಲ್ಲಿ ಅವಕಾಶ ಪಡೆದ ಇವರು ಕಿಚ್ಚ ಸುದೀಪ್ ರ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ನಲ್ಲಿ ಕೂಡ ಒಂದು ಪ್ರಮುಖ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಮಾತ್ರವಲ್ಲದೇ ಪರಭಾಷೆಯಿಂದಲೂ ಇವರಿಗೆ ಆಫರ್ ಗಳಿವೆ. ಇಷ್ಟು ಬ್ಯುಸಿಯಾಗಿದ್ದ ಮೇಲೆ ಇವರು ಬಿಗ್ ಬಾಸ್ ಗೆ ಯಾಕೆ ಬಂದರು, 100 ದಿನ ಲಾಕ್ ಆಗುವ ನಿರ್ಧಾರವನ್ನೇಕೆ ಮಾಡಿದರು ಎನ್ನುವುದು ಅನೇಕರ ಡೌಟ್ ಆಗಿರುತ್ತದೆ ಅದಕ್ಕೂ ಕಾರಣ ಇದೆ ಅದಕ್ಕಿಂತಲೂ ಮತ್ತೊಂದು ಸೀಕ್ರೆಟ್ ಏನೆಂದರೆ ಉಗ್ರಂ ಮಂಜು ಇನ್ನೂ ಕೂಡ ಸಿಂಗಲ್ ಅಂತೆ.
ಅವರು ಇನ್ನು ಮದುವೆಯಾಗದೆ ಉಳಿದಿರುವುದಕ್ಕೆ ಹಾಗೂ ಬಿಗ್ ಬಾಸ್ ಒಪ್ಪಿಕೊಳ್ಳುವುದಕ್ಕೆ ಕಾರಣ ಏನು ಎನ್ನುವುದು ಬಿಗ್ ಬಾಸ್ ಕಾರ್ಯಕ್ರಮದ ವೇದಿಕೆ ಮೇಲೆ ಸುದೀಪ್ ರ ಎದುರು ಕುಟುಂಬಸ್ಥರಿಂದ ಬಯಲಾಗಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಮನೆ ಒಳಗೆ ಉಗ್ರಂ ಮಂಜುರವರನ್ನು ಕಳಿಸುವ ಮುನ್ನ ಸುದೀಪ್ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಕೇಳಿದ್ದಕ್ಕೆ ನಾನು ನಮ್ಮ ತಾಯಿಗೆ ಒಂದು ಅವಾರ್ಡ್ ನೀಡಬೇಕು ಎಂದು ಆಸೆಪಟ್ಟಿದೆ ಅವರು ಬಹಳ ಇಷ್ಟಪಡುವ ಕಾರ್ಯಕ್ರಮ ಬಿಗ್ ಬಾಸ್ ಹಾಗಾಗಿ ಬಿಗ್ ಬಾಸ್ ಕಾರ್ಯಕ್ರಮ ಗೆದ್ದು ಟ್ರೋಫಿ ಕೊಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಹಾಗೆ ಸುದೀಪ್ ಅವರು ಮದುವೆ ಬಗ್ಗೆ ಕೂಡ ತಮಾಷೆಯಾಗಿದೆ ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಅವರ ಕುಟುಂಬದವರು ಉತ್ತರ ಕೊಟ್ಟಿದ್ದಾರೆ. ನಾವು ಸಹ ಕಳೆದ ಏಳೆಂಟು ವರ್ಷಗಳಿಂದ ಈ ಬಗ್ಗೆ ಕೇಳುತ್ತಲೇ, ಹೇಳುತ್ತಲೇ ಬಂದಿದ್ದೇವೆ. ಇವನಿಗೆ 3 ಜನ ತಂಗಿಯರು ಮದುವೆ ಬಗ್ಗೆ ಕೇಳಿದಾಗಲೆಲ್ಲಾ ಆ ಮೂರು ಜನ ತಂಗಿಯರಿಗೂ ಮದುವೆ ಆಗಬೇಕು ಅವರು ಮೋದಲು ಸೆಟಲ್ ಆಗಬೇಕು ಆಮೇಲೆ ನನ್ನ ಮದುವೆ ಎಂದು ಮುಂದೂಡುತ್ತಾ ಬಂದಿದ್ದಾನೆ ಎಂದು ಕುಟುಂಬಸ್ಥರು ಉತ್ತರಿಸಿದ್ದಾರೆ.
ಸಾಮಾನ್ಯವಾಗಿ ದೊಡ್ಮನೆಗೆ ಹೋದ ಮೇಲೆ ಅನೇಕ ಸಿಂಗಲ್ ಗಳು ಪ್ರೀತಿಯಲ್ಲಿ ಬೀಳುತ್ತಾರೆ, ಉಗ್ರಂ ಮಂಜು ಅವರು ಕೂಡ ಬಿಗ್ ಬಾಸ್ ಮನೆ ಒಳಗೆ ಯಾರನ್ನಾದರೂ ಇಷ್ಟ ಪಟ್ಟು ಆಗಲಾದರೂ ಮದುವೆ ಕಡೆ ಮನಸ್ಸು ಮಾಡುತ್ತಾರಾ? ಕಾದು ನೋಡೋಣ. ಹಾಗೆಯೇ ಅವರ ಆಟಕ್ಕೆ ಆಲ್ ದ ಬೆಸ್ಟ್ ಕೂಡ ಹೇಳೋಣ.