Kiccha Sudeep: ವಿ’ಚ್ಛೇ’ದ’ನ ಪಡೆಯಬೇಕಿದ್ದ ಸುದೀಪ್ ದಂಪತಿಗಳು ಒಂದಾಗಲು ಕಾರಣವಾಗಿದ್ದು ಈ ವ್ಯಕ್ತಿ! ಕಿಚ್ಚ-ಪ್ರಿಯಾ ಮಧ್ಯೆ ಸಂಧಾನ ಮಾಡಿದವರಾರು ಗೊತ್ತಾ?

Kiccha Sudeep

ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಒಬ್ಬರು ಸುದೀಪ್ (Kicha Sudeep). ಕಿಚ್ಚ ಎಂದೇ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಇಂದು ಕನ್ನಡದ ಖ್ಯಾತಿಯನ್ನು ಭಾರತದ ಎಲ್ಲಾ ಪ್ರಬಲ ಇಂಡಸ್ಟ್ರಿಗಳಿಗೆ ಪರಿಚಯಿಸುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಭಾಷೆಗಳ ಬಿಗ್ ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಈ ಅಭಿನಯ ಚಕ್ರವರ್ತಿ.

ನಟನೆ, ನಿರ್ದೇಶನ, ನಿರ್ಮಾಣ, ನಿರೂಪಣೆ, ಸಂಗೀತ, ಅಡುಗೆ ಎಲ್ಲದರಲ್ಲೂ ಮಿಂಚುತ್ತಿರುವ ಈ ಮಲ್ಟಿ ಟಾಲೆಂಡೆಗೆ ಇದೀಗ ಅರ್ಧ ಸೆಂಚುರಿ ಪೂರೈಸಿದ ಸಂಗಮ. ಅರ್ಥಾತ್ ಸೆಪ್ಟೆಂಬರ್ 2, ರಂದು ತಮ್ಮ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಮುಖ್ಯ ವಾಹಿನಿಯೊಂದಕ್ಕೆ ಸಂದರ್ಶನ ಕೂಡ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿಇವರ ಬದುಕಿನ ಅತ್ಯಂತ ಪರ್ಸನಲ್ ವಿಚಾರವೊಂದು ಬಹಿರಂಗವಾಗಿದೆ.

WhatsApp Group Join Now
Telegram Group Join Now

ಬಹಳ ವಿಶೇಷವಾಗಿದ್ದ ಈ ಸಂದರ್ಶನದಲ್ಲಿ ಸುದೀಪ್ ಅವರು ಅವರ ಬಾಲ್ಯ, ಆಸೆ, ಕನಸು, ಪ್ರೀತಿ, ಮದುವೆ, ಸಿನಿಮಾ, ಸ್ನೇಹ, ಮನಸ್ತಾಪ ಇನ್ನು ಇತ್ಯಾದಿ ಎಲ್ಲದರ ಬಗ್ಗೆಯೂ ಕೂಡ ಕೇಳಲಾದ ಪ್ರಶ್ನೆಗಳಿಗೆಲ್ಲಾ ನೇರಾನೇರಾ ಉತ್ತರ ಕೊಟ್ಟಿದ್ದಾರೆ. ಸುದೀಪ್ ರವರು ಪ್ರಿಯಾರೊಂದಿಗಿನ ಪ್ರೀತಿ ವಿಚಾರ ಹಾಗೆ ಮನಸ್ತಾಪವಾಗಿ ವಿ’ಚ್ಛೇ’ದ’ನಕ್ಕೆ (Divorce) ಹೋಗಿದ್ದ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.

ಅವರೇ ಹೇಳಿಕೊಂಡಂತೆ 18ನೇ ವಯಸ್ಸಿನಿಂದ ಸುದೀಪ್ ಅವರಿಗೆ ಅವರ ಮಡದಿ ಪ್ರಿಯಾ ಅವರ ಪರಿಚಯವಿತ್ತಂತೆ. ಶ್ರೀಮಂತ ಕುಟುಂಬದವರಾಗಿದ್ದರು ಇಂಡಸ್ಟ್ರಿಗೆ ಬರುವ ಆರಂಭದಲ್ಲಿ ಎಲ್ಲರಂತೆ ಇವರಿಗೂ ಬಹಳ ಸ್ಟ್ರಗಲ್ ಹಾಗೂ ಅ’ವ’ಮಾ’ನಗಳು ಎದುರಾಗಿದ್ದವಂತೆ, ಆ ಸಮಯದಲ್ಲಿ ನನ್ನ ಬಳಿ ಹಣ ಇರುತ್ತಿರಲಿಲ್ಲ ಆದರೆ ಪ್ರಿಯ ವರ್ಕ್ ಮಾಡುತ್ತಿದ್ದರಿಂದ ಅವರೇ ನನ್ನ ATM ಆಗಿದ್ದರು. ಅವರ ಟೂ ವೀಲರ್ ಸ್ಕೂಟರ್ ನಲ್ಲಿ ನಾನು ಗಾಂಧಿನಗರ ಸುತ್ತುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಕುಟುಂಬದವರ ಒಪ್ಪಿಗೆ ಮೇರೆಗೆ ಸೆಪ್ಟೆಂಬರ್ 18, 2001ರಲ್ಲಿ ಪ್ರಿಯ ಹಾಗೂ ಸುದೀಪ್ ಹಸಿ ಮಣೆ ಏರಿದ್ದರು. ಹಾಗೆಯೇ ಸಾಮಾನ್ಯವಾಗಿ ಎಲ್ಲಾ ದಂಪತಿಗಳ ನಡುವೆ ಬರುವಂತೆ ಇವರ ಮಧ್ಯೆಯು ಜ’ಗ’ಳ, ಮನಸ್ತಾಪಗಳು ಬೆಳೆದು ಅದು ವಿ’ಚ್ಛೇ’ದ’ನದ ಹಂತದವರೆಗೂ ಹೋಗಿತ್ತು. 2015ರಲ್ಲಿ ದೂರವಾಗುವ ಮತ್ತು ಮಗಳು ಸಾನ್ವಿ ಜವಾಬ್ದಾರಿಯನ್ನು ಪ್ರಿಯಾರಿಗೆ ಒಪ್ಪಿಸುವ ಒಪ್ಪಂದಕ್ಕೆ ಬಂದಿದ್ದರು, ಆಗ ಈ ಸುದ್ದಿ ಮಾಧ್ಯಮದಲ್ಲೆಲ್ಲ ವರದಿಯಾಗಿತ್ತು.

ಆದರೆ ಇದ್ದಕ್ಕಿದ್ದಂತೆ ಬಹಳ ಆಶ್ಚರ್ಯವಾಗುವಂತೆ ಎಲ್ಲವೂ ಸರಿಹೋಯ್ತು. ಇದರ ಬಗ್ಗೆ ಕೂಡ ಸುದೀಪ್ ಹೇಳಿಕೊಂಡಿದ್ದಾರೆ. ನಾವು ಸ್ನೇಹದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದಾಗ ಆ ವ್ಯಕ್ತಿಯಿಂದ ದೂರವಾಗಿ ಮಾತನಾಡುವುದಿಲ್ಲ ಆದರೆ ಮದುವೆ ಎಂಬ ವಿಷಯ ಬಂದಾಗ ನಿಮ್ಮಿಬ್ಬರನ್ನು ನಂಬಿಕೊಂಡು ಬದುಕುತ್ತಿರುವ ಮತ್ತೊಂದು ಜೀವವಿರುತ್ತದೆ. ನಾವು ಹಾಗೆ ನಮ್ಮ ಮಗಳಿಗಾಗಿ ಮತ್ತೊಂದು ಅವಕಾಶ ಕೊಡಲು ತೀರ್ಮಾನಿಸಿದೆವು.

ಸಾನ್ವಿಗಾಗಿ ಮತ್ತೆ ಒಂದಾದಾಗ ಹಿಂದೆ ಇದ್ದ ಸಮಸ್ಯೆಗಳು ಬಗೆಹರಿಯಿತು ಎಂದಿದ್ದಾರೆ. ಅದೇ ರೀತಿ ಅಲ್ಲಿಂದ ಇಲ್ಲಿಯವರೆಗೂ ಇವರ ಡಿ’ವೋ’ರ್ಸ್ ಬಗ್ಗೆ ಯಾವುದೇ ಸುದ್ದಿಗಳು ಕೇಳಿ ಬಂದಿಲ್ಲ ಅಲ್ಲದೆ ಸಂತೋಷವಾಗಿ ದಂಪತಿಗಳು ಎಲ್ಲಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗಿಯಾಗುತ್ತಿದ್ದಾರೆ. ಇದು ಕಿಚ್ಚನ ಅಭಿಮಾನಿಗಳಿಗೆ ಸಂತೋಷ ಹಾಗೂ ಎಲ್ಲರಿಗೂ ಮಾದರಿಯಾಗಿದೆ. ಈ ಜೋಡಿ ಇನ್ನಷ್ಟು ಕಾಲ ಹೀಗೆ ಸಂತೋಷವಾಗಿ ಬದುಕಲಿ ಎಂದು ನಾವು ಕೂಡ ಹಾರೈಸೋಣ.

Leave a Comment