Anupama Gowda
ಕನ್ನಡ ಕಿರುತೆರೆ ಹಿಟ್ ಧಾರಾವಾಹಿಗಳಾದ ಅಣ್ಣ-ತಂಗಿ, ಚಿ. ಸೌ ಸಾವಿತ್ರಿ, ಅಕ್ಕ ಈ ಧಾರಾವಾಹಿಗಳ ನಾಯಕಿ ಹಾಗೂ ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ನಿರೂಪಕಿಯೂ ಆಗಿರುವ ಕಿರುತೆರೆ ಫೇಮಸ್ ಫೇಸ್ ಅನುಪಮಾ ಗೌಡ (Anchor Anupama Gowda) ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.
ಕಿರುತೆರೆ ಜನಪ್ರಿಯ ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ, ಹೋಸ್ಟ್ ಆಗಿ, ಇತ್ತೀಚಿಗೆ ಸಿನಿಮಾಗಳಲ್ಲೂ ಕೂಡ ಪಾತ್ರ ಮಾಡುತ್ತಾ ಬಣ್ಣದ ಲೋಕದಲ್ಲಿ ಬೆಳೆಯುತ್ತಿರುವ ಅನುಪಮಾ ಗೌಡ ರವರ ಬದುಕಿನ ಜರ್ನಿ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿ.
ಯಾಕೆಂದರೆ ಕಡುಬಡತನದ ಕುಟುಂಬವೊಂದರಲ್ಲಿ ಹುಟ್ಟಿ, ತಾನೇ ಸ್ವಂತ ಪರಿಶ್ರಮದಿಂದ ಬೆಳೆದು, ಈಗ ಇಡೀ ಕುಟುಂಬ ಜವಾಬ್ದಾರಿ ಹೊತ್ತಿರುವ ತನ್ನ ಹಠದಿಂದಲೇ ತನ್ನಿಚ್ಛೆಯ ಬದುಕು ಕಟ್ಟಿಕೊಂಡಿರುವ ಈ ಗಟ್ಟಿಗಿತ್ತಿ ಸೌಂದರ್ಯವತಿ ಅಷ್ಟೇ ಅಲ್ಲ ತಕ್ಕ ಹಾಗೆ ಅಷ್ಟೇ ಬುದ್ಧಿವಂತೆ.
ಕಳೆದ ಒಂದು ದಶಕದಲ್ಲಿ ಅನುಪಮಾ ಗೌಡರವರ ಬದುಕು ಬಹಳಷ್ಟು ಬದಲಾಗಿದೆ. ಅನುಪಮಾ ಗೌಡ ಅವರ ತಾವು ಕೂಡ ನಿರೀಕ್ಷೆಯೇ ಮಾಡಿರದಷ್ಟು ಹೆಸರು, ಹಣ, ಯಶಸ್ಸು ಎಲ್ಲವನ್ನು ಕೂಡ ಸಂಪಾದನೆ ಮಾಡಿದ್ದಾರೆ. ಆದರೆ ಒಂದು ವಿಷಯದಲ್ಲಿ ಮಾತ್ರ ಎಲ್ಲರಿಗೂ ಈಕೆಯ ಬದುಕಿನ ಒಂದು ಕೊರತೆ ಎದ್ದು ಕಾಣುತ್ತಿದೆ.
ಅದು ಇವರ ಮದುವೆಯ ವಿಚಾರವೇ ಆಗಿದೆ. ಸದ್ಯಕ್ಕೆ 33ರ ಹರೆಯದಲ್ಲಿರುವ ಇವರಿಗೆ ಸಹಜವಾಗಿ ಎಲ್ಲಾ ಕಡೆ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಸಾಕಷ್ಟು ಬಾರಿ ಇದನ್ನು ನಗುಮುಖದಿಂದಲೇ ಅವಾಯ್ಡ್ ಮಾಡಿಕೊಂಡು ಬಂದಿದ್ದ ಅನುಪಮಾ ಈಗ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ (Anubandha awarde) ವೇದಿಕೆ ಮೇಲೆ ಇನ್ನೂ ತಾವು ಮದುವೆಯಾಗದೆ ಹಾಗೆ ಉಳಿದಿರುವುದಕ್ಕೆ ಕಾರಣ ಏನು ಎನ್ನುವುದನ್ನು ರೆವೀಲ್ ಮಾಡಿದ್ದಾರೆ.
ಮತ್ತು ಈ ಬಾರಿ ಸ್ಟಾರ್ ನಟನ ಮಾತಿನಿಂದ ಮದುವೆ ಕನಸು ಬಿಟ್ಟೆ ಎಂದು ಅವರೆದುರೇ ನುಡಿದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಈ ಬಾರಿ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ (Real star Upendra) ಅವರು ಭಾಗಿಯಾಗಿದ್ದರು.
ವೇದಿಕೆ ಮೇಲೆ ಉಪೇಂದ್ರರವರೊಡನೆ ಮಾತಿಗಿಳಿದ ಅನುಪಮಾ ಅವರು ಉಪೇಂದ್ರ ಅವರನ್ನು ಸರ್ ನಿಮ್ಮ ಮಾತನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ನೀವು ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಹೇಳಿರುವ ಕಾರಣ ಅದನ್ನು ನಾನು ಬಲವಾಗಿ ನಂಬಿ ಮದುವೆ ಬಗ್ಗೆ ಕನಸನ್ನು ಕೈ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ
ಈ ಹಿಂದೆ ಅನುಪಮ ಧಾರವಾಹಿಯೊಂದರಲ್ಲಿ ತಮ್ಮ ಸಹನಟನಾಗಿದ್ದ ನಟನೊಂದಿಗೆ ಪ್ರೀತಿಯಲ್ಲಿದ್ದಾರೆ ಎನ್ನುವ ವಿಷಯ ಪ್ರಚಲಿತದಲ್ಲಿತ್ತು. ಅವರು ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿದ್ದಾಗ ಅದೇ ಮನೆಯಲ್ಲಿ ಇವರ ಮಾಜಿ ಪ್ರಿಯಕರ ಕೂಡ ಇದ್ದ ಎನ್ನುವ ಮಾತುಗಳು ಕೂಡ ಸುದ್ದಿಯಾಗಿತ್ತು.
ಎಂಗೇಜ್ಮೆಂಟ್ ಆಗಿ ಮದುವೆ ಹಂತಕ್ಕೆ ಹೋಗಿದ್ದ ಸಂಬಂಧ ಕುಟುಂಬದವರ ಕಾರಣಕ್ಕೆ ಮುರಿದು ಬಿತ್ತು. ಆ ನಟನಿಗೀಗ ಮದುವೆಯಾಗಿ ಮಗು ಕೂಡ ಇದೆ. ಹೀಗಾಗಿ ಅವರು ಮದುವೆಯಾಗದೆ ಹಾಗೆ ಉಳಿದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ ಸದ್ಯಕ್ಕೆ ಅವರ ವೈಯಕ್ತಿಕ ವಿಚಾರ ಏನೇ ಇದ್ದರೂ ಸಾಧನೆ ಹಾದಿಯಲ್ಲಿ ಬೆಳೆಯುತ್ತಿರುವ ಈ ಕನ್ನಡದ ಮನೆ ಮಗಳಿಗೆ ಶುಭವಾಗಲಿ ಅಂತಷ್ಟೇ ನಾವು ಹರಸೋಣ.