Amithab Bacchan
ಭಾರತೀಯ ಚಿತ್ರರಂಗದ ಹೆಸರಾಂತ ಸ್ಟಾರ್ ಹೀರೋಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹೆಸರು ಕೂಡ ಸೇರಿದೆ. ಹಲವು ವರ್ಷಗಳಿಂದ ನಟನಾಗಿ, ನಿರ್ಮಾಪಕನಾಗಿ, ಬಾಲಿವುಡ್ ನಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿರುವ ಸಲ್ಮಾನ್ ಖಾನ್ ರವರು ಸಿನಿಮಾ ಸುದ್ದಿಗಳಷ್ಟೇ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದಲೂ ಸುದ್ದಿಯಲ್ಲಿರುತ್ತಾರೆ.
ಇನ್ನೂ ಸಹ ಇಂಡಿಯಾದ ಮೋಸ್ಟ್ ಎಲಿಜಿಬಲ್ ಬ್ಯಾಚುರಲ್ ಎಂದೇ ಖ್ಯಾತರಾಗಿದ್ದಾರೆ. ಸಲ್ಮಾನ್ ಖಾನ್ ರವರಿಗೆ ಈಗ 58 ವರ್ಷ, ಆದರಿನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಕಳೆದ ಎರಡು ದಶಕಗಳಿಂದ ಪ್ರತಿ ವರ್ಷವೂ ಕೂಡ ಈ ವರ್ಷವಾದರೂ ಸಲ್ಮಾನ್ ಖಾನ್ ಮದುವೆಯಾಗುತ್ತದೆ ಎಂದು ಅವರ ಅಪ್ಪಟ ಅಭಿಮಾನಿ ವಲಯ ಕಾಯುತ್ತಿದ್ದರೆ.
ಈಗಾಗಲೇ ಕಾದು ಕಾದು ಬೇಸತ್ತು ಅನೇಕರು ಇನ್ನು ಅವರು ಮದುವೆ ಆಗೋದೇ ಇಲ್ಲ ಅನಿಸುತ್ತದೆ ಎನ್ನುವ ಅಭಿಪ್ರಾಯಕ್ಕೆ ಬಂದು ಬಿಟ್ಟಿದ್ದಾರೆ. ಆದರೆ ಬಾಯಿಜಾನ್ ಮಾತ್ರ ತಮ್ಮ ಪಾಲಿನ ಆಸ್ತಿಗೆ ಮುಂದಿನ ವಾರಸುದಾರ ಯಾರು ಎಂದು ಘೋಷಿಸಿಕೊಳ್ಳುವ ಮೂಲಕ ಅವರ ಬಗ್ಗೆ ಜನರಿಗಿದ್ದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ನಟ ಈ ಬಗ್ಗೆ ಉಲ್ಲೇಖಿಸಿರುವ ಹೆಸರು ಯಾರದ್ದು ಗೊತ್ತಾ?
ಬರೋಬ್ಬರಿ ತಮ್ಮ ಗಳಿಕೆಯ ರೂ.2,900 ಕೋಟಿ ಮೌಲ್ಯದ ಆಸ್ತಿಗೆ ವಾರಸುದಾರನಾಗಿರುವ ಸಲ್ಮಾನ್ ಖಾನ್ ರವರು ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ 200 ಕೋಟಿಗಿಂತಲೂ ಹೆಚ್ಚು ಹಾಗೂ ತಿಂಗಳಿಗೆ 14 ಕೋಟಿಗೂ ಹೆಚ್ಚು ಆದಾಯ ಪಡೆಯುತ್ತಿದ್ದಾರಂತೆ, ಸಲ್ಮಾನ್ ಖಾನ್ ರವರ ಹೆಸರಿನಲ್ಲಿ ಅನೇಕ ಬಿಸಿನೆಸ್ ಗಳು, ಕೋಟ್ಯಂತರ ರೂಪಾಯಿ ಬೆಲೆಬಾಳುವ ಬಂಗಲೆಗಳು, ಇತ್ಯಾದಿ ಇತ್ಯಾದಿ ಆಸ್ತಿಗಳಿವೆ.
ಅವರಿನ್ನು ವಿವಾಹವಾಗದೆ ಉಳಿದಿರುವುದರಿಂದ ಅವರ ಸ್ವಂತ ಸಂಪಾದನೆಯಾಗಿರುವ ಈ ಎಲ್ಲಾ ಆಸ್ತಿಯು ಅವರು ನಂತರ ಯಾರಿಗೆ ಹೋಗುತ್ತದೆ ಎನ್ನುವುದು ಅನೇಕರ ಕುತೂಹಲ. ಈಗ ಸಂದರ್ಶನ ಒಂದರಲ್ಲಿ ಈ ಬಗ್ಗೆ ನೇರವಾಗಿ ಉತ್ತರಿಸುವ ಮೂಲಕ ಸಲ್ಮಾನ್ ಖಾನ್ ರವರು ಇದೆಲ್ಲದಕ್ಕೂ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ರವರು ಇಂತಹ ವಿಷಯ ಪ್ರಸ್ತಾಪವಾದಾಗ ನೇರವಾಗಿಯೇ ಇದಕ್ಕೆ ಉತ್ತರಿಸಿದ್ದಾರೆ. ಈಗಾಗಲೇ ನಾನು ನನ್ನ ಸಂಪಾದನೆಯ ಅರ್ಧ ಭಾಗವನ್ನು ಟ್ರಸ್ಟಿಗೆ ದಾನ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಮದುವೆಯಾದರು ಆಗದೆ ಇದ್ದರೂ ಖಂಡಿತವಾಗಿಯೂ ನನ್ನ ಪಾಲಿನ ಈ ಅರ್ಧ ಆಸ್ತಿಯು ನನ್ನ ನಂತರ ಈ ಟ್ರಸ್ಟ್ ಗೆ ಹೋಗುತ್ತದೆ.
ಒಂದು ವೇಳೆ ನಾನು ಮದುವೆಯಾಗದೆ ಹಾಗೆ ಉಳಿದರೆ ಪೂರ್ತಿ ಆಸ್ತಿಯೂ ಈ ಟ್ರಸ್ಟಿಗೆ ಹೋಗುತ್ತದೆ ಎನ್ನುವ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಉತ್ತರ ಹೀಗಿರುವುದರಿಂದ ಇಂದಲ್ಲ ನಾಳೆ ಸಲ್ಮಾನ್ ಮದುವೆ ಆದರೂ ಆಗಬಹುದು ಎಂದು ಭಾವಿಸಬಹುದು. ಇನ್ನು ಟ್ರಸ್ಟ್ ವಿಚಾರಕ್ಕೆ ಬಂದರೆ ಭಾರತ ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಆರೋಗ್ಯ ಒದಗಿಸುವ ಉದ್ದೇಶದಿಂದ.
ಸಲ್ಮಾನ್ ಖಾನ್ ರವರು ಬಿಯಿಂಗ್ ಹ್ಯೂಮನ್ (being human trust) ಎನ್ನುವ ಹೆಸರಿನ ಚಾರಿಟಿ ಪ್ರಾರಂಭಿಸಿ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ತಮ್ಮ ನಂತರ ತಾವೇ ಸ್ಥಾಪಿಸಿರುವ ಈ ಟ್ರಸ್ಟಿಗೆ ತಮ್ಮ ಪಾಲಿನ ಸಂಪೂರ್ಣ ಆಸ್ತಿಯು ಅನುವಂಶಿಯವಾಗಿ ಹೋಗಬೇಕು ಎನ್ನುವುದೇ ಅವರ ಇಚ್ಛೆಯಾಗಿದೆ.