Anupama Gowda
ಕನ್ನಡ ಕಿರುತೆರೆ ಲೋಕವು ಸ್ಮಾರ್ಟ್ ಸ್ಕ್ರೀನ್ ನ ಅನೇಕ ಕಲಾವಿದರಿಗೆ ಯಾವುದೇ ಸಿನಿಮಾ ಸ್ಟಾರ್ ಗಳಿಗೆ ಕಡಿಮೆ ಇಲ್ಲದಂತೆ ಖ್ಯಾತಿ ತಂದು ಕೊಟ್ಟಿದೆ. ಸಾಮಾನ್ಯವಾಗಿ ಜನಸಾಮಾನ್ಯರಿಗೆ ಬೆಳ್ಳಿ ತೆರೆಯ ತಾರೆಗಳಿಗಿಂತ ಪ್ರತಿನಿತ್ಯ ಟಿವಿ ಪರದೆ ಮೇಲೆ ಕಾಣುವ ಕಲಾವಿದರೇಹೆಚ್ಚು ಆಪ್ತರಂತೆ ಕಾಣುತ್ತಾರೆ ಹೀಗಾಗಿ ತಮ್ಮ ಮನೆ ಮಕ್ಕಳಂತೆ ಇವರನ್ನು ಪ್ರೀತಿಸುತ್ತಾರೆ.
ಈ ಪಟ್ಟಿಗೆ ಕನ್ನಡದ ಕಿರುತೆರೆ ಪ್ರಪಂಚದ ಖ್ಯಾತ ನಿರೂಪಕಿ ಅನುಪಮ ಗೌಡ (Anupama Gowda) ಅವರ ಹೆಸರು ಕೂಡ ಸೇರುತ್ತದೆ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಉಸ್ತುವಾರಿ ನಿರ್ವಹಿಸುತ್ತಿರುವ ಇವರಿಗೆ ಬಣ್ಣದ ಲೋಕವು ಎಷ್ಟರಮಟ್ಟಿಗೆ ಕೈಹಿಡಿದಿದೆ ಎಂದರೆ ಬೆಂಗಳೂರಿನ ಯಾವುದೋ ಒಂದು ಮೂಲೆಯ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಇಂದು ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ.
ಕಿರುತೆರೆಯ ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ ಬಳಿಕ ಜನಪ್ರಿಯ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಯಾಗಿ, ಇಂದು ಯಶಸ್ವಿ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಅಲ್ಲದೆ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಯಾಗಿ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಬದುಕಿನಲ್ಲಿ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದಾರೆ.
ತಾನೆ ಮನೆ ಮಗನಂತೆ ಜವಾಬ್ದಾರಿ ಹೊತ್ತು ಕುಟುಂಬ ನೋಡಿಕೊಳ್ಳುತ್ತಿರುವ ಅನುಪಮ ಗೌಡ ರವರೀಗ ಬದುಕಿನ ಪ್ರಮುಖ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕದೊಂದು ಬಾಡಿಗೆ ಮನೆಯಲ್ಲಿ, ಬಾಲ್ಯ ಕಳೆದ ಅನುಪಮಾ ಈಗ ಕೋಟಿಗಟ್ಟಲೆ ಹಣ ಸುರಿದು ದೊಡ್ಡ ಮನೆ ಕಟ್ಟಿಸಿದ್ದಾರೆ ಹಾಗೂ ಬಹಳ ಗ್ರಾಂಡ್ ಆಗಿ ಅದರ ಗೃಹಪ್ರವೇಶವನ್ನು ಕೂಡ ಮಾಡಿದ್ದಾರೆ.
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನುಪಮ ಗೌಡ ಅವರ ಆಪ್ತರು ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಪ್ರಶಂಸೆಗಳ ಸುರಿಮಳೆಗರೆಯುತ್ತಿದ್ದಾರೆ ಅನುಪಮಾ ಗೌಡ ಅವರಿಗೆ ಬಹಳ ಆತ್ಮೀಯ ಸ್ನೇಹಿತೆಯಾಗಿರುವ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಬೆಸ್ಟ್ ಫ್ರೆಂಡ್ ಗೆ ವಿಶ್ ಮಾಡಿದ್ದಾರೆ.
ತುಂಬು ಗರ್ಭಿಣಿಯಾಗಿರುವ ನೇಹಾ ಗೌಡ ಅವರು ಹಸಿರು ಸೀರೆ ಉಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ತಿಕ್ ಮಹೇಶ್, ಕಿಶನ್ ಬೆಳಗಲಿ, ದಿವ್ಯ ಉರುಡುಗ, ನಮ್ರತಾ ಗೌಡ ಹಾಗೂ ಇನ್ನಿತರರು ಗೃಹಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿ ಯಾಗಿದ್ದರು. ಬಹಳ ಕನಸಿಟ್ಟು, ಜೀವಮಾನವಿಡೀ ದುಡಿದ ಹಣವನ್ನು ಕೊಟ್ಟು ಅನುಪಮ ತನ್ನ ಸ್ವಂತ ದುಡಿಮೆಯಿಂದ ಕಟ್ಟಿರುವ ಈ ಮನೆಯ ಹೆಸರು ಎಷ್ಟು ವಿಶೇಷವಾಗಿದೆ ಗೊತ್ತಾ?
ನಿರುಪಮ ಗೌಡ ಅವರು ತಮ್ಮ ಮನೆಗೆ ನಮ್ಮನೆ (Nammame) ಎಂದು ಹೆಸರಿಟ್ಟಿದ್ದಾರೆ. ಗೃಹಪ್ರವೇಶ ದಿನ ಬಹಳ ಸಂತೋಷದಿಂದ ಸ್ನೇಹಿತರ ಜೊತೆ ಸಮಯ ಕಳೆದ ಫೋಟೋಗಳೊಂದಿಗೆ ನಮ್ಮನೆ ಟೈಟಲ್ ಬೋರ್ಡ್ ಮುಂದೆ ಸೀರೆಯುಟ್ಟು ಫೋಸ್ ಕೊಟ್ಟು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಲವಾದ ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರವಾಗಿ ಈ ಮನೆಗೆ ಸುಮಾರು ಎರಡು ಕೋಟಿಯಷ್ಟು ಹಣ ಖರ್ಚಾಗಿದೆಯಂತೆ. ಈ ಮನೆಗೆ ನಮ್ಮನೆಯಿಂದ ಹೆಸರಿಟ್ಟಿರುವ ಅನುಪಮ ಗೌಡ ಅವರು ಈ ಮನೆಯನ್ನು ತಮ್ಮ ತಂಗಿ ಹಾಗೂ ತಾಯಿಗಾಗಿ ನಿರ್ಮಿಸಿದ್ದಾರಂತೆ ಎಂದು ಕೂಡ ತಿಳಿದು ಬಂದಿದೆ. ಇವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ನಿರೂಪಕಿಯಾಗಿ ಮಿಂಚುತ್ತಿರುವ ಅನುಪಮ ಕನ್ನಡದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲು ಎಂದು ನಾವು ಕೂಡ ಹರಸೋಣ.