Anushka Shetty ಕೊನೆಗೂ ಫಿಕ್ಸ್ ಆಯ್ತು ಸೌತ್ ಇಂಡಿಯಾ ಸ್ವೀಟಿ ಮ್ಯಾರೇಜ್, ಅನುಷ್ಕಾ ಶೆಟ್ಟಿ ಕೈ ಹಿಡಿಯುತ್ತಿರುವ ಖ್ಯಾತ ವ್ಯಕ್ತಿ ಯಾರು ಗೊತ್ತಾ.?

Anushka Shetty

ಅನುಷ್ಕಾ ಶೆಟ್ಟಿ (Anushka Shetty) ಸೌತ್ ಇಂಡಿಯಾ ಸ್ಟಾರ್ ನಟಿಯರ ಪೈಕಿ ಕೇಳಿ ಬರುವ ಹೆಸರುಗಳಲ್ಲಿ ಮೊದಲನೆಯದು. ಆದರೆ ಈ ಮಟ್ಟದ ಖ್ಯಾತಿ ಗಳಿಸಲು ಅವರು ತುಳಿದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಸಕ್ಸಸ್ ಆಗಲು ಅಂದ ಹಾಗೂ ಪ್ರತಿಭೆ ಜೊತೆ ಅದೃಷ್ಟವೂ ಬೇಕು, ಈ ಅದೃಷ್ಟ ಪರೀಕ್ಷೆಯಲ್ಲಿ ಸಾಕಷ್ಟು ಬಾರಿ ಸೋತಿದ್ದರು ನಟಿ.

ಮೂಲತಃ ಬೆಂಗಳೂರಿನವರಾದ ಅನುಷ್ಕಾ ಶೆಟ್ಟಿ ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ನಂತರ ಮಾಡಲಿಂಗ್ ಹಾಗೂ ಬಣ್ಣದ ಲೋಕದ ಕಡೆಗೆ ಮನಸ್ಸು ಮಾಡಿದ್ದರು. ಕನ್ನಡವು ಸೇರಿ ಹಲವು ಭಾಷೆಗಳ ಆಡಿಶನ್ ಗಳಲ್ಲಿ ರಿಜೆಕ್ಟ್ ಆಗಿದ್ದ‌ ಇವರನ್ನು ಕೈಬೀಸಿ ಕರೆದಿದ್ದು ಟಾಲಿವುಡ್ ಅಂಗಳ. ಇಂದು ಟಾಲಿವುಡ್ ವಲಯದಲ್ಲಿ ಸ್ಟಾರ್ ನಟರ ಸಮವಾಗಿ ನೇಮ್, ಫೇಮ್, ಡಿಮ್ಯಾಂಡ್ ರಿಮಂಡರೇಷನ್ ಹೊಂದಿರುವ ಈಕೆ ಬಹುತೇಕ ಎಲ್ಲಾ ಸ್ಟಾರ್ ನಟರೊಡನೆ ಅಭಿನಯಿಸಿದ್ದಾರೆ.

WhatsApp Group Join Now
Telegram Group Join Now

ಅದರಲ್ಲೂ ಮಹಿಳಾ ಪ್ರಧಾನದ ಪಾತ್ರಗಳಿಗೆ ಜೀವ ತುಂಬ ಮೂಲಕ ಹೆಸರು ಮಾಡಿ ಇಂದು ಪ್ಯಾನ್ ಇಂಡಿಯಾ ನಾಯಕಿಯಾಗಿದ್ದಾರೆ. ಅನುಷ್ಕಾ ಸೋಶಿಯಲ್ ಮೀಡಿಯಾದಿಂದ ದೂರವಿದ್ದರೂ, ಈಕೆಯ ಕುರಿತ‌ಸುದ್ದಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಸಿನಿಮಾ ವಿಚಾರ ಮಾತ್ರವಲ್ಲ ವೈಯಕ್ತಿಕ ವಿಚಾರವಾಗಿ ಕೂಡ ಅನೇಕ ಸುದ್ದಿಗಳು ಚಾಲ್ತಿಯಲ್ಲಿರುತ್ತವೆ.

ಎಲ್ಲರೂ ಗಮನಿಸಿರುವಂತೆ ಜೀರೋ ಸೈಜ್ ಸಿನಿಮಾವಾದ (Zero size Movie) ಬಳಿಕ ನಟಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅದಲ್ಲದೆ ಸದಾ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ ಇವರ ತೂಕ ಕೂಡ ಹೆಚ್ಚಾಗುತ್ತಲೇ ಇದೆ, ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಬಹಳ ಗ್ಯಾಪ್ ತೆಗೆದುಕೊಂಡು ಕಳೆದ ವರ್ಷ ಮಿಸ್ಟರ್ ಅಂಡ್ ಮಿಸ್ ಪೋಲಿ ಶೆಟ್ಟಿ (Mr. & Ms. Polyshetty) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಬಳಿಕ ಯಾವುದೇ ಅಪ್ಡೇಟ್ ಇಲ್ಲ.

ಹೀಗಾಗಿ ನಟಿ ಚಿತ್ರರಂಗದಿಂದ ದೂರವಾಗಿ ಮದುವೆ ಮಕ್ಕಳು ಸಂಸಾರದ ಕಡೆ ಮುಖ ಮಾಡಿದ್ದಾರೆ ಎನ್ನೋದು ಅನೇಕರ ಊಹೆ. ಸಾಲದ್ದಕ್ಕೆ ಈಗ ಅನುಷ್ಕಾ ಶೆಟ್ಟಿ ಅವರು ಖ್ಯಾತ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ, ಇದಕ್ಕೆ ಕುಟುಂಬಸ್ಥರ ಒಪ್ಪಿಗೆ ಕೂಡ ಸಿಕ್ಕಿದೆ, ಶೀಘ್ರದಲ್ಲಿಯೇ ಮದುವೆ ಬಗ್ಗೆ ಅನೌನ್ಸ್ (Marriage rumours) ಕೂಡ ಆಗಲಿದೆ ಎನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಅಭಿಮಾನಿಗಳ ಆಸೆ ಬೇರೆ ಇದೆ. ಅನುಷ್ಕಾ ಜೊತೆಯಾಗಿ ಕಾಣಿಸಿಕೊಂಡ ಜೋಡಿಗಳಲ್ಲಿ ಪ್ರಭಾಸ್ ಹಾಗು ಅನುಷ್ಕಾ ಅವರ ಕಾಂಬಿನೇಷನ್ (Prabhas & Anushka) ಜನಪ್ರಿಯವಾಗಿದೆ.

ಇವರ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ವರ್ಕ್ ಆಗಿದೆ ಎನ್ನುವುದು ಇವರ ಸಿನಿಮಾ ಸಕ್ಸಸ್ ಗಳಿಂದ ಸಾಬೀತಾಗಿದೆ ಹಾಗಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರಿಬ್ಬರಿಗೂ, ಇಬ್ಬರ‌ ಅಭಿಮಾನಿಗಳಿಂದ ಇವರಿಬ್ಬರು ನಿಜ ಜೀವನದಲ್ಲೂ ಒಂದಾಗಬೇಕು ಎನ್ನುವ ಒತ್ತಾಯಗಳು ಇದೆ. ಸಾಕಷ್ಟು ವರ್ಷಗಳಿಂದ ಇವರಿಬ್ಬರು ಪ್ರೀತಿಯಲ್ಲಿ ಇದ್ದಾರೆ, ಡೇಟ್ ಮಾಡುತ್ತಿದ್ದಾರೆ ಇನ್ನಿತ್ತ್ಯಾದಿ ಸುದ್ದಿಗಳು ಹರದಾಡುತ್ತಲೇ ಇದ್ದರೂ ಇದುವರೆಗೆ ಸ್ಪಷ್ಟೀಕರಣ ಯಾರ ಕಡೆಯಿಂದಲೂ ಸಿಕ್ಕಿಲ್ಲ ಮತ್ತು ಇವರಿಬ್ಬರೂ ಇನ್ನು ಮದುವೆಯಾಗದೆ ಉಳಿದಿರುವುದರಿಂದ ಒಬ್ಬರಿಗೊಬ್ಬರು ಕಾಯುತ್ತಿದ್ದಾರೆ ಎಂದೇ ಅನೇಕರ ಅಭಿಪ್ರಾಯ ಅಭಿಪ್ರಾಯ.

ಇತ್ತೀಚಿಗೆ ಸ್ಟಾರ್ ನಟಿಯರು ಸಕ್ಸಸ್ ಸಿಕ್ಕ ಮೇಲೆ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಒಬ್ಬ ಯಶಸ್ವಿ ಉದ್ಯಮಿಯೊಬ್ಬರ ಕೈ ಹಿಡಿದು ಸೆಟಲ್ ಆಗುವುದು ಟ್ರೆಂಡ್ ನಲ್ಲಿದೆ, ಹಲವು ಉದಾಹರಣೆಗಳನ್ನು ಕಂಡಿದ್ದೇವೆ. ನಟಿ ನಿರ್ಧಾರವೂ ಇದೇ ಆಗಿದೆಯಾ ಕಾದು ನೋಡೋಣ.

Leave a Comment