Appu
ಕರುನಾಡಿನ ಮನೆ ಮಗ, ನಗು ಮುಖದ ಒಡೆಯ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ (Puneeth Rajkumar) ಮೇಲೆ ಅಭಿಮಾನಿಗಳಿಗಿರುವ ಪ್ರೀತಿ ಎಂಥದ್ದು ಎಂದು ಈಗಾಗಲೇ ನಾವು ನೂರಾರು ಉದಾಹರಣೆಗಳ ಮೂಲಕ ಕಂಡುಕೊಂಡಿದ್ದೇವೆ.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇನ್ನು ವಿಶೇಷವಾಗಿ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ನಟನ ಮೇಲೆ ಇರುವ ಪ್ರೀತಿಯನ್ನು ಭಕ್ತಿಯಾಗಿ ಬದಲಾಯಿಸಿಕೊಂಡು ಪುನೀತ್ ರಾಜಕುಮಾರ್ ರವರಿಗಾಗಿ ಗುಡಿ ಕಟ್ಟಿರುವ ಉದಾಹರಣೆಯ ಬಗ್ಗೆ ಹೇಳುತ್ತಿದ್ದೇವೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪುನೀತ್ ಅವರ ಅಭಿನಯ ಹಾಗೂ ವ್ಯಕ್ತಿತ್ವ ನೋಡಿ ಅಭಿಮಾನಿಯಾಗದವರಿಲ್ಲ.
ಅದೇ ರೀತಿಯಾಗಿ ಹಾವೇರಿ ಜಿಲ್ಲೆಯ ಎಲಗಚ್ಚ ಎನ್ನುವ ಗ್ರಾಮದಲ್ಲಿಯೂ ಒಬ್ಬ ಅಭಿಮಾನಿ ಇದ್ದಾನೆ. ಈತ ಪುನೀತ್ ಅವರ ಮೇಲೆ ಇರುವ ಅಪಾಯ ಪ್ರೀತಿಯಿಂದ ತನ್ನ ಮನೆ ಮುಂದೆಯೇ ಈ ದೇವರಿಗಾಗಿ ದೇವಸ್ಥಾನ (Temple) ಕಟ್ಟಿಸಿದ್ದಾನೆ. ಸಾಮಾನ್ಯವಾಗಿ ಸರ್ಕಲ್ ಗಳಲ್ಲಿ ಅಥವಾ ಊರಿನ ಒಂದು ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಿರ್ಧಾರಕ್ಕೆ ಬರುವುದು ಸಹಜ.
ಆದರೆ ಮನೆ ಮುಂದೆ ಈ ರೀತಿ ಮಾಡಲು ಕಾರಣ ಏನು ಎಂದು ಕೇಳಿದಾಗ ಅವರ ಕುಟುಂಬಸ್ಥರು ಕೊಟ್ಟ ಮಾಹಿತಿ ಏನೆಂದರೆ ಚಿಕ್ಕ ವಯಸ್ಸಿನಿಂದಲೂ ಕೂಡ ಪುನೀತ್ ರಾಜಕುಮಾರ್ ಅವರು ಎಂದರೆ ಪ್ರಕಾಶ್ ಎನ್ನುವ ಈತನಿಗೆ ಬಹಳ ಇಷ್ಟವಂತೆ. ನಿಮಗೆ ದೇವರು ಹೇಗೋ ಹಾಗೆ ನನಗೆ ಪುನೀತ್ ದೇವರು ನಾನು ಕೂಡ ಸಾಧ್ಯವಾದಷ್ಟು ಪುನೀತ್ ರಂತೆ ಅವರು ನಡೆದ ಹಾದಿಯಲ್ಲಿ ನಡೆಯ ಬಯಸುತ್ತೇನೆ ಇದಕ್ಕೆ ನನಗೆ ಸ್ಪೂರ್ತಿಯಾಗಿರುವ ದೇವರು ಪ್ರತಿನಿತ್ಯವೂ ಪೂಜಿಸಲ್ಪಡಬೇಕು.
ಸರ್ಕಲ್ ನಲ್ಲಿ ಮಾಡಿದರೆ ಜನ ಉಗುಳುತ್ತಾರೆ, ಕುಡುಕರು ಏನಾದರೂ ಹಾನಿ ಮಾಡಿಬಿಡುತ್ತಾರೆ. ಹಾಗಾಗಿ ದಿನಪೂರ್ತಿ ನಮ್ಮ ಎದುರಿಗೆ ಇರಲಿ ನಾವು ಕಂಡಾಗಲೆಲ್ಲಾ ಕೈ ಮುಗಿವಂತಿರಲಿ, ಮನೆ ಬಳಿಗೆ ಮಾಡುತ್ತೇನೆ ಎಂದು ಬಡವರಾಗಿದ್ದರು ಕೂಡ ತಮಗಿರುವ ಅನುಕೂಲತೆಯಲ್ಲಿ ಚಿಕ್ಕದಾಗಿ ಗುಡಿ ಮಾಡಿದ್ದಾರೆ.
ಈ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲು ಅಪ್ಪು ಅವರ 65 ಇಂಚಿನ ಕಂಚಿನ ಪ್ರತಿಮೆಗೆ ಆರ್ಡರ್ ಕೊಡಲಾಗಿದೆಯಂತೆ. ಸದ್ಯಕ್ಕೆ ಈಗ ಇಲ್ಲಿ ಸುತ್ತಲಿನ ಗೋಡೆ ಮೇಲೆ ಪುನೀತ್ ರಾಜಕುಮಾರ್ ಅವರ ಬಾಲ್ಯದ ಹಾಗೂ ಸಿನಿಮಾಗಳ ಫೋಟೋಗಳನ್ನು ಕಾಣಬಹುದು. ಹಾಗೆ ನಗುಮುಖದ ಒಡೆಯ, ಬೆಟ್ಟದ ಹೂವಿಗೆ ಬೆಲೆ ಜಾಸ್ತಿ ಇತ್ಯಾದಿ ಸ್ಲೋಗನ್ ಗಳನ್ನು ಕೂಡ ಬರೆಯಲಾಗಿದೆ.
ಪುನೀತ್ ಜೊತೆ ತಂದೆ ಡಾ. ರಾಜಕುಮಾರ್ ತಾಯಿ ಪಾರ್ವತಮ್ಮ ರವರ ಫೋಟೋವನ್ನು ಕೂಡ ಸೇರಿಸಿ ಇಲ್ಲಿ ಹಾಕಲಾಗಿದೆ. ಕರ್ನಾಟಕದ ಹಳದಿ ಮತ್ತು ಕೆಂಪು ಬಣ್ಣವನ್ನು ದೇವಸ್ಥಾನಕ್ಕೆ ಹೊಡೆಸಲಾಗಿದೆ. ಈ ದೇವಸ್ಥಾನದ ಉದ್ಘಾಟನೆಗೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲು ಆಸೆ ಪಟ್ಟಿದ್ದಾರಂತೆ ಇದಕ್ಕಾಗಿ ಬೆಂಗಳೂರಿಗೆ ಹೋಗಿ ಅವರನ್ನು ಸಂಪರ್ಕಿಸಿ ಇನ್ವಿಟೇಶನ್ ಕೂಡ ಕೊಡುವ ಯೋಜನೆ ಇದೆಯಂತೆ.
ಇವರ ಈ ಕಾರ್ಯಕ್ಕೆ ತಾಯಿ ಹಾಗೂ ಮಡದಿ ಇಬ್ಬರು ಕೂಡ ಸಾತ್ ನೀಡಿದ್ದಾರೆ. ಪ್ರಕಾಶ್ ಅವರು ಕೂಡ ಕಲಾವಿದರಾಗಿದ್ದು ಏನೇ ಕಾರ್ಯ ಮಾಡಿದರೂ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿಯೇ ಮಾಡುತ್ತಾರಂತೆ. ಪುನೀತ್ ರಾಜ್ಶಕುಮಾರ ಡ್ಯಾನ್ಸ್ ಕ್ಲಾಸ್, ಪುನೀತ್ ರಾಜಕುಮಾರ್ ಕಲಾತಂಡ ಹೀಗೆ ಸಂಪೂರ್ಣವಾಗಿ ಪುನೀತ್ ಮಯವಾಗಿದ್ದಾರೆ.
ಈ ಅಪ್ಪಟ ಅಪ್ಪು ಅಭಿಮಾನಿ. ಇವರ ಈ ಕಾರ್ಯಕ್ಕೆ ಇನ್ನಷ್ಟು ಶಕ್ತಿ ಬರಲಿ ಅವರ ಕನಸು ನೆರವೇರಲಿ ಇದೇ ರೀತಿಯಾಗಿ ಇನ್ನಷ್ಟು ಜನರಿಗೆ ಪುನೀತ್ ಬದುಕು ಸ್ಪೂರ್ತಿ ಆಗಲಿ ಎಂದು ನಾವು ಬಯಸೋಣ.