Bigboss: ಬಿಗ್ ಬಾಸ್ ಸೀಸನ್ ನಿರೂಪಣೆಗೆ ಸುದೀಪ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.?

Bigboss

ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಪ್ರತಿನಿತ್ಯ ಹೆಚ್ಚು ಚರ್ಚೆ ಆಗುತ್ತಿರುವ ವಿಷಯಗಳಲ್ಲಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ (Bigboss) ಕೂಡ ಒಂದು. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯೋಮಾನದವರನ್ನು ಹಿಡಿದಿಟ್ಟಿರುವ ಈ ರಿಯಾಲಿಟಿ ಶೋ ಇಲ್ಲಿಯವರೆಗೂ 10 ಸೀಜನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ ಹಾಗೂ ಎರಡು ವಾರಗಳ ಹಿಂದೆ 11ನೇ ಸೀಸನ್ ಕೂಡ ಆರಂಭವಾಗಿದೆ.

ಈ ಮೊದಲೇ ಹೇಳಿದಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಪಾರ ಅಭಿಮಾನಿ ಬಳಗವಿದೆ. ಪ್ರತಿಯೊಬ್ಬರು ಭಿನ್ನ ವಿಭಿನ್ನ ಕಾರಣದಿಂದ ಕಾರ್ಯಕ್ರಮಕ್ಕೆ ಮನಸೋತಿದ್ದಾರೆ ಇದರಲ್ಲಿ ಈ ಕಾರ್ಯಕ್ರಮದ ಸಾರಥ್ಯವನ್ನು ಕಿಚ್ಚ ಸುದೀಪ್ (Kicha Sudeep) ವಹಿಸಿದ್ದಾರೆ ಎನ್ನುವ ಕಾರಣವೂ ಕೂಡ ಸೇರಿದೆ.

WhatsApp Group Join Now
Telegram Group Join Now

ಜಗತ್ತಿನ ಬಹುತೇಕ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ ಹಾಗೂ ಎಲ್ಲಾ ಬಿಗ್ ಬಾಸ್ ನಲ್ಲೂ ಕೂಡ ಆಯಾ ಭಾಗದ ಸ್ಟಾರ್ ಗಳೇ ಕಾರ್ಯಕ್ರಮದ ನಿರೂಪಣೆ ಮಾಡುವುದನ್ನು ಕಾಣಬಹುದು. ಭಾರತದ ಮಟ್ಟಿಗೆ ಹೇಳುವುದಾದರೆ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಹಾಗೂ ದಕ್ಷಿಣ ಭಾರತದ ರಿಯಾಲಿಟಿ ಶೋಗಳು ಹೆಚ್ಚು ಪ್ರಖ್ಯಾತಿ ಹೊಂದಿವೆ.

ಆದರೆ ಆಗಾಗ ನಿರೂಪಕರು ಬದಲಾಗಿದ್ದಾರೆ ಕನ್ನಡದಲ್ಲಿ ಮಾತ್ರ ಈ ವಿಚಾರದಲ್ಲಿ ಸುದೀಪ್ ಅವರನ್ನೇ ಬಿಗ್ ಬಾಸ್ ಎಂದು ನಾವು ಒಪ್ಪಿಕೊಳ್ಳೋ ಅಷ್ಟರ ಮಟ್ಟಕ್ಕೆ ಅವರ ನಿರೂಪಣಾ ಜವಾಬ್ದಾರಿಗೆ ಪ್ರೇಕ್ಷಕರು ಮಾರುಹೋಗಿದ್ದರು. ಆದರೆ ಈ ಬಾರಿಯ ಸೀಸನ್ ಆರಂಭಕ್ಕೂ ಮುನ್ನ ಕನ್ನಡದಲ್ಲೂ ನಿರೂಪಕರು ಬದಲಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿ ಕಾರ್ಯಕ್ರಮ ಲಾಂಚ್ ಆಗುವವರೆಗೂ ಕೂಡ ಈ ಬಗ್ಗೆ ಗೊಂದಲವಿತ್ತು.

ಆದರೆ ಕಿಚ್ಚ ಸುದೀಪ್ ಅವರೇ ಗ್ರಾಂಡ್ ಓಪನಿಂಗ್ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಇದೇ ತಮ್ಮ ಕೊನೆ ಸೀಸನ್ ಎಂದು ಘೋಷಿಸಿಕೊಂಡು ಎಲ್ಲರಿಗೂ ಶಾ’ಕ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಈ ಹಿಂದೆ ಅನೇಕ ಬಾರಿ ಪತ್ರಿಕಾಗೋಷ್ಠಿಗಳಲ್ಲಿ ಈ ಬಗ್ಗೆ ಪ್ರಶ್ನಿಸಲಾಗಿದ್ದರು, ಸುದೀಪ್ ಅವರು ಮಾತ್ರ ತಮ್ಮ ಜಾಣತನದ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದರು.

ಆದರೀಗ ಈ ಬಗ್ಗೆ ಬಲವಾದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಏನೆಂದರೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ವೇಳೆಯಲ್ಲಿ 5 ಸೀಸನ್ ಗಳಿಗೂ ಒಟ್ಟಿಗೆ ಸುದೀಪ್ ಅವರು ಕಾಂಟಾಕ್ಟ್ ಮಾಡಿಕೊಂಡಿದ್ದರಂತೆ. ಬರೋಬ್ಬರಿ 20 ಕೋಟಿಗಳಿಗೆ ಅಂದರೆ ಪ್ರತಿ ಸೀಜನ್ ಗೆ 4 ಕೋಟಿಗಳಂತೆ ಈ ಡೀಲ್ ಆಗಿತ್ತಂತೆ.

ನಂತರ ದಿನಗಳಲ್ಲಿ ಬಿಗ್ ಬಾಸ್ ಖ್ಯಾತಿ ಬೆಳೆಯಿತು, TaRP ಕೂಡ ಹೆಚ್ಚಾಯ್ತು ಇದಕ್ಕೆಲ್ಲಾ ಕಿಚ್ಚ ಸುದೀಪ್ ಅವರು ಕೂಡ ಕಾರಣರು. ಹೀಗಾಗಿ ಕಾಲ ಕಾಲಕ್ಕೆ ತಕ್ಕಂತೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರಂತೆ. ನಂತರದ ದಿನಗಳಲ್ಲಿ ಪ್ರತಿ ಸೀಸನ್‌ಗೆ ಕಾಂಟ್ಯಾಕ್ಟ್ ಮಾಡಿಕೊಂಡು ಈ ಬಾರಿಯ 11ನೇ ಸೀಸನ್ ಗೆ 8 ಕೋಟಿ ಸಂಭಾವನೆ ಪಡೆದಿದ್ದರು ಎನ್ನುವ ಮಾಹಿತಿಗಳು ತಿಳಿದು ಬಂದಿದೆ.

ಆದರೆ ಇನ್ನು ಮುಂದೆ ಸುದೀಪ್ ಇಲ್ಲದ ಬಿಗ್ ಬಾಸ್ ಸಪ್ಪೆ ಸಪ್ಪೆ ಎನಿಸದೆ ಇರದು, ಬಾದ್ ಷಾ‌ನಿಲ್ಲದ ಬಿಗ್ ಮನೆಯ ಆಟ ಹೇಗಿರಲಿ ಕಾದು ನೋಡೋಣ ಸುದೀಪ್ ಅವರ ಬದಲು ಬೇರೆ ಯಾವ ಸ್ಟಾರ್ ಕಾರ್ಯಕ್ರಮ ನಿರ್ವಹಿಸಿದರೆ ನಿಮಗೆ ಇಷ್ಟವಾಗುತ್ತದೆ ಅನ್ನೋದನ್ನ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Comment