Bigboss
ಬಿಗ್ ಬಾಸ್ ಸೀಸನ್ 11 (Bigboss S11) ಕಾರ್ಯಕ್ರಮವನ್ನು ಆರಂಭದಲ್ಲಿ ಅನೇಕರು ಸಪ್ಪೆ ಅನ್ನುತ್ತಲಿದ್ದರು. ಆದರೆ ಈಗ ಮನೆ ಬಹಳ ಸದ್ದು ಗದ್ದಲದಿಂದ ಕೂಡಿದೆ. ಮೊದಲ ವಾರವಾಗಿರುವುದರಿಂದ ಮನೆ ತುಂಬಾ ಜನ, ಪರಸ್ಪರ ಮಾತುಕತೆ, ತಮಾಷೆ, ಹರಟೆ ಎಲ್ಲವು ಇರುತ್ತದೆ. ಅದರಲ್ಲಿ ಈಗಾಗಲೇ ಪರಿಚಯವಿದ್ದ ಅನೇಕರು ಬಿಗ್ ಬಾಸ್ ಮನೆಯಲ್ಲಿ ಜೊತೆಗೆ ಇರುವುದರಿಂದ ಇನ್ನೂ ಎಂಟರ್ಟೈನ್ಮೆಂಟ್ ಎಕ್ಸ್ ಪೆಕ್ಟ್ ಮಾಡಲಾಗಿತ್ತು ಆದರೀಗ ಶೋ ಆರಂಭದ ವಾರದಿಂದಲೆ ಜಗಳದ ಸದ್ದು ಜೋರಾಗಿದೆ.
ಅದರಲ್ಲೂ ಲಾಯರ್ ಜಗದೀಶ್ ಅವರ ವಾಯ್ಸ್ ಹೆಚ್ಚಾಗಿ ಕೇಳಿ ಬರುತ್ತಿದ್ದು ಒಬ್ಬೊಬ್ಬರಾಗಿ ಮನೆಯಲ್ಲಿ ಎಲ್ಲರ ಜೊತೆ ನಿಷ್ಠೂರ ಮಾಡಿಕೊಳ್ಳುತ್ತಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ವಿಟ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ಹೋಗುವ ತವಕ ಎಷ್ಟಿರುತ್ತದೆಯೋ 100 ದಿನಗಳು ಕೂಡ ಇದ್ದು ಟ್ರೋಫಿ ಗೆದ್ದು ಬರಲು ಬೇಕಾದ ಉತ್ಸಾಹ, ಸ್ಥೈರ್ಯ ಪ್ರತಿಕ್ಷಣವೂ ಇರಬೇಕು. ಅಂತಹ ಸ್ಪರ್ಧೆ ಮಾತ್ರ ಗೆಲ್ಲುವುದಕ್ಕೆ ಸಾಧ್ಯ ಆದರೆ ದಿನ ಕಳೆದಂತೆ ಮನೆಯಲ್ಲಿ ಎದುರಾಗುವ ಸಂದರ್ಭಗಳ ಒತ್ತಡದಿಂದ ಫ್ರಸ್ಟೇಟ್ ಆಗಿ ಹೊರ ಬರಬೇಕು ಎಂದಿಕೊಳ್ಳುವುದು ನಿಜ.
ಈಗಾಗಲೇ ಹಲವು ಸೀಸನ್ ಗಳಲ್ಲಿ ಈ ರೀತಿ ವರ್ತಿಸಿರುವ ಕಂಟೆಸ್ಟ್ ಕಳಗಳನ್ನು ನೋಡಿದ್ದೇವೆ. ಕಾಂಪೌಂಡ್ ಹಾರಿ ಬಿಡುತ್ತೇನೆ ಎಂದು ಹೇಳುತ್ತಿದ್ದ ಗುರುಪ್ರಸಾದ್ ಅವರಿಂದ ಹಿಡಿದು ಮತ್ತೊಬ್ಬರು ಕಡಿಮೆ ವೋಟ್ ಬಂದು ಎಲಿಮಿನೇಟ್ ಆಗೋದನ್ನು ತಪ್ಪಿಸಿ ತಾನೇ ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿ ಆಚೆ ಬಂದಿದ್ದ ವೈ ಜಯಂತಿವರೆಗೆ ಅನೇಕ ಉದಾಹರಣೆಗಳಿವೆ.
ಪ್ರತಿ ಸೀಸನ್ ನಲ್ಲಿ ಕೂಡ ಈ ಮನಸ್ಥಿತಿಯ ಕಂಟೆಸ್ಟೆಂಟ್ಗಳು ಇರುತ್ತಾರೆ. ಯಾವುದೇ ಒಂದು ಸನ್ನಿವೇಶ ಎದುರಿಸುವ ಸಂದರ್ಭ ಈ ರೀತಿ ಇಲ್ಲಿರುವುದಕ್ಕಿಂತ ಶೋ ಬಿಟ್ಟು ಆಚೆ ಹೋಗಿ ನೆಮ್ಮದಿಯಾಗಿ ಇರುವುದೇ ವಾಸಿ ಎನಿಸಿಬಿಡುತ್ತದೆ, ಅದೇ ಬಿಗ್ ಬಾಸ್. ಈ ಆಟಕ್ಕೆ ಒಂದೇ ವಾರಕ್ಕೆ ಲಾಯರ್ ಜಗದೀಶ್ ಅವರು ಸುಸ್ತಾಗಿದ್ದಾರೆ.
ಆದರೆ ಹೊರ ಬರವ ನಿರ್ಧಾರ ಮಾಡಿದ ಮೇಲೆ ಏಕಾಏಕಿ ಬಿಗ್ ಬಾಸ್ ಹಾಗೂ ಸುದೀಪ್ ಅವರನ್ನು ಟಾರ್ಗೆಟ್ ಮಾಡಿ ಸ್ಟೇಟ್ಮೆಂಟ್ ಗಳನ್ನು ನೀಡಿದ್ದಾರೆ.ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾನು ಹೊರಗೆ ಹೋಗುತ್ತೇನೆ ನನಗೆ ಇಲ್ಲಿ ಇರಲು ಇಷ್ಟ ಇಲ್ಲ ನೀವು ಕೊಡುವ ಗಂಜಿ ನೀರು ಕುಡಿಯುವುದಿಲ್ಲ,
ನಾನು ಮನಸ್ಸು ಮಾಡಿದರೆ ಈಗಿನ ಈಗಲೇ ಇಲ್ಲಿಗೆ ಹೆಲಿಕ್ಯಾಪ್ಟರ್ ತರಿಸಿ ಹೋಗುತ್ತೇನೆ, ಹೋಗಲು ಬಿಡದಿದ್ದರೆ ಈ ಗೋಡೆ ಬೇಕಾದರೂ ಹೊಡೆದು ಹಾಕಿಬಿಡುತ್ತೇನೆ. ಕರ್ನಾಟಕದ ಗೌರ್ಮೆಂಟ್ ಶೇಕ್ ಮಾಡುವ ವ್ಯಕ್ತಿ ನಾನು. ನನ್ನ ಬಗ್ಗೆ ಗೊತ್ತಾ? ಬಿಗ್ ಬಾಸ್ ಪ್ರೊಗ್ರಾಮ್ ಹಾಳು ಮಾಡದೇ ಬಿಡುವುದಿಲ್ಲ ನಾನು ಈ ಶೋ ಹಾಳ್ ಮಾಡದಿದ್ದರೆ ನನ್ನ ಹೆಸರು ಬೇರೆ ಇಟ್ಟುಕೊಳ್ಳಿ. ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಅದೇಗೆ ಓಡಿಸುತ್ತೀರಾ? ನೋಡುತ್ತೇನೆ.
ಇಲ್ಲಿಗೆ ಯಾರು ಕಾಲಿಡಬಾರದು ಹಾಗೆ ಮಾಡುತ್ತೇನೆ. ಹೊರಗೆ ಹೋದ ಮೇಲೆ ಬಿಗ್ ಬಾಸ್ ಬಗ್ಗೆ ಎಕ್ಸ್ಪೋಸ್ ಮಾಡುತ್ತೇನೆ, ಎಲ್ಲಾ ಸತ್ಯವನ್ನು ರಿವೀಲ್ ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ ಹಾಗೂ ಸ್ಪರ್ಧಿಗಳಿಗೂ ನೀವು ಇನ್ವಾಲ್ ಆಗಿರುವ ಮಾಫಿಯಗಳನ್ನು ಬಯಲುಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಇದೀಗ ಬಲವಾದ ಮೂಲಗಳಿಂದ ಬಂದ ಮಾಹಿತಿ ಪ್ರಕಾರವಾಗಿ ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಮನೆಯಿಂದ ಹೊರ ಬಂದಿದ್ದಾರಂತೆ. ಮುಂದೆನಾಗುತ್ತದೆ ಕಾದು ನೋಡೋಣ.