Bigboss: ಕನ್ನಡ ಬಿಗ್‌ಬಾಸ್‌ಗೆ ಸೆಡ್ಡು ಹೊಡೆಯಲು ಬರ್ತಿದೆ ಮತ್ತೊಂದು ಹೊಸ ರಿಯಾಲಿಟಿ ಶೋ.!

Bigboss

ಬಿಗ್ ಬಾಸ್ (Bigboss) ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳಲ್ಲಿ ನಡೆಯುವ ಒಂದು ಜನಪ್ರಿಯ ಟಿವಿ ರಿಯಾಲಿಟಿ ಶೋ. ಕನ್ನಡದಲ್ಲಿ ಬಿಗ್ ಬಾಸ್ ಈವರೆಗೆ 10 ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು 11ನೇ ಸೀಸನ್ ಆರಂಭವಾಗಿದೆ. ಹೀಗಿದ್ದರೂ ಜನ ಅದೇ ಕಾತುರತೆ ಉತ್ಸಾಹ ಹಾಗೂ ನಿರೀಕ್ಷೆಯಿಂದ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.

ಮನೆಯೊಂದರಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಇಷ್ಟಪಡುವ ಒಂದೇ ಒಂದು ಕಾರ್ಯಕ್ರಮ ಎಂದರೆ ಇದು ಬಿಗ್ ಬಾಸ್. ಕಾರಣ ಇದು ರಿಯಲ್ ರಿಯಾಲಿಟಿ ಶೋ ಇಲ್ಲಿ ವ್ಯಕ್ತಿಗಳ ನಡುವಿನ ಆಟ ಎನ್ನುವುದಕ್ಕಿಂತ ವ್ಯಕ್ತಿತ್ವಗಳ ಹೋರಾಟವಾಗಿರುವುದರಿಂದ ಯಾವ ವ್ಯಕ್ತಿ ಯಾವ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸುತ್ತಾನೆ.

WhatsApp Group Join Now
Telegram Group Join Now

ಹೇಗೆ ಬದಲಾಗುತ್ತಾನೆ ಎಂಬುದನ್ನು ಮೂರನೇಯವಾಗಿ ಹೊರಗಿನಿಂದ 24*7 ಕಾಣಬಹುದಾದರಿಂದ ಇದಕ್ಕಿಂತಲೂ ರಿಯಾಲಿಟಿ ಇರುವ ಶೋ ಬರಲಾಗುವುದಿಲ್ಲ ಎಂದೊಪ್ಪಬಹುದಾಗಿದೆ. ಹೀಗಾಗಿ ಇದನ್ನು ರಿಯಾಲಿಟಿ ಶೋಗಳ ಸರದಾರ ಎಂದು ಕರೆಯುವುದುಬಿಗ್ ಬಾಸ್ ಆರಂಭವಾದರೆ ಸಾಕು ಉಳಿದ ಚಾನೆಲ್‌ ಗಳ TRP ಆ ಸಮಯದಲ್ಲಿ ಬಿದ್ದು ಹೋಗುತ್ತದೆ ಎನ್ನುವ ಮಾತು ಇದೆ.

ಇದಕ್ಕೆ ಟಕ್ಕರ್ ಕೊಡುವುದಕ್ಕಾಗಿ ಹೊಸ ಧಾರಾವಾಹಿಗಳು ಹೊಸ ಬಗೆಯ ಕಾರ್ಯಕ್ರಮಗಳನ್ನು ಕೂಡ ಇತರೆ ಚಾನೆಲ್ ಗಳು ಲಾಂಚ್ ಮಾಡುತ್ತವೆ. ಅದೇ ರೀತಿಯಾಗಿ ಈಗ ಬಿಗ್ ಬಾಸ್ ಆರಂಭವಾಗುವ ಸಮಯಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿಯೂ (Star Suvarna) ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳು ಹಾಗೂ ಸುವರ್ಣ ವಾಹಿನಿಯ ಜನ ಮೆಚ್ಚಿದ ಧಾರಾವಾಹಿ ನಟ ನಟಿಯರನ್ನು ಒಟ್ಟುಗೂಡಿಸಿ ಸುವರ್ಣ ಸೆಲೆಬ್ರಿಟಿ ಲೀಗ್ (SCL) ಎನ್ನುವ ಕಾರ್ಯಕ್ರಮ ನಡೆಸಲಾಗುತ್ತಿದೆ.

https://www.instagram.com/reel/DAlpHCpifLt/?igsh=anRpc2kwc3YzaTFp

ಈಗ ಮತ್ತೊಂದು ಜನಪ್ರಿಯ ವಾಹಿನಿಯಾದ ಜೀ ಕನ್ನಡವೂ (Zee Kannada) ಕೂಡ ಬಿಗ್ಗೆಸ್ಟ್ ಎಂಟರ್ಟೈನ್ಮೆಂಟ್ (Biggest Entertainment) ಎನ್ನುವ ಹೆಸರಿನಲ್ಲಿ ಹೊಸ ರಿಯಾಲಿಟಿ ಶೋ ನಡೆಸಲು ಸಿದ್ಧತೆ ಮಾಡಿದೆ, ಮತ್ತು ವಾಹಿನಿಯ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಪ್ರೊಮೋ ಶೇರ್ ಮಾಡಿಕೊಂಡು ಬರುತ್ತಿದೆ.

ಕಿರುತೆರೆಯ ಅತಿದೊಡ್ಡ ಎಂಟರ್ಟೈನ್ಮೆಂಟ್ ಶೋ, ಇದು ಮನರಂಜನೆಯ ಹೊಸ ಚಾಪ್ಟರ್ ಎಂದು ಅಡಿಬರಹದೊಂದಿಗೆ ಹಂಚಿಕೊಂಡಿದೆ. ಕೆಲವೇ ಸಮಯದಲ್ಲಿ ಬಹಳಷ್ಟು ಜನರನ್ನು ತಲುಪಿರಿರುವ ಇದಕ್ಕೆ ತರಹೇವಾರಿ ಕಾಮೆಂಟ್ ಗಳು ಬರುತ್ತಿವೆ. ಬಹುತೇಕರು ಇದನ್ನು ಬಿಗ್ ಬಾಸ್ ಕಾರ್ಯಕ್ರಮದ TRP ಗೆ ಕಾಂಪಿಟೇಶನ್ ಕೊಡಲು ಏರ್ಪಡಿಸಿರುವ ರಿಯಾಲಿಟಿ ಶೋ ಎಂದೇ ಊಹೆ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.

ಬಿಗ್ ಬಾಸ್ ಕಿಂತಲೂ ದೊಡ್ಡ‌ ರಿಯಾಲಿಟಿ ಶೋ ಯಾವುದಿದೆ ಎಂದು ಇನ್ನೂ ಕೆಲವರು ಕೇಳುತ್ತಿದ್ದಾರೆ ಜೀ ಕನ್ನಡ ವಾಹಿನಿಯ ಕಾಮಿಡಿ ಶೋ ಅಥವಾ ಕಾಮಿಡಿ ಪ್ರೀಮಿಯಂ ಲೀಗ್ ಇದೇ ಇರಬಹುದೆಂದು ಕೆಲವರು ಊಹಿಸಿದರೆ ಇನ್ನು ಕೆಲವರು ಈ ಹಿಂದೆ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದ ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಇಂಡಿಯನ್ ಇಂತಹ ಶೋ ಗಳನ್ನು ಮಾಡಿದರೆ ಮಾಡಿ ಎನ್ನುವ ಸಲಹೆ ನೀಡುತ್ತಿದ್ದಾರೆ.

ಈ ಪೈಕಿ ಬಹುತೇಕರ ಅಭಿಪ್ರಾಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಕಾರ್ಯಕ್ರಮವೇ ಸಾಟಿ ಮತ್ತು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈ ಬಗ್ಗೆ ಅಟೆಂಶನ್ ಸಿಗಲು ಕಾರ್ಯಕ್ರಮದ ರೂಪುರೇಷೆಯಷ್ಟೇ ಸುದೀಪ್ ಅವರು ಅದರ ಸಾರಥ್ಯ ವಹಿಸಿರುವುದು ಕಾರಣವಾಗಿದೆ. ಹೀಗಾಗಿ ಯಾವುದೇ ಕಾರ್ಯಕ್ರಮ ಬಂದರು ಇದಕ್ಕೆ ಎದುರು ನಿಲ್ಲಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಹಾಗಾದರೆ ಈ ರಿಯಾಲಿಟಿ ಶೋ ಕಥೆ ಏನು? ಕಾದು ನೋಡೋಣ…

Leave a Comment