Bigboss
ಲಾಯರ್ ಜಗದೀಶ್ (Lawyer Jagadeesh) ಈ ಬಾರಿಯ ಬಿಗ್ ಬಾಸ್ ಸೀಸನ್ 11 (Bigboss S11) ಕಂಟೆಸ್ಟೆಂಟ್. ಇವರನ್ನು ಮೊದಲ ದಿನದಂದು ನೋಡಿದಾಗಲೇ ಈ ಹಿಂದೆ ಬಿಗ್ ಬಾಸ್ ಸ್ಪರ್ದಿಯಾಗಿದ್ದ ಪ್ರಶಾಂತ್ ಸಂಬರ್ಗಿ ಅವರೊಂದಿಗೆ ಹೋಲಿಸಿದ್ದರು. ಹೆಚ್ಚು ಕಡಿಮೆ ಇವರಿಬ್ಬರ ವ್ಯಕ್ತಿತ್ವ, ವರ್ತನೆ ಒಂದೇ ರೀತಿ ತೋರಿಸುತ್ತಿತ್ತಾದರೂ ದಿನ ಕಳೆದಂತೆ ಲಾಯರ್ ಜಗದೀಶ್ ರವರು ತಮ್ಮ ಅಸಲಿ ಆಟ ಶುರು ಮಾಡಿದ್ದಾರೆ.
ಇಲ್ಲಿ ಎಲ್ಲರ ಓಟ ಗೆಲುವಿನ ಕಡೆಗೇ ಆದರೂ ಗೆಲ್ಲುವುದಕ್ಕೆ ಬಹುತೇಕರು ಆರಿಸಿಕೊಳ್ಳುವುದು ಮಾರ್ಗ ವಿಭಿನ್ನ. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯಬೇಕು ಎಂದರೆ ವಿನಾಕಾರಣ ಜಗಳ ತೆಗೆದು, ಕಡ್ಡಿನಾ ಗುಡ್ಡೆ ಮಾಡಿ ಎಲ್ಲರಿಗೂ ಕಿರಿಕಿರಿ ಮಾಡಬೇಕು ಎಂಬ ತಪ್ಪು ಅಭಿಪ್ರಾಯ ಅನೇಕರಲ್ಲಿದೆ ಆದರೆ ಜಗದೀಶ್ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ ಬಾಸ್ ಗೆ ಓಪನ್ ಚಾಲೆಂಜ್ ಹಾಕುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ನಾನು ನಿಮ್ಮ ಶೋ ಹಾಳು ಮಾಡದೆ ಬಿಡುವುದಿಲ್ಲ, ನಾನು ಈ ರೀತಿ ಮಾಡದೆ ಹೋದರೆ ನನ್ನ ಹೆಸರಲ್ಲೇ ಬೇರೆ ಇಟ್ಟುಕೊಳ್ಳಿ ಎಂದು ಧಮ್ಕಿ ಹಾಕಿದ್ದಾರೆ. ನನಗೆ ನೀವು ಹೇಳಿದ ಹಾಗೆ ಇರಲು ಬರುವುದಿಲ್ಲ, ನಾನು ಗಂಜಿ ನೀರು ಕುಡಿಯುವುದಿಲ್ಲ, ನಾನು ಹೊರಗೆ ಹೋಗಬೇಕು ಕಳಿಸಿ. ಈಗಲೇ ಎಲಿಕ್ಯಾಫ್ಟರ್ ತೋರಿಸಿ ಹೋಗುವ ತಾಕತ್ತು ನನಗೆ ಇದೆ,
ನನ್ನನು ಎದುರು ಹಾಕಿಕೊಂದು ಕರ್ನಾಟಕದಲ್ಲಿ ಹೇಗೆ ಬಿಗ್ ಬಾಸ್ ಓಡಿಸುತ್ತೀರಾ ಓಡುತ್ತೇನೆ ಹೊರಗೆ ಹೋದ ಮೇಲೆ ಈ ಶೋ ಬಗ್ಗೆ ಎಲ್ಲ ರಿಲೀಸ್ ಮಾಡುತ್ತೇನೆ, ಇಲ್ಲಿಂದ ಆಚೆ ಹೋದ ಮೇಲೆ ನಿಮಗೆ ಒಂದು ಗತಿ ಕಾಣಿಸುತ್ತೇನೆ, ಈ ಪ್ರೋಗ್ರಾಂ ಹಾಳು ಮಾಡದೆ ನಾನು ಬಿಡುವುದಿಲ್ಲ ಇತ್ಯಾದಿ ಇತ್ಯಾದಿ ಬಾಯಿಗೆ ಬಂದಂತೆ ಒದರಾಡಿದ್ದಾರೆ.
ಜಗದೀಶ್ ಈ ರೀತಿ ಹೇಳಿರುವುದು ಟಿ.ವಿ ಯಲ್ಲಿ ಇನ್ನು ಪ್ರಸಾರವಾಗಿಲ್ಲ ಅಕ್ಟೋಬರ್ 3ರಂದು ಈಎಪಿಸೋಡ್ ಬರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕ್ಲಿಪಿಂಗ್ ನೋಡಿ ಬಿಗ್ ಬಾಸ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ, ಜಗದೀಶ್ ಅವರನ್ನು ಕಿಚ್ಚ ಸುದೀಪ್ ಸರಿಯಾದ ಕ್ಲಾಸ್ ತೆಗೆದುಕೊಳ್ಳಬೇಕು, ಅವಕಾಶ ಕೊಟ್ಟ ವೇದಿಕೆಗೆ ಗೌರವ ಕೊಡಲು ಬರುವುದಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಜಗದೀಶ್ ಅವರು ಈ ಮೊದಲು ನಾಮಿನೇಷನ್ ನಿಂದ ಪಾರಾಗಲು ಮಣ್ಣು ತುಂಬಿಸುವ ಟಾಸ್ಕ್ ನಡೆಯುತ್ತಿದ್ದ ವೇಳೆ ಬಿಗ್ ಬಾಸ್ ನೇಮಿಸಿದ್ದಾರೆ ರೆಫ್ರೀ ಧನರಾಜ್ ಆಚಾರ್ ಜೊತೆಗೂ ಜಗಳ ಮಾಡಿದ್ದರು, ಬಾಯಿಗೆ ಬಂದಂತೆ ಮಾತನಾಡಿದ್ದರು. ಹೀಗೆ ಮನೆಯಲ್ಲಿ ಎಲ್ಲರ ಜೊತೆ ಒಂದಲ್ಲ ಒಂದು ವಿಷಯಕ್ಕೆ ಜಗಳ ಮಾಡಿಕೊಂಡೇ ಬರುತ್ತಿರುವವರು ನೆನ್ನೆ ತುಕಾಲಿ ಮಾನಸಾ ಜತೆಗೂ ಮಾತಿಗೆ ಮಾತು ಬೆಳೆಸಿದ್ದಾರೆ.
ಗೇಮ್ ನಾ ಗೇಮ್ ತರ ಆಡು, ಯೋಗ್ಯತೆ ನೋಡಿ ಮಾತನಾಡು ಎಂದಲ್ಲದೇ ಏಕವಚನದಲ್ಲಿ ಹೋಗಲೆ! ಯಾವ ತರಹದ ಹೆಂಗಸು ನೀನು ಎಂದು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇತರೆ ಸ್ಪರ್ಧಿಗಳು ಕೂಡ ಈ ಜಗಳ ತಡೆಯುವ ಪ್ರಯತ್ನ ಮಾಡಿ, ಒಬ್ಬ ಹೆಣ್ಣು ಮಗಳ ಬಗ್ಗೆ ಈ ರೀತಿ ಮಾತನಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ.
ಅವರ ವರ್ತನೆಯಿಂದ ತೀರ ಬೇಸರಿಸಿಕೊಂಡ ಮಾನಸ ರವರು ಅಟೆನ್ಷನ್ ಬೇಕು ಅಂತ ಹೀಗೆಲ್ಲಾ ಮಾತಾಡ್ತಾರೆ. ಏನು ನಾನು ಅವರ ಮನೆ ನಾಯಿನಾ ಎಂದು ರಾಂಗ್ ಆಗಿದ್ದಾರೆ. ನಂತರ ಕ್ಯಾಮರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಮನಸ್ಸನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಮಾಡಿ ಕಣ್ಣೀರಿಟ್ಟಿದ್ದಾರೆ.
https://www.instagram.com/reel/DAqgwKeMcXJ/?igsh=NzRqZGxvaW12bXNo