Bigboss
ಅಂತಿಮವಾಗಿ ಆ ಘಳಿಗೆ ಬಂದೇ ಬಿಟ್ಟಿದೆ. ಕರ್ನಾಟಕದ ಕಿರುತೆರೆ ಪ್ರೆಕ್ಷಕರು ಪ್ರತಿ ವರ್ಷ ಬಹಳ ನಿರೀಕ್ಷೆಯಿಂದ ಕಾಯುವ ಅತಿ ದೊಡ್ಡ ರಿಯಾಲಿಟಿ ಶೋ, ಎಲ್ಲಾ ರಿಯಾಲಿಟಿ ಶೋಗಳ ಸರದಾರ ಎಂದು ಕರೆಸಿಕೊಂಡಿರುವ ಬಿಗ್ ಬಾಸ್ ಸೀಸನ್ 11 (Bigboss S11) ಆವೃತ್ತಿ ಆರಂಭವಾಗಿದೆ.
ಸ್ವರ್ಗ ನರಕ ಎನ್ನುವ ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ಆರಂಭವಾಗಿರುವ ಈ ಸೀಸನ್ ಗೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಎಂದಿನಂತೆ ಈ ಬಾರಿಯೂ ಕೂಡ ಕಿಚ್ಚ ಸುದೀಪ್ (Kicha Sudeep) ಅವರೇ ಇತರ ನಿರೂಪಣೆ ಸಾರಥ್ಯವನ್ನು ಕೂಡ ವಹಿಸಿಕೊಂಡಿದ್ದಾರೆ. ವಾಡಿಗೆಯಂತೆ ವೇದಿಕೆ ಮೇಲೆ ಪ್ರತಿಯೊಬ್ಬ ಕಂಟೆಸ್ಟೆಂಟ್ ಕರೆದು ಅವರ ಪರಿಚಯ ಹೇಳಿ ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಮನೆ ಒಳಗೆ ಕಳಿಸಿ ಕೊಟ್ಟಿದ್ದಾರೆ.
ಈ ನಡುವೆ ಕಂಟೆಸ್ಟೆಂಟ್ ಒಬ್ಬರು ಕಿಚ್ಚನ ಎದುರು ಡಿ ಬಾಸ್ (D Boss Darshan) ಹೆಸರು ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಒಂದು ಸಮಯದಲ್ಲಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ಆತ್ಮೀಯವಾಗಿದ್ದರು, ಕುಚುಕು ದೋಸ್ತ್ ಗಳು ಎಂದು ಕರೆಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಅಂಬಿ ವಿಷ್ಣು ಬಳಿಕ ಇವರೇ ಅವರ ತದ್ರೂಪ ಎಂದು ಭರವಸೆ ಮೂಡುವಷ್ಟು ಅನ್ಯೋನ್ಯವಾಗಿದ್ದವರು.
ಆದರೆ ಇದ್ದಕಿದ್ದಂತೆ ನಾನಾ ಕಾರಣಗಳಿಂದ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟು ಈಗ ಎಲ್ಲವೂ ಮೊದಲಿನಂತಿಲ್ಲ ಎನ್ನುವುದು ಕೂಡ ಗೊತ್ತೇ ಇರುವ ವಿಚಾರ. ಪರಿಸ್ಥಿತಿ ಹೀಗಿರುವಾಗ ಸಾಮಾನ್ಯವಾಗಿ ಇವರಿಬ್ಬರ ಎದುರಲ್ಲಿ ಮತ್ತೊಬ್ಬರ ಹೆಸರನ್ನು ಬೇರೆಯವರು ತೆಗೆದುಕೊಂಡು ಮಾತನಾಡುವುದು ಬಹಳ ಕಡಿಮೆ ಎಂದು ಊಹಿಸಬಹುದು.
ಆದರೆ ಕ್ಯಾಮರಾ ಎದುರೇ ದರ್ಶನ್ ರ ಹೆಸರು ಪ್ರಸ್ತಾಪವಾಗಿದೆ. ಸೀಸನ್ 11 ಕಂಟೆಸ್ಟೆಂಟ್ ಧರ್ಮ ಕೀರ್ತಿರಾಜ್ (Dharma Keerthiraj) ರವರು ಬಿಗ್ ಬಾಸ್ ವೇದಿಕೆ ಮೇಲೆ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೆ ಫೇಮ್ ತಂದು ಕೊಟ್ಟಿದ್ದು ಹಾಗೂ ಚಂದನವನಕ್ಕೆ ಅವರು ಪರಿಚಯವಾಗಿದ್ದು ತೂಗುದೀಪ್ ಪ್ರೊಡಕ್ಷನ್ಸ್ ನಲ್ಲಿ ಮೂಡಿ ಬಂದ ದಿನಕರ್ ತೂಗುದೀಪ್ ನಿರ್ದೇಶನ ಹಾಗೂ ದರ್ಶನ್ ಅವರ ನಟನೆಯ ನವಗ್ರಹ ( Navagraha) ಚಿತ್ರದಿಂದ.
ನವಗ್ರಹ ಸಿನಿಮಾದ ಚಾಕ್ಲೆಟ್ ಹೀರೋ ಪಾತ್ರಕ್ಕೆ ಹೇಳಿ ಮಾಡಿಸಿದ ರೀತಿ ಇರುವ ಕಾರಣಕ್ಕೂ ಹಾಗೂ ಸಿನಿಮಾದ ಕಾನ್ಸೆಪ್ಟ್ ಖಳನಾಯಕರ ಮಕ್ಕಳುಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದೆಂಬ ಒಂದು ಹೆಚ್ಚುವರಿ ಕಾರಣದಿಂದಲೂ ಅವಕಾಶ ಪಡೆದುಕೊಂಡರು. ಧರ್ಮ ಕೀರ್ತಿರಾಜ್ ಈ ಸಿನಿಮಾದ ಬಗ್ಗೆ ಹಾಗೂ ಈ ಸಿನಿಮಾದಲ್ಲಿ ಅವಕಾಶಕೊಟ್ಟ ದಿನಕರ್ ಹಾಗೂ ದರ್ಶನ್ ಅವರ ಬಗ್ಗೆ ಕೃತಜ್ಞತೆ ಹೇಳುತ್ತಾ ವೇದಿಕೆ ಮೇಲೆ ಅವರ ಹೆಸರು ತೆಗೆದು ಕೊಂಡಿದ್ದಾರೆ.
ನವಗ್ರಹ ಬಳಿಕ ಒಲವೇ ಒಲವೇ, ಓ ಮನಸೇ, ಸುಮನ್, ಮುಮ್ತಾಜ್, ಚಾಣಾಕ್ಷ, ಖಡಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೆ. ಇನ್ನೊಂದು ವಿಶೇಷವೇನೆಂದರೆ ಧರ್ಮ ಕೀರ್ತಿರಾಜ್ ಲವರು ದರ್ಶನವರಿಗೆ ಅತ್ಯಾಪ್ತರು ಮಾತ್ರವಲ್ಲ ಫಾಲೋವರ್ ಕೂಡ.
ಇವರಂತೇ ದರ್ಶನ್ ಅವರನ್ನು ಇಷ್ಟೇ ಇಷ್ಟ ಪಡುವಂತಹ ಹಿರಿಯ ಕಲಾವಿದೆ ಯಮುನಾ ಶ್ರೀನಿಧಿ ಮತ್ತು ಯುವ ನಟಿ ಅನುಷ್ಕಾ ರೇ ಕೂಡ ಇದೇ ಸೀಸನ್ ಕಂಟೆಸ್ಟೆಂಟ್ ಗಳಾಗಿ ದೊಡ್ಮನೆಯೊಳಗಿದ್ದಾರೆ. ಅನುಷಾ ರೇ ಅವರು ಧರ್ಮ ಕೀರ್ತಿರಾಜ್ ರವರ ಖಡಕ್ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದರು.