Bigboss: ಬಿಗ್ ಶೋ ಹಾಳು ಮಾಡ್ತೀನಿ ಅಂತ ಓಪನ್ ಚಾಲೆಂಜ್ ಹಾಕಿದ್ದ ಜಗದೀಶ್ ಗೆ ನಿಮ್ಮ ಅಪ್ಪನ ಆಣೆಗೂ ಅದು ಸಾಧ್ಯವಿಲ್ಲ ಎಂದು ಖಡಕ್ ಆಗಿ ತಿರುಗೇಟು ಕೊಟ್ಟ ಕಿಚ್ಚ.!

Bigboss:

ಬಿಗ್ ಬಾಸ್ ಸೀಸನ್ 11 (Bigboss S11) ನೋಡು ನೋಡುತ್ತಿದ್ದಂತೆ ಒಂದು ವಾರಗಳನ್ನು ಪೂರೈಸಿದೆ. ಶನಿವಾರದಂದು ಮೊದಲನೆಯ‌ ಕಿಚ್ಚನ ಪಂಚಾಯಿತಿ ಕೂಡ ಅಚ್ಚುಕಟ್ಟಾಗಿ ನೆರವೇರಿದೆ. ಈ ಬಾರಿ ಪಂಚಾಯಿತಿಯಲ್ಲಿ ಚರ್ಚೆ ಮಾಡುವುದಕ್ಕೆ ಸ್ಪರ್ಧಿಗಳು ಸಾಕಷ್ಟು ವಿಚಾರಗಳನ್ನು ಸೃಷ್ಟಿಸಿದರು, ಅದರಲ್ಲೂ ವಾರಪೂರ್ತಿ ಎಲ್ಲಾ ಕಂಟೆಸ್ಟ್ ಗಳಿಗೂ ಕಿರಿಕಿರಿ ಮಾಡುತ್ತಾ.

WhatsApp Group Join Now
Telegram Group Join Now

ಬಿಗ್ ಬಾಸ್ ಗೆ ಓಪನ್ ಚಾಲೆಂಜ್ ಹಾಕಿದ್ದ ಜಗದೀಶ್ (Jagadeesh) ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎನ್ನುವುದು ಮನೆ ಒಳಗಿನವರು ಮಾತ್ರವಲ್ಲ ಹೊರಗಿದ್ದ ಬಿಗ್ ಬಾಸ್ ಅಭಿಮಾನಿಗಳ ಒತ್ತಾಯ ಕೂಡ ಆಗಿತ್ತು. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಈ ವಾರ ಲಾಯರ್ ಜಗದೀಶ್ ಅವರ ಬಗ್ಗೆ ಯೇ ಚರ್ಚೆಯಾಗುತ್ತಿದ್ದರಿಂದ ಕಿಚ್ಚನ ಕ್ಲಾಸ್ ಹೇಗಿರಲಿದೆ ಎಂದು ನೋಡುವ ಕಾತುರ ಎಲ್ಲರಿಗೂ ಇತ್ತು.

ನಿರೀಕ್ಷೆಯಂತೆ ಓವರ್ ಆಗಿ ಆಳುತ್ತಿದ್ದ ಜಗದೀಶ್ ಅವರಿಗೆ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್ (Kicha Sudeep). ಲಾಯರ್ ಜಗದೀಶ್ ಅವರು ಎರಡು ದಿನಗಳ ಹಿಂದೆ ಬಿಗ್ ಬಾಸ್ ಗೆ ಕ್ಯಾಮೆರಾ ಮುಂದೆ ಹೋಗಿ ಓಪನ್ ಚಾಲೆಂಜ್ ಹಾಕಿದ್ದರು. ಈ ಪ್ರೋಗ್ರಾಮ್ ಹಾಳು ಮಾಡದೇ ಇದ್ದರೆ ನನ್ನ ಹೆಸರನ್ನು ಬೇರೆ ಇಟ್ಟುಕೊಳ್ಳಿ ಇಲ್ಲಿಂದ ಹೊರಗಡೆ ಹೋದಮೇಲೆ ಬಿಗ್ ಬಾಸ್ ಬಗ್ಗೆ ಎಲ್ಲವನ್ನು ರಿವೀಲ್ ಮಾಡುತ್ತೇನೆ.

ಇಲ್ಲಿರುವ ಕಂಟೆಸ್ಟೆಂಟ್ ಗಳು ಯಾವ ಮಾಫಿಯಾದಲ್ಲಿದ್ದಾರೆ ಅದನ್ನು ಕೂಡ ಬಯಲಿಗೆಳೆಯುತ್ತೇನೆ. ಸಿಎಂ ಕುರ್ಚಿಯನ್ನೇ ಅಲ್ಲಾಡಿಸುವವನು ನಾನು, ನನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ನಡೆಸ್ತೀರಾ? ನಾನು ಬಿಗ್ ಬಾಸ್ ಅನ್ನೇ ಪರ್ಚೇಸ್ ಮಾಡುತ್ತೇನೆ ಎಂಬಿತ್ಯಾದಿಯಾಗಿ ನಾಲಿಗೆ ಹರಿಬಿಟ್ಟಿದ್ದರು. ಹೀಗಾಗಿ ಅನೇಕರ ಅಭಿಪ್ರಾಯ ಈ ವಾರ ಶೋ ಗೆ ಗೌರವ ಕೊಡದ ಇವರೇ ಮನೆಯಿಂದ ಆಚೆ ಹೋಗುತ್ತಾರೆ ಎನ್ನುವುದಾಗಿತ್ತು.

ನೇರವಾಗಿ ಈ ವಿಷಯವನ್ನೇ ಶನಿವಾರದ ಎಪಿಸೋಡ್ ನಲ್ಲಿ ಪ್ರಸ್ತಾಪಿಸಿದ ಕಿಚ್ಚ ಸುದೀಪ್ ಅವರು ಜಗದೀಶ್ ಅವರನ್ನು ಕುರಿತು ಸ್ವಲ್ಪ ನಮಗೆ ಶೋ ಹೇಗೆ ನಡೆಸಬೇಕು ಎನ್ನುವುದನ್ನು ಹೇಳಿಕೊಡುತ್ತೀರಾ ಎಂದು ಕೇಳಿದರು. ಅದಕ್ಕೆ ಲಾಯರ್ ಜಗದೀಶ್ ನಿಮ್ಮದೇನು ತಪ್ಪಿಲ್ಲ ಸರ್ ನೀವು ಕರೆಕ್ಟಾಗಿ ಇದ್ದೀರಾ ಎಂದು ಉತ್ತರಿಸಿದರು. ಹೌದು ಸರ್ ಖಡಾಖಂಡಿತವಾಗಿ ಕರೆಕ್ಟಾಗಿ ಇದ್ದೇವೆ.

ಅದಕ್ಕೆ 10 ಸೀಜನ್ ಗಳನ್ನು ದಾಟಿರುವುದು ಇಲ್ಲವಾಗಿದ್ದರೆ ಇದು ಸಾಧ್ಯವಾಗುತ್ತಲೇ ಇರಲಿಲ್ಲ ಎಂದಿದ್ದಾರೆ. ಬಿಗ್ ಬಾಸ್ ಅನ್ನುವುದು ಒಂದು ಅದ್ಭುತವಾದ ವೇದಿಕೆ ಇದನ್ನು ಇನ್ನಷ್ಟು ಇಂಪ್ರೂ ಮಾಡಲು ಇಲ್ಲಿರುವ ಪ್ರತಿಯೊಬ್ಬ ಕಂಟೆಸ್ಟೆಂಟ್ ಗೂ ಕೂಡ ಅವಕಾಶ ಇದೆ ಆದರೆ ಇದನ್ನು ಹಾಳು ಮಾಡುವುದಕ್ಕೆ ನಿಮ್ಮ ಅಪ್ಪನ ಆಣೆಗೂ ಸಾಧ್ಯವಿಲ್ಲ ಎಂದು ಬಿಸಿ ಮುಟ್ಟಿಸಿದ್ದಾರೆ.

ಇನ್ನಾದರೂ ಲಾಯರ್ ಜಗದೀಶ್ ಬುದ್ಧಿ ಕಲಿಯುತ್ತಾರಾ ಎಂದು ನೋಡಬೇಕಾಗಿದೆ ನಾನು ಇರುವುದಿಲ್ಲ ಕ್ವಿಟ್ ಮಾಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದ ಕಾರಣ ಮತ್ತು ನಂತರ ಆದ ಬೆಳವಣಿಗೆಗಳಿಂದ ಜಗದೀಶ್ ಎಲಿಮಿನೇಟ್ (Eliminate) ಆಗಿ ಹೋಗುತ್ತಾರೆ ಎನ್ನುವುದು ಅನೇಕರ ಗೆಸ್ಸಿಂಗ್ ಆಗಿತ್ತು. ಆದರೆ ಈಗ ತಿಳಿದು ಬಂದಿರುವ ಬಲವಾದ ಮೂಲಗಳ ಮಾಹಿತಿ ಪ್ರಕಾರವಾಗಿ ಮಹಿಳಾ ಕಂಟೆಸ್ಟೆಂಟ್ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಿದ್ದಿದ್ದಾರಂತೆ.

ಬಹುಶಃ ಜಗದೀಶ್ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿರಬಹುದು ನಂತರದ ದಿನಗಳಲಾದರೂ ತಮ್ಮನ್ನು ಬದಲಾಯಿಸಿಕೊಳ್ಳುತ್ತಾರಾ ಅಥವಾ ಇದೇ ವರ್ತನೆ ಮುಂದುವರಿಸುತ್ತಾರಾ ಅಥವಾ ಬಿಗ್ ಬಾಸ್ ಶೋ ಹಾಳು ಮಾಡುತ್ತಾರಾ ಅವರೇ ಇಂಪ್ರೂ ಆಗುತ್ತಾರಾ ಇನ್ನೇನಿಲ್ಲಾ ಹೇಳುತ್ತಾರೆ ಕಾದು ನೋಡೋಣ.

Leave a Comment