Darshan: ಸೌಂದರ್ಯ ಜಗದೀಶ್ ಬಳಿ 1 ಕೋಟಿ 75 ಲಕ್ಷ ಸಾಲ ಮಾಡಿ ಪವಿತ್ರ ಗೌಡಗೆ ಮನೆ ಕೊಡಿಸಿದ್ದು ಒಪ್ಪಿಕೊಂಡ ನಟ‌ ದರ್ಶನ್.!

Darshan

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ’ಲೆ ಪ್ರಕರಣದಲ್ಲಿ (Renukaswamy Murder Case) ಸ್ಯಾಂಡಲ್ ವುಡ್ ನ ಸ್ಟಾರ್ ಹೀರೊ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ರವರು ವಿಚಾರಧೀನ ಖೈ’ದಿಯಾಗಿ ಬಂಧಿಯಾಗಿದ್ದಾರೆ. ದರ್ಶನ್ ಅವರು ಅರೆಸ್ಟ್ ಆಗಿ 90 ದಿನ ಪೂರೈಸುತ್ತಿದೆ, ಇದರ ಬೆನ್ನೆಲ್ಲೇ ಸೆಪ್ಟೆಂಬರ್ 4ರಂದು ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ.

ಬರೋಬ್ಬರಿ 3991 ಪುಟಗಳುಳ್ಳ ಈ ಕಡತದಲ್ಲಿ ಘಟನೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ದಾಖಲಿಸಲಾಗಿದೆ. ಕರ್ನಾಟಕ ಮಟ್ಟಿಗೆ ಬಹಳ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣವಾಗಿರುವ ಇದನ್ನು ಅಷ್ಟೇ ಜಾಗರೂಕತೆಯಿಂದ ನಿಭಾಯಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಚಾರ್ಜ್ ಶೀಟ್ ಪ್ರತಿ ಮಾಧ್ಯಮಗಳಿಗೆ ದೊರೆತಿತ್ತು ಅದರಲ್ಲಿರುವ ಕೆಲವು ಸಂಗತಿಗಳ ಬಗ್ಗೆ ವೈರಲ್ ಕೂಡ ಆಗುತ್ತಿದ್ದೆ.

WhatsApp Group Join Now
Telegram Group Join Now

ಇದರಲ್ಲಿ ನಟನೆ ಅಭಿಮಾನಿಗಳಿಗೆ ಶಾ’ಕ್ ಆಗುವಂತ ಕೆಲ ವಿಷಯಗಳು ಬೆಳಕಿಗೆ ಬಂದಿವೆ. ಮುಖ್ಯವಾಗಿ ದರ್ಶನ್ ಹಾಗೂ ಪವಿತ್ರ ಗೌಡ (Pavithra Gowda) ಅವರ ಸಂಬಂಧದ ಬಗ್ಗೆ ದರ್ಶನ್ ಕೊಟ್ಟ ಹೇಳಿಕೆ ಏನೆಂದರೆ, ಬುಲ್ ಬುಲ್ ಸಿನಿಮಾ ಸಂದರ್ಭದಲ್ಲಿ ಇಬ್ಬರು ಪರಿಚಯವಾಗಿರುವುದಾಗಿ ಕಳೆದ ಹತ್ತು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದಾಗಿ.

ನಿರ್ಮಾಪಕ ದಿವಂಗತ ಸೌಂದರ್ಯ ಜಗದೀಶ್ ಅವರ ಬಳಿ ಒಂದು ಕೋಟಿ ಎಪ್ಪತ್ತೈದು ಲಕ್ಷ ಮಾಡಿ ಮನೆ ಕೊಡಿಸಿರುವುದಾಗಿ ನಂತರ ಆ ಸಾಲವನ್ನು ದರ್ಶನ್ ತೀರಿಸಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ದರ್ಶನ್ ಅವರ ಸ್ವಂತ ಸಹೋದರ ದಿನಕರ್ ತೂಗುದೀಪ್ ರವರೇ ಇನ್ನು ಸಹ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ದರ್ಶನ್ ರವರ ವೈಯಕ್ತಿಕ ಹಾಗೂ ಸಿನಿಮಾ ವಿಚಾರವಾಗಿ ಪ್ರತಿ ಹಂತದಲ್ಲಿ ಜೊತೆಗಿದ್ದು ಬೆನ್ನುಕೊಟ್ಟ ಸಹೋದರನೇ ಈ ಪರಿಸ್ಥಿತಿಯಲ್ಲಿ ಇರುವಾಗ ಸಾಮಾನ್ಯ ಒಬ್ಬ ನಟಿಗೆ ದರ್ಶನ್ ಎಷ್ಟು ಹಣ ಸುರಿದಿದ್ದಾರೆ ಎಂದು ಅನೇಕರು ಬೇಸರಪಟ್ಟುಕೊಳ್ಳುತ್ತಿದ್ದಾರೆ.

ಮುಂದುವರೆದು ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕೂಡ ದರ್ಶನ್ ಅವರ ಹೇಳಿಕೆ ತೆಗೆದುಕೊಳ್ಳಲಾಗಿತ್ತು ಸದ್ಯಕ್ಕೆ ಪ್ರಕರಣದಲ್ಲಿ A20ಆರೋಪಿ ಪಟ್ಟಿ ಹೊತ್ತಿರುವ ದರ್ಶನ್ ಅವರಿಗೆ ರೇಣುಕಸ್ವಾಮಿ ಕಿಡ್ನಾಪ್ ಮಾಡಿರುವ ವಿಚಾರವೇ ಗೊತ್ತಿರಲಿಲ್ಲವಂತೆ ಎನ್ನುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

A3 ಆರೋಪಿಯಾಗಿರುವ ಪವನ್ ಎನ್ನುವವರು ಪವಿತ್ರ ಗೌಡ ಹೆಸರಿನಲ್ಲಿ ಚಿತ್ರದುರ್ಗದಲ್ಲಿದ್ದ ದರ್ಶನ್ ಅಭಿಮಾನಿ ಒಬ್ಬರ ಸಹಾಯದಿಂದ ರೇಣುಕಾ ಸ್ವಾಮಿಗೆ ಮೆಸೇಜ್ ಮಾಡಿ ಆತನನ್ನು ಬೆಂಗಳೂರಿಗೆ ಬರಮಾಡಿಕೊಂಡು ಕಿಡ್ನಾಪ್ ಮಾಡಿದ ಮೇಲೆ ದರ್ಶನ್ ಅವರಿಗೆ ವಿಷಯ ಗೊತ್ತಾಗಿದ್ದು ಎಂದು, ಇನ್ನು ದರ್ಶನ್ ಪಟ್ಟಣಗೆರೆ ಶೆಡ್ ಗೆ ಹೋಗುವ ಮುಂಚೆಯೇ ಪವನ್ ಹಾಗೂ ಇತರ ಸಹಚರರು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು.

ನಂತರ ದರ್ಶನ್ ಪವಿತ್ರ ಗೌಡ ಅವರ ಜೊತೆಗೆ ಹೋಗಿ ಈತನೇ ಅಲ್ಲವೇ ಅ’ಶ್ಲೀ’ಲ ಸಂದೇಶಗಳನ್ನು ಕಳುಹಿಸುತ್ತಿದ್ದದ್ದು ಎಂದು ಕಂಫರ್ಮ್ ಮಾಡಿಕೊಂಡು ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯ ಎಂದು ಕೋಪದಲ್ಲಿ ಹೊಡೆದು ಬಳಿಕ ಆತನಿಗೆ ಊಟ ಮಾಡಲು ಹಣ ಕೊಟ್ಟು ಅಲ್ಲಿಂದ ತೆರಳಿದರು ಎಂದು ಹೇಳಿಕೆ ನೀಡಿದ್ದಾರಂತೆ.

ಆದರೆ ಆ ನಂತರ ನಡೆದ ಬೆಳವಣಿಗೆಗಳು ಇಂದು ದರ್ಶನ್ ಮತ್ತು ಪವಿತ್ರ ಗೌಡ ಸೇರಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 17 ಜನ ಸಹಚರರನ್ನು ಕಂಬಿ ಎಣಿಸುವಂತೆ ಮಾಡಿದೆ. ದರ್ಶನ್ ಕುಟುಂಬದಿಂದ ಕಾನೂನು ಹೋರಾಟ ಮುಂದುವರೆಯುತ್ತಿದ್ದು ಎಲ್ಲಾ ಅಭಿಮಾನಿಗಳ ಕೋರಿಕೆ ಆದಷ್ಟು ಬೇಗ ಅವರು ಈ ಸಂಕಷ್ಟದಿಂದ ಪಾರಾಗಲಿ ಎಂದು ನಾನು ಕೂಡ ಹರಸೋಣ.

Leave a Comment