Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ (Challenging star Darshan & Kicha Sudeep) ಒಂದೇ ಸಮಯದಲ್ಲಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಇಂದು ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿ ಮಿಂಚುತ್ತಿರುವ ನಟರು. ಆರಂಭದಿಂದಲೂ ಇವರಿಬ್ಬರ ನಡುವೆ ಕಾಂಪಿಟೇಶನ್ ಇದೆ ಎಂದೇ ಹೇಳಲಾಗುತ್ತಿತ್ತು, ಇಬ್ಬರು ಬಹಿರಂಗವಾಗಿ ಏನೂ ಹೇಳದಿದ್ದರೂ ಉಳಿದ ನಟರುಗಳಂತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಅಂಬರೀಶ್ ಅವರಿಗೆ ಇಬ್ಬರು ಕೂಡ ಅತ್ಯಾಪ್ತರಾಗಿದ್ದರು.
ಹೀಗಾಗಿ ಇವರಿಬ್ಬರು ಒಟ್ಟಿಗೆ ಸ್ನೇಹಿತರಂತೆ ಇರಬೇಕು ಎಂದವರು ಪ್ರಯತ್ನ ಕೂಡ ಪಟ್ಟಿದ್ದರು ಬಳಿಕ ದರ್ಶನ್ ಜೀವನದಲ್ಲಾದ 2012 ರ ಕಹಿ ಘಟನೆ ಬಳಿಕ ಸಾರಥಿ ಸಿನಿಮಾ ರಿಲೀಸ್ ವೇಳೆಯಿಂದ ದರ್ಶನ್ ಹಾಗೂ ಸುದೀಪ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳಲು ಆರಂಭಿಸಿದರು, ಸುದೀಪ್ ಅವರು ದರ್ಶನ್ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೂ ಪ್ರೋಮೋಗಳಿಗೂ ವಾಯ್ಸ್ ಕೊಟ್ಟಿದ್ದರು.
ಇವರಿಬ್ಬರ ನಡುವಿನ ಬಾಂಧವ್ಯವಾಗ ಎಷ್ಟು ಗಟ್ಟಿಯಾಗಿತ್ತು ಎಂದರೆ ಮುಂದಿನ ಅಂಬಿ-ವಿಷ್ಣು ಆಗುತ್ತಾರೆ ಎಂದೇ ಜನ ಅಂದುಕೊಂಡಿದ್ದರು. ಅಕ್ಷರಶಃ ಚಡ್ಡಿ ದೋಸ್ತ್ ಗಳಂತೆ ಪಟ್ಟಿಗಾಗಿ ಬೆಳೆದವರಂತೆ ಒಟ್ಟಿಗೆ ಒಂದೇ ಕಾರಲ್ಲಿ ಓಡಾಡುತ್ತ, ಒಂದೇ ತಟ್ಟೆಯಲ್ಲಿ ತಿನ್ನುತ್ತಾ ಒಬ್ಬರಿಗೊಬ್ಬರು ಬೆಂಬಲವಾಗಿದ್ದರು.
ಆದರೇ ಈ ಕುಚುಕುಗಳ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಮತ್ತೆ ಮ’ನ’ಸ್ತಾ’ಪ ಏರ್ಪಟ್ಟಿತ್ತು. ಇದು ಬೆಳೆದು ದರ್ಶನ್ ರವರು ನಾವಿಬ್ರು ಸ್ನೇಹಿತರಲ್ಲ ಒಂದೇ ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವ ನಟರು ಅಷ್ಟೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ಕೊಡುವ ಮಟ್ಟಿಗೆ ದೊಡ್ಡದಾಯಿತು.
ಆದರೆ ಸುದೀಪ್ ಮಾತ್ರ ಎಲ್ಲೂ ಈ ಬಗ್ಗೆ ಬೇಸರದ ಮಾತುಗಳನ್ನ ಆಡಿಲ್ಲ ಸಾಕಷ್ಟು ಸಂಯಮದಿಂದ ನಡೆದುಕೊಂಡು ಸ್ನೇಹ ಹಸ್ತವನ್ನು ಚಾಚುತ್ತಲೇ ಬಂದಿದ್ದರು ಆದರೆ ವಿರುದ್ಧ ದಿಕ್ಕಿನಿಂದ ಸಕಾರಾತ್ಮಕ ಸ್ಪಂದನೆ ಸಿಗದೇ ಹೋಯಿತು ಈಗ ಮತ್ತೊಮ್ಮೆ ದರ್ಶನ್ ಗೆ ಇನ್ನೊಂದು ಬಗೆಯ ಕಂ’ಟ’ಕ ಎದುರಾಗಿದೆ.
ಬಹುತೇಕ ಎಲ್ಲ ಕಲಾವಿದರು ತಮ್ಮ ತಮ್ಮ ಪ್ರಕಾರ ಇದಕ್ಕೆ ಸರಿ ತಪ್ಪು ಎನ್ನುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದುವರೆಗೂ ಈ ಬಗ್ಗೆ ಮಾತನಾಡಿದವರೆಲ್ಲರಿಗಿಂತ ಸುದೀಪ್ ರವರು ದರ್ಶನ್ ಬಗ್ಗೆ ಆಡಿದ ಮಾತು ಎಲ್ಲರಿಗೂ ಮೆಚ್ಚುಗೆಯಾಗಿದೆ. ಇದು ನಡೆದಿದ್ದು ಸುವರ್ಣ ನ್ಯೂಸ್ ನಲ್ಲಿ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಸುದೀಪ್ ವಿತ್ ಅಜಿತ್ (Sudeep with Ajith) ಕಾರ್ಯಕ್ರಮದಲ್ಲಿ.
ಇಲ್ಲಿ ಸುದೀಪ್ ರವರ ಬದುಕಿನ ಕುರಿತ ಅನೇಕ ಸಂಗತಿಗಳ ಬಗ್ಗೆ ಪ್ರಶ್ನೆ ಕೇಳಿ ಅಭಿಮಾನಿಗಳಿಗಿದ್ದ ಕುತೂಹಲ ಬಗೆಹರಿಸಲಾಯಿತು. ಮುಂದುವರೆದು ಮಾಮೂಲಿ ಎಂಬಂತೆ ಎಲ್ಲಾ ಸೆಲೆಬ್ರಿಟಿ ಗಳಿಗೂ ಕೇಳುವಂತೆ ಸುದೀಪ್ ಅವರಿಗೂ ಕೂಡ ದರ್ಶನ್ ಕುರಿತು ನಿರೂಪಕರಿಂದ ಪ್ರಶ್ನೆಗಳು ಕೇಳಲ್ಪಟ್ಟವು ಅದಕ್ಕೆ ಸುದೀಪ್ ಅವರು ಕೊಟ್ಟವರು ಹೀಗಿತ್ತು.
ಸ್ನೇಹದಲ್ಲಿ ನಾನು ದೊಡ್ಡವನು, ನೀನು ದೊಡ್ಡವನು ಎನ್ನುವ ಮಾತು ಬರುವುದಿಲ್ಲ, ಸ್ನೇಹ-ಸ್ನೇಹಿತ ಅಂದರೆ ಅಲ್ಲಿ ಎಲ್ಲವೂ ನಿಷ್ಕಳಂಕವಾಗಿರಬೇಕು ಅದೇ ಸ್ನೇಹ. ಕೆಲವೊಮ್ಮೆ ನಮ್ಮ ಗೊತ್ತಿದ್ದೋ ಗೊತ್ತಿಲ್ಲದೆಯೋ ಸ್ನೇಹಿತರು ಮಾಡುವ ತಪ್ಪಿಗೆ ತಲೆ ಬಾಗಬೇಕಾಗುತ್ತೆ. ಆದರೆ ಅದು ಅ’ವ’ಮಾ’ನದಿಂದ ಅಲ್ಲ ಪ್ರೀತಿಯಿಂದ ತಲೆ ತಗ್ಗಿಸಬೇಕಾಗುತ್ತದೆ.
ಜೀವನದಲ್ಲಿ ಅನಾವಶ್ಯಕವಾಗಿ ಏನೇನೋ ನಡೆದಾಗ ದೂರ ಇರೋದೇ ಒಳ್ಳೆಯದು ಅನಿಸುತ್ತದೆ. ಆದರೆ ಇಲ್ಲಿಯವರೆಗೆ ನಾನು ಒಳ್ಳೆಯದೇ ಮಾಡಿದ್ದೇನೇ ಹೊರತು ಕೆಟ್ಟದ್ದು ಬಯಸಿಲ್ಲ, ಸಂದರ್ಶನಗಳಲ್ಲಿ ಕೆಟ್ಟದಾಗಿ ಮಾತನಾಡಿಯೂ ಇಲ್ಲ. ಯಾವತ್ತು ಮಾತನಾಡುವುದು ಇಲ್ಲ ಯಾರದ್ದೋ ಭುಜದ ಮೇಲೆ ಗನ್ ಇಟ್ಟು ಫೈರ್ ಮಾಡುವ ವ್ಯಕ್ತಿ ನಾನಲ್ಲ.
ನನ್ನ ಮೇಲೆ ಸಾಕಷ್ಟು ಆಪಾದನೆಗಳೂ ಮಾಡುತ್ತಿದ್ದಾಗಲು ನಾನು ಮಾತನಾಡಲಿಲ್ಲ. ನಾವು ಕೊಡೋ ಸ್ಥಾನವನ್ನು, ವಾಪಸ್ ಯಾವತ್ತೂ ಕಿತ್ತುಕೊಳ್ಳಲ್ಲ. ಅದನ್ನು ಕಿತ್ತುಕೊಂಡರೆ ನಾವು ನಾವಾಗಿರಲ್ಲ. ಹಾಗಂತ ನಾವು ಅವರಿಂದ ಅದನ್ನೇ ಬಯಸುವುದಿಲ್ಲ ಹೀಗಾಗಿ ನಾನು ಆ ಸರ್ಕಲ್ ನಿಂದ ಹೊರ ಬಂದೆ, ಸುಮಾರು ವರ್ಷಗಳೇ ಹಾಕಿವೆ ಈಗ ಅವರ ಬದುಕಿನಲ್ಲಿ ಏನಾಗುತ್ತಿದೆ ಎಂದು ಗೊತ್ತಿಲ್ಲ ಹಾಗಾಗಿ ಮಾತನಾಡಲಾರೆ.
ರೇಣುಕಾ ಸ್ವಾಮಿ ಕೊ’ಲೆ ಪ್ರಕರಣದ ಕುರಿತು ಕೂಡ ಮಾತನಾಡಿದ ಸುದೀಪ್, ಆರಂಭದಲ್ಲಿ ಇದೆಲ್ಲ ಸುಳ್ಳು ಸುದ್ದಿ ಇರಬಹುದೆಂದು ನಾನು ಅಂದುಕೊಂಡಿದ್ದೆ, ಆ ನಂತರ ಅ’ನು’ಮಾ’ನವಾಯಿವು, ಯಾಕೆಂದರೆ ಇಷ್ಟು ಪ್ರಭಾವಿ ವ್ಯಕ್ತಿಯನ್ನು ಪೊಲೀಸರು ಸುಖಾಸುಮ್ಮನೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಕೆಲವು ದಿನ ನಮಗೆ ಮೋಡ ಕವಿದ ವಾತಾವರಣ ಇತ್ತು. ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲದಲ್ಲಿಯೇ ನಾನು ಇದ್ದೆ.
ಯಾರನ್ನು ಎಷ್ಟು ಇಷ್ಟಪಡ್ತೀವಿ, ಎಷ್ಟು ದ್ವೇಷ ಮಾಡ್ತೀವಿ, ನಮ್ಮ ನಡುವಿನ ಗೆಲುವಿನ ಫೈಟ್ ಕಾಂಪಿಟೇಶನ್ ಸಹ ಪರ್ಸನಲ್. ಕಾಂಪಿಟೇಷನ್. ಆದರೆ ಆ ವ್ಯಕ್ತಿಗೆ ತೊಂದರೆ ಆಗ್ತಿದೆ ಅಂದಾಗ ಖುಷಿ ಪಡೋ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ. ಅವರನ್ನು ದೂರದಿಂದಲೇ ನೋಡಿ ಖುಷಿಪಡುವ ವ್ಯಕ್ತಿ ನಾನು, ಎಲ್ಲೋ ಒಂದು ಕಡೆ ಅವರು ನಗುನಗುತ್ತಾ ಓಡಿಡಿಕೊಂಡಿದ್ದರೆ ನೋಡಿಕೊಂಡು ನಾವು ನೆಮ್ಮದಿಯಾಗಿರುತ್ತೇವೆ. ಈ ರೀತಿ ಆದಾಗ ಒಬ್ಬ ಹ್ಯೂಮನ್ ಬೀಯಿಂಗ್ ಆಗಿ ಖಂಡಿತ ನನಗೆ ನೋವಾಗುತ್ತದೆ ಎಂದಿದ್ದಾರೆ.