Darshan
ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Druva Sarja) ಅವರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ (Martin) ಇದೇ ಅಕ್ಟೋಬರ್ 11ರಂದು ಪ್ಯಾನ್ ವರ್ಡ್ ಮಟ್ಟದಲ್ಲಿ (Pan world Movie) ರಿಲೀಸ್ ಆಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಪೋಸ್ಟರ್, ಟೀಚರ್ ಮತ್ತು ವರ್ಲ್ಡ್ ವೈಡ್ ಮಾಡಲಾಗುತ್ತಿರುವ ಸಿನಿಮಾ ಪ್ರಚಾರ ಇತ್ಯಾದಿ ಕಾರಣಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಬಹಳ ಗ್ಯಾಪ್ ತೆಗೆದುಕೊಂಡೇ ಇಂತಹ ಸೂಪರ್ ಹಿಟ್ ಕೊಡುವ ಧ್ರುವ ಸರ್ಜಾ ಈ ಬಾರಿಯೂ ಕೂಡ ಕನ್ನಡಕ್ಕೆ ಮತ್ತೊಂದು ಹಿಟ್ ಕೊಡಲಿದ್ದಾರೆ ಎನ್ನುವ ಭರವಸೆ, ಮತ್ತು ಈ ಹಿಂದೆ ಅದ್ದೂರಿ ಹಾಗೂ ಬಹದ್ದೂರ್ ಸಿನಿಮಾಗಳಲ್ಲಿ ವರ್ಕ್ ಆಗಿರುವ ನಿರ್ದೇಶಕ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಮತ್ತೊಮ್ಮೆ ಹಿಟ್ ಆಗುತ್ತದೆ ಎನ್ನುವ ನಂಬಿಕೆಯೇನೋ ಇದೆ.
ಆದರೆ ಇದುವರೆಗೂ ಬೂದಿ ಮುಚ್ಚಿದ ಕೆಂಡದ ರೀತಿ ಇದ್ದ ಧ್ರುವ ಮತ್ತು ದರ್ಶನ್ ನಡುವಿನ ಮುನಿಸು ತಾರಕಕ್ಕೇರಿ ಬಹಿರಂಗವಾಗಿರುವ ಅವರು ನೀಡುತ್ತಿರುವ ಹೇಳಿಕೆಗಳ ಕಾರಣ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾರ್ಟಿನ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಅಷ್ಟಕ್ಕೂ ಅಸಲಿ ಸಂಗತಿಯೇನು? ಇಲ್ಲಿದೆ ನೋಡಿ ಇನ್ನಷ್ಟು ವಿವರ.
ಈ ಸುದ್ದಿ ಓದಿ:-Ramya: ಕೊನೆಗೂ ನಟಿ ರಮ್ಯ ಮದುವೆ ಫಿಕ್ಸ್.! ಹುಟ್ಟು ಹಬ್ಬದ ದಿನದಂದೇ ಹಸೆಮಣೆ ಏರಲು ನಿರ್ಧಾರ ಮಾಡಿದ ನಟಿ ರಮ್ಯಾ.!
ಬಹಳ ಕಾಲದಿಂದ ದರ್ಶನ್ ಹಾಗೂ ಸರ್ಜಾ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿತ್ತು. ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನ ಮತ್ತು ಕರ್ಣನಂತಹ ಆಪ್ತಮಿತ್ರರ ಪಾತ್ರಕ್ಕೆ ಬಣ್ಣ ಹಚ್ಚಿದವರು ನಿಜ ಬದುಕಿನಲ್ಲೂ ಹಾಗೆ ಇದ್ದರು. ಮುಂದುವರೆದು ಸಜ್ಜನ್ ನಿರ್ದೇಶನ ಮತ್ತು ನಿರ್ಮಾಣದ ಹಾಗೂ ಸರ್ಜಾ ಪುತ್ರಿ ಲಾಂಚ್ ಆದ ಪ್ರೇಮ ಬರಹ ಸಿನಿಮಾವನ್ನು ತಮ್ಮದೇ ತೂಗುದೀಪ ಪ್ರೊಡಕ್ಷನ್ ನಲ್ಲಿ ವಿತರಣೆ ಮಾಡಿ ಸಿನಿಮಾದಲ್ಲಿನ ಆಂಜನೇಯನ ಹಾಡೊಂದಕ್ಕೆ ಸರ್ಜಾ ಕುಟುಂಬದೊಂದಿಗೆ ಹೆಜ್ಜೆ ಕೂಡ ಹಾಕಿದ್ದರು.
ಆದರೆ ಇದೇ ಪ್ರೇಮ ಬರಹ ಸಿನಿಮಾ ಕಾರಣದಿಂದಾಗಿ ಎರಡು ಕುಟುಂಬಗಳ ನಡುವೆ ವೈ’ಮ’ನ’ಸು ಗೆ ಕಾರಣವಾಗಿದೆ. ಆರಂಭದಲ್ಲಿ ಇದು ಗೌಪ್ಯವಾಗಿ ಇದ್ದರು ಇತ್ತೀಚೆಗೆ ಕಾರ್ಯಕ್ರಮಗಳಲ್ಲಿ ದರ್ಶನ್ ಕಂಡ ಕೂಡಲೇ ಧ್ರುವ ಸರ್ಜಾ ಅವರು ವೇದಿಕೆಯಿಂದ ಇಳಿದು ಹೋದದ್ದು ಮತ್ತು ಹುಟ್ಟು ಹಬ್ಬದಂದು ಮಾಧ್ಯಮದವರು ಕೇಳಿದ ನೇರ ಪ್ರಶ್ನೆಗೆ.
ಹೌದು ಮನಸ್ಸಿನಲ್ಲಿ ಒಂದು ಇಟ್ಟುಕೊಂಡು ಹೊರಗಡೆ ನಟಿಸಲು ಬರುವುದಿಲ್ಲ, ನನ್ನ ಬಳಿ ಅವರಿಗೆ ಕೇಳಲು ಕೆಲವು ಪ್ರಶ್ನೆಗಳಿವೆ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಮೇಲೆ ನಾವು ಇದನ್ನು ಸುಧಾರಿಸಕೊಳ್ಳಬೇಕೋ ಬೇಡವಾ ಎನ್ನುವುದನ್ನು ನಿರ್ಧರಿಸುತ್ತೇವೆ ಎಂದು ಮ’ನ’ಸ್ತಾ’ಪ ಇರುವುದು ನಿಜ ಎನ್ನುವುದನ್ನು ಧ್ರುವ ಒಪ್ಪಿಕೊಂಡಿದ್ದರು.
ಇದು ಇಷ್ಟೇ ಆಗಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಆದರೆ ಅದ್ಯಾವಾಗ ರೇಣುಕಾ ಸ್ವಾಮಿ ಕೊ’ಲೆ ವಿಚಾರವಾಗಿ ದರ್ಶನ್ ರವರು ಅರೆಸ್ಟ್ ಆದರೂ ಆನಂತರ ಕೊಟ್ಟ ಹೇಳಿಕೆಗಳು ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಡಿ ವರ್ಸಸ್ ಡಿ ಎನ್ನುವಷ್ಟರ ಮಟ್ಟಿಗೆ ಡಿ ಬಾಸ್ ದರ್ಶನ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ.
ಧ್ರುವ ಈ ಪ್ರಕರಣದ ಬಗ್ಗೆ ಹಿಂದೆಯೇ ಪ್ರತಿಕ್ರಿಯಿಸಿದ್ದರು. ದರ್ಶನ್ ಅವರಿಗೂ ಒಬ್ಬ ಮಗನಿದ್ದಾನೆ, ರೇಣುಕಾ ಸ್ವಾಮಿ ಕುಟುಂಬಕ್ಕೆ ಅ’ನ್ಯಾ’ಯವಾಗಿದೆ, ಕಾನೂನಿಗಿಂತ ಯಾರು ದೊಡ್ಡವರಲ್ಲ ತಪ್ಪು ಮಾಡಿದವರಿಗೆ ಶಿ’ಕ್ಷೆ ಆಗಲೇಬೇಕು ಎಂದು ಹೇಳಿದ್ದು ಮತ್ತು ಹೋದ ಕಾರ್ಯಕ್ರಮಗಳೆಲೆಲ್ಲಾ ದರ್ಶನ್ ಜೈಲು ವಿಚಾರವಾಗಿ ನೇರವಾಗಿ ಮಾತನಾಡುತ್ತಿರುವುದು ಡಿ ಬಾಸ್ ಅಭಿಮಾನಿಗಳನ್ನು ಕೆರಳಿಸಿದೆ.
ನಮ್ಮ ಬಾಸ್ ಅಭಿಮಾನಿ ಎಂದು ಬೆಳೆಯುವವರೆಗೂ ಹೇಳಿಕೊಂಡು ಈಗ ಈ ಬಗ್ಗೆ ಹೇಳಿಕೆಗಳನ್ನು ಕೊಟ್ಟು ಅವರ ಸೆಲೆಬ್ರಿಟಿ ಗಳನ್ನು ಎದುರು ಹಾಕಿಕೊಳ್ಳುತ್ತಿದ್ದೀರಾ.? ನಿಮ್ಮ ಮಾರ್ಟಿನ್ ಸಿನಿಮಾ ರಿಲೀಸ್ ಆಗಲಿ ನಾವು ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ಓಪನ್ ಚಾಲೆಂಜ್ ಹಾಕುತ್ತಿದ್ದಾರೆ.
ಈ ಸುದ್ದಿ ಓದಿ:- Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!
ದರ್ಶನ್ ಅವರು ಅರೆಸ್ಟ್ ಆದಾಗಲಿಂದಲೂ ಕೂಡ ಇನ್ನು ಮುಂದೆ ದರ್ಶನ ಅಭಿಮಾನಿಗಳು ಅವರು ರಿಲೀಸ್ ಆಗುವವರೆಗೂ ಕೂಡ ಯಾವ ಕನ್ನಡ ಸಿನಿಮಾವನ್ನು ಬೆಂಬಲಿಸುವುದಿಲ್ಲ, ಥಿಯೇಟರ್ ಕಡೆ ಬರುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದರು.
ಇದರ ನಡುವೆ ರಿಲೀಸ್ ಆದ ದುನಿಯಾ ವಿಜಯ್ ಅವರ ಭೀಮ ಸಿನಿಮಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಸಿನಿಮಾ ಎರಡು ಕೂಡ ಸೂಪರ್ ಹಿಟ್ ಆಗಿವೆ. ಕಥೆ ಚೆನ್ನಾಗಿದ್ದರೆ ಖಂಡಿತ ಜನ ಥಿಯೇಟರ್ ಕಡೆ ಬರುತ್ತಾರೆ ಎಂಬ ನಂಬಿಕೆ ಗಟ್ಟಿಗೊಳ್ಳುತ್ತಿದೆ ಆದರೆ ಧ್ರುವ ಸರ್ಜಾ ಅವರ ಹಣೆಬರಹ ಹೇಗಿದೆ ಎಂದು ಸಿನಿಮಾ ರಿಲೀಸ್ ವರೆಗೂ ಕಾದು ನೋಡೋಣ.