Darshan
ಚಿತ್ರದುರ್ಗದ ರೇಣುಕ ಸ್ವಾಮಿ ಕೊ’ಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ (Challenging star Darshan) A2 ಆರೋಪಿಯಾಗಿ ಜೈಲು ಸೇರಿ 110 ದಿನಗಳು ಕಳೆದಿವೆ. ಆದರೆ ದರ್ಶನ್ ಅವರಿಗೆ ಈ ಜೈಲುವಾಸ ಹೊಸದೇನಲ್ಲ, 2011ರಲ್ಲೂ ಕೂಡ ಪತ್ನಿ ಮೇಲೆ ಮರಣಾಂತಿಕ ಹ.ಲ್ಲೆ ಮಾಡಿದಾಗ ವಿಜಯಲಕ್ಷ್ಮಿ (Wife Vijayalakshmi) ಅವರು ಕಂಪ್ಲೇಂಟ್ ಆಧಾರವಾಗಿ ನಟ ಅರೆಸ್ಟ್ ಆಗಿದ್ದರು.
ಆಗಲು ದರ್ಶನ್ ಕೆಲ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯಬೇಕಾಗಿ ಬಂದಿತ್ತು. ನಂತರ ಚಿತ್ರರಂಗದ ಹಿರಿಯರು, ಕುಟುಂಬಸ್ಥರು ಹಾಗೂ ಕಾನೂನು ಸಲಹೆ ಮಧ್ಯಸ್ಥಿಕೆ ಮೇರೆಗೆ ತಮ್ಮ ಕಂಪ್ಲೇಂಟ್ ವಾಸ್ ವಾಪಸ್ ತೆಗೆದುಕೊಳ್ಳುವ ಮನಸ್ಸು ಮಾಡಿದರು ವಿಜಯಲಕ್ಷ್ಮಿ.
ಆದರೆ ವಿಷಯ ಅದಲ್ಲ, 2011ರಲ್ಲಿ ಮಾತ್ರವಲ್ಲ ಅದಾದ ಮೇಲೆ ಕೂಡ ಸಾಕಷ್ಟು ಬಾರಿ ಇವರಿಬ್ಬರ ನಡುವೆ ಮ’ನ’ಸ್ತಾ’ಪ ಏರ್ಪಟ್ಟಿದೆ. 2016ರಲ್ಲೂ ಕೂಡ ಮತ್ತೊಮ್ಮೆ ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ವಿಚಾರ ಸುದ್ದಿಯಾಗಿತ್ತು. ಇದಲ್ಲದೆ ಪವಿತ್ರ ಹಾಗೂ ದರ್ಶನ್ ಅವರ ನಡುವಿನ ಸಂಬಂಧವೇನು ಗುಟ್ಟಾಗಿ ಉಳಿದಿಲ್ಲ, ಮೂರ್ನಾಲ್ಕು ವರ್ಷಗಳ ಹಿಂದೆಯೇ ಜಗಜಾಹಿರಾಗಿದೆ.
ವಿಜಯಲಕ್ಷ್ಮಿ ಪವಿತ್ರ ಗೌಡ ನಡುವಿನ ಸೋಶಿಯಲ್ ಮೀಡಿಯಾ ಪೋಸ್ಟ್ ವಾರ್ ವಿಚಾರ ಕೂಡ ಎಲ್ಲರಿಗೂ ತಿಳಿದೆ ಇದೆ. ಇಷ್ಟೆಲ್ಲಾ ಆಗಿದ್ದರು ವಿಜಯಲಕ್ಷ್ಮಿ ಅವರು ಇನ್ನು ಸಹ ದರ್ಶನ್ ಅವರನ್ನು ಸಹಿಸಿಕೊಂಡಿದ್ದಾರೆ. ಅದಲ್ಲದೆ ಪವಿತ್ರ ಗೌಡರ ಅವರ ಕಾರಣಕ್ಕೆ ದರ್ಶನ್ ಅವರು ಜೈಲು ಸೇರಿದ್ದರೂ ಪತಿಯನ್ನು ಕಾಪಾಡಿಕೊಳ್ಳಲು ದೇವಸ್ಥಾನ ಸುತ್ತುತ್ತಿರುವುದು ವಿಶೇಷ, ಪೂಜೆ ಸೇವೆ ಮಾಡುತ್ತಿರುವುದು ಮಾತ್ರವಲ್ಲ ಕಾನೂನು ಹೋರಾಟಕ್ಕೂ ಕೂಡ ಮುಂದಾಗಿದ್ದಾರೆ.
ಇದೇ ಕಾರಣಕ್ಕೆ ಡಿ ಬಾಸ್ ಅಭಿಮಾನಿ ವಲಯದಿಂದ ವಿಜಯಲಕ್ಷ್ಮಿ ಅವರು ದೇವತೆ ಎಂದು ಕರೆಸಿಕೊಳ್ಳುತ್ತಿದ್ದಾರೆ. ಇದೆಲ್ಲ ಸರಿ ಆದರೂ ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ ಮಾಡಿಕೊಂಡು ವಿ’ಚ್ಛೇ’ದ’ನದ ಹಂತದವರೆಗೂ ಹೋಗುವ ಸೆಲೆಬ್ರಿಟಿ ಗಳ ಮಧ್ಯೆ ದರ್ಶನ್ ಪ್ರಕರಣ ವಿಭಿನ್ನ ಎನಿಸುತ್ತಿದೆ.
ಯಾಕೆಂದರೆ ಪ್ರೀತಿಸಿ ಮದುವೆ ಆಗಿದ್ದರು ಪರ ಸ್ತ್ರೀ ಸಹವಾಸದಿಂದಹ ಸದಾ ಕಾಲ ಪತ್ನಿಗೆ ತೊಂದರೆ ಮಾಡುತ್ತಿರುವ ದರ್ಶನ್ ಅವರನ್ನು ಬಿಟ್ಟು ಹೋಗುವ ನಿರ್ಧಾರ ವಿಜಯಲಕ್ಷ್ಮಿ ಅವರು ಮಾಡಲಿಲ್ಲವೇ ಎಂದೆನಿಸುತ್ತದೆ. ಆಗಾಗ ಈ ಬಗ್ಗೆ ಗಾಳಿ ಸುದ್ದಿ ಕೂಡ ಹರಡುತ್ತಿರುತ್ತದೆ, ಈಗಲೂ ಪತಿ ಜೈಲಿಂದ ಬಂದ ಮೇಲೆ ವಿಜಯಲಕ್ಷ್ಮಿ ಡಿ’ವೋ’ರ್ಸ್ ಕೊಡುತ್ತಾರೆ ಎನ್ನುವ ಸುದ್ದಿಯಿದೆ.
ಆದರೆ ಆ ಉದ್ದೇಶ ಇಟ್ಟಿದ್ದರೆ ಬಹುಶ: ಇವರು ಇಷ್ಟೆಲ್ಲಾ ಓಡಾಡುತ್ತಲೇ ಇರಲಿಲ್ಲ ಎನ್ನುವುದನ್ನು ಬಲವಾಗಿ ನಂಬಬಹುದು. ಅಂದು ಇಂದು ಎಂದೆಂದೂ ದರ್ಶನ್ ಅವರಿಗೆ ವಿಜಯಲಕ್ಷ್ಮಿ ಬೆಂಬಲವಾಗಿಯೇ ನಿಂತಿದ್ದಾರೆ. ಎಲ್ಲಾ ಕಡೆಯಿಂದ ಎಷ್ಟೇ ರೀತಿ ಅವಮಾನ ಆಗಿದ್ದರೂ ಸಹಿಸಿಕೊಂಡು ತನ್ನ ಮಗನಿಗೆ ಒಂದು ಉಜ್ವಲ ಭವಿಷ್ಯ ಕಟ್ಟಿ ಕೊಡಬೇಕು ಎನ್ನುವ ಒಂದೇ ಒಂದು ಉದ್ದೇಶಕ್ಕಾಗಿ.
ಪ್ರೀತಿಯ ಪುತ್ರ ವಿನೀಶ್ ಅವರಿಗಾಗಿ (Vineesh) ಎಲ್ಲವನ್ನು ಸಹಿಸಿಕೊಂಡು ವಿ’ಚ್ಚೆ’ದ’ನ ನೀಡದೆ ಹೊಂದಿಕೊಂಡು ಒಟ್ಟಿಗೆ ಇರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ ವಿಜಯಲಕ್ಷ್ಮಿ. ಗಂಡ ಹೆಂಡತಿ ನಡುವೆ ಜಗಳ, ಕೋಪ, ಮನಸ್ತಾಪ, ಬೇಸರ ಇದ್ದಿದ್ದೆ ಆದರೆ ಎಲ್ಲವು ಎಲ್ಲೇ ಮೀರಿ ಹೋದ ಮೇಲೂ ಸಹಿಸಿಕೊಳ್ಳುವ ತಾಳ್ಮೆ ಕೆಲವರಿಗಷ್ಟೇ ಇರುತ್ತದೆ.
ಅಂತ ಸಾಲಿಗೆ ವಿಜಯಲಕ್ಷ್ಮಿಯವರು ಕೂಡ ಸೇರುತ್ತಾರೆ. ದರ್ಶನ್ ಅವರು ಏನು ಅಲ್ಲದ ದಿನದಿಂದಲೂ ಜೊತೆಗಿರುವ ವಿಜಯಲಕ್ಷ್ಮಿ ಅವರು ಇಂದು ಇಷ್ಟೆಲ್ಲ ಕಾಂಟ್ರವರ್ಸಿಗಳ ನಡುವೆಯೂ ಕೂಡ ಗಂಡನ ಪರವೇ ನಿಂತಿದ್ದಾರೆ, ಗಂಡನನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಿಜಕ್ಕೂ ವಿಜಯಲಕ್ಷ್ಮಿ ಅವರು ಗ್ರೇಟ್ ಅಲ್ಲವೇ?…