Druva Sarja
ಧ್ರುವ ಸರ್ಜಾ (Druva Sarja) ನಟನೆಯ ಭರ್ಜರಿ ಸಿನಿಮಾದ ಯಶಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದ್ದೂರಿ, ಬಹದ್ದೂರ್ ಬಳಿಕ ಮೂರನೇ ಚಿತ್ರ ಭರ್ಜರಿ ಕೂಡ ಸೂಪರ್ ಹಿಟ್ ಆಗಿ ನಟ ಹ್ಯಾಟ್ರಿಕ್ ಹೊಡೆದದ್ದು ದಾಖಲೆಯಾಗಿದೆ. ಧ್ರುವ ಸರ್ಜಾ ರವರ ಈ ಸಕ್ಸಸ್ ಹಿಂದೆ ಮತ್ತೊಬ್ಬ ಸ್ಟಾರ್ ನಟನ ಕೂಡ ತ್ಯಾಗದ ಪಾಲು ಇದೆಯಂತೆ.
ಧ್ರುವ ಸರ್ಜಾ ಅವರ ಭರ್ಜರಿ ಸಿನಿಮಾ ನೂರು ದಿನ ಪೂರೈಸುವುದಕ್ಕೆ ಅಪ್ಪು ಕೂಡ ಕಾರಣವಂತೆ. ಸದ್ಯಕ್ಕೀಗ ಧ್ರುವ ಸರ್ಜಾ ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್ ಪ್ಯಾನ್ – ವರ್ಡ್ ಮಟ್ಟದಲ್ಲಿ ಅಕ್ಟೋಬರ್ 11 ರಂದು ರಿಲೀಸ್ ಆಗುತ್ತಿದೆ. ಮಾರ್ಟಿನ್ ಸಿನಿಮಾದ ಸಂಬಂಧಿತ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ಧ್ರುವ ಸರ್ಜಾ ಅವರು ಖಾಸಗಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ
ಹಳೆ ವಿಚಾರವನ್ನು ನೆನೆದು ಸಿನಿಮಾ ನೂರು ದಿನ ಪೂರೈಸುವುದಕ್ಕೆ ಕಾರಣರಾದ ಪುನೀತ್ ರಾಜಕುಮಾರ್ (Puneeth Rajkumar) ಅವರ ಹೃದಯವಂತಿಕೆ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಭರ್ಜರಿ ಸಿನಿಮಾ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಇತ್ತು. ಆದರೆ, ಪುನೀತ್ ರಾಜ್‌ಕುಮಾರ್ ಮನಸ್ಸು ಮಾಡದೇ ಹೋಗಿದ್ದರೆ ಭರ್ಜರಿ ಸಿನಿಮಾ ಪ್ರಮುಖ ಚಿತ್ರಮಂದಿರಲ್ಲಿ 100 ದಿನ ಪೂರೈಸಲು ಆಗುತ್ತಲೇ ಇರಲಿಲ್ಲ.
ನನ್ನ ಸಿನಿಮಾಗೆ ನೂರು ದಿನ ಹತ್ತಿರ ಇರುವಾಗ ಪುನೀತ್ ರಾಜಕುಮಾರ್ ಅವರ ನಟನೆಯ ಹರ್ಷ ನಿರ್ದೇಶನದ ಅಂಜನಿಪುತ್ರ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿತ್ತು. ಆ ಸಿಚುವೇಶನ್ ಹೇಗಿತ್ತು ಎಂದರೆ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿಯಲ್ಲಿ ಭರ್ಜರಿ ಸಿನಿಮಾ 93-94 ದಿನದಲ್ಲಿತ್ತು.
ನಾನು ಯೋಚನೆ ಮಾಡಿದೆ ಮುಂದಿನ ವಾರಕ್ಕೆ ನರ್ತಕಿ ಚಿತ್ರಮಂದಿರಕ್ಕೆ ಅಂಜನಿಪುತ್ರ ಹಾಕಿದರೆ ಸರಿಯಾಗಿ ಆ ದಿನದವರೆಗೆ 99 ದಿನ ಆಗುತ್ತೆ. ಆದರೆ ಒಂದೇ ಒಂದು ದಿನಕ್ಕೆ ಮಿಸ್ ಆಗಿ ಹೋಗುತ್ತಲ್ಲ ಅಂದುಕೊಂಡು ಏನು ಮಾಡೋದು ಅಂತ ಸಕ್ಕತ್ ಕನ್ಫ್ಯೂಸ್ ಅಂಡ್ ಟೆನ್ಶನ್ ಆಯಿತು. ಅಪ್ಪು ಸರ್ ನೇ ಕೇಳಿಕೊಳ್ಳೋದು ಎಂದುಕೊಂಡೆ ಆದರೆ ಕೇಳುವುದು ತಪ್ಪಲ್ವಾ? ಆದರೂ ಫೋನ್ ಮಾಡಿದೆ.
ನಾನು ಫೋನ್ ಮಾಡಿ ಇರುವುದು ಹೇಳಿಕೊಂಡೆ. ಒಂದು ವಾರ ಆಗಿದ್ದರೆ 100 ದಿನ ಆಗಿರೋದು, ಏನಾದರೂ ಟ್ರೈ ಮಾಡಬಹುದಾ? ಅಂತ ಕೇಳಿದೆ, ಅದಕ್ಕೆ ಅಪ್ಪು ಬ್ರೋ ಕಮಿಟ್‌ಮೆಂಟ್ ಇದೆ, ಈಗಾಗಲೇ ಪ್ರೊಡ್ಯೂಸರ್‌ಗಳು ಲಾಕ್ ಆಗಿ ಹೋಗಿದ್ದಾರೆ, ನಾನು ಎಷ್ಟು ಆಗುತ್ತೋ ಅಷ್ಟು ಮ್ಯಾಕ್ಸಿಮಮ್ ಪ್ರಯತ್ನ ಪಡುತ್ತೇನೆ ಅಂತ ಹೇಳಿ ಫೋನ್ ಇಟ್ಟರು.
ಇದೆಲ್ಲಾ ಆಗಿ 3-4 ಗಂಟೆ ಆಗುವಷ್ಟರಲ್ಲಿ ಮತ್ತೆ ಕಾಲ್ ಬಂತು, ಯು ಆರ್ ಮೈ ಫ್ಯಾಮಿಲಿ ಮ್ಯಾನ್. ನಾನು ಪಕ್ಕದ ಥಿಯೇಟರ್‌ಗೆ ಹೋಗ್ತೀನಿ ಹೇಗೋ ಒಪ್ಪಿಸಿದ್ದೀನಿ ಎಂದು ಹೇಳಿದರು. ಸಂತೋಷವೇನೋ ಆಯ್ತು ಆದರೆ ನಂತರ ಶಾ’ಕ್ ಆಯಿತು. ಯಾಕೆಂದರೆ ಫಸ್ಟ್ ಟೈಮ್ ಪುನೀತ್ ರಾಜ್‌ಕುಮಾರ್ ಸಿನಿಮಾ ಸಂತೋಷ್, ಇಲ್ಲ ನರ್ತಕಿ ಬಿಟ್ಟು ಆ ಕಾಂಪೌಂಡ್‌ನಿಂದ ಬೇರೆ ಥಿಯೇಟರ್‌ಗೆ ಹೋಗಿದ್ದಂತೆ.
ನಾನು ಮನವಿ ಮಾಡಿಕೊಂಡಿದ್ದಕ್ಕೆ ಪುನೀತ್ ಸರ್ ಅಂಜನಿಪುತ್ರ ಸಿನಿಮಾವನ್ನು ಪೋಸ್ಟ್‌ಪೋನ್ ಮಾಡಿ ನನ್ನ ಸಿನಿಮಾಗೆ ಅವಕಾಶ ಮಾಡಿಕೊಟ್ಟಿದ್ದರು. ಫಸ್ಟ್ ಟೈಮ್ ತಮ್ಮ ಸಿನಿಮಾವನ್ನು ನರ್ತಕಿ, ಸಂತೋಷ್ ಥಿಯೇಟರ್ ಬಿಟ್ಟು ಬೇರೆ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿದ್ದರು. ಎಂದು ಅಪ್ಪು ಸಹಾಯ ನೆನೆದು ಕೊಂಡಾಡಿದ್ದಾರೆ.