Druva Sarja
ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಸಹೋದರ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಡುವಿನ ಬಾಂಧವ್ಯ ಹೇಗಿತ್ತು ಎಂಬ ಬಗ್ಗೆ ಇಡೀ ಕರ್ನಾಟಕ ಮಾತನಾಡುತ್ತಿದೆ, ಇದಕ್ಕೆ ಸಾಕ್ಷಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ಕೂಡ ಕಾಣ ಸಿಗುತ್ತವೆ. ಸಾಕ್ಷಾತ್ ರಾಮ ಲಕ್ಷ್ಮಣರ ಹಾಗೆ ಅನ್ಯೋನ್ಯತೆಯಿಂದ ಇದ್ದ ಈ ಸೋದರರ ಮೇಲೆ ವಿಧಿ ತನ್ನ ಕ್ರೂ’ರ ದೃಷ್ಟಿಹರಿಸಿ ನಗು ತುಂಬಿದ ಮನೆ ಮನೆಗಳಲ್ಲಿ ಅಂಧಕಾರ ಸೃಷ್ಟಿಸಿದೆ.
ಚಿರಂಜೀವಿ ಅಗಲಿಕೆ ಬಳಿಕ ಬಹಳ ಸಮಯ ತೆಗೆದುಕೊಂಡು ವಾಸ್ತವಕ್ಕೆ ಹೊಂದಿಕೊಂಡು ಕುಟುಂಬದವರು ಬದುಕುತ್ತಿದ್ದಾರಾದರೂ ಚಿರು ಸಾ’ವು ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳುವಂತದ್ದಲ್ಲ. ಹೀಗಾಗಿ ಅಣ್ಣನ ನೆನಪು ಹೆಚ್ಚಾಗಿ ಕಾಡಿದಾಗಲೆಲ್ಲ ತಮ್ಮ ಧ್ರುವ ಸರ್ಜಾ ಹೋಗಿ ಅಣ್ಣನ ಸಮಾಧಿ ಹತ್ತಿರ ಮಲಗಿ ಬಿಡುವುದು.
ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ಒಂದು ವಿಡಿಯೋ ವೈರಲ್ ಆಗಿತ್ತು. ಕನಕಪುರ ರೋಡ್ ನೆಲಗುಳಿ ಫಾರಂ ಹೌಸ್ ನಲ್ಲಿರುವ ಚಿರು ಸಮಾಧಿ ನೋಡಲು ಹೋಗಿದ್ದ ಅವರ ಅಭಿಮಾನಿಗಳಿಗೆ ಸಮಾಧಿ ಮೇಲೆ ಯಾರೋ ಮಲಗಿರುವುದು ಕಂಡು ಶಾ’ಕ್ ಆಗಿತ್ತು. ಮೊದಮೊದಲು ಹೀಗೆ ನೋಡಿದಾಗ ಯಾರೋ ಕುಡುಕ ಅಥವಾ ಹುಚ್ಚ ಮಲಗಿರಬಹುದು ಎಂದು ಊಹಿಸಿದ್ದರು, ಎಬ್ಬಿಸಲು ಪ್ರಯತ್ನಿಸಿದ್ದರು ಎಚ್ಚರವಾಗಿರಲಿಲ್ಲ.
ಹತ್ತಿರ ಹೋಗಿ ನೋಡಿದಾಗಲೇ ಧ್ರುವಸರ್ಜಾ ಅಂತಾ ಗೊತ್ತಾದದ್ದು. ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆದ ಮೇಲೆ ಈಗ ಆ ಜಾಗಕ್ಕೆ ಒಂದು ಗೇಟ್ ಹಾಕಲಾಗಿದೆ. ಕಾರಣ ಇಷ್ಟೇ ಆಗಾಗ ಧ್ರುವ ಸರ್ಜಾ ಅವರಿಗೆ ಅಲ್ಲಿ ಹೋಗಿ ಮಲಗುವುದು ಅಭ್ಯಾಸವಾಗಿರುವುದರಿಂದ ಯಾರು ಡಿಸ್ಟರ್ಬ್ ಮಾಡಬಾರದೆಂದು.
ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೊ ವೈರಲ್ ಆದ ಮೇಲೆ ಧ್ರುವ ಸರ್ಜಾ ಅವರಿಗೆ ಈ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿದೆ. ಅಂತೆಯೇ ಸದ್ಯಕ್ಕೆ ನಮ್ಮ ಬಹು ನಿರೀಕ್ಷಿತ ಪ್ಯಾನ್-ವರ್ಡ್ ಸಿನಿಮಾ ಮಾರ್ಟಿನ್ ಪ್ರಚಾರದ ಸಂದರ್ಶನದಲ್ಲೂ ಈ ಪ್ರಶ್ನೆಗಳು ಎದುರಾಗಿವೆ ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು.
ಸಾಮಾನ್ಯವಾಗಿ ಮನೆಗಳಲ್ಲಿ ನಾವು ಫಸ್ಟ್ ಫ್ಲೋರ್ ನಲ್ಲಿ ಇರ್ತೇವೆ ಎಂದುಕೊಳ್ಳಿ. ಅಪ್ಪ ಅಮ್ಮ ಫ್ರೆಂಡ್ಸ್ ಅಥವಾ ಗೆಸ್ಟ್ ಬಂದರೆ ಅವರು ಗ್ರೌಂಡ್ ಫ್ಲೋರ್ ನಲ್ಲಿ ಇರುತ್ತಾರೆ. 15 ಫೀಟ್ ಅಷ್ಟೇ ಡಿಸ್ಟನ್ಸ್ ಇರುತ್ತದೆ. ಇಲ್ಲೂ ಅಷ್ಟೇ ಅಣ್ಣನ ಸಮಾಧಿ ಮೇಲೆ ಮಲಗಿದರೆ ಬರಿ ಅವನು ನನ್ನಿಂದ 6 ಫೀಟ್ ಕೆಳಗಿದ್ದಾನೆ ಅಷ್ಟೇ ಎನಿಸುತ್ತದೆ.
ಹಾಗಾಗಿ ನೆನಪು ಕಾಡಿದಾಗಲೆಲ್ಲ ಅಲ್ಲಿ ಹೋಗಿ ಮಲಗುತ್ತೇನೆ. ಇದರ ಬಗ್ಗೆ ಮನೆಯವರು ಏನು ಹೇಳುತ್ತಾರೆ ಎಂದು ಕೇಳಿದಾಗ ಈಗ ಎಲ್ಲರಿಗೂ ಅರ್ಥವಾಗಿದೆ. ಮನೆಯಲ್ಲಿ ಮಲಗಿಲ್ಲ ಅಂದರೆ, ಅಣ್ಣನ ಸಮಾಧಿ ಬಳಿ ಮಲಗಿದ್ದಾರೆ ಅಂತ ಇಡೀ ಕುಟುಂಬಕ್ಕೂ ಗೊತ್ತಿದೆ. ಹೆಂಡತಿ, ಮಗಳು, ಅಪ್ಪ, ಅಮ್ಮ ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ.
ನನ್ನ ಹೆಂಡ್ತಿಗೂ ಗೊತ್ತು, ಈವಾಗ ನಮ್ಮ ಮಗಳು ಕೂಡ ಹೇಳುತ್ತಾಳೆ. ಅಪ್ಪ ಮನೆಯಲ್ಲಿ ಇಲ್ಲ ಎಲ್ಲಿ ಅಂದರೆ, ಇಲ್ಲಿ ಇರುತ್ತೇನೆ ಅಂತ. ಅಪ್ಪ ಕಾಣಿಸುತ್ತಿಲ್ಲ ದೊಡ್ಡಪ್ಪನ ಹತ್ತಿರ ಹೋಗಿದ್ದಾರೆ ಅಂತ ಹೇಳುತ್ತಾಳೆ. ನನ್ನ ಹೆಂಡತಿಗೂ ಅಷ್ಟೇ ಬೆಡ್ ಮೇಲೆ ಮಲಗಿಲ್ಲ ಅಂದರೆ ಇಲ್ಲೇ ಬಂದು ಮಲಗಿರುತ್ತೇನೆ ಅಂತ ಎಂದು ಹೇಳಿದ್ದಾರೆ.