Master Manjunath
ಸಿನಿಮಾ ಪ್ರಪಂಚ ಎನ್ನುವುದು ಒಂದು ರೀತಿ ಅದೃಷ್ಟದ ಆಟ ಕೂಡ ಹೌದು ಎನ್ನಬಹುದು. ಎಲ್ಲೋ ಸಣ್ಣಪುಟ್ಟ ಪಾತ್ರಮಾಡುತ್ತಿದ್ದ ನಟನನ್ನು ಒಂದೇ ಒಂದು ಅವಕಾಶ ಸೂಪರ್ಸ್ಟಾರ್ ರೀತಿ ಮಾಡಿಬಿಡುತ್ತದೆ. ಹಾಗೂ ಹಲವಾರು ಬ್ಲಾಕ್ಬಸ್ಟರ್ ಗಳನ್ನು ನೀಡಿದ್ದರು, ಕೆಲವೇ ಕೆಲವು ಸೋಲುಗಳು ಒಂದೇ ಬಾರಿಗೆ ಹೀರೋನ ಮಾರ್ಕೆಟ್ ಅನ್ನು ಪಾತಾಳಕ್ಕೆ ಕುಸಿಯುವ ರೀತಿ ಮಾಡಿಬಿಡುತ್ತದೆ.
ಹೀಗಾಗಿ ಇಲ್ಲಿ ಉಳಿಯಬೇಕು ಎಂದರೆ ಉತ್ತಮ ಅಭಿನಯ ಚಾತುರ್ಯದ ಜೊತೆ ಅಭಿಮಾನಿಗಳ ಆರೈಕೆಯ ಜೊತೆ ಅದೃಷ್ಟವು ಕೂಡ ಗಟ್ಟಿಯಾಗಿರಬೇಕು ಎಂದರೆ ತಪ್ಪಾಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ನಾವು ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟರನ್ನು ನೋಡಿದ್ದೇವೆ ಝೀರೋಯಿಂದ ಹೀರೋ ಆದವರು ಕೂಡ ಇದ್ದಾರೆ. ಹೀರೋ ಆಗಿ ಮೆರೆದಿದ್ದವರು ಕೆಲವೇ ವರ್ಷದಲ್ಲಿ ಮರೆಯಾಗಿ ಹೋದವರು ಕೂಡ ಇದ್ದಾರೆ.
ನಮ್ಮ ಕನ್ನಡ ಸಿನಿಮಾಗಳ 20 ವರ್ಷದ ಹಿಂದಿನ ಸಿನಿಮಾಗಳನ್ನು ನೋಡಿದಾಗ ಅಲ್ಲಿ ಬಾಲನಟರಾಗಿ ಮಿಂಚಿದವರು ಯಾವುದೇ ಸ್ಟಾರ್ ಗಿಂತಲೂ ಕಡಿಮೆ ಇರಲಿಲ್ಲ. ಬೇಬಿ ಶ್ಯಾಮಿಲಿ, ಮಾಸ್ಟರ್ ಆನಂದ್, ಮಾಸ್ಟರ್ ಮಂಜುನಾಥ್ ಹೀಗೆ ಆ ಸಮಯದಲ್ಲಿ ಇವರಿಗಾಗಿಯೇ ಕೆಲವು ಕಥೆಗಳು ತಯಾರು ಕೂಡ ಆಗಿದ್ದವು ಮಕ್ಕಳ ಕಥೆಯ ಆಧಾರಿತ ಸಿನಿಮಾಗಳಲ್ಲಿ ಇವರೇ ಹೀರೋ ಗಳಾಗಿ ಅಬ್ಬರಿಸಿದ್ದರು.
ಆ ದಿನಗಳಲ್ಲಿ ಸ್ಟಾರ್ ಹೀರೋಗಳಿಗೆ ಸಿಗುವಷ್ಟೇ ಸಂಭಾವನೆ ಇವರಿಗೂ ಕೊಡಲಾಗುತ್ತಿತ್ತಂತೆ. ಅದರಲ್ಲಿ ಮಾಸ್ಟರ್ ಮಂಜುನಾಥ್ ಅವರು ಆ ದಿನಗಳಲ್ಲಿ ಸಕ್ಕತ್ ಫೇಮಸ್ ಆಗಿದ್ದರು. ಮಾಸ್ಟರ್ ಮಂಜುನಾಥ್ ಎಂದ ತಕ್ಷಣ ನೆನಪಾಗುವುದು ರಣಧೀರ ಸಿನಿಮಾದಲ್ಲಿ ಖುಷ್ಬು ಅವರೊಂದಿಗೆ ಏನ್ ಹುಡುಗೀರು ಇದು ಯಾಕಿಂಗ್ ಆಡ್ತಾರೋ ಹಾಡಿನಲ್ಲಿ ಖುಷ್ಬು ಅವರನ್ನು ಕಾಡುತ್ತ ಕುಣಿಯುತ್ತಿದ್ದ ಹುಡುಗ. ಹಾಗೂ ನೋಡಿ ಸ್ವಾಮಿ ನಾವಿರೋದೆ ಹೀಗೆ ಈ ಸಿನಿಮಾದಲ್ಲಿ ಶಂಕರನಾಗ್ ಅವರೊಂದಿಗೆ ಕಾಣಿಸಿಕೊಂಡಿದ್ದ ಇವರ ನಟನೆಯನ್ನು ಮರೆಯಲು ಸಾಧ್ಯವಿಲ್ಲ.
ಆ ದಿನಗಳಲ್ಲೇ ಸುಮಾರು ಅರವತ್ತೆಂಟಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಇವರದ್ದು. ರವಿಚಂದ್ರನ್ ,ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಆ ಸಮಯದ ಎಲ್ಲ ನಾಯಕರ ಸಿನಿಮಾಗಳಲ್ಲೂ ಕೂಡ ಬಾಲನಟನಾಗಿ ಮಿಂಚಿದ್ದರು ಮಾಸ್ಟರ್ ಮಂಜುನಾಥ್. ಇವರ ಅಮೋಘ ನಟನೆ ಅದ್ಭುತವಾದ ಡೈಲಾಗ್ ಡೆಲವರಿ ಮುದ್ದು ಮುಖ ನೋಡಿ ಖಂಡಿತ ಇವರು ದೊಡ್ಡವರಾದ ಮೇಲೆ ಒಬ್ಬ ಹೀರೋ ಆಗೇ ಆಗುತ್ತಾರೆ ಎಂದು ಹಲವು ಜನರು ಅಂದು ಕೊಂಡಿದ್ದರು.
ಇವರು ನಟಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯ ಸ್ವಾಮಿ ಎನ್ನುವ ಪಾತ್ರವು ಇಡೀ ಭಾರತದ ತುಂಬೆಲ್ಲಾ ಫೇಮಸ್ ಆಗಿತ್ತು. ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹಿಂದಿ ತೆಲುಗು ಇಂಗ್ಲಿಷ್ ಮತ್ತು ಕಾಶ್ಮೀರಿ ಭಾಷೆಯ ಸಿನಿಮಾಗಳನ್ನು ಕೂಡ ಇವರು ಕಾಣಿಸಿಕೊಂಡು ಮೋಡಿ ಮಾಡಿದ್ದರು.ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇವರ ಅಭಿನಯ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದರು.
68 ಸಿನಿಮಾಗಳು ಹಾಗೂ 26 ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದ ಇವರು ಮೂರು ಕಿರುತೆರೆ ಧಾರಾವಾಹಿಗಳು ಮತ್ತು 5 ಟೆಲಿಫಿಲ್ಮ್ಸ್ ಗಳನ್ನು ನಿರ್ದೇಶನ ಕೂಡ ಮಾಡಿದ್ದರು. ಇವರು ನಟಿಸಿದ್ದ ಸ್ವಾಮಿ ಎನ್ನುವ ಇಂಗ್ಲಿಷ್ ಸಿನಿಮಾಕ್ಕೆ 6 ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಒಂದು ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು.
ಆ ದಿನಗಳಲ್ಲಿ ಅಷ್ಟೊಂದು ಮಿಂಚುತ್ತಿದ್ದ ಈ ನಟ ಬೆಳೆದಂತೆ ದೊಡ್ಡವರಾದಮೇಲೆ ಯಾಕೆ ಹೀರೋ ಆಗಲಿಲ್ಲ ಎನ್ನುವುದು ಹಲವರ ತಲೆಯಲ್ಲಿ ಕಾಡುವ ಪ್ರಶ್ನೆ ಹಾಗೂ ಅವರ ಅಭಿಮಾನಿಗಳ ಬೇಸರ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಇವರು ಸಂದರ್ಶಕರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಎಲ್ಲಾರು ಕೇಳುತ್ತಿದ್ದ ಈ ಪ್ರಶ್ನೆಗೆ ಕೂಡ ಬಹಿರಂಗವಾಗಿ ಉತ್ತರ ಹೇಳಿ ಎಲ್ಲರ ಗೊಂದಲಕ್ಕೆ ತೆರೆ ಹೇಳಿದ್ದಾರೆ.
ಅವರು 19 ನೇ ವಯಸ್ಸಿನಲ್ಲಿ ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟರಂತೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಎನ್ನುವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿನಿಮಾಟೋಗ್ರಫಿ ವಿಷಯದಲ್ಲಿ ಡಿಪ್ಲೋಮಾ ಮಾಡಿದರಂತೆ. ಆ ಸಮಯದಲ್ಲಿ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಬೇಕಾಗಿತ್ತು.
ನಂತರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಇನ್ಸ್ಪೆಕ್ಟರ್ ಕಾರಿಡಾರಿನಲ್ಲಿ ಪಬ್ಲಿಕ್ ರಿಲೇಶನ್ ಆಫೀಸರ್ ಆಗಿ ಕೂಡ ಮಾಸ್ಟರ್ ಮಂಜುನಾಥ್ ಅವರು ಕೆಲಸ ಮಾಡಿದ್ದರಂತೆ. ತರುವಾತ ತಮ್ಮದೇ ಆದ ಸ್ವಂತ ಪಿಆರ್ ಕನ್ಸಲ್ಟೆನ್ಸಿ ಸಂಸ್ಥೆಯನ್ನು ಕಟ್ಟಿ ಆ ಕಂಪನಿಯನ್ನು ನಡೆಸುತ್ತಿದ್ದಾರೆ. ಇದರ ನಡುವೆ ಸ್ವರ್ಣರೇಖ ಎನ್ನುವ ಕ್ರೀಡಾ ಪಟುವನ್ನು ವಿವಾಹವಾದರು. ಈ ಮುದ್ದಾದ ಜೋಡಿಗೆ ಈಗ ಒಂದು ಗಂಡು ಮಗುವಿದೆ. ಪುಟ್ಟ ಕುಟುಂಬದ ಜೊತೆ ಇವರು ಈಗ ಸಂತೋಷವಾಗಿದ್ದಾರೆ.
ಆದರೆ ಕನ್ನಡದ ಹಿಟ್ ಸಿನಿಮಾಗಳಾದ ಸಾಂಗ್ಲಿಯಾನ1 ಮತ್ತು 2, ರಣಧೀರ, ನೋಡಿ ಸ್ವಾಮಿ ನಾವಿರೋದೆ ಹೀಗೆ ಅಷ್ಟೇ ಅಲ್ಲದೆ ಹಿಂದಿಯಲ್ಲಿ ಕೂಡ ಅಮಿತಾಬ್ ಅವರ ಅಗ್ನಿಪಥ್ ಎನ್ನುವ ಸಿನಿಮಾದಲ್ಲಿ ಬಾಲ ಅಮಿತಾಭ್ ಆಗಿ ಕಾಣಿಸಿಕೊಂಡಿದ್ದ ಇವರಿಗೆ ಬೆಳೆಯುತ್ತಿದ್ದಂತೆ ಅವಕಾಶಗಳು ಕಡಿಮೆಯಾಯಿತಂತೆ. ಹಾಗಾಗಿ ಇವರು ಬ್ರೇಕ್ ತೆಗೆದುಕೊಂಡು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟರಂತೆ.
ನಂತರ ಕೂಡ ಹೀರೋ ಆಗಬೇಕು ಎನ್ನುವ ಆಸೆ ಇದ್ದರೂ ಆ ಸಂದರ್ಭ ಒದಗಿ ಬರದೆ ಬೇರೆ ಕೆಲಸಗಳಲ್ಲಿ ಅವರು ಬ್ಯುಸಿಯಾಗಿ ಬಿಟ್ಟರಂತೆ. ಹೀಗಾಗಿ ನಾನು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆಗಲಿಲ್ಲ ಎಂದು ಅವರು ಉತ್ತರ ಕೊಟ್ಟಿದ್ದಾರೆ.
ಇನ್ನು ಮುಂದೆಯಾದರೂ ಕನ್ನಡ ಸಿನಿಮಾದಲ್ಲಿ ಅವರು ಅಭಿನಯ ಮಾಡಲಿ ಹಾಗೂ ಅವರ ನಿರ್ದೇಶನದ ಒಳ್ಳೆಯ ಕಥೆಗಳುಳ್ಳ ಧಾರಾವಾಹಿಗಳು ಮತ್ತು ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಮೂಡಿಬರಲಿ ಎನ್ನುವ ನಿರೀಕ್ಷೆಯಲ್ಲಿ ಇಂದಿಗೂ ಸಹ ಮಾಸ್ಟರ್ ಮಂಜುನಾಥ್ ಅವರ ಅಭಿಮಾನಿಗಳು ಇದ್ದಾರೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.