Drone Prathap
ಡ್ರೋನ್ ಪ್ರತಾಪ್ (Drone Pratap) ಕನ್ನಡಿಗರಿಗೆ ಚಿರಪಚಿತರು. ಡ್ರೋನ್ ವಿಚಾರವಾಗಿ ದೇಶದಾದ್ಯಂತ ಸದ್ದು ಮಾಡಿ ನಂತರ ಕರ್ನಾಟಕದಲ್ಲಿ ಕು’ಖ್ಯಾ’ತಿಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಟ್ರೋಲ್ ಪ್ರತಾಪ್ ಅಂತಲೂ ಕರಸಿಕೊಂಡಿದ್ದರು.
ಆದರೆ ಒಂದೇ ಒಂದು ಕಾರ್ಯಕ್ರಮ ಇವರ ವರ್ಚಸ್ಸನ್ನೇ ಬದಲಾಯಿಸಿಬಿಟ್ಟಿತು, ಸಾಲದಕ್ಕೆ 10-20 ವರ್ಷಗಳಾಗಿದ್ದರು ಡ್ರೋ ಪ್ರತಾಪ್ ಅವರಿಂದ ಸರಿ ಮಾಡಿಕೊಳ್ಳಲಾಗದ ಅವರ ಬದುಕಿನ ಅದೆಷ್ಟೋ ಜಟಿಲತೆಗಳಿಗೆ ಈ ಕಾರ್ಯಕ್ರಮ ಅದರಲ್ಲೂ ನೇರವಾಗಿ ಕಿಚ್ಚ ಸುದೀಪ್ ಅವರಿಂದ ಪರಿಹಾರ ದೊರಕಿತ್ತು.
ಸೋಶಿಯಲ್ ಮೀಡಿಯಗಳಿಂದ ತೀರಾ ಹೀನಾಯವಾಗಿ ಅ’ವ’ಮಾನಕ್ಕೊಳಗಾಗಿದ್ದ ಡ್ರೋನ್ ಪ್ರತಾಪ್ ಇಂದು ಕುಟುಂಬದವರೊಡಗಿನ ಫೋಟೋಗಳನ್ನು ಹಂಚಿಕೊಂಡರೆ ಅದೇ ಸೋಶಿಯಲ್ ಮೀಡಿಯಾ ಕೊಂಡಾಡುತ್ತಿದೆ.
ಅಂತಿಯೇ ಇಂದು ಪ್ರತಾಪ್ ಶೇರ್ ಮಾಡಿದ ಫೋಟೋಗಳನ್ನು ನೋಡಿ ತಾವು ಕೂಡ ಬಿಗ್ ಬಾಸ್ ಕಾರ್ಯಕ್ರಮ (Bigboss show & Kicha Sudeep) ಹಾಗೂ ವಿಶೇಷವಾಗಿ ಸುದೀಪ್ ಅವರಿಗೆ ಧನ್ಯವಾದ ಹೇಳಿ ಮನ ತುಂಬಿಕೊಂಡಿದ್ದಾರೆ ನೆಟ್ಟಿಗರು.
ಪ್ರತಾಪ್ ಅವರು ಕಾರ್ಯಕ್ರಮದಲ್ಲಿ ಒಪ್ಪಿಕೊಂಡ ಹಾಗೆ ಅವರಿಂದ ಕೆಲ ತಪ್ಪುಗಳಾಗಿದೆ. ವಯಸ್ಸಿನ ದುಡುಕುತನವೋ ಅಥವಾ ಬೇಗ ಪಾಪುಲರ್ ಆಗಬೇಕೆನ್ನುವವ ಹುಚ್ಚಾಟವೋ ಇಂತಹದೊಂದು ಕ್ರೇಝ್ ಗೆ ಸಿಕ್ಕಿ ತಮ್ಮ ಬದುಕನ್ನೇ ಅಸ್ತವ್ಯಸ್ತ ಮಾಡಿಕೊಂಡು ಕಾಗೆ ಪ್ರತಾಪ, ಸುಳ್ಳುಗಾರ, ಮೋಸಗಾರ ಎನ್ನುವ ಕಳಂಕ ಹೊತ್ತಿದ್ದರು ಇವರು.
ಊರೇ ಬೇಡವೆಂದರೂ ಕುಟುಂಬ ಕೈಹಿಡಿಯುತ್ತದೆ ಎನ್ನುವ ನಂಬಿಕೆ ಆದರೆ ಡ್ರೋನ್ ಪ್ರತಾಪ್ ತಾನು ಬಹಳ ಪ್ರೀತಿಸುತ್ತಿದ್ದ ಕುಟುಂಬದಿಂದಲೂ ತಮ್ಮ ತಪ್ಪಿನ ಕಾರಣದಿಂದ ದೂರವಾಗಬೇಕಾಗಿ ಬಂತು.
ಅದರಲ್ಲೂ ತಂದೆ ಮರಿ ಮಾದಪ್ಪ ಎಂದರೆ ಡೋನ್ ಅವರಿಗೆ ಎಲ್ಲಿರದ ಪ್ರೀತಿ ಮೂರು ವರ್ಷಗಳ ಊರಿಗೆ ಹೋಗಲಾಗದೆ ತಂದೆಯನ್ನು ಮಾತನಾಡಿಸಲಾಗದೆ ನರಳುತ್ತಿದ್ದ ಡ್ರೋನ್ ಪ್ರತಾಪ್ ಅವರಿಗೆ ತಮ್ಮಿಂದಾದ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ಶಕ್ತಿಯು ಸುದೀಪ್ ಹಾಗೂ ಬಿಗ್ ಬಾಸ್ ಕಾರ್ಯಕ್ರಮ ಇಲ್ಲದಿದ್ದರೆ ಆಗುತ್ತಲೇ ಇರಲಿಲ್ಲ.
ಆದರೆ ಕಲರ್ಸ್ ಕನ್ನಡ ವಾಹಿನಿಯ ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 10 ಉಳಿದೆಲ್ಲ ಸ್ಪರ್ಧಿಗಳ ಪಾಲಿಗಿಂತ ಅತಿ ಹೆಚ್ಚು ಸಂತೋಷವನ್ನು ಪ್ರತಾಪ್ ಅವರಿಗೆ ನೀಡಿದೆ. ಯಾಕೆಂದರೆ ಡ್ರೋನ್ ಪ್ರತಾಪ್ ಅವರ ವ್ಯಕ್ತಿತ್ವವನ್ನು 24X7 ಕಂಡ ಕನ್ನಡಿಗರು ಕರಗಿ ಹೋಗಿದ್ದಾರೆ.
ಆಗಿದ್ದು ಆಗಿ ಹೋಗಿದೆ, ಇನ್ನೂ ಈತ ನಮ್ಮ ಮನೆಯ ಮಗ, ಒಂದು ಚಾನ್ಸ್ ಕೊಡೋಣಇನ್ನು ಮುಂದೆ ಚೆನ್ನಾಗಿ ಬದುಕಲಿ ಸಾಕು ಎಂದು ಆಶೀರ್ವಾದಿಸಿದ್ದಾರೆ. ಅದಕ್ಕೆ ಸಾಕ್ಷಿ ಸೀಸನ್ ಕೊನೆ ದಿನದವರೆಗೂ, ಮೂರನೇ ಸ್ಥಾನದವರೆಗೂ ಇವರು ಮನೆಯಲ್ಲಿ ಇದ್ದಿದ್ದು. ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡರು ತನ್ನ ತಂದೆಯನ್ನು ವಾಪಸ್ ಕೊಟ್ಟಿದ್ದ ವೇದಿಕೆಗೆ ಪ್ರತಾಪ್ ಎಂದಿಗೂ ಚಿರುಋಣಿ ಎಂದು ಹೇಳಿದ್ದಾರೆ.
ದೂರವಾಗಿದ್ದ ಅಪ್ಪ ಮಗನನ್ನು ಒಂದು ಮಳೆದ ಪುಣ್ಯ ಈ ವೇದಿಕೆಗೆ ಇದೆ. ಈ ವಿಚಾರದಲ್ಲಿ ಸುದೀಪ್ ಅವರೇ ಇನಿಷಿಯಟ್ ತೆಗೆದುಕೊಂಡರು ಎಂದರೂ ತಪ್ಪಾಗಲಾರದು. ಸುದೀಪ್ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಪ್ರಯತ್ನವಾಗಿ ತಂದೆ-ಮಗ ಮುನಿಸು ಕೋ’ಪ ಮರೆತು ಮತ್ತೆ ಒಂದಾದರು.
https://www.instagram.com/reel/DAVeorBo7iB/?igsh=ZWV2YmRxcDVjYjA5
ಇಂದು 11ನೇ ಸೀಸನ್ ಆರಂಭದ ಸಮಯ ಬಹುತೇಕ ಈ ಘಟನೆ ನಡೆದು ವರ್ಷ ಕಳೆದಿದ್ದರೂ ಗದ್ದೆಯಲ್ಲಿ ಕೆಲಸ ಮಾಡಿ ಅಪ್ಪನೊಂದಿಗೆ ಊಟಕ್ಕೆ ಕುಳಿತ ಫೋಟೋ ಹಂಚಿಕೊಂಡಿರುವ ಪ್ರತಾಪ್ ಅವರ ಪೋಸ್ಟ್ ಒಂದು ಮತ್ತೆ ಹಳೆಯದೆನ್ನೆಲ್ಲಾ ನೆನಪು ಮಾಡಿದೆ. ಬಿಗ್ ಬಾಸ್ ಗೆ ಹೋದಮೇಲೆ ಯಾರ ಬದುಕು ಹೇಗೆ ಬದಲಾಗುತ್ತದೆ ಗೊತ್ತಿಲ್ಲ ಆದರೆ ಇವರು ಪಾಲಿಗೆ ಮಾತ್ರ ಬಹಳ ಪಾಸಿಟಿವ್ ಆಗಿದೆ. ಇದಕ್ಕೆಲ್ಲ ಕಾರಣ ಸುದೀಪ್ ಅವರೇ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.