Druva Sarja
ಧ್ರುವ ಸರ್ಜಾ (Druva Sarja) ಈ ಹೆಸರಿನಲ್ಲಿಯೇ ಒಂದು ಖದರ್ ಇದೆ. ಈ ಆಟಿಟ್ಯೂಡ್ ಇಟ್ಟುಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ ಅವರ ಸಿನಿ ಜರ್ನಿಗೆ 12 ವರ್ಷ ತುಂಬಿದೆ. 12 ವರ್ಷಗಳಿಂದ ಅವರ ಸಿನಿ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಸದ್ಯಕ್ಕೆ ಈಗಿನ ವಿಚಾರ ಏನೆಂದರೆ ಎಲ್ಲರಿಗೂ ಗೊತ್ತಿರುವಂತೆ ಇದೆ ಅಕ್ಟೋಬರ್ 11 ರಂದು ಧ್ರುವ ಸರ್ಜಾ ಅವರ ನಟನೆಯ 5ನೇ ಸಿನಿಮಾದ ಮಾರ್ಟಿನ್ (Martin Movie) ಪ್ಯಾನ್ ವರ್ಡ್ ಸಿನಿಮಾವಾಗಿ ದೇಶ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ.
ಬಹಳ ಸಮಯ ತೆಗೆದುಕೊಂಡೇ ಸಿನಿಮಾ ಮಾಡುವ ಧ್ರುವ ಸರ್ಜಾ ಅವರು ಅಭಿಮಾನಿಗಳ ಕಾತುರಕ್ಕೆ ನಿರಾಸೆ ಮಾಡದೆ ಪಕ್ಕ ಒಂದೊಳ್ಳೆ ಮಾಸ್ ಹಿಟ್ ಸಿನಿಮಾ ಕೊಡುವ ಮೂಲಕ ಖುಷಿಪಡಿಸುತ್ತಾರೆ. ಹೀಗಾಗಿಯೇ ಇದುವರೆಗೂ ಆ ಕ್ರೇಜ್ ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ. ಸದ್ಯಕ್ಕೆ ಸಿನಿಮಾ ಸಂಬಂಧಿತವಾಗಿ ಮಾರ್ಟಿನ್ ಸಿನಿಮಾ ಪ್ರಮೋಷನ್ ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿರುವ ಧ್ರುವ ಅವರು ಇತ್ತೀಚೆಗೆ ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ತಮ್ಮ ಸಂಭಾವನೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.
ಈ ಮೊದಲು ಹೇಳಿದಂತೆ ಧ್ರುವ ಸರ್ಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ, 2012ರಲ್ಲಿ ಅದ್ದೂರಿ ಸಿನಿಮಾ ಮೂಲಕ ಲಾಂಚ್ ಆದ ಈ ಆಕ್ಷನ್ ಪ್ರಿನ್ಸ್ ಈವರೆಗೂ ನಟಿಸಿರುವುದು ಕೇವಲ 4 ಸಿನಿಮಾಗಳಲ್ಲಿ ಮಾತ್ರ ಆದರೆ ಎರಡು ಮೂರು ನಾಲ್ಕು ವರ್ಷಕ್ಕೊಂದು ಸಿನಿಮಾ ಮಾಡಿದರು ಕೂಡ ಈ ನಟರಿಗೆ ಬಹಳ ದೊಡ್ಡ ಅಭಿಮಾನಿ ವಲಯವಿದೆ ಹಾಗಾಗಿ ಕನ್ನಡದ ಸ್ಟಾರ್ ಗಳ ಸಾಲಿನಲ್ಲಿ ಧ್ರುವ ಸರ್ಜಾ ಕೂಡ ನಿಲ್ಲುತ್ತಾರೆ.
ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಮತ್ತೀಗ ಮಾರ್ಟಿನ್ ಈ ಸಿನಿಮಾಗಳಿಂದ ಸಿನಿಮಾಗಳಿಗೆ ಆಗಿರುವ ಬದಲಾವಣೆ ವಿಚಾರವಾಗಿ ಹೇಳುವುದಾದರೆ ಮೊದಲಿಗೆ ಸಂಭಾವನೆ ವಿಚಾರದಲ್ಲಿ ಬಹಳ ದೊಡ್ಡ ವ್ಯತ್ಯಾಸವಾಗಿದೆ. ಈ ಬಗ್ಗೆ ನೇರವಾಗಿ ಪ್ರಶ್ನೆ ಕೇಳಲಾಗಿ ನಾನು ಹೇಗಿದ್ದರೂ ಟ್ಯಾಕ್ಸ್ ಕಟ್ಟುತ್ತೇನೆ ಹಾಗಾಗಿ ಈ ವಿಚಾರ ಮುಚ್ಚಿಡುವ ಅಗತ್ಯವೇ ಇಲ್ಲ ಎಂದು ಹೇಳಿಕೊಂಡ ಧ್ರುವ ಸರ್ಜಾ ನನಗೆ ಅದ್ದೂರಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೇ ಒಂದು ದೊಡ್ಡ ಅದೃಷ್ಟ ಎಂದುಕೊಳ್ಳಬೇಕು.
ಆ ಸಿನಿಮಾ ಅವಕಾಶ ಸಿಕ್ಕ ಕಾರಣಕ್ಕಾಗಿ ನಾನು ಇಂದು ಈ ಮಟ್ಟದ ಯಶಸ್ಸು ಹಾಗೂ ಜನರ ಪ್ರೀತಿ ಪಡೆದಿದ್ದೇನೆ. ಆದರೆ ಸಂಭಾವನೆ ವಿಚಾರವಾಗಿ ಕೇವಲ ರೂ.51,000 ಮಾತ್ರ ನಾನು ಸಂಪಾದಿಸಿದ್ದು ಆ ಸಮಯದಲ್ಲಿ ನನ್ನ ಪಾಲಿಗೆ ಅದೇ ಅತಿ ಹೆಚ್ಚು ಆದರೆ ಈಗ ಒಂದು ಸಿನಿಮಾಗೆ 10 ರಿಂದ 12 ಕೋಟಿ ಪಡೆದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇವರ ಕೈಯಲ್ಲೀಗ ಮತ್ತೊಂದು ಪ್ರಾಜೆಕ್ಟ್ ಇದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆವಿಎಂ ಸಂಸ್ಥೆ ಬಂಡವಾಳ ಹೂಡಿ KD ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಕೆಡಿ ಸಿನಿಮಾ ಮುಹೂರ್ತ ನಡೆದು ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಇದು ಎಂಬತ್ತರ ದಶಕದ ಸಿನಿಮಾ ಎನ್ನುವುದು ಧೃಡವಾಗಿದ್ದು ಶಿಲ್ಪಾ ಶೆಟ್ಟಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲ್ಲಿದ್ದಾರೆ.
ನಾಯಕ ನಟನೊಬ್ಬನಿಗೆ 200 ಕೋಟಿಗಿಂತಲೂ ಹೆಚ್ಚು ಬಂಡವಾಳ ಹೂಡಿ ಸಿನಿಮಾ ತಯಾರಿಸುವ ಕೆ ವಿ ಎಲ್ ಸಂಸ್ಥೆಯ ಪ್ರಾಜೆಕ್ಟ್ ಧ್ರುವ ಸರ್ಜಾ ಗೆ ದಕ್ಕಿರುವುದರಿಂದ ಮುಂದಿನ ಸಿನಿಮಾದಲ್ಲಿ ಈ ಸಂಭಾವನೆ ಇನ್ನಷ್ಟು ಹೆಚ್ಚಳಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದಕ್ಕೆ ಮಾರ್ಟಿನ್ ಗೆಲುವು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಮಾರ್ಟಿನ್ ಸಿನಿಮಾಗೆ ಶುಭವಾಗಲಿ ಎಂದು ಹರಸೋಣ ಕನ್ನಡ ಸಿನಿಮಾ ವನ್ನು ಗೆಲ್ಲಿಸೋಣ.