Harshika: ಹರ್ಷಿಕಾ ಪೂಣಚ್ಚ ಮನೆಯಲ್ಲಿ ಡಬಲ್ ಸಂಭ್ರಮ, ನವರಾತ್ರಿ ಮೊದಲ ದಿನವೇ ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ.!

Harshika

ಮುರಳಿ ಮೀಟ್ಸ್ ಮೀರಾ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ರವರಿಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಕಾಲಿಟ್ಟ ಕೊಡಗಿನ ಬೆಳಗ್ಗೆ ಹರ್ಷಿಕ ಪೂಣಚ್ಚ (Harshika Punachcha) ಈಗ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ, ತೆಲುಗು, ಮಲಯಾಳಂ, ತಮಿಳು, ಕೊಡವ, ಕೊಂಕಣಿ, ಭೋಜಪುರಿ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ಹರ್ಷಿಕ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತಮ್ಮ ಬಹುಕಾಲದ ಗೆಳೆಯ ನಟ ಭುವನ್ ಪೊನ್ನಪ್ಪರವರ (Bhuvan Ponnappa) ಜೊತೆ ಹೊಸ ಹಸೆ ಮಣೆ ಏರಿದ್ದರು.

WhatsApp Group Join Now
Telegram Group Join Now

ಕೊಡುವ ಸಂಪ್ರದಾಯದೊಂದಿಗೆ ವಿವಾಹ ಏರ್ಪಟ್ಟಿತ್ತು, ಈ ತಿಂಗಳಲ್ಲಿ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅವರಿಗೀಗ ಡಬಲ್ ಧಮಾಕ. ಅವರು ಇಷ್ಟ ಪಟ್ಟಂತೆ ಹೆಣ್ಣು ಮಗುವಿಗೆ ಹರ್ಷಿಕಾ ತಾಯಿಯಾಗಿದ್ದಾರೆ (Give birth to Girl Child). ಅದರಲ್ಲೂ ನವರಾತ್ರಿ ಸಂಭ್ರಮದಲ್ಲಿ ನವರಾತ್ರಿಯ ಮೊದಲ ದಿನವೇ ತಾಯಿ ಶಕ್ತಿ ಹಾಗೂ ಮಹಾಲಕ್ಷ್ಮಿ ರೂಪದಲ್ಲಿ ಹೆಣ್ಣು ಮಗುವಿಗೆ ಆಗಮನವಾಗಿರುವುದು ಅವರ ಮನೆಯ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಈ ಬಗ್ಗೆ ಹರ್ಷಿಕಾ ಪತಿ ಭುವನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ತುಂಬು ಗರ್ಭಿಣಿ ಹರ್ಷಿಕಾ ಹಾಗೂ ಪತಿ ಭುವನ್ ಜೊತೆ ಕೊಡವ ಶೈಲಿಯ ಟ್ರೆಡಿಷನಲ್ ಲುಕ್ ನಲ್ಲಿ, ವೆಸ್ಟರ್ನ್ ಮಾದರಿಯಲ್ಲಿ ಮತ್ತು ರವಿವರ್ಮನ ಕುಂಚದ ಕಲಾಕೃತಿಯ ಫೋಸ್ ಗಳಲ್ಲಿ ಹೀಗೆ ವಿಭಿನ್ನವಾಗಿ ಬೇಬಿಬಂಪ್ ಫೋಟೋಶೂಟ್ (Baby bump Photoshoot) ಮಾಡಿಸಿ ಎಲ್ಲರ ಗಮನ ಸೆಳೆದಿದ್ದರು.

https://www.instagram.com/reel/C-4IzSNvH6r/?igsh=eTd2MjhndzlvcWxv

ಮತ್ತು ಅಕ್ಟೋಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದರು. ಇಲ್ಲಿಯವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸಿದ್ದೀರಿ, ಇನ್ಮುಂದೆ ಇನ್ನೊಂದು ಪುಟ್ಟ ಜೀವದ ಮೇಲೂ ಕೂಡ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಹಾರೈಕೆ ಹೀಗೆ ಇರಲಿ. ಅಕ್ಟೋಬರ್‌ ಗೆ ಕಾತುರದಿಂದ ಕಾಯುತ್ತಿದ್ದೇವೆ ಎಂದು ಹರ್ಷಿಕಾ ಪೂಣಚ್ಛ, ಭುವನ್ ಅವರು ಕೇಳಿಕೊಂಡಿದ್ದರು.

ಈಗ ಅಂತೆಯೇ ಅಕ್ಟೋಬರ್ 03 ರಂದು ಮುದ್ದಾದ‌ ಹೆಣ್ಣು ಮಗುವಿಗೆ ಹರ್ಷಿಕಾ ಜನ್ಮ ನೀಡಿದ್ದಾರೆ.ಬಹಳ ಖುಷಿಯಿಂದ ಚೈಕಾರ್ತಿ ಮೂಡಿ ಯನ್ನು ಪರಿಚಯಿಸುತ್ತಿದ್ದೇವೆ. ಹರ್ಷಿಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾ ಥರ ಇದ್ದಾಳೆ ಅನಿಸುತ್ತಿದೆ. ಆದರೆ ಹರ್ಷಿಕಾ ಪ್ರಕಾರ ಅವಳು ಪಕ್ಕಾ ನನ್ನ ಕಾಪಿಯಂತೆ, ನೋಡೋಣ.

ಎಲ್ಲರ ಶುಭಹಾರೈಕೆಗೆ ಬಹಳ ಧನ್ಯವಾದಗಳು ಎಂದು ಭುವನ್ ಪೋಸ್ಟ್ ಹಾಕಿದ್ದಾರೆ ಆದರೆ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಇವರು ಬಳಸಿರುವ ಚೈಕಾರ್ತಿ ಪದದ ಅರ್ಥ ಅನೇಕರು ಹುಡುಕಾಡಿದ್ದಾರೆ ಚೈಕಾರ್ತಿ ಎಂದರೆ ಕೊಡವ ಭಾಷೆಯಲ್ಲಿ ಮುದ್ದು, ಮುದ್ದಾದ ಎಂದರ್ಥ. ಸಾಕಷ್ಟು ಜನರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಭುವನ್ ಕೂಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಪರಿಚಿತರು. ಕಿರುತೆರೆಯ ಧಾರಾವಾಹಿ ಹಾಗೂ ಇಂಡಿಯನ್, ಬಿಗ್ ಬಾಸ್ ಮುಂತಾದ ಬಿಗ್ ರಿಯಾಲಿಟಿ ಶೋ ಗಳಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದವರು. ಕೆಲವು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿರುವ ಭುವನ್ ಮಾಡಲಿಂಗ್ ನಲ್ಲೂ ಆಸಕ್ತಿ ಹೊಂದಿದ್ದರು. ಕಾಫಿ ಎಸ್ಟೇಟ್ ಹೊಂದಿರುವ ಇವರು ರೈತ ಹಾಗೂ ಉದ್ಯಮಿ ಕೂಡ ಹೌದು. ಇವರ ಭವಿಷ್ಯ ಇನ್ನಷ್ಟು ಸುಂದರವಾಗಿ ಎಂದು ನಾವು ಕೂಡ ಹಾರೈಸೋಣ.

Leave a Comment