Hema
ಈಗಿನ ಉದಯ ಮ್ಯೂಸಿಕ್ (Udaya Music) ಚಾನೆಲ್ ಹಿಂದೆ U2 ಎಂದು ಬರುತ್ತಿತ್ತು, ಆ 20 ರ ದಶಕದ ಕಿರುತೆರೆ ಜಗತ್ತಿನಲ್ಲಿ ಅಘೋಷಿತ ರಾಣಿಯಂತೆ ಪಟ್ಟವನೇರಿದ್ದರು ಖ್ಯಾತ ನಿರೂಪಕಿ ಹೇಮ (V J Hema) ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಡೀ ಕುಟುಂಬದಲ್ಲಿ ಬಣ್ಣದ ಲೋಕಕ್ಕೆ ಮೊದಲು ಕಾಲಿಟ್ಟ ದಿಟ್ಟ ಹೆಣ್ಣು ಇವರು. ಆದರೆ ದುಡಿಮೆ ವಿಚಾರಕ್ಕೆ ಬಂದರೆ ಇವರು ಶಾಲಾ-ಕಾಲೇಜು ದಿನಗಳಿಂದಲೇ ದುಡಿಯಲು ಶುರು ಮಾಡಿದ್ದರಂತೆ.
ಬಹಳ ಚಿಕ್ಕವಯಸ್ಸಿಗೆ ಮನೆಯಲ್ಲಿ ಹಣದ ಅಗತ್ಯತೆ ಎಷ್ಟಿದೆ ಎನ್ನುವುದನ್ನು ಅರಿತುಕೊಂಡ ಇವರು ಚಿಕ್ಕ ವಯಸ್ಸಿನಿಂದಲೂ ಕುಟುಂಬವನ್ನು ಕಾಯುವ ಗಂಡು ಮಗಳಂತೆ ಬೆಳೆದರು. ಇಂದು ಕಿರುತೆರೆ ರಿಯಾಲಿಟಿ ಶೋ ಗಳಲ್ಲಿ ಇವೆಂಟ್ ಗಳಲ್ಲಿ ಫೇಮಸ್ ಆಂಕರ್ ಆಗಿ ಸಕ್ಸಸ್ ಆಗಿರುವ ಇವರು ಖಾಸಗಿ ವಾಹಿನಿ ಸಂದರ್ಶನ ಒಂದರಲ್ಲಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಬಹಳ ಚಿಕ್ಕ ವಯಸ್ಸಿಗೆ ದುಡಿಯಲು ಆರಂಭಿಸಿದೆ ಆದರೆ ನಾನು ಸಿಕ್ಕಾಪಟ್ಟೆ ಎಂಜಾಯ್ ಮಾಡುವುದಕ್ಕಾಗಿ ಖರ್ಚು ಮಾಡುವುದಿಲ್ಲ. ಇವತ್ತಿಗೂ ನನಗೆ ಹುಂಡಿಯಲ್ಲಿ ಹಣ ಉಳಿಸುವ ಅಭ್ಯಾಸ ಇದ್ದೆ ಇದೆ. ನಾನು ದುಡಿಯಬೇಕು ನಮ್ಮ ಮನೆ ನೋಡಿಕೊಳ್ಳಬೇಕು ಎನ್ನುವುದು ನನ್ನ ತಲೆಯಲ್ಲಿ ಮೊದಲಿನಿಂದಲೂ ಕುಳಿತಿದ್ದ ಕಾರಣ ಎಷ್ಟೇ ಸಮಸ್ಯೆ ಆದರೂ ಕಷ್ಟ ಆದರೂ ಕೆಲಸ ಮಾತ್ರ ಬಿಡುತ್ತಿರಲಿಲ್ಲ.
ಜೊತೆಗೆ ಆಂಕರಿಂಗ್ ನನ್ನ ಪ್ಯಾಶನ್ ನಾನು ಉದಯ ಮ್ಯೂಸಿಕ್ ಚಾನೆಲ್ ನಲ್ಲಿ 15 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ ಆಗ ಬೇರೆ ಕೆಲಸಕ್ಕೆ ಯಾಕೆ ಹೋಗುವುದಿಲ್ಲ ಎಂದು ಕೇಳುತ್ತಿದ್ದರು. ನನಗೆ ಬೇರೆ ಕೆಲಸ ಮಾಡಲು ಟ್ಯಾಲೆಂಟ್ ಇದೆ ಅಂತ ಗೊತ್ತಿತ್ತು ಆದರೆ ಕೆಲಸ ಬಿಟ್ಟರೆ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುತ್ತೇನೆ ಎನ್ನುವ ಭಯ ಕಾಡುತ್ತಿತ್ತು.
ಬೇರೆಯವರ ರೀತಿ ಆರಂಭದ ದಿನದಲ್ಲಿ ಆ ರೀತಿ ಈ ರೀತಿ ಸಮಸ್ಯೆ ಆಯ್ತು ಎಂದು ಖಂಡಿತ ಹೇಳುವುದಿಲ್ಲ ಯಾಕೆಂದರೆ ನನ್ನ ಮೊದಲ ಹೆಜ್ಜೆಗೆ ಐದು ಹೆಜ್ಜೆ ಮುಂದೆ ಇಟ್ಟಿದ್ದವಳು. U2 ಚಾನೆಲ್ ಗೆ ಹೋದ ಒಂದೇ ವರ್ಷಕ್ಕೆ ಫೇಮಸ್ ಆದೆ ಆ ಖ್ಯಾತಿಯಿಂದ ಯಾರು ನನ್ನನ್ನು ಕೆಟ್ಟದಾಗಿ ಟ್ರೀಟ್ ಮಾಡಲಿಲ್ಲ. ಹೀಗಾಗಿ ನಾನು ಕೆಲಸ ಮಾಡಿದ್ದ ಎಲ್ಲಾ ಟೀಮ್ ಬಗ್ಗೆ ಖಂಡಿತ ರೆಸ್ಪೆಕ್ಟ್ ಇದೆ ಆದರೆ ವೈಯಕ್ತಿಕವಾಗಿ ತುಂಬಾ ಅಡಚಣೆಗಳನ್ನು ಎದುರಿಸಿದ್ದೇನೆ.
ನನಗೆ ನನ್ನ ತಂದೆಯ ಒಂದು ಗುಣ ಬಂದಿದೆ ಅದೇನೆಂದರೆ ಯಾರಾದರೂ ಕಷ್ಟ ಎಂದು ಹೇಳಿಕೊಂಡರೆ ದುಡ್ಡು ಕೊಟ್ಟಿ ಬಿಡುವುದು. ನಾನು ನನಗೆ ಖರ್ಚು ಮಾಡದೆ ಇತಿಮಿತಿಯಾಗಿ ಇಟ್ಟಿ ಉಳಿಸಿದ್ದ ಹಣದಲ್ಲಿ ಲಕ್ಷ ಲಕ್ಷ ಹಣವನ್ನು ನನ್ನ ಸ್ನೇಹಿತರಿಗೆ ಕೊಟ್ಟಿದ್ದೇನೆ. ಅದನ್ನು ವಾಪಸ್ ಕೇಳಿದಾಗ ಅಥವಾ ಆ ಬಗ್ಗೆ ಏನಾದರೂ ಪ್ರಶ್ನೆ ಮಾಡಿದಾಗ ಅವರು ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾರೆ ಇದೆಲ್ಲ ನೋ’ವು ಕೊಟ್ಟಿದೆ.
ಒಂದು ಹೆಣ್ಣು ಮಗಳಿಗೆ ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಬಹಳ ಮುಖ್ಯ ಇಲ್ಲವಾದಲ್ಲಿ ಯಾರೋ ಬರುತ್ತಾರೆ ನಮ್ಮನ್ನು ಏನು ಅಲ್ಲ ಎನ್ನುವ ರೀತಿ ಟ್ರೀಟ್ ಮಾಡುತ್ತಾರೆ. ನಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಿ 100 ಕ್ಕೆ 1000 ಕೊಟ್ಟೆ ಎಂದು ಹೇಳುತ್ತಾರೆ. ಹಾಗಾಗಿ ತುಂಬಾ ಹಣ ಮಾಡದಿದ್ದರೂ ನಮ್ಮ ಅವಶ್ಯಕತೆಗೆ ನಮ್ಮ ಬಳಿ ಹಣ ಇರಲೇಬೇಕು.
ಎಲ್ಲರೂ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಾರೆ ತನ್ನ ತಂದೆಗೂ ಅದು ಬಹಳ ಆಸೆ ಇತ್ತು ಆದರೆ ನನ್ನ ತಂದೆ ತೀ’ರಿಕೊಂಡ ಸಮಯದಲ್ಲಿ ನನಗೆ ಒಂದು ಸಂಬಂಧ ಫಿಕ್ಸ್ ಆಗಿತ್ತು. ನನ್ನ ತಂದೆಯೇ ಅದನ್ನು ಡಿಸೈಡ್ ಮಾಡಿದ್ದರು. ತಾಂಬೂಲ ಬದಲಾಯಿಸಿಕೊಂಡು ನಿಶ್ಚಿತಾರ್ಥದ ಡೇಟ್ ಕೂಡ ಫಿಕ್ಸ್ ಆಗಿತ್ತು ಆದರೆ ತಂದೆ ಹೋದ ಕಾರಣ ನಾನು ಡಿಪ್ರೆಶನ್ ಗೆ ಹೋಗಿದ್ದೆ. ಒಂದು ವರ್ಷ ತಡವಾಗಿದ್ದಕ್ಕೆ ಆ ಕುಟುಂಬದವರು ಕ್ಯಾನ್ಸಲ್ ಮಾಡಿ ಬಿಟ್ಟರು.
ಹಾಗಾಗಿ ಅದೆಲ್ಲಾ ನೆನಪಾದರೆ ಮದುವೆ ಬೇಕಾ ಅನಿಸುತ್ತದೆ ತಡವಾದರೂ ಪರವಾಗಿಲ್ಲ ಅಥವಾ ಮದುವೆ ಆಗದೆ ಇದ್ದರೂ ಪರವಾಗಿಲ್ಲ ನಮ್ಮನ್ನು ಗೌರವಿಸುವವರು ಪ್ರೀತಿಸುವವರು ಸಿಗಬೇಕು ಎನ್ನುವುದನ್ನು ನಂಬುತ್ತೇನೆ ಎಂದು ಹೇಳಿಕೊಂಡಿದ್ದಾರೆ.