Sudeep: ಸುದೀಪ್ ಸರ್ ಮನೆಗೆ ಹೋಗಿದ್ದೆ ಆದ್ರೆ ಅಲ್ಲಿ ಮಾರ್ಯದೆ ಸಿಗಲಿಲ್ಲ ನೊಂದ ಮಹಿಳೆ ಮಾತಿದು…!

Sudeep

ತೆರೆ ಮೇಲೆ ಸಿಂಹಗಳಂತೆ ಅಬ್ಬರಿಸಿ ಬೊಬ್ಬಿರಿಯುವ, ಸಿನಿಮಾಗಳಲ್ಲಿ ಹೀರೋಯಿಸಂ ತೋರಿಸುವ ನಾಯಕ ನಟರುಗಳನ್ನು ನೋಡಿ ಮುಗ್ಧ ಜನರು ನಿಜ ಜೀವನದಲ್ಲೂ ಕೂಡ ಇವರು ಹೀಗೆ ಇರುತ್ತಾರೆ ಎಂದುಕೊಂಡಿರುತ್ತದೆ. ಆದರೆ ಸಿನಿಮಾ ಗಳಲ್ಲಿ ಪಾತ್ರಗಳಿಗೆ ಅವರು ಬಣ್ಣ ಹಚ್ಚಿ ಅಭಿನಯ ಮಾಡಿರುತ್ತಾರೆ ಅವರ ವೈಯಕ್ತಿಕ ಜೀವನದಲ್ಲಿ ವ್ಯಕ್ತಿತ್ವ ಬೇರೆಯದ್ದೇ‌ಇರುತ್ತದೆ ಎನ್ನುವುದು ಅನೇಕರಿಗೆ ಮನವರಿಕೆ ಆಗಿರುವುದಿಲ್ಲ.

ಆದರೆ ಈ ಹಿಂದೆ ಒಂದು ವರ್ಗವಿತ್ತು. ಆ ಸಮಯದಲ್ಲಿ ಹೀರೋಗಳಾಗಿದ್ದವರು ತಮ್ಮ ಬದುಕನ್ನು ಕೂಡ ಅದೇ ರೀತಿ ಮಾದರಿಯಾಗಿ ಕಟ್ಟಿಕೊಂಡು ಸಿನಿಮಾ ನೋಡುವ ಮಂದಿಗೆ ಮನೋರಂಜನೆ ನೀಡುವುದರ ಜೊತೆಗೆ ನೀತಿ ಪಾಠ ಕೂಡ ಹೇಳುತ್ತಿದ್ದರು. ಅಂತಹ ಕಲಾವಿದರ ಬಾಯಿಯಲ್ಲಿ ಬರುತ್ತಿದ್ದ ಮಾತೇನೆಂದರೇ ಪಾತ್ರಗಳನ್ನು ಅಭಿನಯಿಸುತ್ತಾ ಅದು ನಮ್ಮೊಳಗೆ ಸ್ವಲ್ಪವಾದರೂ ಪರಿಣಾಮ ಬೀರುತ್ತದೆ ಹಾಗಾಗಿ ಮೈಗೂಡಿಸಿಕೊಂಡಿರುತ್ತೇವೆ ಅಥವಾ ಬದಲಾಗಿರುತ್ತೇವೆ ಎಂದು.

WhatsApp Group Join Now
Telegram Group Join Now

ಆದರೆ ಈಗ ಅಂತ ನಟರಿಲ್ಲ ಇಂದು ಕಡಾ ಖಂಡಿತವಾಗಿ ಹೇಳಲು ಬರುವುದಿಲ್ಲ, ಆದರೆ ಈಗಿನ ಪರಿಸ್ಥಿತಿ ಸಂದರ್ಭಗಳು ಬೇರೆ ರೀತಿ ಇದೆ. ಅಭಿಮಾನಿಗಳ ಅಭಿಮಾನದ ಭಿಕ್ಷೆಯಿಂದ ನಾವೀಗ ಹೆಸರು ಹಣ ಮಾಡಿರುವುದು ಎಂಬ ಕೃತಜ್ಞತೆಯಿಂದ ಜನಸಾಮಾನ್ಯರ ಸಮಸ್ಯೆಗಳಿಗೂ ಸ್ಪರ್ಧಿಸುತ್ತಾರೆ.

ಇಂತಹ ನಿರೀಕ್ಷೆ ಇಟ್ಟುಕೊಂಡು ಕಿಚ್ಚ ಸುದೀಪ್ (Kicha Sudeep) ಅವರ ಮನೆ ಬಳಿ ಮಹಿಳೆಯೊಬ್ಬರು ಹೋಗಿದ್ದರಂತೆ ಆದರೆ ಆಕೆಗೆ ನಿರೀಕ್ಷಿತ ರೆಸ್ಪಾನ್ಸ್ ಸಿಗದೇ ಇರುವುದಕ್ಕೆ ಈ ಬಗ್ಗೆ ಬೇಸರ ತೋರುತ್ತ ಕಂಪ್ಲೆಟ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಮನ್ ಆಗಿ ಖಾಸಗಿ ವಾಹಿನಿಯ ನಿರೂಪಕರೊಬ್ಬರು ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತೀರಾ ಎಂದು ಆಕೆಯನ್ನು ಪ್ರಶ್ನೆ ಮಾಡುತ್ತಾರೆ ನಾನು ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿ ನಮ್ಮ ಮನೆಯಲ್ಲಿ ಟಿವಿಗೆ ರಿಚಾರ್ಜ್ ಮಾಡಿಸುವುದು ಬಿಗ್ ಬಾಸ್ ಕಾರ್ಯಕ್ರಮ ಸ್ಟಾರ್ಟ್ ಆದ ಮೇಲೆ ಸುದೀಪ್ ಅವರ ಮೇಲೂ ಅಷ್ಟೇ ಅಭಿಮಾನವಿದೆ.

ಆದರೆ ಒಮ್ಮೆ ಮಕ್ಕಳ ವಿಚಾರವಾಗಿ ಸಹಾಯ ಕೇಳಲು ಸುದೀಪ್ ಅವರ ಮನೆ ಮುಂದೆ ಹೋಗಿದ್ದೆ ಆಗ ಅವರನ್ನು ನೋಡಲು ಸೆಕ್ಯೂರಿಟಿ ಬಿಡಲಿಲ್ಲ. 10 ರಿಂದ 6 ಗಂಟೆವರೆಗೂ ಕಾದೆ. ಅವರ ತಂದೆ, ತಾಯಿ ಅಥವಾ ಮಗಳೋ ಮನೆಯಲ್ಲಿ ಯಾರನ್ನಾದರೂ ಮಾತನಾಡಿಸಿಕೊಂಡು ಹೋಗುತ್ತೇನೆ ಎಂದರು ಬಿಡಲಿಲ್ಲ.

ಹಳ್ಳಿಗಳಿಂದ ಬಂದಿರುತ್ತೇವೆ ಕನಿಷ್ಠ ಪಕ್ಷದ ಸ್ಪಂದನೆ ಆದರೂ ಬೇಕು ಅದೂ ಸಿಗದಿದ್ದಕ್ಕೆ ಬೇಜಾರಾಯ್ತು. ಈ ವಿಷಯ ಸುದೀಪ್ ಅವರವರೆಗೂ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ರೀತಿ ಆದದ್ದಕ್ಕೆ ಬಹಳ ನೋ’ವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಹಳ್ಳಿಯವರಿಗೆ ಅವಕಾಶ ಕೊಡಬೇಕು ಎನ್ನುವುದು ಅಭಿಪ್ರಾಯ ಎನ್ನುವ ಮಾತನ್ನು ಹೇಳಿದ್ದಾರೆ.

ಆದರೆ ಈ ವಿಡಿಯೋ ನೋಡಿದ ನೆಟ್ಟಿಗರಿಂದ ಪರ-ವಿರೋಧ ಸ್ಪಂದನೆಗಳು ವ್ಯಕ್ತವಾಗಿವೆ. ಸಹಾಯ ಬೇಕಿದ್ದರೆ ಸರ್ಕಾರದ ಬಳಿ ಕೇಳಬೇಕು, ಎಲ್ಲ ಸ್ಟಾರ್ ಗಳಿಗೂ ಅವರದ್ದೇ ಶೆಡ್ಯೂಲ್ ಇರುತ್ತದೆ, ಪ್ರತಿನಿತ್ಯ ಕೂಡ ಮನೆ ಮುಂದೆ ಸಾವಿರ ಜನ ಬರುತ್ತಾರೆ ಒಬ್ಬ ವ್ಯಕ್ತಿ ಎಷ್ಟು ಜನರಿಗೆ ತಾನೇ ಸ್ಪಂದಿಸಲು ಸಾಧ್ಯ ಎನ್ನುವುದು ಹಲವರ ವಾದ. ಈ ಮಾತುಗಳು ಕೂಡ ನಿಜ ಅನಿಸುತ್ತದೆ ಇದನ್ನು ಜರಸಾಮಾನ್ಯರು ಕೂಡ ಅರ್ಥಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment