Jaggesh
ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ದರ್ಶನ್ (Darshan) ಅವರೀಗ ಕೊ’ಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಇಂದು ಅವರಿರುವ ಸ್ಥಿತಿಗೆ ಕನ್ನಡಿಗರಿಗೆ ಖಂಡಿತ ಕನಿಕರ ಇದೆ ಆದರೆ ಇದಕ್ಕೆಲ್ಲಾ ನೂರಕ್ಕೆ ನೂರರಷ್ಟು ಅವರೇ ಜವಾಬ್ದಾರರು ಹಾಗೂ ಅವರು ಹೀಗಾಗಲು ಅವರ ಸುತ್ತಲೂ ಇರುವ ಬಳಕವೇ ಕಾರಣರು ಎನ್ನುವುದು ಅಷ್ಟೇ ಸತ್ಯ. ಈಗಾಗಲೇ ಸ್ಯಾಂಡಲ್ ವುಡ್ ತಾರೆಯರು,
ದರ್ಶನ್ ಅಭಿಮಾನಿಗಳು, ಜನಸಾಮಾನ್ಯರು ಹೀಗೆ ಸಾಕಷ್ಟು ಜನರು ಈ ಆರೋಪದ ಪರ-ವಿರೋಧ ಮಾತನಾಡಿ ಸುದ್ದಿಯಾಗಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಚಾಲೆಂಜ್ ಹಾಕಿಕೊಂಡು ಚಿತ್ರರಂಗಕ್ಕೆ ಬಂದು ಚಾಲೆಂಜಿಂಗ್ ಸ್ಟಾರ್ ಹಾಕಿ ಮೆರೆದವರು, ಇಡೀ ಕರ್ನಾಟಕದಲ್ಲಿ ಈಗಲೂ ಅತಿ ಹೆಚ್ಚು ಫ್ಯಾನ್ಸ್ ಕ್ರೇಜ್ ಹೊಂದಿರುವವರು, ಲೈಟ್ ಬಾಯ್ ನಿಂದ ಬಾಕ್ಸ್ ಆಫೀಸ್ ನ ಸುಲ್ತಾನ ಎಂದು ಕರೆಸಿಕೊಳ್ಳುವವರೆಗೆ ಬದುಕು ಬದಲಾಯಿಸಿಕೊಂಡವರು.
ಆದರೀಗ ಒಂದರ ಹಿಂದೆ ಒಂದರಂತೆ ಇಷ್ಟೊಂದು ವಿವಾದಗಳನ್ನು (Controversy) ಮೈ ಮೇಲೆ ಎಳೆದುಕೊಂಡು ವಿವಾದಾತ್ಮಕ ವ್ಯಕ್ತಿತ್ವವಾಗಿದ್ದಾರೆ. ಈ ಬಗ್ಗೆ ತಾವು ಕಂಡಂತೆ ದರ್ಶನ್ ಹೇಗಿದ್ದರೂ ಇಂದು ಹೀಗಾಗಲು ಕಾರಣವೇನು? ಎನ್ನುವ ವಿಷಯದ ಬಗ್ಗೆ ನವರಸ ನಾಯಕ ಜಗ್ಗೇಶ್ ರವರು (Jaggesh) ಓಪನ್ ಆಗಿ ಮಾತನಾಡಿದ್ದಾರೆ. ದರ್ಶನ್ ಬಹಳ ಕಷ್ಟಪಟ್ಟು, ಕನಸು ಕಟ್ಟುಕೊಂಡು ಇಂಡಸ್ಟ್ರಿ ಗೆ ಬಂದವನು. ಜೀವನದಲ್ಲಿ ಬಹಳ ನೋ’ವು, ಅ’ವ’ಮಾ’ನ, ಸಮಸ್ಯೆಗಳನ್ನು ಎದುರಿಸಿಮೇಲೆ ಬಂದಿದ್ದ.
ಮೆಜೆಸ್ಟಿಕ್ ಸಿನಿಮಾ ಆತನ ಅದೃಷ್ಟವನ್ನು ಬದಲಾಯಿಸಿತ್ತು, ನಂತರ ಸತತವಾಗಿ ಸಾಕಷ್ಟು ಹಿಟ್ ಗಳನ್ನು ಕೊಟ್ಟು ಹಿಂತಿರುಗಿ ನೋಡಿದ್ದೇ ಇಲ್ಲ. ಆದರೆ ಅದೇ ವೈಯಕ್ತಿಕವಾಗಿ ಬೇರೆ ರೀತಿ ಬದಲಾವಣೆಗಳಾಯಿತು. ಆ ದಿನಗಳಲ್ಲಿ ಆತನ ಸುತ್ತ ಇದ್ದವರು ಬಹಳ ವಿಶ್ವಾಸಿಗಳಾಗಿದ್ದರು, ಒಳಗೂ ಹೊರಗೂ ಆತನಿಗೆ ಒಳ್ಳೆಯದನ್ನು ಬಯಸುತ್ತಿದ್ದರು. ಆತ ಕೂಡ ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದ, ಎಲ್ಲರಿಗೂ ಬೇಕಾದವನಾಗಿದ್ದ.
ಆದರೆ ಬರುಬರತ್ತಾ ತನ್ನ ಸುತ್ತ ಇದ್ದ ಒಳ್ಳೆಯವರನ್ನು ಬಿಟ್ಟು ಬೇಡದವರನ್ನು ಜೊತೆಗಿಟ್ಟುಕೊಳ್ಳಲು ಶುರು ಮಾಡಿದ ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಹಾಗೆ ಸುತ್ತಲಿದ್ದವರ ಕೆಟ್ಟ ಕೆಟ್ಟ ಸಜೆಶನ್ ಗಳಿಂದ ಜೊತೆಗೆ ಒಂದೇ ಬಾರಿಗೆ ಸಿಕ್ಕ ಇಷ್ಟೊಂದು ಹಣ, ಹೆಸರು, ಅಧಿಕಾರ ಎಲ್ಲವನ್ನು ಕೂಡ ಸರಿಯಾಗಿ ಹ್ಯಾಂಡಲ್ ಮಾಡಲಾರದೇ ವಿವೇಕ ಕಳೆದುಕೊಂಡು ಅವಿವೇಕೆ ಆದ. ಇಂದು ಅವನಿರುವ ಈ ಪರಿಸ್ಥಿತಿಗೆ ಅವನ ಸುತ್ತ ಇದ್ದ ದುರ್ಜನರ ಸಹವಾಸವೇ ಕಾರಣ.
ಮೊದಲಿನಂತೆ ಅವನು ಒಳ್ಳೆಯ ವ್ಯಕ್ತಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರೆ ಇಷ್ಟೆಲ್ಲ ಆಗುತ್ತಲೇ ಇರಲಿಲ್ಲ, ಸಂಸಾರದಲ್ಲೂ ಎಡವಟ್ಟು ಮಾಡಿಕೊಂಡ ಜೈಲಿಗೆ ಹೋಗಿ ಬಂದಿದ್ದ, ಹೆಣ್ಣಿನ ಸಹವಾಸದಿಂದ ಹೆಸರು ಕೆಡಿಸಿಕೊಂಡಿದ್ದಾನೆ. 25 ಕೋಟಿ ದುಡಿವ ವ್ಯಕ್ತಿ ಅವರಿಂದ 500-600 ಜನರ ಕುಟುಂಬ ಸಾಗುತ್ತಿತ್ತು.
ಈ ವಿಷಯದಲ್ಲೂ ಆತ ಪ್ರಬುದ್ಧತೆಯಿಂದ ನಡೆದುಕೊಳ್ಳಬಹುದಿತ್ತು. ಪೊಲೀಸ್ ಕಾನೂನು ಎಲ್ಲವೂ ಇತ್ತು, ಕಂಪ್ಲೇಂಟ್ ಕೊಟ್ಟು ಇದನ್ನು ಸರಿಯಾಗಿ ನಿರ್ವಹಿಸಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ವರ್ತಿಸುವವರಿಗೆಲ್ಲಾ ಪಾಠ ಕಲಿಯುವ ರೀತಿ ಬುದ್ಧಿ ಕಲಿಸಿ ಮಾದರಿ ಆಗಬಹುದಿತ್ತು. ಆದರೆ ಅಷ್ಟು ತಿಳುವಳಿಕೆ ಇಲ್ಲದೆ ಎಡವಟ್ಟು ಮಾಡಿಕೊಂಡಿದ್ದಾನೆ.
ನಮಗೂ ಪ್ರತಿನಿತ್ಯ ಬರುವ ಕಮೆಂಟ್ಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೆಗೆಟಿವ್ ನಿಂದ ಕೂಡಿರುತ್ತದೆ. ಈಗಷ್ಟೇ ಒಬ್ಬ ಮಹಿಳೆ ನಿನಗೆ ಆಕ್ಸಿಡೆಂಟ್ ಆಗಲಿ ಎಂದು ಕಾಮೆಂಟ್ ಮಾಡಿದ್ದರು, ಎಲ್ಲರಿಗೂ ಸಾವು ಬರುತ್ತದೆ ನಿನಗೆ ಬರಲಿಲ್ಲ ಎನ್ನುತ್ತಾರೆ. ಕೆಲವರು ಪ್ರಭಾವಿ ವ್ಯಕ್ತಿಗಳಿಗೆ ಕಮೆಂಟ್ ಮಾಡಿದರೆ ಲೈಮ್ ಲೆಟ್ ಗೆ ಹೋಗಬಹುದು ಎಂದುಕೊಂಡಿರುತ್ತಾರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದಿದ್ದಾರೆ.