Jayam Ravi
ಇತ್ತೀಚೆಗೆ ಸೆಲೆಬ್ರಿಟಿಗಳ ಡಿ’ವೋ’ರ್ಸ್ ವಿಚಾರ ಕಾಮನ್ ಎನಿಸುವಂತಾಗಿ ಬಿಟ್ಟಿದೆ. ಅದರಲ್ಲೂ ಸಿನಿಮಾ ರಂಗದ ಖ್ಯಾತ ಜೋಡಿಗಳು, ಫೇಮಸ್ ಜೋಡಿಗಳು ಎನಿಸಿಕೊಂಡವರೇ ಈ ರೀತಿ ವಿ’ಚ್ಛೇ’ದ’ನದ ಹಾದಿ ಹಿಡಿದು ದೂರ ದೂರ ಆಗುತ್ತಿರುವುದು ಕಂಡು ಕೇಳಿ ಜನರಿಗೆ ಸಿನಿಮಾ ಮಂದಿಗೆ ಇದು ಸಾಮಾನ್ಯ ಬಿಡು ಎನಿಸುವಂತಾಗಿ ಬಿಟ್ಟಿದೆ. ಮದುವೆ ಆದ ಕೆಲವೇ ದಿನಗಳಲ್ಲಿ ಇವರ ವಿ’ಚ್ಛೇ’ದ’ನಗಳು ಹಾಗೂ ಸಂಬಂಧ ಮುರಿದುಕೊಂಡು ಕೆಲವೇ ದಿನಗಳಲ್ಲಿ ಮರು ಮದುವೆಗೆ ತಯಾರಾದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.
ಆದರೆ ಇಲ್ಲೊಬ್ಬ ಖ್ಯಾತ ನಟನ ವಿ’ಚ್ಛೇ’ದ’ನವಾಗಿ ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ ಆಗಲೇ ಎರಡನೇ ಮದುವೆಗೆ ಸಿದ್ದರಾದರು ಎನ್ನುವ ಸುದ್ದಿ ಹಾಗೂ ನಟಿಯೊಬ್ಬರ ಜೊತೆಗಿನ ಇವರ ಎಂಗೇಜ್ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಇದರ ಅಸಲಿಯತ್ತೇನು ಗೊತ್ತಾ?…
ಈವರೆಗೂ ನಾವು ಹೇಳಿದ್ದು ಕಾಲಿವುಡ್ (Collywood) ವಲಯದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿರು ಜಯಂ ರವಿ (Jayam Ravi) ಅವರ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಹ್ಯಾಂಡ್ಸಮ್ ಹೀರೋ ಜಯಂ ರವಿ ಸಿನಿಮಾ ಬಗ್ಗೆ ಸಖತ್ ಪ್ಯಾಶನ್ ಹೊಂದಿರುವ ಇವರು ವಿವಿಧ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೋರಂಜಿಸಿದ್ದಾರೆ ಮತ್ತು ಭರವಸೆಯ ನಾಯಕರಾಗಿದ್ದಾರೆ.
ಸ್ಟಾರ್ ನಿರ್ಮಾಪಕಿ ಸುಜಯ್ ವಿಜಯ್ ಕುಮಾರ್ ಅವರ ಪುತ್ರಿ ಆರತಿ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಹಳ ಕಾಲ ಪ್ರೀತಿಯಲ್ಲಿದ್ದ ಇವರು ಕುಟುಂಬದವರ ಒಪ್ಪಿಗೆ ಪಡೆದು 15 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಕೂಡ ಇದ್ದರು.
ಸೋಶಿಯಲ್ ಮೀಡಿಯಾದಲ್ಲೂ ಸಕ್ಕತ್ ಆಕ್ಟಿವ್ ಆಗಿದ್ದ ಕಪ್ಪಲ್ ಗಳು ಆಗಾಗ ಕುಟುಂಬದೊಂದಿಗಿನ ಸಂತೋಷದ ಕ್ಷಣಗಳ ಫೋಟೋಗಳನ್ನು ಹಚ್ಚಿಕೊಂಡು ಮಾದರಿ ಕುಟುಂಬ ಎನ್ನುವ ಫೀಲ್ ಕೂಡ ನೀಡಿದ್ದರು. ಆದರೀಗ ನಡೆದಿರುವ ದು’ರಂ’ತರವೇ ಬೇರೆ.
ಈ ಜೋಡಿಗಳ ಮೇಲೆ ಯಾರ ಕಣ್ಣು ಬಿತ್ತೋ ಏನೋ ಇದ್ದಕ್ಕಿದ್ದ ಹಾಗೆ ಇಬ್ಬರು ತಮ್ಮ ಡಿ’ವೋ’ರ್ಸ್ ಆಗಿದೆ ಎಂದು ಘೋಷಿಸಿಕೊಂಡಿದ್ದಾರೆ. ಜಯಂ ರವಿ ಅವರು ತಮ್ಮ ಹೆಂಡತಿ ತಮ್ಮನ್ನು ಬಹಳ ನಿರ್ಲಕ್ಷ ಮಾಡುತ್ತಿದ್ದರು ಮನೆ ಕೆಲಸದವರಿಗೆ ಕೊಡುವಷ್ಟು ಗೌರವವನ್ನು ಕೂಡ ಕೊಡುತ್ತಿರಲಿಲ್ಲ ಇನ್ನೂ ಇತ್ಯಾದಿ ಆರೋಪ ಮಾಡಿದ್ದರು.
ಇದೆಲ್ಲಾ ಆಗಿ ಒಂದು ತಿಂಗಳು ಮುಗಿಸುವ ಮೊದಲೇ ತಮಗಿಂತ 15 ವರ್ಷ ಚಿಕ್ಕವರಾದ ನಟಿ ಜೊತೆಗೆ ವೇದಿಕೆ ಮೇಲೆ ನಿಂತು ಹಾರ ಬದಲಾಯಿಸಿಕೊಂಡಿರುವ ಜಯಂ ರವಿ ಜೋಡಿ ಫೋಟೋ ವೈರಲ್ ಆಗುತ್ತಿದೆ. ಟಾಲಿವುಡ್ ಬೆಡಗಿ ಪ್ರಿಯಾಂಕ ಮೋಹನ್ ರವರೊಂದಿಗೆ (Priyanka Mohan) ಜಯಂ ರವಿ, ಫೋಟೋಶೂಟ್ ನಡೆದಿದ್ದು ನಟ ಇಷ್ಟು ಬೇಗ ಮರು ಮದುವೆಗೆ ಒಪ್ಪಿದರಾ ಎಂದು ಪರ ವಿರೋಧ ಚರ್ಚೆಯಾಗುತ್ತಿದೆ.
ಆದರೆ ಇದು ಬ್ರದರ್ ಸಿನಿಮಾಕ್ಕಾಗಿ (Brother) ಮಾಡಿರುವ ಫೋಟೋಶೂಟ್ ಆಗಿದೆ. ಬ್ರದರ್ ಹೈ ಬಜೆಟ್ ಸಿನಿಮಾವಾಗಿದ್ದು 100 ಕೋಟಿ ಬಂಡವಾಳದಲ್ಲಿ ತಯಾರಾಗುತ್ತಿದೆ. ಜಯಂ ರವಿ ಅವರ ಬದುಕಿನ ಮತ್ತೊಂದು ಟರ್ನಿಂಗ್ ಪಾಯಿಂಟ್ ಈ ಸಿನಿಮಾ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಂಕ ಮೋಹನ್ ರವರು ಕಾಣಿಸಿಕೊಂಡಿದ್ದಾರೆ ಸಿನಿಮಾ ಒಂದು ಸನ್ನಿವೇಶದ ಫೋಟೋಶೂಟ್ ಇದಾಗಿತ್ತು, ಇದೆ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿರುವುದು.