Manju
ಸೋಶಿಯಲ್ ಮೀಡಿಯಾದಲ್ಲಿ ಇಂದು ಮಜಾಭಾರತ ಖ್ಯಾತಿಯ (Mahabharatha) ಪಾವಗಡ ಮಂಜು ಅಲಿಯಾಸ್ ಲ್ಯಾಗ್ ಮಂಜು (Artist Manju) ರವರ ನಿಶ್ಚಿತಾರ್ಥ ಫೋಟೋಗಳು ವೈರಲ್ ಆಗಿವೆ. ನವರಾತ್ರಿಯ ಈ ಶುಭದಿನದಲ್ಲಿ ಸದ್ದಿಲ್ಲದೆ ಹಸೆ ಮೆಣೆ ಏರಲು ನಿಶ್ಚಿತಾರ್ಥದ ಮೂಲಕ ಸಿದ್ಧತೆ ನಡೆಸಿದ್ದಾರೆ ಈ ಹಾಸ್ಯ ನಟ. ಪಾವಗಡ ಮಂಜು ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತರಾದರು.
ಆದರೆ ಮೂಲತ: ರಂಗಭೂಮಿ ಕಲಾವಿದನಾದ ಇವರು ಯಾವ ಪಾತ್ರ ಕೊಟ್ಟರು ಸೈ ಅನಿಸಿಕೊಳ್ಳಬಲ್ಲರು. ಅದಕ್ಕೆ ಸಾಕ್ಷಿಯಾಗಿದ್ದು ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂತರಪಟ ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರ ನಿರ್ವಹಿಸಿ ಅದರಲ್ಲೂ ನೆಗೆಟಿವ್ ರೋಲ್ ಮಾಡಿ ಸಾಬೀತು ಪಡಿಸಿದ್ದು.
ರಿಯಾಲಿಟಿ ಶೋ ಹಾಗೂ ಧಾರವಾಹಿಗಳಿಗಿಂತ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಮಂಜುರವರು ಮಂಜಣ್ಣ ಆಗಿ ಎಲ್ಲರಿಗೂ ಇಷ್ಟವಾಗಿದ್ದರು. ಬಿಗ್ ಬಾಸ್ ಸೀಸನ್ 8ರ ಕಂಟೆಸ್ಟೆಂಟ್ ಆಗಿದ್ದ ಪಾವಗಡ ಮಂಜು, ಕೊನೇ ದಿನದವರೆಗೂ ಕೂಡ ಹೋರಾಡಿ ಟ್ರೋಫಿ ಕೊಡ ಗೆದ್ದಿದ್ದರು. ಬಿಗ್ ಬಾಸ್ ಆದ ಬಳಿಕ ಇವರಿಗೆ ಸಿನಿಮಾಗಳಲ್ಲಿ ಕೂಡ ಅವಕಾಶಗಳು ಬರುತ್ತಿವೆ.
ಈಗಾಗಲೇ ಸಿನಿಮಾ ಧಾರಾವಾಹಿ ಶೋಗಳು ಇತ್ಯಾದಿ ಹಲವಾರು ಪ್ರಾಜೆಕ್ಟ್ ಗಳು ಕೈಯಲ್ಲಿದ್ದು ಮುಟ್ಟಿದ್ದೆಲ್ಲ ಚಿನ್ನ ವಾಗುವಂತೆ ಎಲ್ಲಾ ಕಡೆ ಹೆಸರು ಮಾಡುತ್ತಿದ್ದಾರೆ. ಆದರೆ ಎಲ್ಲೇ ಹೋದರು ಇವರನ್ನು ಮದುವೆ ವಿಚಾರವಾಗಿ ಕಾಮಿಡಿ ಮಾಡಲಾಗುತ್ತಿತ್ತು ಅಲ್ಲದೇ ಕಲರ್ಸ್ ಕನ್ನಡ ವಾಹಿನಿಯ ಯಾವುದೇ ಕಾರ್ಯಕ್ರಮದ ವೇದಿಕೆಯಲ್ಲಿ ಇವರು ಕಾಣಿಸಿಕೊಂಡರೂ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು.
ಎಲ್ಲ ಲಕ್ ಇರುವ ಮಂಜಣ್ಣನಿಗೆ ಮದುವೆ ಆಗುವ ಭಾಗ್ಯ ಯಾವಾಗ ಬರುತ್ತದೆ ಎಂದು ಎಲ್ಲಾ ಕಾಲು ಎಳೆದು ತಮಾಷೆ ಮಾಡುತ್ತಿದ್ದರು. ಈಗ ಅಂತಿಮವಾಗಿ ಆ ಶುಭ ಘಳಿಗೆ ಕೂಡಿ ಬಂದಿದೆ. ಗುರು ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಲ್ಯಾಗ್ ಮಂಜು ಶೀಘ್ರದಲ್ಲಿ ಹಸೆಮನೆ ಕೂಡ ಏರಲಿದ್ದರಂತೆ.
ಸದ್ಯಕ್ಕೆ ಇವರ ಕೈ ಹಿಡಿಯಲಿರುವ ಹುಡುಗಿಯ ಬಗ್ಗೆ ತಿಳಿದು ಬಂದಿರುವ ಮಾಹಿತಿ ಏನೆಂದರೆ ಈಕೆಯ ಹೆಸರು ನಂದಿನಿ. ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಒಂದರಲ್ಲಿ ಉದ್ಯೋಗಿ ಆಗಿರುವ ಇವರು ಮಂಜಣ್ಣನ ಮನೆ ಬೆಳಗಲು ಬರುತ್ತಿದ್ದಾರೆ. ಬಿಗ್ ಬಾಸ್ ಗೆ ಹೋದ ಬಂದ ಮೇಲೆ ಮಂಜು ಅವರ ಅದೃಷ್ಟ ಕುಲಾಯಿಸಿದೆ ಎಂದೇ ಇದೀಗ ನೆಟ್ಟಿದರು ಅಭಿಪ್ರಾಯಪಡುತ್ತಿದ್ದಾರೆ.
ಯಾಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಪಾವಗಡ ಮಂಜು, ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದರು ಈ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಇವರ ಎಂಗೇಜ್ಮೆಂಟ್ ಕೂಡ ನಡೆಯುತ್ತಿದೆ. ಶಾಸ್ತ್ರೋಕ್ತವಾಗಿ ನಡೆಯುತ್ತಿರುವ ಎಂಗೇಜ್ಮೆಂಟ್ ವಿಡಿಯೋ ಹಾಗೂ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ತಾವಿಷ್ಟೇ ಬೆಳದಿದ್ದರೂ ತಮ್ಮ ಗ್ರಾಮವನ್ನು ಬಹಳ ಇಷ್ಟಪಡುವ ಮಂಜು ಅವರು ಈ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು. ಇದೀಗ ಮದುವೆ ವಿಚಾರದಲ್ಲೂ ಕೂಡ ತಮ್ಮ ಊರಿನಲ್ಲಿ ಇರುವ ತಮ್ಮ ಮನೆಯಲ್ಲಿ ಮದುವೆ ಆಗಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಂಜು ಪಾವಗಡ ಹಾಗೂ ನಂದಿನಿ ಅವರ ವಿವಾಹ ಮಹೋತ್ಸವವು ನವೆಂಬರ್ 13 ಹಾಗೂ 14ರಂದು ತುಮಕೂರು ಜಿಲ್ಲೆಯ ಪಾವಗಡದಲ್ಲಿರುವ ಮನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಇವರ ಮತ್ತಷ್ಟು ಬದುಕು ಸುಂದರವಾಗಲಿ ಹಾಗೆ ಕಲಿಕೆ ಗೆ ತಕ್ಕ ಸಾಕಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸೋಣ.