Pawan Kalyan: ನನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್ಸ್, ನಾನು ಮತಾಂತರಗೊಂಡಿದ್ದೇನೆ ನಟ ಪವನ್ ಕಲ್ಯಾಣ್ ವಿಡಿಯೋ ವೈರಲ್.!

Pawan Kalyan

ದೇಶದ ಕೋಟ್ಯಂತರ ಜನರ ಆರಾಧ್ಯ ದೈವ ತಿರುಪತಿ ಸನ್ನಿಧಿಯಲ್ಲಿ ನಡೆದಿರುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಆಗಿರುವ ಅಪಚಾರದ ವಿಚಾರ ಸದ್ಯಕ್ಕೆ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿದ್ದು, ಎಲ್ಲೆಡೆ ತೀವ್ರ ರೂಪದ ಖಂಡನೆ ಕೂಡ ಕೇಳಿ ಬರುತ್ತಿದೆ.

ನಮ್ಮ ದೇಶದಲ್ಲಿ ಹಿಂದೂಗಳ ಧಾರ್ಮಿಕತೆ, ನಂಬಿಕೆ ವಿಷಯದಲ್ಲಿ ಪದೇ ಪದೇ ಒಂದಲ್ಲ ಒಂದು ರೀತಿಯ ವಿವಾದಗಳಾಗುತ್ತಿದ್ದು ಈ ಬಾರಿ ಆಗಿರುವ ಸೂಕ್ಷ್ಮ ವಿಚಾರ ಹಿಂದೂಗಳ ಮನಸಿಗೆ ಬಹಳ ನೋ’ವುಂ’ಟು ಮಾಡಿದ್ದು ಮಾತ್ರವಲ್ಲದೇ ಸಾಕ್ಷಾತ್ ಭಗವಂತನಿಗೆ ಮಾಡಿರುವ ಮೋ’ಸವಾಗಿದೆ.

WhatsApp Group Join Now
Telegram Group Join Now

ಇತ್ತ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಮತ್ತೊಂದೆಡೆ ಇದನ್ನು ಬಹಳ ಮನಸ್ಸಿಗೆ ತೆಗೆದುಕೊಂಡಿರುವ ಆಂಧ್ರ ಡಿಸಿಎಂ ನಟ ಪವನ್ ಕಲ್ಯಾಣ್ (Pawan Kalyan) ಇದಕ್ಕೆ
ಪ್ರಾಯಶ್ಚಿತವಾಗಿ 11 ದಿನಗಳ ಪ್ರಾಯಶ್ಚಿತ್ತ ವ್ರತ ಮಾಡುವುದಾಗಿ ಘೋಷಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ಎಲ್ಲರ ಗಮನ ಸೆಳೆದದ್ದು ಅವರು ಸಮಸ್ತ ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದು. ನಿರಂತರವಾಗಿ ಹಿಂದೂ ಧರ್ಮೀಯರ ಭಾವನೆಗಳ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಭಾವನಾತ್ಮಕವಾಗಿ ಮಾತನಾಡಿ ಹಿಂದೂ ಧರ್ಮದ ಮೇಲೆ ಟೀಕೆ, ಟಿಪ್ಪಣಿ, ತಮಾಷೆಗಳನ್ನು ಮಾಡುವ ರೀತಿ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮದ ಮೇಲೆ ಏಕೆ ಮಾಡುವುದಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದ ರೀತಿ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಸೆಲೆಬ್ರಿಟಿಗಳಾದ ಪ್ರಕಾಶ್ ರೈ, ಕಾರ್ತಿ‌ ಜೊತೆಗೂ ವಾ’ಕ್ಸ’ಮ’ರ ಏರ್ಪಟ್ಟ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದಾಗಿತ್ತು. ಇದೆಲ್ಲದರ ನಡುವೆ ಸದ್ಯಕ್ಕೆ ಪವನ್ ಕಲ್ಯಾಣ್ ರವರ ಹಳೆಯ ವಿಡಿಯೋ ವೈರಲ್ ಆಗಿ ನೋಡುಗರನ್ನು ಬಹಳ ಗೊಂದಲಕ್ಕೀಡು ಮಾಡಿದೆ.

https://x.com/Sivalingireddy/status/1838617429582451024?ref_src=twsrc%5Etfw%7Ctwcamp%5Etweetembed%7Ctwterm%5E1838617429582451024%7Ctwgr%5E46807139125cfa3715faf799669f9d51c4efa361%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಇದಕ್ಕೆಲ್ಲ ಕಾರಣ ಕೆಲವೇ ವರ್ಷಗಳ ಹಿಂದೆ ಈಗ ಹಿಂದೂವಾಗಿ ಹಿಂದೂ ಧರ್ಮದ ಬಗ್ಗೆ ಇಷ್ಟೊಂದು ಕಾಳಜಿ ಮಾಡುತ್ತಿರುವ ಇದೆ ಪವನ್ ಕಲ್ಯಾಣ್ ತಮ್ಮ ಕುಟುಂಬದ ಕ್ರಿಶ್ಚಿಯನ್ ಧರ್ಮದ ಆಚರಣೆ ಬಗ್ಗೆ ಅಂದು ಆಡಿದ ಮಾತುಗಳು. ಅವರೇ ಹೇಳಿಕೊಂಡಿರುವ ಹಳೆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಚರ್ಚಾ ಗ್ರಾಸವಾಗಿರುವ ಆ ವಿಡಿಯೋದಲ್ಲಿರುವ ಮಾತುಗಳೇನೆಂದರೆ, ಹಿಂದೊಮ್ಮೆ ಕಾರ್ಯಕ್ರಮದಲ್ಲಿ ನಟ ಪವರ್ ಕಲ್ಯಾಣ್ ರವರೇ ಕ್ಯಾಮರಗಳ ಮುಂದೆ ನನ್ನ ಪತ್ನಿ ಆರ್ಥೋಡಾಕ್ಸ್ ಕ್ರಿಶ್ಚಿಯನ್ಸ್, ನಾನು ಕೂಡ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದೇನೆ, ನಾನು ಚರ್ಚ್ ಗೆ ಹೋಗುತ್ತೇನೆ, ಚರ್ಚಿನಲ್ಲಿ ಪ್ರೇಯರ್ ಸೇರಿದಂತೆ ಇನ್ನಿತರ ಆಚರಣೆಗಳನ್ನು ಕುಟುಂಬದ ಜೊತೆ ನಾನು ಕೂಡ ಪಾಲಿಸುತ್ತೇನೆ.

ಕ್ರಿಸ್ತನ ಜನ್ಮಸ್ಥಳವಾದ ಜೆರುಸಲೇಂ ಗೆ ಭೇಟಿ ನೀಡಿದ್ದೇನೆ ಎಂದು ಹೇಳಿ ಕ್ರೈಸ್ತ ಧರ್ಮದ ಬಗ್ಗೆ ಬಹಳ ಮೆಚ್ಚುಗೆ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದರು. ಅಂದು ಅವರ ಆಡಿದ ಮಾತುಗಳಿಗೂ ಇಂದು ನೀಡುತ್ತಿರುವ ಹೇಳಿಕೆಗಳಿಗೂ ಕಂಪೇರ್ ಮಾಡಿದರೆ ನಟನ ನಡವಳಿಕೆ ಅಸಮಂಜಸವಾಗಿದೆ. ಹೀಗಾಗಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಹಲವೆದ್ದಿದೆ.

ಅದರಲ್ಲೂ ತಿರುಪತಿ ವಿವಾದದ ನಂತರ ಹಿಂದೂ ಧರ್ಮದ ನಂಬಿಕೆಗಳನ್ನು ಗೌರವಿಸುವಂತೆ ಒತ್ತಾಯಿಸಿ ಮಾತನಾಡಿದ್ದ ಮತ್ತು ಸನಾತನ ಧರ್ಮದ ಪ್ರತಿಪಾಲಕನಂತೆ ನಡವಳಿಕೆ ತೋರುತ್ತಿರುವ ಇದೇ ಪವನ್ ಕಲ್ಯಾಣ್ ಅಂದು ಕ್ರೈಸ್ತ ಧರ್ಮದ ಬಗ್ಗೆ ಇದೇ ಭಾವನೆ ಹೊಂದಿ ಮಾತನಾಡಿದ್ದರು. ಹಾಗಾಗಿ ಜನರು ಪವನ್ ಕಲ್ಯಾಣ್ ಅವರು ರಾಜಕೀಯ ಸೇರಿದ ಬಳಿಕ ರಾಷ್ಟ್ರೀಯತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಇವರು ನಿಜವಾದ ಹಿಂದೂ ಅಲ್ಲ ಎಂದು ಅಭಿಪ್ರಾಯಗಳನ್ನು ಕಮೆಂಟ್ ಮಾಡುತ್ತಿದ್ದಾರೆ.

Leave a Comment