Rachitha Ram
ಅಕ್ಟೋಬರ್ 3ರಂದು ಚಂದನವನದ ಚಂದದ ತಾರೆ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitharam birthday) ಅಲಿಯಾಸ್ ಪಡ್ಡೆ ಹುಡುಗರ ಪ್ರೀತಿಯ ರಚ್ಚು 32ನೇ ವರ್ಷದ ಹುಟ್ಟುಹಬ್ಬ. ಸಾಮಾನ್ಯವಾಗಿ ನಟಿಯನ್ನು ಕಾಣುವುದಕ್ಕಾಗಿ ಅವರ ಮನೆ ಹತ್ತಿರ ಸಾಮಾನ್ಯ ದಿನಗಳಲ್ಲೂ ಜನರು ಬರುತ್ತಲೇ ಇರುತ್ತಾರೆ, ಇನ್ನು ಅವರು ಶೂಟಿಂಗ್ ಇಲ್ಲದೆ ಭಾನುವಾರ ಮನೆಯಲ್ಲಿದ್ದ ದಿನಗಳಲ್ಲಂತೂ ಜನಸಂದಣಿ ಹೆಚ್ಚಾಗಿರುತ್ತದೆ.
ಹೀಗಿದ್ದ ಮೇಲೆ ಹುಟ್ಟು ಹಬ್ಬದ ವಿಶೇಷ ಸಂದರ್ಭದ ಬಗ್ಗೆ ಹೇಳಬೇಕೆ? ತಡರಾತ್ರಿವರೆಗೂ ಕಾದು ಅಭಿಮಾನಿಗಳು ರಚಿತಾ ರಾಮ್ ಬರ್ತಡೆ ಸೆಲೆಬ್ರೇಶನ್ ಮಾಡಿ ಸಂಭ್ರಮಿಸುತ್ತಾರೆ ಮತ್ತು ಆ ದಿನ ಪೂರ್ತಿ ಇದೇ ರೀತಿ ಇರುತ್ತದೆ, ದೂರದ ಊರುಗಳಿಂದ ಬರುವ ಅಭಿಮಾನಿಗಳೊಂದಿಗೆ ಅವರು ತರವ ಕೇಕ್ ಕಟ್ ಮಾಡುತ್ತಾ ಸೆಲ್ಫಿ ನೀಡುತ್ತಾ ರಚಿತರಾಮ್ ಸಮಯ ಕಳೆಯುತ್ತಾರೆ ಆದರೆ.
ಈ ಬಾರಿ ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ (Insta post) ಒಂದನ್ನು ಹಾಕಿಕೊಳ್ಳುವ ಮೂಲಕ ತಮ್ಮ ಡೈ ಹಾರ್ಡ್ ಫ್ಯಾನ್ ಗಳಿಗೆ ನಿರಾಸೆ ಮೂಡಿಸಿದ್ದಾರೆ. ಅಷ್ಟಕ್ಕೂ ಅವರು ಹೇಳಿರುವುದೆನೆಂದರೆ,
ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬದ (ಅಕ್ಟೋಬರ್ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ.
ಎಲ್ಲರಿಗೂ ಕ್ಷಮೆಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ನಿಮ್ಮ ಪ್ರೀತಿಯ ರಚ್ಚು ಎಂಬ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾ ಪೋಸ್ಟ್ ಮೂಲಕ ನೀಡಿದ್ದಾರೆ. ಈ ಪೋಸ್ಟ್ ಹಾಕುತ್ತಿದ್ದಂತೆ ಬಹುತೇಕರ ಕಮೆಂಟ್ ಇಂದಿನ ವರ್ಷದ ಹುಟ್ಟು ಹಬ್ಬವನ್ನು ರಚಿತಾ ರಾಮ್ ರವರು ದರ್ಶನ ರವರಿಗಾಗಿ (Challenging Star Darshan) ತ್ಯಾಗ ಮಾಡಿದ್ದಾರೆ ಎಂಬರ್ಥದಲ್ಲಿಯೇ ಇದೆ, ಹಾಗಾದರೆ ಇದರ ಅಸಲಿಯತ್ತೇನು?
https://www.instagram.com/p/DAkr4pPzYRF/?igsh=MWRpdW9jendxNmZyMw=
ತೂಗುದೀಪ್ ಪ್ರೊಡಕ್ಷನ್ಸ್ ನ ಬುಲ್ ಬುಲ್ ಚಿತ್ರದ (Bulbul) ಮೂಲಕ ಸ್ಯಾಂಡಲ್ವುಡ್ ಗೆ ರಚಿತಾ ರಾಮ್ ನಾಯಕಿಯಾಗಿ ಪರಿಚಯವಾದರು, ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಅಲ್ಲಿಂದ ಅವರ ಅದೃಷ್ಟ ಖುಲಾಯಿಸಿತು, ಹೀಗಾಗಿ ರಚಿತರಾಮ್ ರವರೇ ಈವರೆಗೆ ಹಲವಾರು ಬಾರಿ ಅವರು ಚಿತ್ರಂಗಕ್ಕೆ ಕಾಲಿಡುವುದಕ್ಕೆ ಅವಕಾಶ ಕೊಟ್ಟಿದ್ದು ದರ್ಶನ್ ಹಾಗೂ ತೂಗುದೀಪ್ ಸಂಸ್ಥೆ.
ಹೀಗಾಗಿ ದರ್ಶನ್ ಅವರೇ ತಮ್ಮ ಗಾಡ್ ಫಾದರ್ ಎಂದೆ ಹೇಳಿಕೊಂಡಿದ್ದಾರೆ ಹಾಗೂ ಸಮಯ ಸಂದರ್ಭ ಏನೇ ಇರಲಿ ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ ಅವರಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳುವ ರಚಿತಾ ರಾಮ್ ಅವರು ದರ್ಶನ್ ಅವರ ಅತ್ಯಾಪ್ತ ವಲಯದಲ್ಲಿ ಒಬ್ಬರು.
ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ತಿಳಿದಿರುವಂತೆ ರೇಣುಕಾ ಸ್ವಾಮಿ ಕೊ’ಲೆ ಪ್ರಕರಣದಲ್ಲಿ ಆರೋಪಿಯಾಗಿ ನಟಿ ದರ್ಶನ್ ಜೈಲು ಸೇರಿದ್ದಾರೆ, ರಚಿತಾ ರಾಮ್ ರವರು ಕೂಡ ದರ್ಶನ್ ಭೇಟಿ ಮಾಡಿ ಸಮಾಧಾನದ ನುಡಿ ಹೇಳಿ ಬಂದಿದ್ದರು. ಇನ್ನೂ ಅವರು ಬಿಡುಗಡೆಯಾಗದ ಕಾರಣ ನಟಿ ಆ ಬೇಸರದಲ್ಲಿಯೇ ತಲೆಕೆಡಿಸಿಕೊಂಡು ಯಾವುದೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಇಷ್ಟ ಪಡುತ್ತಿಲ್ಲ ಎಂದು ತೋರುವಂತಿದೆ.
ಅಧಿಕೃತವಾಗಿ ಈ ಬಗ್ಗೆ ಏನೇ ಹಿಂಟ್ ಕೊಡದೆ ಇದ್ದರೂ ನೆಟ್ಟಿಗರು ಮಾತ್ರ ಅವರ ಪೋಸ್ಟ್ ನ್ನು ಡೀಕೋಡ್ ಮಾಡಿ ಡಿ ಬಾಸ್ ಗಾಗಿಯೇ ಬರ್ತಡೆ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಆಯ್ತು ಬಿಡಿ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಇನ್ ಅಡ್ವಾನ್ಸ್ ಮುಂದಿನ ವಾರ ಸಿಗೋಣ ಇನ್ನು ಇತ್ಯಾದಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.