Radhika Kumaraswamy: ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡುವುದೇ ಅವರ ಅಪ್ಪನ ಆಸೆ ಎಂದ ನಟಿ ರಾಧಿಕಾ ಕುಮಾರಸ್ವಾಮಿ.!

Radhika Kumaraswamy

ಮಂಗಳೂರು ಬೆಡಗಿ ಸ್ಯಾಂಡಲ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ (Actress Radhika Kumaraswamy) ಅವರು ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ಖಾಸಗಿ ವಾಹಿನಿಯೊಂದರ ಸ್ಪೆಷಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಶನದಲ್ಲಿ ನಿರೂಪಕರು ಕೇಳಿದ ಬಹುತೇಕ ನೇರ ಪ್ರಶ್ನೆಗಳಿಗೆ ಬಹಳ ಪ್ರಬುದ್ಧತೆಯಿಂದ ಉತ್ತರ ನೀಡಿ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೂ ಕೂಡ ಉತ್ತರಿಸಿ ಅಭಿಮಾನಿಗಳಿಗೆ ಇದುವರೆಗೂ ನಟಿ ಕುರಿತು ಇದ್ದ ಹಲವು ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

WhatsApp Group Join Now
Telegram Group Join Now

ಈ ಕಾರ್ಯಕ್ರಮದಲ್ಲಿ  ನಟಿಯ ಮುಂದಿನ ಪ್ರಾಜೆಕ್ಟ್ ಗಳು, ಅವರ ವೈಯುಕ್ತಿಕ ಜೀವನ ಹವ್ಯಾಸ ಹಾಗೂ ಮುಖ್ಯವಾಗಿ ಮಗಳ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿತ್ತು. ರಾಧಿಕಾ ಕುಮಾರಸ್ವಾಮಿ ಅವರ ಮಗಳು ಶಮಿಕಾ ಕುಮಾರಸ್ವಾಮಿ ಬಗ್ಗೆ ಇಡೀ ಕರ್ನಾಟಕಕ್ಕೆ ಒಂದು ರೀತಿಯ ಕುತೂಹಲ ಇದೆ.

ಈ ಹಿಂದೆ ನಟಿ ರಾಧಿಕ ಕುಮಾರಸ್ವಾಮಿಯವರು ಆಗಾಗ ಮಗಳ ಆಟ ಪಾಠಗಳ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಆದರೆ ಇದುವರೆಗೂ ಇರುವ ಫೋಟೋಗಳು ಬಹಳ ಹಳೆಯ ಫೋಟೋಗಳು ತೀರ ಇತ್ತೀಚೆಗೆ ಯಾವುದೇ ಅಪ್ಡೇಟ್ ಇಲ್ಲ ಹಾಗಾಗಿ ಮಗಳು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ.

ಆದರೆ ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನೆಂದರೆ,  ನಮ್ಮ ಕುಟುಂಬದಲ್ಲಿ ಚರ್ಚೆ ಆಗಿದೆ ಮಗಳ ಕುರಿತಾದ ಯಾವುದೇ ವಿಷಯಗಳನ್ನು ಹೇಳಿಕೊಳ್ಳುವಂತಿಲ್ಲ ಹಾಗೂ ಅವಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವಂತಿಲ್ಲ ಎಂದು.

ಯಾಕೆಂದರೆ ನಾವು ಬಹಳ ದೊಡ್ಡ ಮಟ್ಟದಲ್ಲಿ ಅವಳನ್ನು ಕರ್ನಾಟಕಕ್ಕೆ ಪರಿಚಯಿಸುವ ಆಸೆ ಇಟ್ಟುಕೊಂಡಿದ್ದೇವೆ ಹಾಗಾಗಿ ಈ ಸರ್ಪ್ರೈಸ್ ಗಾಡಿ ನೀವು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಆದಿ ರೀತಿಯಾಗಿ ಈಗವರು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ನಾನು ಇಷ್ಟು ಹೇಳಬಲ್ಲೆ ಚಿಕ್ಕ ವಯಸ್ಸಿನಿಂದ ಅವಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂದುಕೊಂಡಿದ್ದೆವು ಆದರೆ ಆ ಬಗ್ಗೆ ಅವಳಿಗೆ ಪ್ರೆಶರ್ ಹಾಕಿಲ್ಲ ನನಗೂ ಅದೇ ಆಸೆ ಇತ್ತು ಅವರ ತಂದೆಗೂ ಅದೇ ಆಸೆ ಇತ್ತು, ಸದ್ಯಕ್ಕೆ ನಮ್ಮ ಮಗಳು ನಮ್ಮ ಆಸೆಯನ್ನು ಪೂರೈಸುತ್ತಿದ್ದಾಳೆ ಎಂದು ಹೇಳಬಲ್ಲೆ.

ಇದಿಷ್ಟೇ ಅಲ್ಲ ಆಕೆ ಡಾನ್ಸ್, ಆಕ್ಟಿಂಗ್, ಮೇಕಪ್ ಎಲ್ಲದರಲ್ಲೂ ಕೂಡ ನನ್ನನ್ನು ಮೀರಿಸುತ್ತಾಳೆ ಅವಳು ನನಗಿಂತ ಬಹಳ ಚೂಟಿ ಇದ್ದಾಳೆ. ಕೆಲವೊಮ್ಮೆ ನನಗೆ ಅಡ್ವೆಸ್ ಮಾಡುತ್ತಿರುತ್ತಾಳೆ ಯೂಟ್ಯೂಬ್ ವಿಡಿಯೋಗಳಲ್ಲಿ ಶೇರ್ ಮಾಡಿ ಈ ಸ್ಟೆಪ್ಸ್ ಗಳನ್ನ ಷಕಲಿಯಿರಿ ಎನ್ನುತ್ತಾಳೆ. ನನ್ನ ಚೈಲ್ಡೀಷ್ ನೆಸ್  ನೋಡಿ ಬುದ್ಧಿ ಹೇಳಿ ನಾನು ಮಗಳಾ? ನೀವು ಮಗಳಾ? ಎಂದು ಕೇಳುತ್ತಾಳೆ ಎಂದು ಶಮಿಕಾ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ ಟ್ರಾವೆಲ್ ಮಾಡುವುದು ಇಷ್ಟ ಅದಕ್ಕಿಂತ ಹೆಚ್ಚಾಗಿ ಸಮಯ ಸಿಕ್ಕರೆ ಸಾಕು ಕುಟುಂಬದೊಂದಿಗೆ ಇರಲು ಇಷ್ಟಪಡುತ್ತೇನೆ. ನನಗೆ ಹೆಚ್ಚಾಗಿ ಯಾರೂ ಫ್ರೆಂಡ್ಸ್ ಇಲ್ಲ ನನಗೆ ನನ್ನ ಚಿಕ್ಕ ಕುಟುಂಬವೇ ಎಲ್ಲಾ. ಹಾಗಾಗಿ ಕುಟುಂಬದ ಜೊತೆ ಇದ್ದಾರೆ ಖುಷಿ ಅಷ್ಟೇ ಎಂದು ಹೇಳಿಕೊಂಡಿದ್ದಾರೆ ಮತ್ತು ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿ.

ಇಂದು ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ಕಾಸ್ಟಿಂಗ್ ಕೌಚ್ ವಿಷಯದ ಬಗ್ಗೆ ಮಾತಾಡಿ ತಮಗಾದ ಅನುಭವದ ಬಗ್ಗೆ ಈ ರೀತಿ ಹೇಳಿದ್ದಾರೆ. ನಾನು ಇಂಡಸ್ಟ್ರಿ ಗೆ ಬಂದಾಗ ಬಹಳ ಚಿಕ್ಕವಳಾಗಿದ್ದೆ ಹಾಗಾಗಿ ಯಾವುದೇ ನಿರ್ಮಾಪಕ ನಿರ್ದೇಶಕ ನನಗೆ ಆ ರೀತಿ ಕೆಟ್ಟದಾಗಿ ತೊಂದರೆ ಕೊಡಲಿಲ್ಲ, ಆದರೆ ತಂಡದಲ್ಲಿದ್ದ ಒಬ್ಬರಿಂದ ಅವಮಾನ ಆಗಿತ್ತು.

ನನಗೆ ಆಗಿಲ್ಲ ಇನ್ನು ಮಾತ್ರಕ್ಕೆ ಯಾರಿಗೂ ಆಗಿಲ್ಲ ಎಂದು ಅರ್ಥವಲ್ಲ. ಹೆಣ್ಣು ಮಕ್ಕಳು ಹಣಕ್ಕಾಗಿ ಅಥವಾ ಹೆಸರು ಮಾಡಬೇಕು ಎನ್ನುವ ಕಾರಣಕ್ಕಾಗಿ ಇಲ್ಲಿ ಕೆಲಸ ಹುಡುಕಿಕೊಂಡು ಬರುತ್ತಾರೆ, ಈ ಕ್ಷೇತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ಸಮಸ್ಯೆ ಇದೆ ಆದರೆ ಎಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸಬೇಕು ತಪ್ಪು ಮಾಡಿದವರಿಗೆ ಶಿ’ಕ್ಷೆ ಕೊಡಬೇಕು ನೊಂದವರ ಪರವಾಗಿರಬೇಕು ಎಂದಿದ್ದಾರೆ.

Leave a Comment