Radhika Kumaraswamy: ಸಾರ್ವಜನಿಕವಾಗಿ ಮೊದಲ ಬಾರಿಗೆ ದರ್ಶನ್ ಕೇಸ್ ಬಗ್ಗೆ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ…

Radhika Kumaraswamy

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು (Challenging Star Darshan) ಕನ್ನಡ ಚಲನಚಿತ್ರರಂಗದ ಸ್ಟಾರ್ ಹೀರೋ. ಅಭಿಮಾನಿಗಳನ್ನೇ ಸೆಲೆಬ್ರಿಟಿ ಎಂದು ಕರೆಯುವ ಈ ದಾಸನಿಗೆ ಇರುವ ಪ್ಯಾನ್ ಕ್ರೇಜ್ ಗತ್ತು ಇಡೀ ದೇಶಕ್ಕೆ ಗೊತ್ತು. ಜನಸಾಮಾನ್ಯರಿಂದ ಇಷ್ಟು ಪ್ರೀತಿ ವಿಶ್ವಾಸ ಹಾರೈಕೆ ಗಳಿಸಿರುವ ನಟನ ಅದೃಷ್ಟ ಸ್ವಲ್ಪ ಕೆಟ್ಟಿದೆ, ಹೀಗಾಗಿ ಕೊ’ಲೆ ಆರೋಪ ಹೊತ್ತು ನಟ ದರ್ಶನ್ ಜೈಲು (jail) ಸೇರಿದ್ದಾರೆ.

ಈಗಾಗಲೇ ಸಿನಿಮಾ ರಂಗದ ಬಹುತೇಕರು ಈ ವಿಚಾರವಾಗಿ0 ಪರ ಹಾಗೂ ವಿರೋಧ ಮಾತನಾಡಿ ಡಿ ಬಾಸ್ ಅಭಿಮಾನಿಗಳ ಸಮಾಧಾನಕ್ಕೆ ಹಾಗೂ ಆ’ಕ್ರೋ’ಶಕ್ಕೆ ಕಾರಣವಾಗಿದ್ದಾರೆ.ಇದಾದ ಬಳಿಕ ನಟಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಕೂಡ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸುದ್ದಿ ಮಾಧ್ಯಮವೊಂದು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆ ಸಂದರ್ಶನದಲ್ಲಿ ದರ್ಶನ್ ರ ಬಗ್ಗೆ ಮಾತನಾಡಿದ್ದಾರೆ.

WhatsApp Group Join Now
Telegram Group Join Now

ಎರಡು ಸಿನಿಮಾಗಳಲ್ಲಿ ದರ್ಶನ್ ರವರೊಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡು ಹತ್ತಿರದಿಂದ ಇವರನ್ನು ಕಂಡ ರಾಧಿಕಾ ತಾವು ನೋಡಿದ ದರ್ಶನ್ ಬಗ್ಗೆ ಹಾಗೂ ಇಂದಿನ ದರ್ಶನ್ ಬಗ್ಗೆ ಹೀಗೆಂದಿದ್ದಾರೆ. ಮಂಡ್ಯ ಹಾಗೂ ಅನಾಥರು ಸಿನಿಮಾದಲ್ಲಿ ದರ್ಶನ್ ರೊಟ್ಟಿಗೆ ಅಭಿನಯಿಸಿದ್ದೇನೆ. ಆ ಸಿನಿಮಾ ಸೆಟ್ ನಲ್ಲಿ ದರ್ಶನ್ ಅವರು ಇರುತ್ತಿದ್ದ ರೀತಿ ನೋಡಿ ಆಶ್ಚರ್ಯವಾಗುತ್ತಿತ್ತು.

ನನಗೆ ಅವರ ವ್ಯಕ್ತಿತ್ವದ ಮೇಲೆ ಇನ್ನಷ್ಟು ಗೌರವ ಹೆಚ್ಚಾಯಿತು. ಎಲ್ಲರನ್ನು ಅಣ್ಣ ಹೋಗಿ ಬನ್ನಿ ಎಂದು ಮಾತನಾಡಿಸುತ್ತಿದ್ದರು, ತಾವೊಬ್ಬ ಹೀರೋ ಎಂದು ಸೆಟ್ ನಲ್ಲಿ ಯಾರೊಂದಿಗೂ ಹೀರೋಯಿಸಂ ತೋರಿದವರಲ್ಲ. ಅವರ ಜೊತೆಯಲ್ಲಿರುವ ಎಲ್ಲರ ಜೊತೆಗೂ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು. ಆದರೆ ಅವರ ಬದುಕಿನಲ್ಲಿ ಇಂತಹ ದು’ರ್ಘ’ಟ’ನೆ ಏಕೆ ಅಯ್ತು? ಹೇಗಾಯ್ತು ಗೊತ್ತಿಲ್ಲ.

ಯಾರ ಜೀವನದಲ್ಲಿ ಏನು ಆಗಿರುತ್ತದೆ ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ ನಾವು ನ್ಯೂಸ್ ನೋಡಿ ಅಥವಾ ಬೇರೆ ಯಾರೋ ಹೇಳಿದ್ದನ್ನು ಕೇಳಿ ಇದನ್ನು ನಂಬುತ್ತೇವೆ ಅಷ್ಟೇ. ಯಾವ ದು’ರ್ಘ’ಟ’ನೆ ಆಗುವ ಮುನ್ನವೂ ಅದರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಎಲ್ಲರ ಬದುಕಿನಲ್ಲೂ ಕೂಡ ಇಂತಹ ಕೆ’ಟ್ಟ ಪರಿಸ್ಥಿತಿಗಳು ಎದುರಾಗಿರುತ್ತವೆ.

ನಾವು ನೀವು ಎಲ್ಲರೂ ಹೀಗೆ ಇಂತಹ ಒಂದೊಂದು ರೀತಿಯ ಸಂದರ್ಭಗಳನ್ನು ಎದುರಿಸಿಯೇ ಅದರಿಂದ ಆಚೆ ಬಂದು ಬದುಕುತ್ತಿರುತ್ತೇವೆ. ಈಗ ದರ್ಶನ್ ಅವರಿಗೂ ಕೂಡ ಹೇಳುವುದು ಅಷ್ಟೇ ಆದಷ್ಟು ಬೇಗ ದರ್ಶನ್ ರವರು ತಮ್ಮ ಬದುಕಿನಲ್ಲಿ ಆಗಿರುವ ಈ ಸಮಸ್ಯೆಯನ್ನು ಪರಿಹರಿಸಿಕೊಂಡು ಇದೆಲ್ಲದರಿಂದ ಬೇಗ ಆಚೆ ಬಂದು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂದು ಆಸೆ ಪಡುತ್ತೇನೆ.

ನಿಜವಾಗಿ ಹೇಳಬೇಕು ಎಂದರೆ ದರ್ಶನ್‌ ರೈ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ಖಂಡಿತವಾಗಿಯೂ ಇದೆ ಹಾಗಾಗಿ ದರ್ಶನ್ ಅವರು ಆದಷ್ಟು ಬೇಗ ಸಮಸ್ಯೆಯಿಂದ ಹೊರಬರಲಿ ಎಂದು ಹೇಳಿದ್ದಾರೆ. ಈ ಸಂದರ್ಶನದಲ್ಲಿ ನಟಿ ಹಿಂದೆಂದಿಗಿಂತ ಹೆಚ್ಚು ಮುಕ್ತವಾಗಿ ಮಾತನಾಡಿದ್ದಾರೆ ಅಂತಲೇ ಹೇಳಬಹುದು.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಾಗೂ ಮಗಳ ಭವಿಷ್ಯದ ಕನಸುಗಳ ಬಗ್ಗೆ, ಸಿನಿಮಾ ರಂಗದಲ್ಲಿ ಇಂದು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹಾಗೂ ತಮ್ಮ ಸಿನಿ ಜರ್ನಿ ಬಗ್ಗೆ, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಆದ ಬಳಿಕ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಈಗ ನಿರ್ಮಾಪಕಿಯಾಗಿ ಹಾಗೂ ಮಹಿಳಾ‌ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಇವರ ಸಿನಿ ಕೆರಿಯರ್ ಇನ್ನಷ್ಟು ಉಜ್ವಲವಾಗಲಿ ಎಂದು ನಾವು ಕೂಡ ಹರಸೋಣ.

Leave a Comment