Sathish
ನೀನಾಸ ಸತೀಶ್ (Ninasam Sathish) ಈ ಹೆಸರು ಕೇಳಿದ ತಕ್ಷಣ ಅನೇಕರಿಗೆ ಇವರು ಹಾಸ್ಯನಟ ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ ಕಾಮಿಡಿಯೊಂದಿಗೆ ಒಂದು ಸಂದೇಶಪೂರಿತ ಸಿನಿಮಾಗಳನ್ನು ಕಟ್ಟಿಕೊಡುವ ಖ್ಯಾತಿ ಇವರದ್ದು, ಇವರ ಪ್ರತಿ ಚಿತ್ರಗಳಲ್ಲೂ ಹಾಸ್ಯಕ್ಕೆ ಎಷ್ಟು ಮಹತ್ವ ಇರುತ್ತದೋ ಹಾಗೂ ಸಿನಿಮಾದಲ್ಲಿ ಅಂತಹದೇ ಪರಿಣಾಮ ಬೀರುವ ಅಂಶವು ಇರುತ್ತದೆ.
ಹಾಗಾಗಿ ಇವರು ಸಿನಿಮಾವನ್ನು ತಮ್ಮ ವೃತ್ತಿ ಮಾತ್ರ ಅಲ್ಲದೆ ಸಮಾಜದ ಮೇಲೆ ಪರಿಣಾಮ ಬೀರುವ ಆಯುಧ ಎಂದು ನಂಬಿದ್ದಾರೆ. ಈ ವಿಚಾರ ಎತ್ತಿಕೊಂಡು ಇತ್ತೀಚೆಗೆ ಬಹಳ ಆ’ವೇ’ಶದಿಂದ ಸಿನಿಮಾ ಹಾಗೂ ನಾಯಕ ನಟನ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ ಅಷ್ಟಕ್ಕೂ ಇದಕ್ಕೆ ಕಾರಣವೇನು ಇಲ್ಲಿದೆ ನೋಡಿ ಮಾಹಿತಿ.
ಕನ್ನಡ ಚಿತ್ರರಂಗಕ್ಕೆ ಈಗ ಹೊಸಬರ ಆಗಮನ ಹೆಚ್ಚಾಗಿದೆ. ಹೊಸ ಪ್ರತಿಭೆಗಳು ವಿಭಿನ್ನ ಮಾದರಿಯ ಸಿನಿಮಾಗಳು, ಪ್ರಯತ್ನಗಳು, ಆಸಕ್ತಿಗಳು ಕೆಲವು ಇಲಿ ಸ್ವಾಗತಾರ್ಹ. ಆದರೆ ಅದನ್ನು ಗುರುತಿಸುವುದು ಅಷ್ಟೇ ಮುಖ್ಯವಾಗುತ್ತದೆ. ಆರಂಭದ ದಿನಗಳಲ್ಲಿ ಆ ಐಡೆಂಟಿಫಿಕೇಶನ್ ಸಿಗುವವರೆಗೂ ಬಹಳ ಹೋರಾಟ ಮಾಡಬೇಕು.
ಈ ಬಗ್ಗೆ ವೃತ್ತ ಎನ್ನುವ ಕನ್ನಡ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಮಾತಿಗಿಳಿದರು ನೀನಾಸಂ ಸತೀಶ್ ಹೆಸರೇ ಹೇಳುವಂತೆ ಸಿನಿಮಾ ಕೂಡ ಇದೇ ರೀತಿ ಇಂಟರೆಸ್ಟ್ ಆಗಿದೆ ಎನ್ನುವ ಭರವಸೆಗೆ ಮೂಡುತ್ತಿದೆ. ಇದೇ ಸಿನಿಮಾದ ವಿಚಾರವಾಗಿ ಮಾತಗಿಳಿದ ನೀನಾಸಂ ಸತೀಶ್ ಯಾವುದೇ ಒಬ್ಬ ವ್ಯಕ್ತಿ ಒಂದು ಸಿನಿಮಾದಿಂದ ಹೀರೋ ಆಗುವುದಿಲ್ಲ ಒಂದು ಸಿನಿಮಾ ಗೆ ಸಕ್ಸಸ್ ಸಿಗಬಹುದು.
ಆದರೆ ಅದು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು, ಹತ್ತಾರು ವರ್ಷಗಳು ಬರುವ ಅಡಚಣೆಗಳನ್ನು ಎದುರಿಸಬೇಕು, 10-12 ವರ್ಷಗಳಾದ ಮೇಲೂ ನಿನ್ನ ಚಿತ್ರ ಬರುತ್ತಿದೆ ಎಂದರೆ ಆಗ ಅದು ಸಕ್ಸಸ್ ಆದರೆ ಅಂತಹ ಸಿಕ್ಸಸ್ ಸಿಗುವವರೆಗೆ ಅಷ್ಟೇ ಶ್ರದ್ಧೆ ಮತ್ತು ಪ್ರಯತ್ನ ಮುಖ್ಯ. ಪ್ರತಿಯೊಬ್ಬರು ಪ್ರಾಕ್ಟೀಸ್ ಮಾಡುತ್ತಾರೆ ಒಬ್ಬ ಸಿಂಗರ್ ನಿಂದ ಲಾಯರ್ ವರೆಗೆ ಎಲ್ಲರೂ ಪ್ರಾಕ್ಟೀಸ್ ಮಾಡುತ್ತಾರೆ.
ಈ ಪ್ರಾಕ್ಟೀಸ್ ಹೀರೊ ಗೆ ಸಿನಿಮಾ ಕ್ಷೇತ್ರದಲ್ಲಿ ಉಳಿದವರಿಗಿಂತ ಹೆಚ್ಚು ಮುಖ್ಯ. ಯಾಕೆಂದರೆ ಒಬ್ಬ ಹೀರೋ ಮಂತ್ರಿ ಪಾತ್ರ ಕೂಡ ಮಾಡಬೇಕು, ರಾಜನ ಪಾತ್ರವನ್ನು ಮಾಡಬೇಕು, ಜವಾನನ ಕೆಲಸವನ್ನು ಮಾಡಬೇಕು, ಕಾರ್ಪೊರೇಷನ್ ಪಾತ್ರ ಕೊಟ್ಟರು ಮಾಡಬೇಕು. ಹೀರೋ ಯಾರು ಎನ್ನುವ ಹೆಸರು ಕೇಳಿ ಜನ ಸಿನಿಮಾ ಗೆ ಬರುವುದು ಹಾಗಾಗಿ ಆ ಜವಾಬ್ದಾರಿ ಹೀರೋಗೆ ಇರುತ್ತದೆ.
ವೃತ್ತ ಟ್ರೈಲರ್ ನೋಡಿ ನನಗೆ ಆಶ್ಚರ್ಯ ಆಯ್ತು ಮೊದಲ ಮೇಲೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಈ ಹುಡುಗನಿಗೆ ಇಷ್ಟು ವಾಯ್ಸ್ ಮಾಡ್ಯುಲೇಶನ್ ಇದೆ, ತುಂಬಾ ವರ್ಷ ಬಣ್ಣ ಹಚ್ಚಿದವರಂತೆ ಮೆಚೂರ್ಡ್ ಆಕೆ ಆಕ್ಟ್ ಮಾಡಿದ್ದಾರೆ. ಅಬ್ಬಾ! ಎನಿಸಿತು. ಆಮೇಲೆ ಹೇಳಿದರು ಆತ ಎಂಟು ವರ್ಷಗಳಿಂದ ರಂಗಭೂಮಿಯಲ್ಲಿದ್ದಾನೆ ಎಂದು ಅದು ಪ್ರಾಕ್ಟೀಸ್, ಅದರ ರಿಸಲ್ಟ್ ಈಗ ತೆರೆ ಮೇಲೆ ಕಾಣುತ್ತಿದೆ.
ಆದರೆ ಈಗ ಹೇಗಾಗಿದೆ ಎಂದರೆ ಸುಮ್ಮನೆ ಊರಿಗೆ ಹೋದರೆ ಸಾಕು ನಮ್ಮ ಮೇಷ್ಟ್ರು ಕೇಳುತ್ತಾರೆ ನನ್ನ ಮಗ 10ನೇ ತರಗತಿಗೆ ಓದು ನಿಲ್ಲಿಸಿ ಬಿಟ್ಟಿದ್ದಾನೆ, ಏನು ಮಾಡುವುದಿಲ್ಲ, ಸಿನಿಮಾಗೆ ಕರೆದುಕೊಂಡು ಹೋಗು ಅಲ್ಲಾದರೂ ಏನಾದರೂ ಆಗುತ್ತಾನಾ ನೋಡು ಎಂದು ಹೇಳುತ್ತಾರೆ. ಆದರೆ ಸಿನಿಮಾ ಅನ್ನೋದು ಏನು ಹುಲ್ಲು ಹೊರುವ ಹಾಗೆಯಾ? ಸಿನಿಮಾ ಎಂದರೆ ಕಲ್ಚರ್ ಸಿನಿಮಾದಿಂದ ಸಮಾಜದ ಮೇಲೆ ಎಂತಹ ಪರಿಣಾಮ ಬೀರಬಹುದು ಗೊತ್ತಾ? ಬಂಗಾರದ ಮನುಷ್ಯ ನೋಡಿ ಎಷ್ಟು ಜನ ಬದಲಾದರು.
ಇಂತಹ ಅವಕಾಶ ಸಿಗುವುದು ಸ್ಕ್ರೀನ್ ಮೇಲೆ ಇರುವವರಿಗೆ ಮಾತ್ರ ಇದು ಬೇಕಾಬಿಟ್ಟಿ ಅಲ್ಲ ಜಾತಿ ಮತ ಭಾಷೆ ಧರ್ಮ ಎಲ್ಲವನ್ನು ತೊರೆದು ಸ್ಕ್ರೀನ್ ಮೇಲೆ ಒಬ್ಬ ಹೀರೋ ಬಂದಾಗ ಕೈ ಚಪ್ಪಾಳೆ ತಟ್ಟುತ್ತಾರಲ್ಲ ವಿಷಲ್ ಹೊಡೆಯುತ್ತಾರಲ್ಲ ಕೇಕೆ ಹಾಕುತ್ತಾರಲ್ಲ ಆ ಪ್ರೀತಿ ವಿಶ್ವಾಸ ಗಳಿಸುವುದು ಸುಲಭದ ಮಾತಲ್ಲ ಎಂದು ಬಹಳ ಭಾವಪರವಶರಾಗಿ ಮಾತನಾಡಿದ್ದಾರೆ.