Sudeep: ನಿಮ್ಮನ್ನು ಬಿಟ್ಟರೆ ಬೇರೆ ಯಾರು ಬಿಗ್ ಬಾಸ್ ನಿರೂಪಣೆ ಮಾಡಬಹುದು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

Sudeep

ಬಿಗ್ ಬಾಸ್ ಸೀಸನ್ 11ರ (Bigboss S11) ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಸೆಪ್ಟೆಂಬರ್ 29 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ಆಗಿ ಅಸಲಿ ಆಟ ಶುರುವಾಗುತ್ತದೆ. ಒಂದು ರಿಯಾಲಿಟಿ ಶೋಗಾಗಿ ವರ್ಷಪೂರ್ತಿ ಕಾಯುವ ಹಾಗೂ ವರ್ಷಪೂರ್ತಿ ಒಂದು ಕಾರ್ಯಕ್ರಮದ ಬಗ್ಗೆ ಮಾತನಾಡುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ.

ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲಾ ವಯೋಮಾನದವರು ಇಷ್ಟಪಡುವಂತಹ ಈ ರಿಯಲ್ ರಿಯಾಲಿಟಿ ಶೋ‌ನ ಬಿಗ್ ಬಾಸ್ ನಮ್ಮ ಕಿಚ್ಚ ಸುದೀಪ್ (Kicha Sudeep) ಅವರೇ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಕಾರ್ಯಕ್ರಮಕ್ಕೂ ಹಾಗೂ ಇವರಿಗೂ ಹೊಂದಾಣಿಕೆಯಾಗಿದೆ. ಇವರಿಲ್ಲದ ಬಿಗ್ ಬಾಸ್ ಊಹಿಸಲು ಅಸಾಧ್ಯ ಬಿಗ್ ಬಾಸ್ನ ನೂರು ದಿನಗಳ ಆಟಕ್ಕೆ ಅಭಿಮಾನಿಗಳಾದಂತೆ ಸುದೀಪ್ ಅವರ ವೀಕೆಂಡ್ ನಿರೂಪಣೆಗೆ ಕಾಯುವ ಮತ್ತೊಂದು ವರ್ಗವೂ ಕೂಡ ಇದೆ.

WhatsApp Group Join Now
Telegram Group Join Now

ಆದರೆ ಮಾಡುತ್ತಿಲ್ಲ ಈ ಬಾರಿ ಅವರು ಬಿಗ್ ಬಾಸ್ ಆಂಕರಿಗ್ (Anchoring) ಮಾಡುತ್ತಿಲ್ಲ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿ ಬೇಸರ ಎಲ್ಲರಿಗೂ ಬೇಸರ ತಂದಿತ್ತು. ಇದೀಗ ಅಂತಿಮವಾಗಿ ಎಲ್ಲ ಊಹಾಪೋಹಗಳಿಗು ತೆರೆ ಬಿದ್ದಿದ್ದು ಕಲರ್ಸ್ ಕನ್ನಡ ವಾಹಿನಿಯ ಸೀಸನ್ 11ರ ವಿಶೇಷ ಸುದ್ದಿಗೋಷ್ಠಿ ಕೂಡ ನಡೆಸಿದೆ. ಇದರಲ್ಲಿ ಸುದೀಪ್ ಅವರು ಭಾಗವಹಿಸುವ ಮೂಲಕ ಸೀಸನ್ 11ರ ಸಾರಥಿ ತಾವೇ ಎಂದು ಖಚಿತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಂದ ಹಲವಾರು ಬಗ್ಗೆ ಪ್ರಶ್ನೆಗಳು ಕಿಚ್ಚನಿಗೆ ಎದುರಾದವು ಇದರಲ್ಲಿ ಮುಖ್ಯವಾಗಿ ಕಿಚ್ಚ ಸುದೀಪ್ ಅವರನ್ನು ಉದ್ದೇಶಿಸಿ ಈ ಕಾರ್ಯಕ್ರಮವನ್ನು ಮುಂದಿನ ಸೀಸನ್ ನಲ್ಲಿ ನೀವು ಮಾಡುವುದಿಲ್ಲ ಎಂದರೆ ನಿಮ್ಮ ಬದಲು ಬೇರೆ ಯಾರಾನ್ನಾದರೂ ನೀವೇ ಸೆಲೆಕ್ಟ್ ಮಾಡಿ ಎಂದು ಕಲರ್ಸ್ ಕನ್ನಡ ವಾಹಿನಿ ನಿಮಗೆ ಅಧಿಕಾರ ಕೊಟ್ಟರೆ ನಿಮ್ಮ ಜಾಗದಲ್ಲಿ ಬೇರೆ ಯಾರನ್ನು ನೋಡಲು ಇಷ್ಟಪಡುತ್ತೀರಾ ಎನ್ನುವ ಪ್ರಶ್ನೆ ಸೇರಿತ್ತು ಇದಕ್ಕೆ ಸುದೀಪ್ ಅವರು ಬಹಳ ಚತುರತೆಯಿಂದ ಉತ್ತರ ಕೊಟ್ಟಿದ್ದಾರೆ ಅವರ ಉತ್ತರ ಹೀಗಿದೆ ನೋಡಿ.

ಹೌದು, ನಾನು ಈ ಸೀಸನ್ ಮಾಡಲು ಆಗುವುದಿಲ್ಲ ಎಂದು ಹೇಳಿದ್ದು ನಿಜ ಆಮೇಲೆ ಒಪ್ಪಿಕೊಂಡಿದ್ದು ನಿಜ ಆದರೆ ಮುಂದಿನ ಸೀಸನ್ ಆಂಕರ್ ಹೆಸರು ನಾಮಿನೇಟ್ ಮಾಡುವ ಬಗ್ಗೆ ಹೇಳುವುದಾದರೆ ನನ್ನ ಕಣ್ಣ ಮುಂದೆ ಈ ಸೀಸನ್ ಇದೆ ಸದ್ಯಕ್ಕೆ ನಾನು ಅದನ್ನು ಎಷ್ಟು ಚೆನ್ನಾಗಿ ನಡೆಸಿಕೊಂಡು ಹೋಗಲು ಸಾಧ್ಯ ಎನ್ನುವುದಷ್ಟೇ ಯೋಚನೆ ಮಾಡುತ್ತಿದ್ದೇನೆ,

ಹಾಗಾಗಿ ಮುಂದಿನ ವರ್ಷದ್ದು ಮುಂದಿನ ವರ್ಷಕ್ಕೆ ಒಂದು ವೇಳೆ ಮುಂದಿನ ವರ್ಷ ಕೂಡ ಇದೇ ರೀತಿ ಚಾನೆಲ್ ಅವರು ಬಂದು ನನ್ನನ್ನೇ ನಿರೂಪಣೆ ಮಾಡಿ ಎಂದು ಕೇಳಿಕೊಂಡಾಗ ಅವರು ಹೇಳುವ ಮಾತುಗಳು ನನಗೆ ಮನವರಿಕೆ ಆದಾಗ ಆ ಸೀಸನ್ ಕೂಡ ನಾನೇ ನಡೆಸಬಹುದು. ಒಂದು ವೇಳೆ ಕಾರಣಗಳಿಂದ ನಡೆಸಲು ಸಾಧ್ಯವಾಗದೇ ಹೋದರೆ ಬೇರೆ ಯಾರನ್ನೋ ಸೂಚಿಸುವ ಕೆಲಸ ನಾನು ಮಾಡಲು ಆಗುವುದಿಲ್ಲ.

ನನಗೆ ಕಥೆ ಬರುತ್ತದೆ ಕಥೆ ಕೇಳಿ ಸಿನಿಮಾ ಮಾಡಲು ಆಗದೆ ಇದ್ದಾಗ ಅದಕ್ಕೇನು ಕಾರಣ ಎಂತಷ್ಟೇ ನಾನು ಹೇಳಬಹುದು, ಹೊರತು ಈ ಕಥೆ ಇಟ್ಟುಕೊಂಡು ಅವರ ಬಳಿ ಹೋಗಿ ಇವರ ಬಳಿ ಹೋಗಿ ಎಂದು ಹೇಳುವ ಕೆಲಸ ನಾನು ಮಾಡುವುದಿಲ್ಲ. ಈ ವಿಷಯದ ಕುರಿತು ಸಂಪೂರ್ಣ ಅಧಿಕಾರ ಚಾನೆಲ್ ಗೆ ಇರುತ್ತದೆ ಎಂದು ಉತ್ತರಿಸಿದ್ದಾರೆ.!

Leave a Comment