Sundar Raj
ವಿಧಿಯಾಟ ಎನ್ನುವುದೆ ಹೀಗೆ. ಇಲ್ಲಿ ಸುಖ ಬಂದರೂ ಒಟ್ಟಿಗೆ ಬರುತ್ತದೆ, ದುಃ’ಖ ಬಂದರು ಒಟ್ಟಿಗೆ ಬರುತ್ತದೆ. ಆದರೆ ಯಾವ ರೀತಿಯ ಕಷ್ಟ ಬಂದರೂ ಸಾ’ವಿನ ನೋ’ವು ಮಾತ್ರ ಒಟ್ಟೊಟ್ಟಿಗೆ ಬರಬಾರದು. ಅದರಲ್ಲಿ ಕಣ್ಣೆದುರಿಗೆ ಬದುಕಿ ಬಾಳಬೇಕಾಗಿದ್ದ ಮಕ್ಕಳ ವಿಚಾರದಲ್ಲಿ ಹೀಗಾಗಿದ್ದರೆ ಪುತ್ರಶೋಕ ನಿರಂತರ ಎನ್ನುವಂತೆ ಕೊನೆಯವರೆಗೂ ಕಳೆಯದ ಕೊರಗು.
ಇಂತಹ ಒಂದು ಭೂಮಿ ತೂಕದ ದುಃ’ಖವನ್ನು ಒಡಲೊಳಗಿಟ್ಟುಕೊಂಡು ಮೌನವಾಗಿ ಮುಖದ ಮೇಲೆ ಫೇಕ್ ಸ್ಮೈಲ್ ಹೊತ್ತು ಬದುಕುತ್ತಿದ್ದಾರೆ ಸ್ಯಾಂಡಲ್ವುಡ್ ತಾರಾ ಜೋಡಿ, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ. ಹಿರಿಯ ನಟ ಸುಂದರ್ ರಾಜ್ ಅವರು ಇತ್ತೀಚೆಗೆ ಖಾಸಗಿ ಯುಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು.
ಇದರಲ್ಲಿ ಅವರಾಡಿದ ಪ್ರತಿ ಮಾತು ಹಿರಿಯರಿಗೆ ಸಮಾಧಾನವಾಗಿ, ಕಿರಿಯರಿಗೆ ಬುದ್ಧಿ ಮಾತಾಗಿ ಪ್ರಭುದ್ಧತೆಯಿಂದ ಹಾಗೂ ಆಸಕ್ತಿದಾಯಕ ಬದುಕಿನ ಸಾರದಿಂದ ಕೂಡಿತ್ತು. ಜೀವನದಲ್ಲಿ ಎದುರಿಸಿದ ಸಮಸ್ಯೆ ದುಃಖ ಕಷ್ಟಗಳು ವಿಚಾರ ಹೇಳಿದಾಗ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನೆಮ್ಮದಿಯಾಗಿದ್ದ ಬದುಕಿನಲ್ಲಿ ಎದ್ದ ಬಿರುಗಾಳಿ ಹೊಡೆತದ ಬಗ್ಗೆ ಮಾತನಾಡುತ್ತಿದ್ದಾಗ ಕೇಳುಗನ ಕಣ್ಣಂಚಲ್ಲೂ ನೀರು ತುಂಬಿತ್ತು.
ಸುಂದರ್ ರಾಜ್ ರವರು ಒಟ್ಟಿಗೆ ತಮ್ಮ ಮನೆಯ ಮೂರು ಸದಸ್ಯರನ್ನು ಕಳೆದುಕೊಂಡಿದ್ದಾರೆ. 2018ರಲ್ಲಿ ಪ್ರೀತಿಯ ತಾಯಿ, 2009ರಲ್ಲಿ ಬೆಳೆಸಿದ ತಂದೆ ಹಾಗೂ 2020ರಲ್ಲಿ ಮನೆ ಮಗನಾಗಿ ಬಂದಿದ್ದ ಮುದ್ದು ಮಗಳು ಮೇಘನಾ ಸೌಭಾಗ್ಯ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ.
ತಂದೆ ತಾಯಿಗೆ ಎಷ್ಟೇ ವಯಸಾಗಿದ್ದರು ಅವರ ಆಗಲಿಕೆಯೂ ಖಂಡಿತವಾಗಿಯೂ ಬಹಳ ನೋ’ವು ಕೊಡುವಂತದ್ದು. ಆದರೆ ಅದಕ್ಕಿಂತಲೂ ಹೆಚ್ಚಿಗೆ ನೋವನ್ನು ಚಿರಂಜೀವಿ ಸರ್ಜಾ ಅವರ ವಿಷಯದಲ್ಲಿ ಸುಂದರ ರಾಜ್ ಅನುಭವಿಸಿದ್ದಾರೆ. ಯಾಕೆಂದರೆ ಬಹಳ ಪ್ರೀತಿಯಿಂದ ಎತ್ತು ಆಡಿಸಿ ಸಾಕಿದ ಮಗಳು ಮೇಘನಾ ರಾಜ್.
10 ವರ್ಷಗಳ ಕಾಲ ಪ್ರೀತಿಸಿ ಕೈ ಹಿಡಿದಿದ್ದ ಪತಿ, ಬದುಕಿನಲ್ಲಿ ತಾನಂದು ಕೊಂಡಂತೆ ಚಿತ್ರರಂಗದಲ್ಲಿ ನಟಿಯಾಗಿ ಹೆಸರು, ಗರ್ಭದಲ್ಲಿದ್ದ ಕಂದನ ಬಗ್ಗೆ ಕಣ್ತುಂಬ ಕನಸು. ಸೌಂದರ್ಯಕ್ಕೆ ತಕ್ಕ ಜಾಣ್ಮೆಯನ್ನು ಹೊಂದಿದ್ದ, ಬದುಕಿನಲ್ಲಿ ಏನು ಕೊರತೆ ಇರದೆ ಇದ್ದ ಮಗಳ ಲೆಕ್ಕಾಚಾರವನ್ನೆಲ್ಲಾ ಅದೃಷ್ಟ ಬದಲಾಯಿಸಿಬಿಟ್ಟಿತ್ತು. ದಿಢೀರ್ ಎಂದು ಉಂಟಾದ ಚಿರಂಜೀವಿ ಸರ್ಜಾ ರವರ ಅಕಾಲಿಕ ಮೃ’ತ್ಯು ಎರಡು ಕುಟುಂಬಗಳ ನಗುವನ್ನು ಕಿತ್ತುಕೊಂಡು ಬಿಟ್ಟಿತು.
ಈ ವಿಚಾರವಾಗಿ ಸುಂದರ್ ರಾಜ್ ಅವರಿಗೆ ಇನ್ನೂ ಒಂದು ಗಿಲ್ಟ್ ಕಾಡುತ್ತದೆ ಅದನ್ನು ಅವರೇ ಹೇಳಿಕೊಂಡಿದ್ದು ಈ ರೀತಿ. ಚಿರು ಉಳಿಸಿಕೊಳ್ಳುವುದಕ್ಕೆ ಎರಡು ದಿನಗಳು ಅವಕಾಶವಿತ್ತು ಆದರೆ ನಮಗೆ ತಿಳಿಯದೆ ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ನೋ’ವು ಇದೆ ನನಗೆ. ಇದನ್ನು ನಾನು ಎಷ್ಟೋ ಕಡೆ ಹೇಳಿದ್ದೀನಿ.
ಆಗ ಕೋವಿಡ್ ಬಂದು ರೆಸ್ಟ್ರಿಕ್ಷನ್ ಅಂತ ಇಲ್ಲದೆ ಇದ್ದಿದ್ದರೆ, ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಅವರು ನಾಳೆ ಬನ್ನಿ ಅಂದರು. ನಮ್ಮ ದುರಾದೃಷ್ಟ, ಇವನಿಗೆ ಶನಿವಾರವೇ ಈ ತರ ಆಗಿತ್ತು ಮಾರನೇ ದಿನ ಭಾನುವಾರ, ಯಾವ ವೈದ್ಯರೂ ಬರೋದಿಲ್ಲ ಜೊತೆಗೆ ಕೋವಿಡ್ ಬೇರೆ, ಎಲ್ಲಾ ಟೆಲಿಕಮ್ಯೂನಿಕೇಶನ್‌ನಲ್ಲೇ ನಡೆಯುತ್ತಿತ್ತು.
ಅವನು ಆರೋಗ್ಯವಾಗಿಯೇ ಇದ್ದ ಕಾರಣ ಚಿರುಗೆ ಮೆದುಳಿಗೆ ಆದ ಸಮಸ್ಯೆ ಬಗ್ಗೆ ಅಷ್ಟು ಸೀರಿಯಸ್ ಆಗಿ ತಿಳಿಯದಾಯ್ತು. ಸರಿಯಾದ ಮಾಹಿತಿ, ಸರಿಯಾದ ಔಷಧಿ ಕೊಡಬೇಕಿತ್ತು. ವಿಧಿ, ಎಲ್ಲಾ ಇದ್ದು ಏನೂ ಇರಲ್ಲ. ಮಗಳನ್ನು ನೋಡಿದರೆ ತುಂಬಾ ನೋವಾಗುತ್ತದೆ, ಒಮ್ಮೊಮ್ಮೆ ದೇವರೆ ಇಲ್ಲ ಎನಿಸಿದ್ದೂ ಉಂಟು ಎಂದಿದ್ದಾರೆ.